• Home
  • »
  • News
  • »
  • state
  • »
  • Karnataka Assembly Elections: 'ಮಿನಿ ದುಬೈ'ನಲ್ಲಿ ಹೇಗಿದೆ ಎಲೆಕ್ಷನ್ ಜ್ವರ? ಭಟ್ಕಳದಲ್ಲಿ ಈ ಬಾರಿಯೂ ಫಲ ಕೊಡುತ್ತಾ ಹಿಂದುತ್ವದ ಅಲೆ?

Karnataka Assembly Elections: 'ಮಿನಿ ದುಬೈ'ನಲ್ಲಿ ಹೇಗಿದೆ ಎಲೆಕ್ಷನ್ ಜ್ವರ? ಭಟ್ಕಳದಲ್ಲಿ ಈ ಬಾರಿಯೂ ಫಲ ಕೊಡುತ್ತಾ ಹಿಂದುತ್ವದ ಅಲೆ?

ಭಟ್ಕಳ ವಿಧಾನಸಭಾ ಕ್ಷೇತ್ರ

ಭಟ್ಕಳ ವಿಧಾನಸಭಾ ಕ್ಷೇತ್ರ

ಹಿಂದೂ-ಮುಸ್ಲಿಂ ಗಲಾಟೆ (Hindu-Muslim riots) ವಿಚಾರಕ್ಕೆ ಗಮನ ಸೆಳೆದ ಭಟ್ಕಳ, ಆಮೇಲೆ ಸುದ್ದಿಯಾಗಿದ್ದು ಭಟ್ಕಳ ಬ್ರದರ್ಸ್ (Bhatkala Brothers) ಎಂಬ ಭಯೋತ್ಪಾದಕರಿಂದ (terrorists). ಅದರ ಹೊರತಾಗಿಯೂ ಭಟ್ಕಳ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೂ ಹೆಸರಾಗಿದೆ. ಸದ್ಯ ಇಲ್ಲಿ ಹೇಗಿದೆ ಚುನಾವಣೆ ಜ್ವರ?

ಮುಂದೆ ಓದಿ ...
  • News18 Kannada
  • Last Updated :
  • Uttara Kannada, India
  • Share this:

ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರ (Bhatkal assembly constituency) ಕೂಡ ಒಂದು. ಹಿಂದೂ-ಮುಸ್ಲಿಂ ಗಲಾಟೆ (Hindu-Muslim riots) ವಿಚಾರಕ್ಕೆ ಗಮನ ಸೆಳೆದ ಭಟ್ಕಳ, ಆಮೇಲೆ ಸುದ್ದಿಯಾಗಿದ್ದು ಭಟ್ಕಳ ಬ್ರದರ್ಸ್ (Bhatkala Brothers) ಎಂಬ ಭಯೋತ್ಪಾದಕರಿಂದ (terrorists). ಅದರ ಹೊರತಾಗಿಯೂ ಭಟ್ಕಳ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೂ ಹೆಸರಾಗಿದೆ. ಬಿಜೆಪಿಯ (BJP) ಸುನೀಲ್ ನಾಯ್ಕ್ (Sunil Naik) ಸದ್ಯ ಅಲ್ಲಿನ ಶಾಸಕರು. ಸಾಮಾನ್ಯವಾಗಿ ಇತರೇ ಕರಾವಳಿ ಕ್ಷೇತ್ರಗಳಂತೆ ಇಲ್ಲೂ ಕೂಡ ಹಿಂದೂತ್ವದ (Hindutva) ಅಲೆ ಇದೆ. ಇದೇ ಬಹುತೇಕ ಬಾರಿ ಚುನಾವಣೆ ಗೆಲುವನ್ನು ನಿರ್ಧರಿಸುತ್ತದೆ. ಇದೀಗ ಈ ಕ್ಷೇತ್ರದಲ್ಲೂ ಕೂಡ ಎಲೆಕ್ಷನ್ ಜ್ವರ (Election Fever) ಜೋರಾಗಿದೆ.


ಭಟ್ಕಳ ಕ್ಷೇತ್ರ ಪರಿಚಯ


ಇತಿಹಾಸದಲ್ಲಿ ಕಾಳುಮೆಣಸಿನ ರಾಣಿ ಚೆನ್ನ ಭೈರಾದೇವಿ ಆಳಡಿತ ಹಾಡುಹಳ್ಳಿ ಅಥವಾ ಸಂಗೀತಪುರವೇ ಇಂದಿನ ಭಟ್ಕಳ. ಜೈನ ಸನ್ಯಾಸಿಯೊಬ್ಬರಿಂದ ಈ ಕ್ಷೇತ್ರಕ್ಕೆ ಭಟ್ಕಳ ಅಂತ ಹೆಸರು ಬಂದಿದೆ. ಇಲ್ಲಿ ವಿಶ್ವವಿಖ್ಯಾತ ಮುರುಡೇಶ್ವರ ದೇವಸ್ಥಾನವಿದೆ. ಇಲ್ಲಿ ವಿಶ್ವದ ಎರಡನೇ ಅತಿ ದೊಡ್ದ ಶಿವನ ಮೂರ್ತಿಯು ಸಹ ಇದೆ, ಇದೊಂದು ಪುಣ್ಯ ಸ್ಥಳವಾಗಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.


ಭಟ್ಕಳ ಸಂಶುದ್ದೀನ್ ಸರ್ಕಲ್


ಕರಾವಳಿಯ ಕೋಮು ಸಾಮರಸ್ಯ ಕದಡಿತ ಭಟ್ಕಳ ಗಲಭೆ


1993ರಲ್ಲಿ ನಡೆದ ಭಟ್ಕಳ ಗಲಭೆ ಕರಾವಯಿಯ ಕೋಮು ಸಾಮರಸ್ಯಕ್ಕೆ ಬೆಂಕಿ ಇಟ್ಟಿತ್ತು. 1993ರಿಂದ ಸತತ 4 ವರ್ಷಗಳ ಕಾಲ ಭಟ್ಕಳ ಕೋಮುದಳ್ಳುರಿಯಲ್ಲಿ ಬೆಂದು, ಬಸವಳಿಯಿತು. 1003ರ ೯ದ ಏ.1ರ೦ದು ನಡೆದ ರಾಮನವಮಿಯ ರಥೋತ್ಸವಕ್ಕೆ ಮುಸ್ಲಿಮರ ಮನೆಯೊ೦ದರಿ೦ದ ಕಲ್ಲು ತೂರಲಾಯಿತು ಎ೦ಬ ವಿಷಯ ಇಡೀ ಊರಿಗೆ ಕಾಳ್ಗಿಚ್ಚಿನ೦ತೆ ಹಬ್ಬಿ ಆರ೦ಭವಾದ ಗಲಭೆ 17 ಜನರನ್ನು ಬಲಿ ಪಡೆದಿತ್ತು. 90 ಮ೦ದಿ ಗ೦ಭೀರವಾಗಿ ಗಾಯಗೊ೦ಡರೆ ಹಿಂದೂ, ಮುಸ್ಲಿಂ ಎನ್ನದೇ 226 ಮನೆಗಳನ್ನು ಸುಟ್ಟುಹಾಕಲಾಗಿತ್ತು. ಈ ವೇಳೆ 143 ಅ೦ಗಡಿಗಳನ್ನು ಲೂಟಿ ಮಾಡಲಾಗಿತ್ತು.


ವಿಶ್ವವಿಖ್ಯಾತ ಮುರ್ಡೇಶ್ವರ ದೇಗುಲ


ಇದನ್ನೂ ಓದಿ: Karnataka Assembly Elections: ಒಂದು ಕಡೆ ಸಹ್ಯಾದ್ರಿ, ಒಂದು ಕಡೆ ಕಡಲು, ನಡುವೆ ಆಸ್ಪತ್ರೆ ಇಲ್ಲದ ಊರು! ಕುಮಟಾದಲ್ಲಿ ಈ ಬಾರಿ ಗೆಲ್ಲೋರು ಯಾರು?


ಮಾಜಿ ಶಾಸಕ ಚಿತ್ತರಂಜನ್ ಹತ್ಯೆ


1996ರ ಏಪ್ರಿಲ್ನಲ್ಲಿ ಅಂದಿನ ಭಟ್ಕಳ ಶಾಸಕ ಡಾ. ಚಿತ್ತರಂಜನ್ ಹತ್ಯೆ ನಡೆಯಿತು. 1996ರ ಲೋಕಸಭಾ ಚುನಾವಣೆ ಸಂದರ್ಭದಲ್ಲಾದ ಈ ಕೊಲೆಯ ಕಾರಣಕ್ಕೆ ಹುಟ್ಟಿದ ಹಿಂದುತ್ವದ ಅಲೆಯಲ್ಲಿ ಅನಂತಕುಮಾರ್ ಹೆಗಡೆ ಗೆದ್ದು ಸಂಸದರಾಗಿದ್ದು ಈಗ ಇತಿಹಾಸ.


ಮಾಜಿ ಶಾಸಕ ಚಿತ್ತರಂಜನ್


ಹಾಲಿ ಶಾಸಕ ಸುನೀಲ್ ನಾಯ್ಕ್


ಹಿಂದುತ್ವದ ಅಲೆಯಲ್ಲಿ ಗೆದ್ದು ಬಂದ ಸುನೀಲ್ ನಾಯ್ಕ್, ಸದ್ಯ ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕರು. ಅವರ ವಿರುದ್ಧ ಈಗ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರೇ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗಿನ ಬಿಸಿ ಈ ಬಾರಿ ಎಲ್ಲಾ ಶಾಸಕರಂತೆ ಇವರಿಗೂ ತಟ್ಟುವ ಸಾಧ್ಯತೆ ಇದೆ.


ಸಂಸದ ಅನಂತಕುಮಾರ್ ಹೆಗ್ಡೆ


ಈ ಬಾರಿ ಯಾರಿಗೆ ಟಿಕೆಟ್?


ಬಿಜೆಪಿಯಿಂದ ಹಾಲಿ ಶಾಸಕ ಸುನೀಲ್ ನಾಯ್ಕ್ ಮತ್ತೊಮ್ಮೆ ಸ್ಪರ್ಧೆ ಬಯಲಿದ್ದಾರೆ. ಅವರಿಗೆ ಉದ್ಯಮಿಗಳಾದ ಈಶ್ವರ್ ನಾಯ್ಕ್, ಗೋವಿಂದ ನಾಯ್ಕ್ ಸೇರಿದಂತೆ ಹಲವರು ಪೈಪೋಟಿ ನೀಡಲಿದ್ದಾರೆ. ಅತ್ತ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಮಂಕಾಳ್ ವೈದ್ಯ, ಜೆಡಿನಾಯ್ಕ್ ಹಾಗೂ ಮಾಜಿ ಸಚಿವ ಆರ್‌ಎನ್ ನಾಯ್ಕ್ ಹಾಗೂ ಕಾಂಗ್ರೆಸ್ ಮುಖಂಡ ಮುಜಾಮಿಲ್ ಖಾಜಿ ಟಿಕೆಟ್‌ಗಾಗಿ ಯತ್ನಿಸುತ್ತಿದ್ದಾರೆ.  ಅತ್ತ ಜೆಡಿಎಸ್‌ನಿಂದ ಈ ಹಿಂದೆ ಸ್ಪರ್ಧಿಸಿದ್ದ ಇನಾಯತುಲ್ಲಾ ಶಾಬಾಂದ್ರಿ, ಗಣಪಯ್ಯ ಗೌಡ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.


ಹಾಲಿ ಶಾಸಕ ಸುನೀಲ್ ನಾಯ್ಕ್


ಕ್ಷೇತ್ರ್ರದ ಮತದಾರರ ವಿವರ


ಕ್ಷೇತ್ರದಲ್ಲಿ ಒಟ್ಟೂ 2,05,000 ಮತದಾರರಿದ್ದಾರೆ. ಈ ಪೈಕಿ ನಾಮಧಾರಿ ಹಾಗೂ ಮುಸ್ಲಿಂ ವೋಟುಗಳೇ ನಿರ್ಣಾಯಕ. ಕ್ಷೇತ್ರದಲ್ಲಿ ನಾಮಧಾರಿಗಳು  67,000, ಮುಸ್ಲಿಂ – 55,000 ಮತದಾರರಿದ್ದಾರೆ. ಇನ್ನುಳಿದಂತೆ ಮೀನುಗಾರರು – 32,000, ಇತರೇ ಸಮುದಾಯದ 25,000 ಮತದಾರರು ಹಾಗೂ 15,000 ಕ್ರಿಶ್ಚಿಯನ್ ಮತದಾರರು ಇದ್ದಾರೆ.


ಮಾಜಿ ಶಾಸಕ ಮಂಕಾಳ್ ವೈದ್ಯ


ಇದನ್ನೂ ಓದಿ: Karnataka Assembly Elections: ರೇಷ್ಮೆ ಕೈಮಗ್ಗದ ಕಣದಲ್ಲಿ ಕದನ ಕುತೂಹಲ, ಇಲ್ಲಿದೆ ದೊಡ್ಡಬಳ್ಳಾಪುರದ ರಾಜಕೀಯ ಚಿತ್ರಣ


ಕ್ಷೇತ್ರದಲ್ಲಿ ಹೇಗಿದೆ ಚುನಾವಣೆ ಜ್ವರ?


ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯವೂ ಹೌದು. ಕಳೆದ ಚುನಾವಣೆ ವೇಳೆ ಫರೇಶ್ ಮೇಸ್ತ ಸಾವು ಕಾಂಗ್ರೆಸ್‌ಗೆ ಮಾಕರವಾಗಿತ್ತು. ಆದ್ರೆ ಈಗ ಫರೇಶ್ ಮೇಸ್ತ ಸಾವಿನ ಬಗ್ಗೆ ಸಿಬಿಐ ಕೊಟ್ಟಿರುವ ವರದಿ ಬಿಜೆಪಿ ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ. ಕರಾವಳಿಯಲ್ಲಿ ಕೋಮುಸಂಘರ್ಷ, ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣ ಕೂಡ ಇಲ್ಲಿನ ಮತದಾರರ ಮೇಲೆ ಪ್ರಭಾವ ಬೀರಲಿದೆ.

Published by:Annappa Achari
First published: