• Home
  • »
  • News
  • »
  • state
  • »
  • Karnataka Assembly Elections: ಕಾಂಗ್ರೆಸ್​, ಜೆಡಿಎಸ್​ ಭದ್ರಕೋಟೆ ಭದ್ರಾವತಿ ವಶಪಡಿಸಿಕೊಳ್ಳಲು ಬಿಜೆಪಿ ರಹಸ್ಯ ನಡೆ!

Karnataka Assembly Elections: ಕಾಂಗ್ರೆಸ್​, ಜೆಡಿಎಸ್​ ಭದ್ರಕೋಟೆ ಭದ್ರಾವತಿ ವಶಪಡಿಸಿಕೊಳ್ಳಲು ಬಿಜೆಪಿ ರಹಸ್ಯ ನಡೆ!

ಭದ್ರಾವತಿಯಲಗಲಿ ಯಾರಿಗೆ ಈ ಬಾರಿ ಗೆಲುವು?

ಭದ್ರಾವತಿಯಲಗಲಿ ಯಾರಿಗೆ ಈ ಬಾರಿ ಗೆಲುವು?

Karnataka Assembly Elections 2023: ನಿಮ್ಮ ನ್ಯೂಸ್​ 18 ಕನ್ನಡ ವಿಧಾನಸಭಾ ಕ್ಷೇತ್ರ ಪರಿಚಯ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿವೆ. ಈ ಮೂಲಕ ಮತದಾರರಿಗೆ ಕ್ಷೇತ್ರದ ರಾಜಕೀಯ ಇತಿಹಾಸ, ಟಿಕೆಟ್​ ಆಕಾಂಕ್ಷಿಗಳ ಪಟ್ಟಿ ಸೇರಿ ಜಾತಿ ಲೆರಕ್ಕಾಚಾರದ ಮಾಹಿತಿಯನ್ನೂ ನೀಡುತ್ತಿದೆ. ಈ ಸರಣಿಯಲ್ಲಿ ಇಂದು ಮಲೆನಾಡಿನ ಮಡಿಲಲ್ಲಿರುವ ಶಿವಮೊಗ್ಗದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ (Bhadravati Assembly Constituency)ಸಂಪೂರ್ಣ ವಿವರ ಇಲ್ಲಿ ನೀಡಿದ್ದೇವೆ.

ಮುಂದೆ ಓದಿ ...
  • News18 Kannada
  • Last Updated :
  • Bhadravati, India
  • Share this:

ಭದ್ರಾವತಿ ವಿಧಾನಸಭಾ ಕ್ಷೇತ್ರ: ಬಹುನಿರೀಕ್ಷಿತ ಕರ್ನಾಟಕ ಚುನಾವಣೆಗೆ (Karnataka Assembly Elections 2023) ಇನ್ನು ಕೆಲವೇ ತಿಂಗಳು ಬಾಕಿ ಇದೆ. ಸದ್ಯ ಇಡೀ ದೇಶದ ಚಿತ್ತ ಕರ್ನಾಟಕದತ್ತ ಹೊರಳಿದೆ, ರಾಜ್ಯ ನಾಯಕರು ಈಗಾಗಲೇ ಮತದಾರರ ಓಲೈಕೆಯಲ್ಲಿ ಬ್ಯುಸಿಯಾಗಿದ್ದರೆ, ಅತ್ತ ರಾಷ್ಟ್ರೀಯ ನಾಯಕರೂ ನಿಧಾನವಾಗಿ ಕರ್ನಾಟಕ ಪ್ರವಾಸ ಕೈಗೊಳ್ಳಲು ಸಜ್ಜಾಗುತ್ತಿದ್ದಾರೆ. ಈ ನಡುವೆ ವಿವಿಧ ವಿವಾದಗಳು ರಾಜಕೀಯ ವಾಕ್ಸಮರ ಮುಂದುವರೆದಿದೆ. ಹೀಗಿರುವಾಗ ನಿಮ್ಮ ನ್ಯೂಸ್​ 18 ಕನ್ನಡ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಹಿತಿ ನೀಡುವ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ಈ ಮೂಲಕ ಕ್ಷೇತ್ರದ ರಾಜಕೀಯ ಇತಿಹಾಸ, ಆಕಾಂಕ್ಷಿಗಳ ಪಟ್ಟಿ, ಜಾತಿ ಲೆಕ್ಕಾಚಾರ ಇತ್ಯಾದಿ ವಿವರಗಳನ್ನು ನೀಡುತ್ತಿದೆ. ಈ ಸರಣಿಯಲ್ಲಿ ಇಂದು 'ಕರ್ನಾಟಕದ ಉಕ್ಕಿನ ನಗರ'ವೆಂದು ಕರೆಯಲ್ಪಡುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ (Bhadravati Assembly Constituency)ಸಂಪೂರ್ಣ ವಿವರ ಇಲ್ಲಿದೆ ನೋಡಿ.


ಶಿವಮೊಗ್ಗದಿಂದ ಕೇವಲ 18 ಕಿಲೋಮೀಟರ್ ದೂರದಲ್ಲಿರುವ ಭದ್ರಾವತಿ ಇಲ್ಲಿ ಹರಿಯುವ ಭದ್ರಾ ನದಿಯಿಂದ ಈ ಹೆಸರು ಪಡೆದುಕೊಂಡಿದೆ. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪಟ್ಟಣಕ್ಕೆ ಬಸ್ಸು, ರೈಲು ಸಂಪರ್ಕ ಉತ್ತಮವಾಗಿದೆ. ಅರೆ ಮಲೆನಾಡು, ಬಯಲುಸೀಮೆಯನ್ನು ಕ್ಷೇತ್ರ ಒಳಗೊಂಡಿಡುವ ಭದ್ರಾವತಿ ಹಿಂದೆ ಬೆಂಕಿಪುರ (ಅಥವಾ ವಂಕಿಪುರ/ವೆಂಕಿಪುರ) ಎಂದು ಇದನ್ನು ಕರೆಯಲಾಗುತ್ತಿತ್ತು. ಆದರೆ ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ಇಲ್ಲಿ ಕಬ್ಬಿಣದ ಕಾರ್ಖಾನೆಯನ್ನು ಸ್ಥಾಪಿಸಿದ ಮೇಲೆ ಭದ್ರಾವತಿ ಎಂಬ ಈ ಹೊಸ ಹೆಸರು ಈ ಊರಿಗೆ ಬಂದಿತೆಂದು ಹೇಳಲಾಗುತ್ತದೆ. ಆಕಾಶವಾಣಿ ಕೇಂದ್ರ, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖನೆಗಳಿಂದಾಗಿ ಭದ್ರಾವತಿ ಪ್ರಸಿದ್ಧಿ ಪಡೆದಿದೆ. ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳಾದರೂ ಅಭಿವೃದ್ಧಿಯ ಪಥದಲ್ಲಿ ಭದ್ರಾವತಿ ಬಹಳ ದೂರ ಸಾಗಬೇಕಿದೆ.


ಇದನ್ನೂ ಓದಿ: Karnataka Assembly Elections: ಸೊರಬ ಕ್ಷೇತ್ರದಲ್ಲಿ ಈ ಬಾರಿಯೂ ಮುಖಾಮುಖಿಯಾಗ್ತಾರಾ ಮಾಜಿ ಸಿಎಂ ಪುತ್ರರು?


ಭದ್ರಾವತಿ ರಾಜಕೀಯ ಇತಿಹಾಸವೇನು?


ಭದ್ರಾವತಿ ರಾಜಕಾರಣ ಇತರೆ ವಿಧಾನಸಭಾ ಕ್ಷೇತ್ರ ಕ್ಕಿಂತ ತುಂಬಾ ಭಿನ್ನವಾಗಿದೆ . ಒಂದು ಬಾರಿ ಗೆದ್ದವರು ಮತ್ತೊಂದು ಬಾರಿ ಇಲ್ಲಿ ಗೆಲ್ಲುವುದಿಲ್ಲ, ಇದಕ್ಕೂ ಭಿನ್ನವಾಗಿ ಹೇಳುವುದಾದರೆ ಈ ಕ್ಷೇತ್ರದಲ್ಲಿ ಇಲ್ಲಿಯ ವರೆಗೂ ಪಕ್ಷಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಹೆಚ್ಚು ಮಹತ್ವ ಪಡೆದಿದೆ. ಇನ್ನು ದಕ್ಷಿಣ ಕನ್ನಡ, ಉಡುಪಿ ಬಳಿಕ ಸಂಘಪರಿವಾರದ ಪ್ರಬಲ ಶಕ್ತಿ ಕೇಂದ್ರವೆನಿಸಿರುವ ಶಿವಮೊಗ್ಗದ ಉಳಿದೆಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೇಸರಿ ಪತಾಕೆ ಹಾರುತ್ತಿದ್ದರೂ ಭದ್ರಾವತಿಯಲ್ಲಿ ಈವರೆಗೆ ಒಂದು ಬಾರಿಯೂ ಕಮಲವನ್ನು ಅರಳಿಸಲಾಗಿಲ್ಲ.


1957ರಲ್ಲಿ ಜರುಗಿದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಿ.ಬಿ.ಸೀತಾರಾಮ್ ರಾವ್ ಮತ್ತು ಪ್ರಜಾ ಸೋಷಲಿಸ್ಟ್ ಪಾರ್ಟಿಯ ಎಂ.ಪಿ.ಈಶ್ವರಪ್ಪ ನಡುವೆ sಂಘರ್ಷ ನಡೆದಿತ್ತು. ಆದರೆ ಮೊಟ್ಟ ಮೊದಲ ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿನ ನಗೆ ಬೀರಿತ್ತು. ಬಳಿಕ 1962ರ ಚುನಾವಣೆಯಲ್ಲೂ ಕಾಂಗ್ರೆಸ್​ನ ಟಿ.ಡಿ.ದೇವೇಂದ್ರಪ್ಪ ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಕಣಕ್ಕಿಳಿದಿದ್ದ ಬಿ.ಕೃಷ್ಣ ಭಟ್ ಅವರನ್ನು ಸೋಲಿಸಿದ್ದರು. ಇನ್ನು ಮೊದಲೆರಡು ಚುನಾವಣೆಯಲ್ಲಿ ಗೆಲ್ಲಲಾಗದ ಸೋಷಲಿಸ್ಟ್​ ಪಾರ್ಟಿ 1967ರ್ಲಿ ಗೆಲುವು ತನ್ನದಾಗಿಸಿಕೊಂಡಿತು. ಈ ಚುನಾವಣೆಯಲ್ಲಿ ಎ.ಕೆ.ಅನ್ವರ್ ಕಾಂಗ್ರೆಸ್​ನ್ನು ಸೋಲಿಸಿದ್ದರು. ಆದರೆ ಬದಲಾದ ರಾಜಕೀಯ ಸಮೀಕರಣದಿಂದ 1972ರ ಚುನಾವಣೆ ವೇಳೆ ಅನ್ವರ್ ಕಾಂಗ್ರೆಸ್​ ಜೊತೆ ಸೇರಿಕೊಂಡರು. ಈ ಚುನಾವಣೆಯಲ್ಲಿ ಕೈ ಪಾಳಯದಿಂದ ಕಣಕ್ಕಿಳಿದ ಅವರು ಎರಡನೆ ಬಾರಿ ಗೆಲುವಿನ ನಗೆ ಬೀರಿದರು.


ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್​ನಲ್ಲಿ ಆಕಾಂಕ್ಷಿಗಳ ಲೈನ್​!


ಭದ್ರಾವತಿಯಲ್ಲಿ ಮೊದಲ ಬಾರಿ ಕೋಮು ಗಲಭೆ


ಆದರೆ 1978ರಲ್ಲಿ ಕಾಂಗ್ರೆಸ್​ ಹೊಸ ಮುಖ ಪರಿಚಯಿಸಿತ್ತು, ಈ ಚುನಾವಣೆಲ್ಲೂ ಕೈ ಪಾಳಯದ ಜಿ.ರಾಜಶೇಖರ್ ಜನತಾ ಪರಿವಾರದ ಅಭ್ಯರ್ಥಿಯನ್ನು ಸೋಲಿಸಿದ್ದರು. ಆದರೆ 1983ರಲ್ಲಿ ಭದ್ರಾವತಿಯಲ್ಲಿ ಮೊದಲ ಬಾರಿ ಕೋಮು ಗಲಭೆ ಸಂಭವಿಸಿತ್ತು. ಇದರ ಪರಿಣಾಮವಾಗಿ ಜನತಾರಂಗದಿಂದ ಸ್ಪರ್ಧಿಸಿದ್ದ ಸಾಲೇರ್ ಸಿದ್ಧಪ್ಪ ಗೆಲುವಿನ ನಗೆ ಬೀರಿದರು. ಬಳಿಕದ 1985ರಲ್ಲೂ ಇವರೇ ಎರಡನೇ ಬಾರಿ ಗೆಲುವು ಸಾಧಿಸಿದರು. ಆದರೆ ಮುಂದಿನ ಚುನಾವಣೆಯಲ್ಲಿ ಸಿದ್ದಪ್ಪ ಸೋಲನುಭವಿಸಿದರು. ಹೌದು 1989ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್​ ಗೆಲುವಿನ ಲಯಕ್ಕೆ ಮರಳಿತು, ಇಸಾಮಿಯಾ ಅವರು ಗೆಲುವು ಸಾಧಿಸಿದ್ದರು. ತದ ನಂತರ ಅಪ್ಪಾಜಿ ಎಂ. ಜೆ. ಕಣಕ್ಕಿಳಿದಿದ್ದರು.


ಭದ್ರಾವತಿ ಹಾಲಿ ಶಾಸಕ ಸಂಗಮೇಶ್ವರ್


ಹೌ್ದು 1994 ಹಾಗೂ 99ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಪ್ಪಾಜಿ ಎಂ. ಜೆ ಗೆಲುವು ಸಾಧಿಸಿದರು. ಇನ್ನು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋತಿದ್ದ ಸಂಗಮೇಶ್ವರ್ 2004ರಲ್ಲಿ ಕಾಂಗ್ರೆಸ್‌ಗಿಂತ ಪಕ್ಷೇತರನಾಗಿ ಸ್ಪರ್ಧಿಸಿದರೆ ಗೆಲುವು ಸುಲಭವೆಂದು ಎಣಿಕೆ ಹಾಕಿದರು. ಈ ಸಂದರ್ಭದಲ್ಲಿ ಅಪ್ಪಾಜಿ ಮತ್ತು ಸಂಗಮೇಶ್ವರ್ ನಡುವೆ ರಣರೋಚಕ ಕದನ ನಡೆಯಿತು. ತಮ್ಮ ಲೆಕ್ಕಾಚಾರದಂತೆ ಸಂಗಮೇಶ್ವರ್ ಗೆಲುವು ಸಾಧಿಸಿದ್ದರು. ಇದಾದ ಬಳಿಕ ಪಕ್ಷೇತರರಾಗಿ ವೈಯಕ್ತಿಕ ತಾಕತ್ತಿನಿಂದ ಜಿದ್ದಾಜಿದ್ದಿ ಹೋರಾಟ ನಡೆಸುತ್ತಿದ್ದ ಸಂಗಮೇಶ್ವರ್ ಮತ್ತು ಅಪ್ಪಾಜಿ 2008ರಲ್ಲಿ ಪಕ್ಷಗಳ ಚಿಹ್ನೆಯಡಿ ಕಾಳಗಕ್ಕಿಳಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಂಗಮೇಶ್ವರ್ ಮತ್ತೆ ಗೆಲುವು ಸಾಧಿಸಿದ್ದರು.


2018ರ ಚುನಾವಣೆಯಲ್ಲಿ ಮತ್ತೆ ಎಲ್ಲವೂ ಬದಲು


ಆದರೆ 2013ರಲ್ಲಿ ಜೆಡಿಎಸ್​​ನಿಂದ ಸ್ಪರ್ಧಿಸಿದ ಅಪ್ಪಾಜಿ ಗೆಲುವು ಸಾಧಿಸಿದರು. ಆದರೆ 2018ರ ಚುನಾವಣೆಯಲ್ಲಿ ಮತ್ತೆ ಎಲ್ಲವೂ ಬದಲಾಯ್ತ. ಸಂಗಮೇಶ್ವರ್ ತಮ್ಮ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್‌ನ ಅಪ್ಪಾಜಿ ಗೌಡರಿಗೆ ಮುಖಾಮುಖಿಯಾದರು. ಈ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಸಂಗಮೇಶ್ವರ್ ಗೆಲುವಿನ ನಗೆ ಬೀರಿದ್ದರು. ಅಪ್ಪಾಜಿ ಗೌಡ ಇತ್ತೀಚೆಗೆ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ಜೆಡಿಎಸ್ ಓರ್ವ ಜನಪ್ರಿಯ ನಾಯಕನನ್ನು ಕ್ಷೇತ್ರದಲ್ಲಿ ಕಳೆದುಕೊಂಡಿದೆ. ಆದರೀಗ ಬಿಜೆಪಿ ಇದರ ಲಾಭ ಪಡೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ.


ಇತ್ತೀಚೆಗೆ ಕೊರೋನಾಗೆ ಬಲಿಯಾದ ಅಪ್ಪಾಜಿ ಗೌಡ


ಈ ಬಾರಿ ಟಿಕೆಟ್​ ಆಕಾಂಕ್ಷಿಗಳು ಯಾರು?


ಭದ್ರಾವತಿ ವಿಧಾನಸಭಾ ಚುನಾವಣಾ ರಣರಂಗದ ಸಿದ್ಧ ಸೂತ್ರ-ಸಮೀಕರಣ 2023ರ ಕಾಳಗದಲ್ಲಿ ಬದಲಾಗುತ್ತದೆ ಎಂಬ ಮಾತು ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. 1989ರಿಂದ 2018ರ ತನಕದ ಏಳು ಇಲೆಕ್ಷನ್‌ಗಳಲ್ಲಿ ಸ್ಪರ್ಧಿಸಿ ಮೂರು ಸಲ ಶಾಸಕನಾಗಿದ್ದ ಎಂ.ಜೆ. ಪ್ಪಾಜಿ ಗೌಡ ನಿಧನದಿಂದ ಇಲ್ಲಿನ ರಾಜಕೀಯ ಪರಿಸ್ಥಿತಿಯೇ ಬದಲಾಗಿದೆ. ಹೀಗಿರುವಾಗ ಈ ಬಾರಿಯ ಚುನಾವಣೆಯಲ್ಲಿ ಯಾರೆಲ್ಲಾ ಕಣಕ್ಕಿಳಿಯುತ್ತಾರೆಂಬ ಪ್ರಶ್ನೆ ಸಹಜವಾಗೇ ಕುತೂಹಲ ಮೂಡಿಸಿದೆ.


ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳು ಯಾರು?


* ಬಿ. ಕೆ. ಸಂಗಮೇಶ್ವರ್: ಹಾಲಿ ಶಾಸಕ ಸಂಗಮೇಶ್ವರ್ ಕಾಂಗ್ರೆಸ್​ನ ಪ್ರಮುಖ ಟಿಕೆಟ್​ ಆಕಾಂಕ್ಷಿ. ಆದರೆ ಒಂದು ಮೂಲದ ಪ್ರಕಾರ ಸಂಗಮೇಶ್ವರ್ ಅವರಿಗೆ ಅನಾರೋಗ್ಯ ಕಾಡುತ್ತಿರುವುದರಿಂದ ಈ ಬಾರಿ ಅವರ ಕುಟುಂಬದ ಬೇರೊಬ್ಬ ಸದಸ್ಯರಿಗೆ ಇಟಕೆಟ್​ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ


ಜೆಡಿಎಸ್​ ಟಿಕೆಟ್​ ಆಕಾಂಕ್ಷಿಗಳು ಯಾರು?


* ಶಾರದಾ ಗೌಡ: ಭದ್ರಾವತಿ ಕ್ಷೇತ್ರದಲ್ಲಿ ತನ್ನ ಜನಪ್ರಿಯ ನಾಯಕನನ್ನು ಕಳೆದುಕೊಂಡಿರುವ ಜೆಡಿಎಸ್​ ಅಪ್ಪಾಜಿ ಗೌಡರ ತಿಥಿಯಂದೇ ಕುಮಾರಸ್ವಾಮಿ 2023ರ ಚುನಾವಣೆಗೆ ಶಾರದಾ ಗೌಡ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಹೀಗಿರುವಾಗ ಇತ್ತ ಶಾರದಾರವರೂ ಚುನಾವಣಾ ತಾಲೀಮು ಆರಂಭಿಸಿದ್ದಾರೆ. ಜನತಾ ಜಲಧಾರೆ ಹೆಸರಲ್ಲಿ ಭದ್ರಾವತಿಯಲ್ಲಿ ಶೋ ನಡೆಸಿರುವ ಅಪ್ಪಾಜಿ ಅಭಿಮಾನಿ ಬಳಗ ಇಲೆಕ್ಷನ್ ತಂತ್ರಗಾರಿಕೆ ಮಾಡತೊಡಗಿದೆ.


ಶಾರದಾ ಗೌಡ


ಬಿಜೆಪಿ ರಣತಂತ್ರ?


ಆದರೆ ಇತ್ತ ಭದ್ರಾವತಿಯಲ್ಲಿ ಈವರೆಗೂ ಗೆಲುವು ಸಾಧಿಸಿದ ಕಮಲ ಪಾಳಯ ಶಾರದಾ ಗೌಡರನ್ನು ಬಿಜೆಪಿಗೆ ಸೆಳೆಯುವ ರಣತಂತ್ರ ರೂಪಿಸಿದ್ದಾರೆನ್ನಲಾಗಿದೆ. ಆದರೆ ಮುಸ್ಲಿಮರ ಮತವಿಲ್ಲದೆ ಭದ್ರಾವತಿಯಲ್ಲಿ ಗೆಲ್ಲುವುದು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಶಾರದಾ ಗೌಡ ಬಿಜೆಪಿ ಆಫರ್ ತಿರಸ್ಕರಿಸಿದ್ದಾರೆನ್ನಲಾಗಿದೆ. ಹೀಗಿದ್ದರೂ ಕೇಸರಿ ಪಾಳಯ ತನ್ನ ಪ್ರಯತ್ನ ಮುಂದುವರೆಸಿದೆ. ಇವರನ್ನು ಹೊರತುಪಡಿಸಿ ಬಿಜೆಪಿಯಲ್ಲಿ ಇನ್ನೂ ಮೂವರು ಟಿಕೆಟ್​ ಆಕಾಂಕ್ಷಿಗಳಿದ್ದಾರೆ.


* ರುದ್ರೇಶ್ ಮಂಗೋಟೆ: ವೃತ್ತಿಯಲ್ಲಿ ವಕೀಲರಾಗಿರುವ ಇವರು ಬಿಜೆಪಿ ಟಿಕೆಟ್​ ಆಕಾಂಕ್ಷಿ


* ಕುಮಾರ್: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ


* ಧರ್ಮಪ್ರಸಾದ್: ವಕೀಲರಾದ ಧರ್ಮಪ್ರಸಾದ್ ಈ ಬಾರಿಯ ಬಿಜೆಪಿ ಟಿಕೆಟ್​ ಆಕಾಂಕ್ಷಿ.


ಜಾತಿ ಲೆಕ್ಕಾಚಾರ:

ಒಟ್ಟು ಮತದಾರರು2,04,107
ಲಿಂಗಾಯತ22,318
ಬ್ರಾಹ್ಮಣ4,125
ಒಕ್ಕಲಿಗ37,196
ಈಡಿಗ4,497
ಕುರುಬ13,962
ಮುಸ್ಲಿಂ33,205
ಎಸ್​ಸಿ/ಎಸ್​ಟಿ46,816


2018ರಲ್ಲಿ ಫಲಿತಾಂಶವೇನಾಗಿತ್ತು?


2018 ಚುನಾವಣೆಯಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಅಪ್ಪಾಜಿ ಎಂ. ಜೆ ಕಣಕ್ಕಳಿದಿದ್ದರೆ, ಕಾಂಗ್ರೆಸ್​ನಿಂದ ಸಂಗಮೇಶ್ವರ ಸ್ಪರ್ಧೆಯೊಡ್ಡಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಸಂಗಮೇಶ್ವರ 11,555 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷಅಭ್ಯರ್ಥಿ ಹೆಸರುಮತಗಳು
ಕಾಂಗ್ರೆಸ್ಸಂಗಮೇಶ್ವರ75,722
ಜೆಡಿಎಸ್ಅಪ್ಪಾಜಿ ಎಂ. ಜೆ64,165

Published by:Precilla Olivia Dias
First published: