ಬೆಂಗಳೂರು ದಕ್ಷಿಣ ಕ್ಷೇತ್ರ (Bangalore South Constituency) ಎನ್ನುವುದು ವಿಧಾನಸಭೆಯೂ (Assembly) ಹೌದು, ಲೋಕಸಭೆಯೂ (Lok Sabha) ಹೌದು. ಸದ್ಯ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ (Bengaluru South assembly constituency) ಚುನಾವಣಾ (Election) ಕಾವು ಜೋರಾಗಿದೆ. ಬಿಜೆಪಿಯ (BJP) ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎಂ. ಕೃಷ್ಣಪ್ಪ (M. Krishnappa) ಶಾಸಕರಾಗಿದ್ದಾರೆ. ಮೂರು ಬಾರಿ ಶಾಸಕರಾಗಿ (MLA) ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕೃಷ್ಣಪ್ಪ, ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ನಿಂದಲೂ (Congress) ಅವರಿಗೆ ಪೈಪೋಟಿ ಕೊಡಲು ಪ್ರಬಲ ಅಭ್ಯರ್ಥಿಗಳು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಅತ್ತ ಜೆಡಿಎಸ್ನಿಂದಲೂ (JDS) ಕೂಡ ಬಿಜೆಪಿ ಸೋಲಿಸಲು ತಂತ್ರ ಹೆಣೆಯಲಾಗುತ್ತಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರ ಪರಿಚಯ
ಬೆಂಗಳೂರಿನಲ್ಲಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕೂಡ ಒಂದು. ಇದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಭಾಗವಾಗಿದೆ . ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿಲ್ಲ ಎಂಬುದು ಗಮನಾರ್ಹ. 2008 ರಲ್ಲಿ ಸೀಟುಗಳ ಡಿಲಿಮಿಟೇಶನ್ ನಡೆಸಿದಾಗ ಬೆಂಗಳೂರು ದಕ್ಷಿಣ ಅಸೆಂಬ್ಲಿ ಸ್ಥಾನವನ್ನು ರಚಿಸಲಾಯಿತು. ನಾಲ್ಕು ಲೋಕಸಭಾ ಸ್ಥಾನಗಳಿದ್ದು ಅವುಗಳ ಶೀರ್ಷಿಕೆಯಲ್ಲಿ 'ಬೆಂಗಳೂರು' ಎಂಬ ಹೆಸರಿನೊಂದಿಗೆ, ಬೆಂಗಳೂರು ದಕ್ಷಿಣವು ವಿಧಾನಸಭೆಯಾಗಿ ರಚನೆಯಾಯ್ತು.
4ನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿ ಶಾಸಕ ಎಂ. ಕೃಷ್ಣಪ್ಪ
ಸದ್ಯ ಬೆಂಗಳೂರು ದಕ್ಷಿಣ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ಹಾಲಿ ಶಾಸಕ ಎಂ. ಕೃಷ್ಣಪ್ಪ ಅವರು 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಹ್ಯಾಟ್ರಿಕ್ ಬಾರಿಸಿದ್ದಾರೆ. ಇದೀಗ ಮತ್ತೊಮ್ಮೆ 4ನೇ ಬಾರಿಗೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಬಿಬಿಎಂಪಿಯ ಗೊಟ್ಟಿಗೆರೆ, ಕೋಣನ ಕುಂಟೆ, ಅಂಜನಾಪುರ, ವಸಂತಪುರ, ಉತ್ತರಹಳ್ಳಿ, ಎಳಚೇನಹಳ್ಳಿ, ಬೇಗೂರು ವಾರ್ಡ್ಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತವೆ.
ಇದನ್ನೂ ಓದಿ: Karnataka Assembly Elections: ವಿಜ್ಞಾನಿ ನೆಲೆಸಿದ್ದ ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಹೇಗಿದೆ ಸಿವಿರಾಮನ್ ನಗರದ ಚಿತ್ರಣ?
ಈ ಬಾರಿ ಟಿಕೆಟ್ ಯಾರಿಗೆ?
ಬಿಜೆಪಿಯಲ್ಲಿ ಎಂ. ಕೃಷ್ಣಪ್ಪ ಅವರೇ ಈ ಬಾರಿಯೂ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ನಲ್ಲಿ ಟಿಕೆಟ್ಗೆ ಪೈಪೋಟಿ ಜೋರಾಗಿದೆ. ಈ ಹಿಂದೆ 2018ರಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಆರ್.ಕೆ. ರಮೇಶ್ ಮತ್ತೊಮ್ಮೆ ಟಿಕೆಟ್ ಬಯಸಿದ್ದರೆ, ಅವರಿಗೆ ಕಾಂಗ್ರೆಸ್ ಮುಖಂಡ ರಾಜಗೋಪಾಲ ರೆಡ್ಡಿ ಪೈಪೋಟಿ ಕೊಡುವಂತೆ ಕಾಣುತ್ತಿದ್ದಾರೆ. ಅತ್ತ ಈ ಹಿಂದೆ ಜೆಡಿಎಸ್ನಿಂದ ಸ್ಪರ್ಧಿಸಿ, ಸೋತಿದ್ದ ಪ್ರಭಾಕರ್ ರೆಡ್ಡಿ ಈ ಬಾರಿಯೂ ಟಿಕೆಟ್ ಬಯಸಿದ್ದಾರೆ.
ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ |
ಎಂ. ಕೃಷ್ಣಪ್ಪ | ಆರ್.ಕೆ. ರಮೇಶ್ | ಪ್ರಭಾಕರ್ ರೆಡ್ಡಿ |
ರಾಜಗೋಪಾಲ ರೆಡ್ಡಿ |
ಬೆಂಗಳೂರು ದಕ್ಷಿಣ ಕ್ಷೇತ್ರದ ಜಾತಿ ಲೆಕ್ಕಾಚಾರ
ಈ ಕ್ಷೇತ್ರದಲ್ಲಿ ಒಟ್ಟು ಮತದಾರರು – 5,81,408 ಇದ್ದಾರೆ. ಈ ಪೈಕಿ ಒಕ್ಕಲಿಗ – 1,40,000, ಲಿಂಗಾಯತ – 55,000, ಬ್ರಾಹ್ಮಣ -14,000 ಮತದಾರರಿದ್ದಾರೆ. ಇನ್ನು ಒಬಿಸಿ – 1,40,000ರಷ್ಟು ಮತದಾರರಿದ್ದರೆ, ಎಸ್ಸಿ-ಎಸ್ಟಿ – 1,54,000 ಮತದಾರರಿದ್ದಾರೆ.
ಒಟ್ಟೂ ಮತದಾರರು | 5,81,408 |
ಒಕ್ಕಲಿಗ | 1,40,000 |
ಲಿಂಗಾಯತ | 55,000 |
ಬ್ರಾಹ್ಮಣ | 14,000 |
ಒಬಿಸಿ | 1,40,000 |
ಎಸ್ಸಿ-ಎಸ್ಟಿ | 1,54,000 |
ಕ್ಷೇತ್ರದ ಸಮಸ್ಯೆಗಳು ಏನು?
ಈ ಕ್ಷೇತ್ರದ ಬಡಾವಣೆಗಳಲ್ಲಿ ಸಾರಿಗೆ ಸಂಪರ್ಕ, ವಸತಿ ಸೌಲಭ್ಯ ಅಭಿವೃದ್ಧಿ ಕಂಡಿದೆ. ಅನೇಕ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ, ಕೈಗಾರಿಕೆಗಳಿಗೆ ಸಂಪರ್ಕ ಕ್ಷೇತ್ರವಾಗಿದೆ. ಕನಕಪುರದ ರಸ್ತೆಯ ಕೋಣನಕುಂಟೆ ಕ್ರಾಸ್ ಟ್ರಾಫಿಕ್ ಜಾಮ್ ಬದಲಾಗಿಲ್ಲ. ಅಲ್ಲಿಂದ ಬೇಗೂರು, ಆ ಕಡೆ ಗೊಟ್ಟಿಗೆರೆ ಕಡೆಗೆ ಅನೇಕ ಅಪಾರ್ಟ್ಮೆಂಟ್ ಗಳು, ಬಡಾವಣೆಗಳು ರೂಪುಗೊಂಡಿದ್ದು ಬಿಟ್ಟರೆ, ಮೂಲ ಸೌಕರ್ಯ ಸಮಸ್ಯೆ ಕಾಡುತ್ತಿದೆ ಅಂತಿದ್ದಾರೆ ಅಲ್ಲಿನ ಮತದಾರರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ