• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Belagavi Rural Constituency: ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಹಿಂದಿನ ಚುನಾವಣೆ ಫಲಿತಾಂಶ ಹೇಗಿತ್ತು? ಯಾವ ಪಕ್ಷಕ್ಕೆ ಎಷ್ಟು ಬಾರಿ ಗೆಲುವು ಸಿಕ್ಕಿದೆ?

Belagavi Rural Constituency: ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಹಿಂದಿನ ಚುನಾವಣೆ ಫಲಿತಾಂಶ ಹೇಗಿತ್ತು? ಯಾವ ಪಕ್ಷಕ್ಕೆ ಎಷ್ಟು ಬಾರಿ ಗೆಲುವು ಸಿಕ್ಕಿದೆ?

ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕಿ

ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಶಾಸಕಿ

2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಂಜಯ್ ಬಿ ಪಾಟೀಲ್ ಅವರನ್ನು ಕಾಂಗ್ರೆಸ್‌ನ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಸೋಲಿಸಿದರು.

  • Trending Desk
  • 3-MIN READ
  • Last Updated :
  • Belgaum, India
  • Share this:

ಬೆಳಗಾವಿ: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಸಂಪೂರ್ಣ ದೇಶವೇ ಈ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಸುತ್ತಿದೆ ಎಂಬಷ್ಟರ ಮಟ್ಟಿಗೆ ಪಕ್ಷಗಳ ಪ್ರಧಾನ ನಾಯಕರೇ ಚುನಾವಣಾ ಮತ ಪ್ರಚಾರದಲ್ಲಿ (Election Campaign) ಭಾಗವಹಿಸಿ ಮತದಾರರಲ್ಲಿ (Voters) ಮತಯಾಚನೆ ನಡೆಸುತ್ತಿದ್ದಾರೆ. ಮತದಾರರನ್ನು ಅನೇಕ ವಿಧದಲ್ಲಿ ಓಲೈಸುತ್ತಿರುವ ಅಭ್ಯರ್ಥಿಗಳು ಹಲವಾರು ವಿಧವಾಗಿ ಬಗೆ ಬಗೆಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ.


ಸಿನಿಮಾ ನಟರ ಭರ್ಜರಿ ಮತಪ್ರಚಾರ


ಇನ್ನು ಪಕ್ಷ ಮುಖಂಡರುಗಳು ಹಾಗೂ ಅಧಕ್ಷರುಗಳೊಂದಿಗೆ ಸಿನಿ ತಾರೆಯರು ಕೈ ಜೋಡಿಸಿದ್ದು ಅಬ್ಬರದ ಪ್ರಚಾರಕ್ಕೆ ಸಾಕ್ಷಿಯಾಗಿದ್ದಾರೆ ಹಾಗೂ ಈ ಬಾರಿಯ ಚುನಾವಣೆಯನ್ನು ಇನ್ನಷ್ಟು ರಂಗೇರಿಸಿದ್ದಾರೆ.


ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ


ಬೆಳಗಾವಿ ಗ್ರಾಮೀಣ ಕ್ಷೇತ್ರವು ಭಾರತದ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಬೆಳಗಾವಿ (ಲೋಕಸಭಾ ಕ್ಷೇತ್ರ) ಒಳಗೊಂಡಿರುವ 8 ಕ್ಷೇತ್ರಗಳಲ್ಲಿ ಒಂದಾಗಿದೆ.


2008 ರಲ್ಲಿ ಅಸೆಂಬ್ಲಿ ನಕ್ಷೆಯನ್ನು ಪುನಃ ರಚಿಸಿದಾಗ ಈ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿತು. ಅದಕ್ಕೂ ಮೊದಲು ಅದರ ಹೆಚ್ಚಿನ ಪ್ರದೇಶವು ಈಗ ನಿಷ್ಕ್ರಿಯವಾಗಿರುವ ಉಚಗಾಂವ್ ಅಡಿಯಲ್ಲಿತ್ತು.



karnataka-election-2023-belagavi-rural-assembly-constituency-political-history-stg-mrq
ಸಂಜಯ್ ಪಾಟೀಲ್, ಮಾಜಿ ಶಾಸಕ

ಯಾರು ಯಾರು ಚುನಾವಣಾ ಕಣದಲ್ಲಿದ್ದಾರೆ?


ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ (ಜಾತ್ಯತೀತ) ಅಭ್ಯರ್ಥಿ ಶಂಕರಗೌಡ ರುದ್ರಗೌಡ ಪಾಟೀಲ್, ಕಾಂಗ್ರೆಸ್‌ನ ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡ ನಾಗೇಶ್ ಮನ್ನೋಳಕರ ನಡುವೆ ಪೈಪೋಟಿ ಏರ್ಪಟ್ಟಿದೆ.


2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಂಜಯ್ ಬಿ ಪಾಟೀಲ್ ಅವರನ್ನು ಕಾಂಗ್ರೆಸ್‌ನ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಸೋಲಿಸಿದರು.


2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಜಯ್ ಬಿ ಪಾಟೀಲ್ ಬೆಳಗಾವಿ ಗ್ರಾಮಾಂತರದಿಂದ ಐಎನ್‌ಡಿಯ ಕಿಣೇಕರ್ ಮನೋಹರ ಕಲ್ಲಪ್ಪ ಅವರನ್ನು ಸೋಲಿಸುವ ಮೂಲಕ ಗೆದ್ದರು.



bjp leader sanjay patil compared laxmi hebbalkar as ramayan Kaikeyi mrq
ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಂಜಯ್ ಪಾಟೀಲ್

2008 ರ ಚುನಾವಣೆಯಲ್ಲಿ ಹೇಗಿತ್ತು ಪೈಪೋಟಿ


ಸಂಜಯ್ ಬಿ ಪಾಟೀಲ್ 38,222 ಮತಗಳನ್ನು ಗೆದ್ದರೆ, ಐಎನ್‌ಡಿಯ ಕಿಣೇಕರ್ ಮನೋಹರ್ ಕಲ್ಲಪ್ಪ 36,987 ಮತಗಳನ್ನು ಗೆದ್ದಿದ್ದಾರೆ ಹಾಗೂ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್ ಮೂರನೇ ಸ್ಥಾನವನ್ನು ಪಡೆದುಕೊಂಡರು


2018 ರ ಚುನಾವಣೆಯಲ್ಲಿ ಅಭ್ಯರ್ಥಿಗಳ ಮತಗಳ ವಿವರ


ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್ 102,040 ಮತಗಳನ್ನು ಗೆದ್ದು ಪ್ರಥಮ ಸ್ಥಾನ ಪಡೆದುಕೊಂಡರೆ, ಬಿಜೆಪಿಯ ಸಂಜಯ್ ಪಾಟೀಲ್ 50,316 ಮತಗಳನ್ನು ಪಡೆದುಕೊಂಡರು.



ಬಿಜೆಪಿಯ ಸಂಜಯ್ ಬಿ ಪಾಟೀಲ್ ಅವರು 2013 ರ ಕರ್ನಾಟಕ ಚುನಾವಣೆಯಲ್ಲಿ ಬೆಳಗಾವಿ ಗ್ರಾಮಾಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಮಾಳಗಿ ಶಿವಪುತ್ರಪ್ಪ ಚನಬಸಪ್ಪ ಅವರನ್ನು ಸೋಲಿಸಿ ಗೆದ್ದಿದ್ದರು. 2008 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ


ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಸಂಜಯ್ ಬಿ ಪಾಟೀಲ್ ಅವರು ಕಾಂಗ್ರೆಸ್‌ನ ಮಾಳಗಿ ಶಿವಪುತ್ರಪ್ಪ ಚನಬಸಪ್ಪ ಅವರನ್ನು ಸೋಲಿಸಿ ವಿಜಯಿಯಾಗಿ ಹೊರಹೊಮ್ಮಿದ್ದರು.


top videos



    ಇದನ್ನೂ ಓದಿ:  Karnataka Polls 2023: ‘ನಿಮ್ಮನ್ನು ನೀವೇ ಅಪಹಾಸ್ಯ ಮಾಡಿಕೊಳ್ಳೋದನ್ನ ನಿಲ್ಲಿಸಿ’ -ಸೋನಿಯಾ ಹೇಳಿಕೆ ವಿರುದ್ಧ ಅಣ್ಣಾಮಲೈ ಕಿಡಿ

    2018 ರ ಕರ್ನಾಟಕ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತವರು ಯಾರು?


    2018 ರ ಕರ್ನಾಟಕ ಅಸೆಂಬ್ಲಿ ಚುನಾವಣೆಯು ಮೇ 12, 2018 ರಂದು ನಡೆಯಿತು. 2018 ರ ಕರ್ನಾಟಕ ಚುನಾವಣಾ ಫಲಿತಾಂಶಗಳಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) 104 ಸ್ಥಾನಗಳನ್ನು ಗೆದ್ದಿತು. ಆದರೆ 224 ಸದಸ್ಯರ ವಿಧಾನಸಭಾ ಕ್ಷೇತ್ರದಲ್ಲಿ ಬಹುಮತ 112 ಅಂಕಗಳನ್ನು ದಾಟಲು ವಿಫಲವಾಯಿತು. ಕಾಂಗ್ರೆಸ್ 78 ಗೆದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಜೆಡಿಎಸ್ 38 ಸ್ಥಾನಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.


    First published: