• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Aurad Constituency: ಔರಾದ್‌ನಲ್ಲಿ ಹೇಗಿದೆ ಚುನಾವಣಾ ಕಾವು? ಇಲ್ಲಿದೆ ಸಂಪೂರ್ಣ ಮಾಹಿತಿ

Aurad Constituency: ಔರಾದ್‌ನಲ್ಲಿ ಹೇಗಿದೆ ಚುನಾವಣಾ ಕಾವು? ಇಲ್ಲಿದೆ ಸಂಪೂರ್ಣ ಮಾಹಿತಿ

ಔರಾದ್ ವಿಧಾನಸಭಾ ಕ್ಷೇತ್ರ

ಔರಾದ್ ವಿಧಾನಸಭಾ ಕ್ಷೇತ್ರ

2008 ರಿಂದ, ಈ ಸ್ಥಾನವನ್ನು ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಜೆಡಿಎಸ್‌ನಿಂದ ಜಯಸಿಂಗ್ ರಾಥೋಡ್ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್‌ನ ಡಾ. ಶಿಂಧೆ ಭೀಮಸೇನ್ ರಾವ್, ಬಿಜೆಪಿಯಿಂದ ಪ್ರಭು ಚವಾಣ್, ಆಮ್ ಆದ್ಮಿ ಪಕ್ಷದಿಂದ ಬಾಬುರಾವ್ ಅಡ್ಕೆ ಸ್ಪರ್ಧಿಸುತ್ತಿದ್ದಾರೆ.

ಮುಂದೆ ಓದಿ ...
  • Trending Desk
  • 2-MIN READ
  • Last Updated :
  • Bidar, India
  • Share this:

    ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆ (Karnataka assembly elections) ನಡೆಯಲಿದೆ. 10 ರಂದು ಚುನಾವಣೆ ಹಾಗೂ 13 ರಂದು ಮತ ಎಣಿಕೆ ಹಾಗೂ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅಭ್ಯರ್ಥಿಗಳು ಭರದಿಂದಲೇ ಮತಪ್ರಚಾರ (candidates campaigne) ನಡೆಸಿದ್ದು, ಎಂದಿನಂತೆ ಹಲವಾರು ಯೋಜನೆಗಳನ್ನು ಜನಸಾಮಾನ್ಯರ ಮುಂದಿಡುತ್ತಾ ತಮ್ಮ ಪಕ್ಷಕ್ಕೇ ಮತ ಹಾಕಿ ಎಂದು ಓಲೈಸಿದ್ದಾರೆ. ಚುನಾವಣೆ ಚದುರಂಗದಾಟದಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂಬುದನ್ನು ನಿರ್ಧರಿಸುವುದು ಮತದಾರರೇ ಆಗಿರುವುದರಿಂದ ಅವರನ್ನು ಓಲೈಕೆ ಮಾಡುವುದೇ ಅಭ್ಯರ್ಥಿಗಳ ಮುಂದಿರುವ ಅಸ್ತ್ರವಾಗಿದೆ.


    ಇದರ ಜೊತೆಗೆ ಅಭ್ಯರ್ಥಿಗಳು ಸ್ಪರ್ಧಿಸುವ ಕ್ಷೇತ್ರಗಳು ಕೂಡ ಮುಖ್ಯವಾಗಿದ್ದು ಆಯಾಯ ಕ್ಷೇತ್ರಕ್ಕೆ ಶಾಸಕರು ಏನು ಮಾಡಿದ್ದಾರೆ ಎಂಬುದನ್ನು ಅಳೆದೂ ಸುರಿದು ಲೆಕ್ಕಾಚಾರ ಹಾಕಿ ಮತದಾರ ಓಟು ಹಾಕಲು ನಿರ್ಧರಿಸಿದ್ದಾನೆ.


    ಹಾಗಿದ್ದರೆ ಕ್ಷೇತ್ರಗಳ ಬಗ್ಗೆ ತಿಳಿಸುವಂತಹ ಈ ವಿಶೇಷ ಲೇಖನದಲ್ಲಿ ಮತದಾರರ ಸಂಖ್ಯೆ, ವೋಟಿಗೆ ನಿಂತಿರುವ ಪಕ್ಷಗಳ ಅಭ್ಯರ್ಥಿಗಳು ಯಾರು ಯಾರು ಎಂಬ ಮಾಹಿತಿ ಕೂಡ ದೊರೆಯಲಿದೆ. ಹಿಂದಿನ ಚುನಾವಣೆಯಲ್ಲಿ ಯಾರು ಗೆದ್ದವರು ಯಾರು ಸೋತವರು ಯಾರಿಗೆ ಪ್ರಬಲ ಹಿಡಿತವಿದೆ ಎಂಬುದನ್ನು ಅಂದಾಜಿಸಬಹುದಾಗಿದೆ.


    ಔರಾದ್ ಅಸೆಂಬ್ಲಿ ಕ್ಷೇತ್ರದ ಪರಿಚಯ


    ಔರಾದ್ ಅಸೆಂಬ್ಲಿ ಕ್ಷೇತ್ರವು ಬೀದರ್ ಜಿಲ್ಲೆಯಲ್ಲಿದ್ದು ಕರ್ನಾಟಕ ವಿಧಾನಸಭೆಯ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಔರಾದ್ ಬೀದರ್ ಲೋಕಸಭೆ/ಸಂಸದೀಯ ಕ್ಷೇತ್ರದ ಭಾಗವಾಗಿದ್ದು ಇದು ಸಾಮಾನ್ಯ ಗ್ರಾಮೀಣ ಬೀದರ್ ಲೋಕಸಭಾ ಕ್ಷೇತ್ರದ ಭಾಗವಾಗಿದೆ.


    ಇದನ್ನೂ ಓದಿ: Navalgund: ರೈತ ಬಂಡಾಯದ ನೆಲದಲ್ಲಿ ಹೇಗಿದೆ ಚುನಾವಣಾ ಕಾವು? ನವಲಗುಂದ ಕ್ಷೇತ್ರದ ಚಿತ್ರಣ ಇಲ್ಲಿದೆ


    ಕಣದಲ್ಲಿ ಇರುವವರು ಯಾರು?


    2008 ರಿಂದ, ಈ ಸ್ಥಾನವನ್ನು ಪರಿಶಿಷ್ಟ ಜಾತಿಗಳ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಜೆಡಿಎಸ್‌ನಿಂದ ಜಯಸಿಂಗ್ ರಾಥೋಡ್ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್‌ನ ಡಾ. ಶಿಂಧೆ ಭೀಮಸೇನ್ ರಾವ್, ಬಿಜೆಪಿಯಿಂದ ಪ್ರಭು ಚವಾಣ್, ಆಮ್ ಆದ್ಮಿ ಪಕ್ಷದಿಂದ ಬಾಬುರಾವ್ ಅಡ್ಕೆ ಸ್ಪರ್ಧಿಸುತ್ತಿದ್ದಾರೆ.


    ಚುನಾವಣಾ ಹಣಾಹಣಿ


    2018 ರಲ್ಲಿ, ಭಾರತೀಯ ಜನತಾ ಪಕ್ಷದ ಪ್ರಭು ಚೌಹಾಣ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಿಜಯಕುಮಾರ್ ಅವರನ್ನು 10592 ಮತಗಳ ಅಂತರದಿಂದ ಸೋಲಿಸುವ ಮೂಲಕ ಸ್ಥಾನವನ್ನು ಗೆದ್ದರು. 2003 ರಲ್ಲಿ ಬಿಜೆಪಿಯ ಪ್ರಭು ಚೌಹಾಣ್ ಕೆಜೆಪಿ ಅಭ್ಯರ್ಥಿ ಭೀಮ್ ಜಾದವ್ ಅವರನ್ನು 23,191 ಮತಗಳಿಂದ ಗೆದ್ದು ಜಯಶಾಲಿಯಾದರೆ, 2008 ರಲ್ಲಿ ಪ್ರಭು ಅವರು ಕಾಂಗ್ರೆಸ್‌ನ ನರಸಿಂಗರಾವ್ ಅವರನ್ನು ಸೋಲಿಸಿ ಅಸೆಂಬ್ಲಿ ಸೀಟನ್ನು ತಮ್ಮದಾಗಿಸಿಕೊಂಡರು.


    ಮತದಾರರ ಸಂಖ್ಯೆ


    ಇಲ್ಲಿ ಒಟ್ಟು 2,13,194 ಮತದಾರರಿದ್ದು, ಪುರುಷ ಮತದಾರರು 111,027, ಮಹಿಳಾ ಮತದಾರರು 102,167 ಇದ್ದಾರೆ.


    ಸಾಕ್ಷರತೆ ಪ್ರಮಾಣ


    2008 ರ ಡಿಲಿಮಿಟೇಶನ್ ಆಯೋಗದ ವರದಿಯ ಪ್ರಕಾರ ಈ ಪರಿಶಿಷ್ಟ ಜಾತಿ ಅಸೆಂಬ್ಲಿ ಕ್ಷೇತ್ರವು ಅಂದಾಜು 26.19% ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿದೆ ಮತ್ತು ಅಂದಾಜು 8.8% ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿದೆ. 2011ರ ಭಾರತದ ಜನಗಣತಿಯ ಪ್ರಕಾರ ಈ ಕ್ಷೇತ್ರದಲ್ಲಿನ ಸಾಕ್ಷರತೆ ಮಟ್ಟವು 70.51% ಆಗಿದೆ.


    ಇದನ್ನೂ ಓದಿ: Kalghatagi: ಈ ಬಾರಿ ಯಾರಿಗೆ 'ಸಂತೋಷ', ಯಾರಿಗೆ ಸಿಹಿ 'ಲಾಡ್'? ಕುತೂಲಹದ ಕಣಜವಾದ ಕಲಘಟಗಿ

    top videos


      2013 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 380992 ಅರ್ಹ ಮತದಾರರಿದ್ದು, ಅದರಲ್ಲಿ 99024 ಪುರುಷರು, 90075 ಮಹಿಳೆಯರು ಮತ್ತು 9 ತೃತೀಯಲಿಂಗಿಗಳಿದ್ದರು. 2018 ರಲ್ಲಿ ಔರಾದ್ ನಲ್ಲಿ ಸೇವಾ ಮತದಾರರ ಸಂಖ್ಯೆ 0 ಆಗಿದೆ. 2013ರಲ್ಲಿ ಕ್ಷೇತ್ರದಲ್ಲಿ 159 ಸೇವಾ ಮತದಾರರು ನೋಂದಣಿಯಾಗಿದ್ದರು.

      First published: