LIVE NOW

(LIVE) ಸ್ಥಳೀಯ ಸಂಸ್ಥೆ ಚುನಾವಣೆ; ಇಲ್ಲಿಯವರೆಗೂ ಶೇ. 55 ಮತದಾನ

Kannada.news18.com | August 31, 2018, 6:08 PM IST
facebook Twitter google Linkedin
Last Updated August 31, 2018
auto-refresh

Highlights

ನ್ಯೂಸ್​-18 ಕನ್ನಡ

ಬೆಂಗಳೂರು (ಆಗಸ್ಟ್​.31): ಮೈತ್ರಿ ಸರ್ಕಾರ ರಚನೆಗೊಂಡ ನೂರು ದಿನಗಳ ನಂತರ ಮೊದಲ ಬಾರಿಗೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್​-ಜೆಡಿಎಸ್ ಚುನಾವಣಾ ಕಣದಲ್ಲಿ​ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು, ಮೂರು ಪಕ್ಷಗಳಿಗೂ ಗೆಲುವು ಪ್ರತಿಷ್ಠೆಯ ವಿಚಾರವಾಗಿದೆ.

ಇಂದು ರಾಜ್ಯದ ಅರ್ಧದಷ್ಟು ನಗರವಾಸಿಗಳು ಮತ ಚಲಾಯಿಸಲಿದ್ದಾರೆ. ಒಟ್ಟು 212 ನಗರ ಸಂಸ್ಥೆಗಳ ಪೈಕಿ 105 ಸಂಸ್ಥೆಗಳಿಗೆ ಮತದಾನವಾಗುತ್ತಿದೆ. ಇದರಲ್ಲಿ ಮೈಸೂರು, ಶಿವಮೊಗ್ಗ ಹಾಗೂ ತುಮಕೂರು  ಮಹಾನಗರ ಪಾಲಿಕೆ, 29 ನಗರಸಭೆ, 53 ಪುರಸಭೆ ಹಾಗೂ 20 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಮತದಾನದ ಕುರಿತ ಕ್ಷಣಕ್ಷಣದ ಮಾಹಿತಿ ನ್ಯೂಸ್​-18 ಕನ್ನಡದಲ್ಲಿ.
5:05 pm (IST)
ಬಿಜೆಪಿ ಮೇಲುಗೈ ಸಾಧಿಸಲಿದೆ; ಜಗದೀಶ್​ ಶೆಟ್ಟರ್​​ ವಿಶ್ವಾಸ

ಬಿಜೆಪಿ ಮೇಲುಗೈ ಸಾಧಿಸಲಿದೆ; ಜಗದೀಶ್​ ಶೆಟ್ಟರ್​​ ವಿಶ್ವಾಸ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಮಾಜಿ ಸಿಎಮ್ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಮತದಾರರ ಒಲವು ಬಿಜೆಪಿ ಪರವಾಗಿದೆ ಎಂದಿದ್ದಾರೆ‌. ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆಯಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‌ ನಡುವೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿದಂತಾಗಿದೆ. ಇಷ್ಟವಿಲ್ಲದ ಮದುವೆಗೆ ಸದ್ಯದಲ್ಲಿ ವಿಚ್ಛೇದನವಾಗಲಿದೆ. ರೈತರ ಸಾಲಮನ್ನಾ ಮಾಡಿದ್ದು ನಾವೇ ಎಂದು ಜೆಡಿಎಸ್‌ನವರು ಹೇಳಿಕೊಳ್ಳುತ್ತಿದ್ದಾರೆ. ನಾನೇ ಸಿಎಂ ಆಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರನ್ನು ಕೆಳಗಿಳಿಸಲು ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಇದೆಲ್ಲ ನೋಡಿದರೆ ಸರ್ಕಾರ ಬಹಳದಿನ ಇರುವುದಿಲ್ಲ ಎನ್ನುವುದು ಸ್ಪಷ್ಟ. ನಾವೇನೂ ಆಪರೇಷನ್ ಕಮಲ ಮಾಡಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‌ನವರೇ ಪರಸ್ಪರ ಆಪರೇಷನ್ ಮಾಡಿಕೊಳ್ಳುತ್ತಾರೆ ಎಂದವರು ಹೇಳಿದ್ದಾರೆ.

Load More