ರಾಜ್ಯದ 102 ನಗರ ಸಂಸ್ಥೆಗಳು ಮತ್ತು 3 ಮಹಾನಗರ ಪಾಲಿಕೆಗಳಿಗೆ ಇಂದು ಮತದಾನ; ಸೋಮವಾರ ಫಲಿತಾಂಶ


Updated:August 31, 2018, 7:20 AM IST
ರಾಜ್ಯದ 102 ನಗರ ಸಂಸ್ಥೆಗಳು ಮತ್ತು 3 ಮಹಾನಗರ ಪಾಲಿಕೆಗಳಿಗೆ ಇಂದು ಮತದಾನ; ಸೋಮವಾರ ಫಲಿತಾಂಶ
ಪ್ರಾತಿನಿಧಿಕ ಚಿತ್ರ

Updated: August 31, 2018, 7:20 AM IST
- ನ್ಯೂಸ್18 ಕನ್ನಡ

ಬೆಂಗಳೂರು: ರಾಜ್ಯದ ಅರ್ಧದಷ್ಟು ನಗರವಾಸಿಗಳು ಶುಕ್ರವಾರ ಮತ ಚಲಾಯಿಸಲಿದ್ದಾರೆ. ಒಟ್ಟು 212 ನಗರ ಸಂಸ್ಥೆಗಳ ಪೈಕಿ 105 ಸಂಸ್ಥೆಗಳಿಗೆ ಮತದಾನವಾಗುತ್ತಿದೆ. ಇದರಲ್ಲಿ ಮೈಸೂರು, ಶಿವಮೊಗ್ಗ ಹಾಗೂ ತುಮಕೂರು  ಮಹಾನಗರ ಪಾಲಿಕೆ, 29 ನಗರಸಭೆ, 53 ಪುರಸಭೆ ಹಾಗೂ 20 ಪಟ್ಟಣ ಪಂಚಾಯಿತಿ ಸಂಸ್ಥೆಗಳ ಅಧಿಕಾರ ಗದ್ದುಗೆಗೆ ತೀವ್ರ ಸ್ಪರ್ಧೆ ನಡೆದಿದೆ.

ರಾಜ್ಯದಲ್ಲಿರುವ ಒಟ್ಟು 4,976 ನಗರ ವಾರ್ಡ್​ಗಳ ಪೈಕಿ 22 ಜಿಲ್ಲೆಗಳ ನಗರಸಂಸ್ಥೆಗಳ 2,648 ವಾರ್ಡ್​ಗಳಿಗೆ ಈಗ ಚನಾವಣೆ ನಡೆಯಲಿದೆ. ಸೆ. 3, ಸೋಮವಾರದಂದು ಮತ ಎಣಿಕೆ ನಡೆಯಲಿದೆ. ಕೊಡಗಿನ ಮೂರು ಪಟ್ಟಣ ಪಂಚಾಯಿತಿಗಳ ಚುನಾವಣೆಯು ಜಲಪ್ರವಾಹದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಇನ್ನುಳಿದ ನಗರ ಸಂಸ್ಥೆಗಳಿಗೆ ನವೆಂಬರ್​ ನಂತರ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಶಾಲಾ- ಕಾಲೇಜುಗಳಿಗೆ ಸರ್ಕಾರಿ ರಜೆ ನೀಡಲಾಗಿದೆ.

ಭವಿಷ್ಯದ ರಾಜಕೀಯ ದಿಕ್ಕು ಹಾಗೂ ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಸ್ಥಳೀಯ ಸಂಸ್ಥೆ ಚುನಾವಣೆಗಳು ಬಹಳ ಮಹತ್ವ ಹೊಂದಿವೆ. ಒಂದು ಹಂತದವರೆಗೆ ಮತದಾರರ ಮನಸ್ಥಿತಿಯ ವಾಸ್ತವ ಚಿತ್ರಣ ಈ ಚುನಾವಣೆಯಲ್ಲಿ ವ್ಯಕ್ತವಾಗುವ ನಿರೀಕ್ಷೆ ಇದೆ.

ಚುನಾವಣೆ ನಡೆಯುತ್ತಿರುವ ಒಟ್ಟು ವಾರ್ಡ್​ಗಳು: 2,648

ಚುನಾವಣೆ ನಡೆಯುತ್ತಿರುವ ಜಿಲ್ಲೆಗಳು:
1) ಮೈಸೂರು
Loading...

2) ಶಿವಮೊಗ್ಗ
3) ತುಮಕೂರು
4) ಬೆಳಗಾವಿ
5) ವಿಜಯಪುರ
6) ಬಾಗಲಕೋಟೆ
7) ಕಲಬುರ್ಗಿ
8) ಬೀದರ್
9) ಯಾದಗಿರಿ
10) ಕೊಪ್ಪಳ
11) ರಾಯಚೂರು
12) ಬಳ್ಳಾರಿ
13) ಹಾವೇರಿ
14) ಗದಗ
15) ದಾವಣಗೆರೆ
16) ಚಿತ್ರದುರ್ಗ
17) ಉತ್ತರ ಕನ್ನಡ
18) ದಕ್ಷಿಣ ಕನ್ನಡ
19) ಉಡುಪಿ
20) ಮಂಡ್ಯ
21) ಹಾಸನ
22) ಚಾಮರಾಜನಗರ

ಚುನಾವಣೆ ನಡೆಯುತ್ತಿರುವ ನಗರ ಸಂಸ್ಥೆಗಳು:

ಮಹಾನಗರ ಪಾಲಿಕೆಗಳು: 3 (ಒಟ್ಟು 135 ವಾರ್ಡ್​ಗಳು)
1) ಮೈಸೂರು (ಬಿಜೆಪಿ-ಜೆಡಿಸ್ ಮೈತ್ರಿ)
2) ಶಿವಮೊಗ್ಗ (ಕಾಂಗ್ರೆಸ್-ಜೆಡಿಎಸ್ ಮೈತ್ರಿ)
3) ತುಮಕೂರು (ಕಾಂಗ್ರೆಸ್-ಜೆಡಿಎಸ್ ಮೈತ್ರಿ)

ನಗರಸಭೆಗಳು: 29 (ಒಟ್ಟು 933 ವಾರ್ಡ್​ಗಳು)
ಯಾದಗಿರಿ
ಸುರಪುರ
ಬಾಗಲಕೋಟೆ
ಇಲಕಲ್
ಮುಧೋಳ
ಜಮಖಂಡಿ
ರಬಕವಿ-ಬನಹಟ್ಟಿ
ಶಿರಸಿ
ದಾಂಡೇಲಿ
ಕಾರವಾರ
ಮಂಡ್ಯ
ನಿಪ್ಪಾಣಿ
ಗೋಕಾಕ್
ಹಾವೇರಿ
ರಾಣೇಬೆನ್ನೂರು
ಕೊಪ್ಪಳ
ಗಂಗಾವತಿ
ರಾಯಚೂರು
ಸಿಂಧನೂರು
ಉಳ್ಳಾಲ
ಹಾಸನ
ಅರಸೀಕೆರೆ
ಚಾಮರಾಜನಗರ
ಶಹಾಬಾದ್
ಪುತ್ತೂರು
ಉಡುಪಿ
ಚಿತ್ರದುರ್ಗ
ಚಳ್ಳಕೆರೆ
ಕೊಳ್ಳೇಗಾಲ

ಪುರಸಭೆಗಳು: 53 (ಒಟ್ಟು 1,223 ವಾರ್ಡ್​ಗಳು)
ಮಧುಗಿರಿ
ಚಿಕ್ಕನಾಯಕನಹಳ್ಳಿ
ಗುರುಮಿಠಕಲ್
ಲಕ್ಷ್ಮೇಶ್ವರ
ರೋಣ
ಗಜೇಂದ್ರಗಡ
ಬಂಟ್ವಾಳ
ಚನ್ನರಾಯಪಟ್ಟಣ
ಹೊಳೆನರಸೀಪುರ
ಸಕಲೇಶಪುರ
ಚನ್ನಗಿರಿ
ಹೊಸದುರ್ಗ
ಹಳ್ಳಿಖೇಡ್
ಕಾರ್ಕಳ
ಕುಂದಾಪುರ
ಹಳಿಯಾಳ
ಕುಮಟಾ
ಅಂಕೋಲಾ
ಮದ್ದೂರು
ಪಾಂಡವಪುರ
ನಾಗಮಂಗಲ
ಕೊಣ್ಣೂರ
ಮೂಡಲಗಿ
ಸವದತ್ತಿ ಯಲ್ಲಮ್ಮ
ರಾಮದುರ್ಗ
ಬೈಲಹೊಂಗಲ
ಸಂಕೇಶ್ವರ
ಚಿಕ್ಕೋಡಿ
ಹುಕ್ಕೇರಿ
ಕುಡಚಿ
ಸದಲಗಾ
ಹಾನಗಲ್
ಸವಣೂರು
ಕುಷ್ಟಗಿ
ಪಿರಿಯಾಪಟ್ಟಣ
ಟಿ.ನರಸೀಪುರ
ಹೆಚ್.ಡಿ. ಕೋಟೆ
ಚಿಂಚೋಳಿ
ಚಿತ್ತಾಪುರ
ಸೇಡಂ
ಜೇವರ್ಗಿ
ಅಫಜಲಪುರ
ಆಳಂದ
ಮಾನವಿ
ದೇವದುರ್ಗ
ಲಿಂಗಸುಗೂರು
ಮುದಗಲ್
ಮುದ್ದೇಬಿಹಾಳ
ಬಾದಾಮಿ
ಗುಳೇದಗುಡ್ಡ
ಮಹಾಲಿಂಗಪೂರ
ತೇರದಾಳ
ಹುನಗುಂದ

ಪಟ್ಟಣ ಪಂಚಾಯಿತಿಗಳು: 20 (ಒಟ್ಟು 357 ವಾರ್ಡ್​ಗಳು)
ಯಲ್ಲಾಪುರ
ಮುಂಡಗೋಡ
ನಾಗಮಂಗಲ
ಖಾನಾಪುರ
ಹಟ್ಟಿ
ಶಿರಹಟ್ಟಿ
ಮುಳಗುಂದ
ನರೇಗಲ್
ಹೊನ್ನಾಳಿ
ಜಗಳೂರು
ಸಾಲಿಗ್ರಾಮ
ಕುಡುತಿನಿ
ಕೊಟ್ಟೂರು
ಬೀಳಗಿ
ಕೆರೂರು
ಹಿರೆಕೇರೂರ
ಯಲಬುರ್ಗಾ
ಕೊರಟಗೆರೆ
ಗುಬ್ಬಿ
ರಾಯಬಾಗ

2013ರ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿತ್ತು. 207 ನಗರ ಸಂಸ್ಥೆಗಳಲ್ಲಿ 79 ಸಂಸ್ಥೆಗಳಲ್ಲಿ ಕಾಂಗ್ರೆಸ್ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು 24 ಹಾಗೂ 25 ಸಂಸ್ಥೆಗಳನ್ನ ವಶಪಡಿಸಿಕೊಂಡಿದ್ದವು. 62 ನಗರ ಸಂಸ್ಥೆಗಳಲ್ಲಿ ಯಾವ ಪಕ್ಷಕ್ಕೂ ಬಹುಮವಿಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಈ ಅತಂತ್ರ ಸ್ಥಿತಿಯಲ್ಲಿ ವಿವಿಧ ರಾಜಕೀಯ ಸಮೀಕರಣಗಳಾಗಿ ಸಮ್ಮಿಶ್ರ ಆಡಳಿತ ನಡೆಯುತ್ತಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ