HOME » NEWS » State » KARNATAKA UNLOCK 2O CM BS YEDIYURAPPA ANNOUNCE TODAY ABOUT AVAILABLE OF BUS AND METRO SERVICE FROM JUNE 21ST LG

Karnataka Unlock 2.O: ಸೋಮವಾರದಿಂದ ಬಸ್​, ಮೆಟ್ರೋ ಓಡಾಟಕ್ಕೆ ಸಿಗುತ್ತಾ ಅನುಮತಿ?; ಇಂದು ಸಿಎಂ ಮಹತ್ವದ ನಿರ್ಧಾರ

ರಾಜ್ಯದಲ್ಲಿ  ಒಟ್ಟು  8 ಸಾವಿರ ಕೆಎಸ್​ಆರ್​ಟಿಸಿ ಬಸ್ಸುಗಳಿದ್ದು, ಅದ್ರಲ್ಲಿ 2500 ರಿಂದ 3000 ಸಾವಿರ ಬಸ್ಸುಗಳನ್ನು ಮಾತ್ರ ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದೆ.

news18-kannada
Updated:June 19, 2021, 12:52 PM IST
Karnataka Unlock 2.O: ಸೋಮವಾರದಿಂದ ಬಸ್​, ಮೆಟ್ರೋ ಓಡಾಟಕ್ಕೆ ಸಿಗುತ್ತಾ ಅನುಮತಿ?; ಇಂದು ಸಿಎಂ ಮಹತ್ವದ ನಿರ್ಧಾರ
ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು(ಜೂ.19): ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆ, ಈಗಾಗಲೇ ಮೊದಲ ಹಂತದ ಅನ್​ಲಾಕ್​​ ಜಾರಿ ಮಾಡಲಾಗಿದೆ.  ರಾಜಧಾನಿ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಲಾಕ್​ಡೌನ್​ ಸಡಿಲಗೊಳಿಸಲಾಗಿದೆ. ಈಗ ಎರಡನೇ ಹಂತದ ಅನ್​ಲಾಕ್​ ಮಾಡಲು ಸರ್ಕಾರ ಮುಂದಾಗಿದೆ. ಜೂನ್​ 21ರಿಂದ ಅನ್​ಲಾಕ್​ 2.0 ಜಾರಿಯಾಗಲಿದ್ದು, ಕೆಲವು ಕ್ಷೇತ್ರಗಳಿಗೆ ವಿನಾಯಿತಿ ಸಿಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2 ನೇ ಹಂತದ ಲಾಕ್​ಡೌನ್​ ಸಡಿಲಿಕೆಯಲ್ಲಿ ಯಾವುದಕ್ಕೆಲ್ಲಾ ಅನುಮತಿ ಇರುತ್ತೆ, ಯಾವುದಕ್ಕೆಲ್ಲಾ ನಿರ್ಬಂಧ ಎಂಬುದನ್ನು ತಿಳಿಯಬೇಕಿದೆ.  ಸೋಮವಾರದಿಂದ ಅನ್ ಲಾಕ್ 2.O ಜಾರಿ ಹಿನ್ನಲೆ, ಅಂದಿನಿಂದ ಕರ್ನಾಟಕ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಸ್​ ಸಂಚಾರದ ಬಗ್ಗೆ ಇಂದಿನ ಸಿಎಂ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಹೌದು,  ಅನ್ ಲಾಕ್ 2.O ನಲ್ಲಿ  ರಾಜ್ಯ ಸರ್ಕಾರ  ಇನ್ನಷ್ಟು ರಿಲೀಫ್ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಸೋಮವಾರದಿಂದ ಬಿಎಂಟಿಸಿ, ಕೆಎಸ್ಆರ್ಟಿಸಿ, ಮೆಟ್ರೋ ಓಡಾಡೋದು ಪಕ್ಕ ಎನ್ನಲಾಗುತ್ತಿದೆ. ಆದರೆ ಮುಖ್ಯಂತ್ರಿಗಳು ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಒಂದು ವೇಳೆ ಬಸ್​, ಮೆಟ್ರೋ ಓಡಾಟ ನಡೆಸಿದರೆ, ಎಷ್ಟು ಪ್ರಯಾಣಿಕರು ಬಸ್, ಮೆಟ್ರೋದಲ್ಲಿ ಓಡಾಟ ನಡೆಸಬಹುದು? ಎಂಬುದನ್ನೂ ಯೋಚಿಸಬೇಕಿದೆ.

ಕೋವಿಡ್-19 ಹಿನ್ನಲೆ ಷರತ್ತು ಬದ್ದ ಸಂಚಾರಕ್ಕೆ ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.   ಜೂನ್- 21 ರಿಂದ ಅನ್​ಲಾಕ್​​‌ 2.O ಜಾರಿಯಾದರೆ ಬಿಎಂಟಿಸಿ, ಕೆಎಸ್ಆರ್ಟಿಸಿ, ಮೆಟ್ರೋ ಓಡಾಟ ಇರುತ್ತದೆ.

ಇದನ್ನೂ ಓದಿ:Fathers Day 2021: ಅಪ್ಪನ ಸ್ಥಾನಕ್ಕೆ ಬಡ್ತಿ ಪಡೆಯುತ್ತಿದ್ದೀರಾ..? ಹಾಗಿದ್ದರೆ ಇಲ್ಲಿವೆ ತಂದೆತನ ಅನುಭವಿಸಲು ಕೆಲವು ಟಿಪ್ಸ್​

ಬಿಎಂಟಿಸಿಯಲ್ಲಿ 6400 ಬಸ್ಸುಗಳಿವೆ. ಮೊದಲ ಹಂತದಲ್ಲಿ 1500 ರಿಂದ 2000 ಸಾವಿರ ಬಸ್ಸುಗಳನ್ನು ರಸ್ತೆಗಿಳಿಸಲು ಸಿದ್ದತೆ ನಡೆಸಲಾಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 1500-2000 ಬಸ್​ಗಳು ಓಡಾಟ ನಡೆಸಲಿವೆ. ಕೊರೋನಾ ಭೀತಿಯಿಂದಾಗಿ ಬಿಎಂಟಿಸಿ ಎಸಿ ವೋಲ್ವೋ ಬಸ್ಸುಗಳ ಸಂಚಾರ ಬಹುತೇಕ ಅನುಮಾನ ಎನ್ನಲಾಗುತ್ತಿದೆ.  ಕೇವಲ ನಾರ್ಮಲ್ ಬಸ್ಸುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ.

  • ಶೇಕಡಾ 50ರಷ್ಟು ಬಸ್ಸುಗಳನ್ನ ಮಾತ್ರ ರಸ್ತೆಗಿಳಿಸಲು ಅನುಮತಿ.
  • ಬಸ್ಸುಗಳಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಸಂಚಾರಕ್ಕೆ ಅನುಮತಿ.

  • ಮಾಸ್ಕ್,‌ ಸಾಮಾಜಿಕ ಅಂತರ ಕಡ್ಡಾಯ.

  • ಬಸ್ಸುಗಳಲ್ಲಿ ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಕುಳಿತು ಪ್ರಯಾಣಿಸಲು ಅವಕಾಶ.

  • ನಿಂತುಕೊಂಡು ಪ್ರಯಾಣಿಸೋದಕ್ಕೆ ಅವಕಾಶ ಇಲ್ಲ.

  • ಬಸ್​​ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಬ್ದಾರಿ ಪೊಲೀಸ್​ ಇಲಾಖೆ ಮತ್ತು ಬಿಎಂಟಿಸಿ ಅಧಿಕಾರಿಗಳಿಗೆ.

  • ಮೆಜೆಸ್ಟಿಕ್, ಟರ್ಮಿನಲ್ಸ್, ಪ್ರಮುಖ ಬಸ್​ ನಿಲ್ದಾಣಗಳಲ್ಲಿ ಕೋವಿಡ್​ ಟೆಸ್ಟ್​ ಕಡ್ಡಾಯ.

  • ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ 7 ಗಂಟೆ ಒಳಗೆ ಬಸ್​ ಸಂಚಾರ ನಿಲ್ಲಿಸಬೇಕು.

  • ಬಿಎಂಟಿಸಿ ಕರ್ತವ್ಯ ನಿರ್ವಹಿಸುವ ಚಾಲಕ- ನಿರ್ವಹಕರಿಗೆ ವ್ಯಾಕ್ಸಿನ್ ಕಡ್ಡಾಯ

  • 2 ಡೋಸ್ ವ್ಯಾಕ್ಸಿನ್ ತೆಗೆದುಕೊಂಡ ಚಾಲಕ- ನಿರ್ವಹಕರಿಗೆ ಮಾತ್ರ ಕೆಲಸಕ್ಕೆ ಹಾಜರಾಗಲು ಅವಕಾಶ


ಇಷ್ಟೆಲ್ಲಾ ಷರತ್ತುಗಳನ್ನು ಹಾಕಿ, ಸರ್ಕಾರ ಬಸ್​ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.

ಅಂತೆಯೇ  ಜೂ.21ರಿಂದ ಕೆಎಸ್​ಆರ್​ಟಿಸಿ ಬಸ್​​ಗಳನ್ನು ರಸ್ತೆಗಿಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಸೋಮವಾರದಿಂದ ಬಸ್ ಓಡಿಸಲು ಸಾರಿಗೆ ನಿಗಮಗಳು ಸಿದ್ದತೆ ನಡೆಸುತ್ತಿವೆ. ರಾಜ್ಯದಲ್ಲಿ  ಒಟ್ಟು  8 ಸಾವಿರ ಕೆಎಸ್​ಆರ್​ಟಿಸಿ ಬಸ್ಸುಗಳಿದ್ದು, ಅದ್ರಲ್ಲಿ 2500 ರಿಂದ 3000 ಸಾವಿರ ಬಸ್ಸುಗಳನ್ನು ಮಾತ್ರ ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ:RIP Milkha Singh: ಮಿಲ್ಖಾ ಸಿಂಗ್ ವೇಗಕ್ಕೆ ದಂಗಾಗಿದ್ದ ಪಾಕಿಸ್ತಾನಿ..!; ಫ್ಲೈಯಿಂಗ್ ಸಿಖ್ ದಂತಕತೆಯಾಗಿದ್ದೇ ರೋಚಕ !

  • ಅತೀ ಹೆಚ್ಚು ಸೋಂಕು ಇರುವ ಜಿಲ್ಲೆಗಳಿಗೆ ಕೆಎಸ್ಆರ್​​ಟಿಸಿ ಬಸ್ ಓಡಾಟ ನಡೆಸಲ್ಲ.

  • ಸದ್ಯ ಹೊರ ರಾಜ್ಯಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಮಾಡುವ ಸಾಧ್ಯತೆ ಕಡಿಮೆ ಇದೆ.

  • ಎಸಿ, ಸ್ಲೀಪರ್ ಬಸ್ಸುಗಳನ್ನು ರಸ್ತೆಗಿಳಿಸದಿರಲು ತೀರ್ಮಾನ ಮಾಡಲಾಗಿದೆ.

  • ಕೆಎಸ್ ಆರ್ ಟಿಸಿ  ಬಸ್​ಗಳಲ್ಲಿಯೂ ಬಿಎಂಟಿಸಿಯಂತೆ ಶೇ50% ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ.

  • ಮೂರು ಸೀಟ್ ನಲ್ಲಿ ಇಬ್ಬರು, ಎರಡು ಸೀಟ್ ನಲ್ಲಿ ಒಬ್ಬ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲು ಚಿಂತನೆ ನಡೆಸಲಾಗಿದೆ.

  • ಡಿಪೋಗಳಿಂದ ಹೊರಗಡೆ ಬರುವ ಬಸ್ ಗಳಿಗೆ ಸ್ಯಾನಿಟೈಸರ್ ಕಡ್ಡಾಯ ಎಂಬ ಆದೇಶ ಹೊರಡಿಸಲಾಗಿದೆ.

  • ಕೆಎಸ್ಆರ್ಟಿಸಿಯ ಚಾಲಕ- ನಿರ್ವಹಕರಿಗೂ ವ್ಯಾಕ್ಸಿನ್ ಕಡ್ಡಾಯ.

  • 2 ಡೋಸ್ ವ್ಯಾಕ್ಸಿನ್ ಪಡೆದ ಸಿಬ್ಬಂದಿಗಳಿಗೆ ಮೊದಲ ಆದ್ಯತೆ.


ಇಂದಿನ ಸಿಎಂ ಸಭೆಯಲ್ಲಿ ಮೆಟ್ರೋ ಸಂಚಾರದ ಬಗ್ಗೆಯೂ ತೀರ್ಮಾನ ಮಾಡಲಾಗುತ್ತೆ ಎನ್ನಲಾಗುತ್ತಿದೆ.  ಮೆಟ್ರೋ ಸಂಚಾರಕ್ಕೆ ಅನುಮತಿ ನೀಡುವುದು ಬಹುತೇಕ ಅನುಮಾನವಾಗಿದೆ. ಯಾಕೆಂದರೆ ಮೆಟ್ರೋ ಹವಾನಿಯಂತ್ರಿತ(ಎಸಿ) ಸಂಚಾರ ವ್ಯವಸ್ಥೆಯಾಗಿರುವುದರಿಂದ ಸಂಚಾರಕ್ಕೆ ಅನುಮತಿ ಕೊಡೋದು ಡೌಟ್ ಎನ್ನಲಾಗುತ್ತಿದೆ.  ಆದರೆ ಮೆಟ್ರೋ ಸಂಚಾರ ಆರಂಭಿಸುವಂತೆ ಸಾರ್ವಜನಿಕ ವಲಯದಿಂದ ಸಾಕಷ್ಟು ಒತ್ತಡ ಕೇಳಿಬರುತ್ತಿದೆ. ಹೀಗಾಗಿ ಒಂದು ವೇಳೆ ಮೆಟ್ರೋ ಸಂಚಾರ ಆರಂಭವಾದರೂ ಸಹ ಕಠಿಣ ನಿಯಮಗಳನ್ನು ವಿಧಿಸುವ ಸಾಧ್ಯತೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಮೆಟ್ರೋ ಓಡಾಟಕ್ಕೆ ಷರತ್ತು ಬದ್ದ ಅನುಮತಿ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರ ಮೆಟ್ರೋ ಸಂಚಾರಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟರೆ,  ಸೋಮವಾರದಿಂದ ಮೆಟ್ರೋ ಸ್ಟೇಷನ್​​ಗೆ ಬಂದವರಿಗೆ ಹಲವು ಷರತ್ತುಗಳು ಅನ್ವಯವಾಗಲಿವೆ.

  • ಇಂತಿಷ್ಟು ಪ್ರಯಾಣಿಕರ ಓಡಾಟಕ್ಕೆ ಅವಕಾಶ ನೀಡುವ ಸಾಧ್ಯತೆ

  • ಬೆಳಗ್ಗೆ ಸಂಜೆ ಮಾತ್ರ ಮೆಟ್ರೋ ಓಡಾಟಕ್ಕೆ ಅನುಮತಿ ನೀಡಲಿರುವ ಸರ್ಕಾರ

  • ಬೆಳಗ್ಗೆ 7 ರಿಂದ 11 ಹಾಗೂ ಸಂಜೆ4 ರಿಂದ 6 ಗಂಟೆಯವರಿಗೆ ಅನುಮತಿ ಸಾಧ್ಯತೆ


Youtube Video

ಶೀಘ್ರದಲ್ಲೇ ಅನ್ ಲಾಕ್ 2.O ಮಾರ್ಗಸೂಚಿಯಲ್ಲಿ ಈ ಬಗ್ಗೆ ಉಲ್ಲೇಖ ಮಾಡುವ ಸಾಧ್ಯತೆ ಇರುತ್ತದೆ. ಮೆಟ್ರೋ ಸಂಚಾರಕ್ಕೆ ಒಂದು ವೇಳೆ ಅನುಮತಿ ನೀಡಿದ್ರೆ ಒಂದು ರೈಲಿನಲ್ಲಿ 400 ಜನರಿಗೆ ಮಾತ್ರ ಅವಕಾಶ ನೀಡುವ ನಿರೀಕ್ಷೆ ಇದೆ.
Published by: Latha CG
First published: June 19, 2021, 12:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories