ನ್ಯೂಸ್ 18 ಕನ್ನಡಕ್ಕೆ ಮತ್ತೊಂದು ಗರಿ; ಅತ್ಯುತ್ತಮ ತನಿಖಾ ವರದಿಗೆ ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿ

ಫೋನ್ ಕದ್ದಾಲಿಕೆ ವಿಶೇಷ ವರದಿಗೆ ನ್ಯೂಸ್ 18 ಕನ್ನಡದ ರಾಜಕೀಯ ವಿಭಾಗದ ಮುಖ್ಯಸ್ಥರಾದ ಚಿದಾನಂದ ಪಟೇಲ್ ಅವರಿಗೆ ಅತ್ಯುತ್ತಮ ತನಿಖಾ ವರದಿ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.

ನ್ಯೂಸ್ 18 ಕನ್ನಡದ ರಾಜಕೀಯ ವಿಭಾಗದ ಮುಖ್ಯಸ್ಥ ಚಿದಾನಂದ ಪಟೇಲ್.

ನ್ಯೂಸ್ 18 ಕನ್ನಡದ ರಾಜಕೀಯ ವಿಭಾಗದ ಮುಖ್ಯಸ್ಥ ಚಿದಾನಂದ ಪಟೇಲ್.

 • Share this:
  ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವೃತ್ತಿ/ ಸೇವೆ ಸಾಧನೆಗಾಗಿ ಮತ್ತು ಅತ್ಯುತ್ತಮ ವರದಿಗಳಿಗಾಗಿ ಪತ್ರಕರ್ತರಿಗೆ ನೀಡುವ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಅತ್ಯುತ್ತಮ ತನಿಖಾ ವರದಿ ವಿಭಾಗದಲ್ಲಿ (ಟೆಲಿಫೋನ್ ಕದ್ದಾಲಿಕೆ ಪ್ರಕರಣ) ನ್ಯೂಸ್​ 18 ಕನ್ನಡಕ್ಕೆ ಪ್ರಶಸ್ತಿ ಸಂದಿದೆ.

  ಮಾರ್ಚ್ 7 ಮತ್ತು 8ರಂದು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕುದ್ಮುಲ್​ ರಂಗರಾವ್ ಪುರಭವನದಲ್ಲಿ ನಡೆಯುವ 35ನೇ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

  ಫೋನ್ ಕದ್ದಾಲಿಕೆ ವಿಶೇಷ ವರದಿಗೆ ನ್ಯೂಸ್ 18 ಕನ್ನಡದ ರಾಜಕೀಯ ವಿಭಾಗದ ಮುಖ್ಯಸ್ಥರಾದ ಚಿದಾನಂದ ಪಟೇಲ್ ಅವರಿಗೆ ಅತ್ಯುತ್ತಮ ತನಿಖಾ ವರದಿ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.

  ಇದನ್ನು ಓದಿ: ಮಕ್ಕಳೇ, ಮುಕ್ತ ವಾತಾವರಣದಲ್ಲಿ ಧೈರ್ಯವಾಗಿ ಪರೀಕ್ಷೆ ಬರೆಯಿರಿ; ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸುರೇಶ ಕುಮಾರ ಪತ್ರ
  First published: