ಬೆಂಗಳೂರು: ಬೆಂಗಳೂರು-ಮೈಸೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಂಗಳೂರು, ವಿರಾಜಪೇಟೆ, ಮಡಿಕೇರಿ ನಡುವೆ ಸಂಚರಿಸುವ ಜನತೆಗೆ ಸಾರಿಗೆ ಇಲಾಖೆ (Transport Department) ಸಿಹಿ ಸುದ್ದಿಯನ್ನು ನೀಡಿದ್ದು, ಇಂದಿನಿಂದ ಕೆಎಸ್ಆರ್ಟಿಸಿಯ (KSRTC) ಮೊದಲ ಎಲೆಕ್ಟ್ರಿಕ್ ಬಸ್ಗೆ (Electric Bus) ಚಾಲನೆ ನೀಡಲಾಗಿದೆ. ಸಾರಿಗೆ ಸಚಿವ ಬಿ.ಶ್ರೀರಾಮುಲು (Minister B. Sriramulu) ಅವರು ಹೊಸ ಬಸ್ಗಳಿಗೆ ಚಾಲನೆ ನೀಡಿದ್ದು, ಹೊಸ ಬಸ್ಗಳಿಗೆ EV ಪವರ್ ಪ್ಲಸ್ (EV Power Plus) ಎಂದು ಹೆಸರಿಡಲಾಗಿದೆ. 12-ಮೀಟರ್, ಹವಾನಿಯಂತ್ರಿತ, ಒಲೆಕ್ಟ್ರಾ ಇ-ಬಸ್ ಪ್ರೀಮಿಯಂ ಐಷಾರಾಮಿ ಎಲೆಕ್ಟ್ರಿಕ್ ಬಸ್ ಅನ್ನು ಅನಾವರಣಗೊಳಿಸಿದ್ದಾರೆ. ಈ ವೇಳೆ ಕೆಎಸ್ಆರ್ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಮತ್ತು ಎಂಡಿ ವಿ.ಅನ್ಬುಕುಮಾರ್, ಕೆಎಸ್ಆರ್ಟಿಸಿ ಆಡಳಿತ ಮಂಡಳಿ ಹಾಗೂ ಇತರ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಿಎಂಟಿಸಿ ಬಸ್ ಬಳಿಕ ಕೆಎಸ್ಆರ್ಟಿಸಿ ಇಲೆಕ್ಟ್ರಿಕ್ ಬಸ್ ರಸ್ತೆಗಿಳಿಸಿದೆ. MEIL ಹಾಗೂ KSRTC ಜಂಟಿಯಾಗಿ ಪರಿಸರ ಸ್ನೇಹಿ ಬಸ್ ಗಳನ್ನು ರಸ್ತೆಗಿಳಿಸಿದ್ದು, ಎರಡೂವರೆ ತಾಸು ಚಾರ್ಜ್ ಮಾಡಿದರೆ 300 km ಕ್ರಮಿಸುವಷ್ಟು ಸಾಮರ್ಥ್ಯ ಈ ಬಸ್ ಹೊಂದಿದೆ.
ಇದನ್ನೂ ಓದಿ: Bengaluru: ಕೊಟ್ಟ ಮಾತಿನಂತೆ ನಡೆದ KSRTC ನಿಗಮ; ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಕೋಟಿ ರೂಪಾಯಿ ನೆರವು
ಈ ವೇಳೆ ಮಾತನಾಡಿದ Olectra ಸಂಸ್ಥೆಯ CMD ಕೆ.ವಿ. ಪ್ರದೀಪ್ ಅವರು, ಭಾರತದಲ್ಲಿ 2021ರಲ್ಲಿ ಇಂಟರ್ ಸಿಟಿ ಎಲೆಕ್ಟ್ರಿಕ್ ಐಷಾರಾಮಿ ಬಸ್ಗಳನ್ನು ಪರಿಚಯಿಸುವ ಮೊದಲ ಸಂಸ್ಥೆಯಾಗಿದೆ. ಈಗ ಕೆಎಸ್ಆರ್ಟಿಸಿ ಪ್ರೋಟೋ ಬಸ್ನೊಂದಿಗೆ ಒಲೆಕ್ಟ್ರಾ ಎಸ್ಟಿಯುಗಳ ಮೂಲಕ ಸಾರ್ವಜನಿಕ ಸಾರಿಗೆಗಾಗಿ ಇ-ಬಸ್ಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದೆ.
ಸದ್ಯ ಕರ್ನಾಟಕದಲ್ಲಿ ನಾವು 12-ಮೀಟರ್ ಉದ್ದದ ಹವಾನಿಯಂತ್ರಣ ಇಂಟರ್ಸಿಟಿ ಎಲೆಕ್ಟ್ರಿಕ್ ಬಸ್ಗಳನ್ನು FAME II ಯೋಜನೆ ಅಡಿಯಲ್ಲಿ ನೀಡುತ್ತಿದ್ದೇವೆ. ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ 50 ಒಲೆಕ್ಟ್ರಾ 50 ಎಲೆಕ್ಟ್ರಿಕ್ ಬಸ್ಗಳನ್ನು FAME-II ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇನ್ನು, ಈ ಎಲೆಕ್ಟ್ರಿಕ್ ಬಸ್ಗಳು ಭಾರತೀಯ ರಸ್ತೆಗಳಲ್ಲಿ ಇದುವರೆಗೂ 10 ಕೋಟಿ ಕಿ.ಮೀ ಗಿಂತಲೂ ಹೆಚ್ಚಿನ ಪ್ರಯಾಣವನ್ನು ಪೂರ್ಣಗೊಳಿವೆ. ಇಲ್ಲಿಯವರೆಗೆ ಸುಮಾರು 88,000 ಟನ್ಗಳಷ್ಟು ಕಾರ್ಬನ್ ಡೈಆಕ್ಸೈಡ್ (CO2) ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ. ಅಲ್ಲದೇ ಒಲೆಕ್ಟ್ರಾ ಸಂಸ್ಥೆ ಇದುವರೆಗೂ ದೇಶದಲ್ಲಿ 1,000 ಬಸ್ಗಳನ್ನು ವಿವಿಧ ರಾಜ್ಯಗಳಿಗೆ ನೀಡಿದೆ. ವಿಶೇಷ ಎಂದರೇ, ಈ ಬಸ್ಗಳು ಬಸ್ ಗುಡ್ಡಗಾಡು ಪ್ರದೇಶದಲ್ಲೂ ಸಂಚಾರ ಮಾಡಿದ್ದು, ಮನಾಲಿಯಿಂದ ರೋಹ್ಟಾಂಗ್ ಪಾಸ್ ಮೂಲಕ ಪ್ರಯಾಣಿಸಿದ ದಾಖಲೆಯನ್ನು ಹೊಂದಿದೆ. ಆ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೂ ಸೇರಿದೆ.
ಇದನ್ನೂ ಓದಿ: Electricity Bill: ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟ ಬೆಸ್ಕಾಂ, ಮೆಸ್ಕಾಂ; ಹೊಸ ವರ್ಷದ ಹೊಸ್ತಿಲಲ್ಲಿ ನ್ಯೂ ಇಯರ್ ಗಿಫ್ಟ್
EV ಪವರ್ ಪ್ಲಸ್ ಬಸ್ ವಿಶೇಷತೆಗಳೇನು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ