ಬೆಂಗಳೂರು: ಯುಗಾದಿ ಹಬ್ಬದ (Ugadi Festival) ಸಂದರ್ಭದಲ್ಲಿ ಮುಷ್ಕರ (Strike) ವಾಪಸ್ ಪಡೆಯುವ ಮೂಲಕ ಸಾರಿಗೆ ನೌಕರರು (Transport Employees) ಸಿಹಿ ಸುದ್ದಿ ನೀಡಿದ್ದಾರೆ. ಕೆಎಸ್ಆರ್ಟಿಸಿ (KSRTC) ಎಂಡಿ ಜೊತೆಗೆ ನಡೆದ ಸಂಧಾನ ಸಭೆ ಸಫಲವಾಗಿದ್ದು, ಮಾರ್ಚ್ 21ರಂದು ಮುಷ್ಕರ ಮಾಡುತ್ತೇವೆ ಅಂತಾ ನೌಕರರು ಹಠ ಹಿಡಿದಿದ್ದರು. ಇದೀಗ ಸರ್ಕಾರ (Govt) ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದು, ಅನಂತ್ ಸುಬ್ಬರಾವ್ (Anantha Subbarao) ಕರೆ ನೀಡಿದ್ದ ಸಾರಿಗೆ ಮುಷ್ಕರ ವಾಪಸ್ ಪಡೆಯಲಾಗಿದೆ.
ನಮ್ಮ ಮನಸ್ಥಿತಿ ಹೇಗಿರುತ್ತದೆ ನೀವೇ ಯೋಚನೆ ಮಾಡಿ
ಈ ಕುರಿತಂತೆ ಮಾಹಿತಿ ನೀಡಿರುವ KSRTC ನೌಕಕರ ಸಂಘ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ಅವರು, ನಮ್ಮ ಮನಸ್ಸಿನಲ್ಲಿ ಯಾವುದೇ ಗೊಂದಲ ಇಲ್ಲ. ಮಾರ್ಚ್ 21 ರಂದು ಮೊದಲು ಬರುತ್ತದೆ. ಆ ಬಳಿಕ 24 ಬರುತ್ತೆ. ಆದ್ದರಿಂದ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಮಾತನಾಡಿದ್ದಾರೆ. ಸಿಎಂ ಅವರಿಗೂ ಜವಾಬ್ದಾರಿ, ಕಾಳಜಿ ಇದೇ ಎಂದು ಭಾವಿಸುತ್ತೇನೆ. ನಾವು ಇದುವರೆಗೂ ಯಾವುದೇ ಕೆರಳಿಸುವಂತಹ ಹೇಳಿಕೆಯನ್ನು ನೀಡಿಲ್ಲ.
ಇದನ್ನೂ ಓದಿ: Siddaramaiah: ಕೋಲಾರದಿಂದ ಹಿಂದೆ ಸರಿದ 'ಟಗರು'! ಪಾಕಿಸ್ತಾನಕ್ಕೆ ಹೋದರೆ ಒಳ್ಳೆಯದು ಅಂತ ಅಶೋಕ್ ಟಾಂಗ್
ನಾವು ಮುಖ್ಯಮಂತ್ರಿಗಳನ್ನು ಕೇಳುವುದು ಇಷ್ಟೇ. ನಾವು ಕಳೆದ ಮೂರುವರೆ ವರ್ಷಗಳಿಂದ ಕಾಯುತ್ತಿದ್ದೇವೆ. ನಮ್ಮ ಮನಸ್ಥಿತಿ ಹೇಗಿರುತ್ತದೆ ನೀವೇ ಯೋಚನೆ ಮಾಡಿ. ನೀವು ನಿನ್ನೆ ಏಕಾಏಕಿ ಆದೇಶ ತಂದು ನಮಗೆ ಆವೇಶ ಬರುವಂತೆ ಮಾಡಿದ್ದೀರಿ. ದಯಮಾಡಿ ಆದೇಶವನ್ನು ವಾಪಸ್ ತೆಗೆದುಕೊಳ್ಳಿ. ಅದನ್ನು ನಾವು ಸೆಟಲ್ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ವೇತನ ಪರಿಷ್ಕರಣೆ ಆಗಲೇಬೇಕೆಂದು ಪಟ್ಟು
ಇನ್ನು, ಸಾರಿಗೆ ಇಲಾಖೆಯ ವಿವಿಧ ನಿಗಮಗಳ ನೌಕರರ ಹೋರಾಟ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಅಲ್ಲದೆ ಕೆಲ ಸಂಘಟನೆಗಳು ಇಂದಿಗೂ ಮುಷ್ಕರ ಹಿಂಪಡೆಯುವ ಲಕ್ಷಣಗಳೇ ಕಾಣಿಸುತ್ತಿಲ್ಲ.
ಸರ್ಕಾರದ ಶೇ.15ರಷ್ಟು ವೇತನ ಹೆಚ್ಚಳ ನಿರ್ಧಾರಕ್ಕೆ ಸಾರಿಗೆ ನೌಕರರು ಅತೃಪ್ತಿ ತೋರಿದ್ದು, ಶೇಕಡಾ 20ರಷ್ಟು ವೇತನ ಪರಿಷ್ಕರಣೆ ಆಗಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಸಿಎಂ ಸಂಘಟನೆಗಳೊಂದಿಗೆ ಚರ್ಚಿಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಇದು ನೌಕರರಿಗೆ ಮಾಡಿರುವ ಅವಮಾನ ಎಂದು ಹೇಳಿದ್ದಾರೆ.
ವಾರ್ಷಿಕ ವೇತನ ಬಡ್ತಿ ಹೆಚ್ಚಳಕ್ಕೂ ಸಮ್ಮತಿ ಸೂಚಿಸಿದೆ
ಇಂದು ಸಂಜೆ ಕೆಎಸ್ಆರ್ಟಿಸಿ ಎಂಡಿ ಅನ್ಬು ಕುಮಾರ್ ಜೊತೆಗೆ ಸಾರಿಗೆ ಮುಖಂಡರು ಸಭೆ ನಡೆಸಿದ್ದರು. ಸಭೆಯಲ್ಲಿ ಸರ್ಕಾರದ ಆದೇಶ ಪ್ರತಿಯಲ್ಲಿದ್ದ ಗೊಂದಲ ಬಗೆ ಹರಿದ ಹಿನ್ನಲೆ ಮುಷ್ಕರ ಹಿಂಪಡೆಯುವುದಾಗಿ ಅನಂತ್ ಸುಬ್ಬರಾವ್ ಹೇಳಿದ್ದಾರೆ.
ಶೇಕಡಾ 20 ವೇತನ ಹೆಚ್ಚಳಕ್ಕೆ ಬೇಡಿಕೆಯಿಟ್ಟು ಮುಷ್ಕರಕ್ಕೆ ಕರೆ ನೀಡಿದ್ದ ಜಂಟಿ ಕ್ರಿಯಾ ಸಮಿತಿ ಬೇಡಿಕೆಗೆ ಸರ್ಕಾರ 2020 ಜನವರಿ 1ರಿಂದ ಹೆಚ್ಚುವರಿ ವೇತನ ನೀಡುವ ಭರವಸೆಯನ್ನು ನೀಡಿದೆ. ಅಲ್ಲದೆ, ಮುಷ್ಕರದ ವೇಳೆ ವಜಾಗೊಂಡಿದ್ದ ನೌಕರರಿಗೆ ವಾಪಸ್ ಡ್ಯೂಟಿ ನೀಡುವುದು, ವಾರ್ಷಿಕ ವೇತನ ಬಡ್ತಿ ಹೆಚ್ಚಳಕ್ಕೂ ಸಮ್ಮತಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ನಡೆಸದಿರಲು ನಿರ್ಧರಿಸಲಾಗಿದೆ.
ಸಮಾನ ಮನಸ್ಕರ ವೇದಿಕೆಯಿಂದ ಸಾರಿಗೆ ಬಂದ್ಗೆ ಕರೆ
ಕೆಎಸ್ಆರ್ಟಿಸಿ ನೌಕಕರ ಸಂಘ ಜಂಟಿ ಕ್ರಿಯಾ ಸಮಿತಿ ವಾಪಸ್ ಪಡೆದುಕೊಂಡರು ಸಮಾನ ಮನಸ್ಕರ ವೇದಿಕೆ ಸಾರಿಗೆ ಬಂದ್ಗೆ ಕರೆ ನೀಡಿದೆ. ಮಾರ್ಚ್ 24ರಂದು ಕರೆ ನೀಡಿರುವ ಬಂದ್ ನಡೆಸಲಾಗುತ್ತದೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: School: ಶಾಲೆಯಲ್ಲಿ ಕಲಿಸ್ತಾರಾ ನೈತಿಕ ಶಿಕ್ಷಣ, 10 ನಿಮಿಷ ಧ್ಯಾನ ಮಾಡ್ತಾರಾ ಮಕ್ಕಳು? ಸರ್ಕಾರದಿಂದ ತಜ್ಞರ ಸಮಿತಿ ರಚನೆ
ಈ ಕುರಿತಂತೆ ಮಾಹಿತಿ ನೀಡಿರುವ ಚಂದ್ರಶೇಖರ್ ಅವರು, ಸರ್ಕಾರ ಹೊರಡಿಸಿದ ಆದೇಶ ಕೇವಲ ಮೂಲ ವೇತನಕ್ಕೆ ಶೇಕಡಾ 15 ಹೆಚ್ಚಳ ಮಾಡುವ ವಿಚಾರಕ್ಕೆ ಸಂಬಂಧಿಸಿದೆ. ಇವತ್ತು ಜಂಟಿ ಕ್ರಿಯಾಸಮಿತಿಯವರು ಎಂಡಿ ಜೊತೆ ಮೀಟಿಂಗ್ ನಡೆಸಿದ್ದಾರೆ. ಅವರು ಯಾವ ಒಪ್ಪಂದ ಮಾಡಿಕೊಂಡು ಮುಷ್ಕರ ವಾಪಾಸ್ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ.
ಆದರೆ ಏಕಾಏಕಿ ಮುಷ್ಕರ ವಾಪಾಸ್ ಪಡೆದಿದ್ದಾರೆ. ಇದರ ಉದ್ದೇಶ 24ರಂದು ನಡೆಯುವ ಸಾರಿಗೆ ಮುಷ್ಕರವನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿದೆ. ಆದರೆ ನಮ್ಮ ಬೇಡಿಕೆಗಳು ಈಡೇರಿಲ್ಲ. ಮಾರ್ಚ್ 24 ರಂದು ಸಾರಿಗೆ ಮುಷ್ಕರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ