• Home
  • »
  • News
  • »
  • state
  • »
  • E-Bike Taxi: ರಾಜಧಾನಿಯಲ್ಲಿ ರಸ್ತೆಗೆ ಇಳಿಯಲಿವೆ ಇ-ಬೈಕ್ ಟ್ಯಾಕ್ಸಿ; ಆಟೋ ದರಕ್ಕಿಂತ ಕಡಿಮೆ ಇರುತ್ತಾ?

E-Bike Taxi: ರಾಜಧಾನಿಯಲ್ಲಿ ರಸ್ತೆಗೆ ಇಳಿಯಲಿವೆ ಇ-ಬೈಕ್ ಟ್ಯಾಕ್ಸಿ; ಆಟೋ ದರಕ್ಕಿಂತ ಕಡಿಮೆ ಇರುತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟ್ಯಾಕ್ಸಿ ಮತ್ತು ಆಟೋರಿಕ್ಷಾ ಪ್ರಯಾಣ ದರ ಹೆಚ್ಚಾಗಿದ್ದರಿಂದ ಮೆಟ್ರೊ ಮತ್ತು ಬಸ್ ನಿಲ್ದಾಣಗಳಿಂದ ಕೊನೆಯ ತಾಣಗಳನ್ನು ತಲುಪಲು ಜನ ತೊಂದರೆ ಅನುಭವಿಸುತ್ತಿದ್ದರು. ಇದನ್ನ ಗಮನಿಸಿದ ರಾಜ್ಯ ಸರ್ಕಾರವು ಕಳೆದ ವರ್ಷ 'ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿʼ ಯೋಜನೆ'ಗೆ ಸೂಚನೆ ನೀಡಿತ್ತು.

  • Trending Desk
  • Last Updated :
  • Bangalore, India
  • Share this:

ಕರ್ನಾಟಕ ಸಾರಿಗೆ ಇಲಾಖೆಯು ಬೌನ್ಸ್‌ನ (Bounce) ಮೂಲ ಕಂಪನಿ ವಿಕಡ್‌ ರೈಡ್‌ಗೆ (Wicked Ride) ಮತ್ತು ಬ್ಲೂಸ್ಮಾರ್ಟ್‌ಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆಗಳನ್ನು (Electric Bike Taxi Services) ನಿರ್ವಹಿಸಲು ಶೀಘ್ರದಲ್ಲೇ ಪರವಾನಗಿ ನೀಡಲಿದೆ ಎಂದು ಮಂಗಳವಾರ ತಿಳಿಸಿದೆ. ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಪರವಾನಗಿ ನೀಡಲು ರಾಜ್ಯ ಸಾರಿಗೆ ಪ್ರಾಧಿಕಾರ (ಎಸ್​ಟಿಎ -STA) ಈಗಾಗಲೇ ನಿರ್ಧರಿಸಿದ್ದು, ಅಧಿಕೃತವಾಗಿ ಬೈಕ್ ಟ್ಯಾಕ್ಸಿಗಳು (Bike Taxi) ಕೆಲವೇ ದಿನಗಳಲ್ಲಿ ರಸ್ತೆಗೆ ಇಳಿಯಲಿವೆ.


ಬ್ಲೂಸ್ಮಾರ್ಟ್ ಮತ್ತು ಬೌನ್ಸ್ ಕಂಪನಿಗಳಿಗೆ ಪರವಾನಗಿ


ಈ ಸಂಬಂಧ ಬೆಂಗಳೂರಿನಲ್ಲಿ ನಡೆದ ಎಸ್​ಟಿಎ ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಈ ನಿರ್ಣಯ ಕೈಗೊಂಡಿದ್ದಾರೆ. ಬ್ಲೂಸ್ಮಾರ್ಟ್ ಮತ್ತು ಬೌನ್ಸ್ ಕಂಪನಿಗಳಿಗೆ ಪರವಾನಗಿ ನೀಡಲು ಸಭೆ ಒಪ್ಪಿಗೆ ಸೂಚಿಸಿದ್ದು, ಈ ಎರಡೂ ಕಂಪನಿಗಳಿಗೆ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ವಹಿಸುವ ಅವಕಾಶ ದೊರೆತಿದೆ.


"ನಾವು ಬ್ಲೂ ಸ್ಮಾರ್ಟ್ ಮತ್ತು ಬೌನ್ಸ್ ಎಂಬ ಎರಡು ಕಂಪನಿಗಳ ಅರ್ಜಿಗಳನ್ನು ತೆರವುಗೊಳಿಸಿದ್ದೇವೆ. ಶೀಘ್ರದಲ್ಲೇ ಪರವಾನಗಿ ನೀಡಲಾಗುವುದು. ಮೂರನೇ ಕಂಪನಿಗೆ ಪರವಾನಗಿ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ,'' ಎಂದು ಸಾರಿಗೆ ಆಯುಕ್ತ ಎಸ್‌ಎನ್‌.ಸಿದ್ದರಾಮಪ್ಪ ಮಾಧ್ಯಮಗಳಿಗೆ ತಿಳಿಸಿದರು.


ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 


ಟ್ಯಾಕ್ಸಿ ಮತ್ತು ಆಟೋರಿಕ್ಷಾ ಪ್ರಯಾಣ ದರ ಹೆಚ್ಚಾಗಿದ್ದರಿಂದ ಮೆಟ್ರೊ ಮತ್ತು ಬಸ್ ನಿಲ್ದಾಣಗಳಿಂದ ಕೊನೆಯ ತಾಣಗಳನ್ನು ತಲುಪಲು ಜನ ತೊಂದರೆ ಅನುಭವಿಸುತ್ತಿದ್ದರು. ಇದನ್ನ ಗಮನಿಸಿದ ರಾಜ್ಯ ಸರ್ಕಾರವು ಕಳೆದ ವರ್ಷ 'ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿʼ ಯೋಜನೆ'ಗೆ ಸೂಚನೆ ನೀಡಿತ್ತು.


ಇದನ್ನೂ ಓದಿ: CM Bommai: ರಾಷ್ಟ್ರೀಯ ನಾಯಕರೇ ಬಂದು ಪ್ರಚಾರ ಮಾಡ್ತಾರೆ, ಆದರೂ ಸಿಎಂ ಬೊಮ್ಮಾಯಿಗೆ ಟೆನ್ಷನ್, ಟೆನ್ಷನ್!


ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆ ಹೇಗಿರಲಿದೆ?


ನಿಯಮದ ಪ್ರಕಾರ, GPS-ಸಕ್ರಿಯಗೊಳಿಸಿದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಮೊದಲ 5 ಕಿಲೋ ಮೀಟರ್ ಗೆ ದರ ₹25 ನಂತರದ 10 ಕಿ.ಮೀ ಪ್ರಯಾಣಕ್ಕೆ ₹50 ದರ ನಿಗದಿಯಾಗಲಿದೆ.


ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಹಳದಿ ಹೆಲ್ಮೆಟ್ ಧರಿಸಿರಬೇಕು, ಇ-ಬೈಕ್ ಟ್ಯಾಕ್ಸಿ ಚಾಲನೆಗೆ 5 ವರ್ಷದ ಪರವಾನಗಿಯನ್ನು ₹5 ಸಾವಿರ ಭದ್ರತಾ ಠೇವಣಿ ಪಡೆದು ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.


"ಇದು ಬೈಕ್ ಟ್ಯಾಕ್ಸಿ ಆಡಳಿತದ ಆರಂಭಿಕ ಹಂತವಾಗಿದೆ. ನೀತಿಯು ಹೆಚ್ಚಿನ ಕಾನೂನು ಅವಶ್ಯಕತೆಗಳನ್ನು ಒಳಗೊಂಡಿದ್ದರೂ, ಕಾರ್ಯಾಚರಣೆಗಳು ಪ್ರಾರಂಭವಾಗುತ್ತಿದ್ದಂತೆ ಹಲವಾರು ಸಮಸ್ಯೆಗಳಿವೆ. ನಾವು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಮಹಿಳಾ ಸವಾರರಿಗೂ ಅವಕಾಶ


ಬೌನ್ಸ್‌ನ ಅಧಿಕಾರಿಗಳ ಪ್ರಕಾರ, 2021 ರಲ್ಲಿ ಇ-ಬೈಕ್ ಟ್ಯಾಕ್ಸಿ ಯೋಜನೆಯನ್ನು ಸರ್ಕಾರವು ಸೂಚಿಸಿದ ನಂತರ ಕಂಪನಿಯು ಒಂದು ವರ್ಷದ ಹಿಂದೆ ಇ-ಬೈಕ್ ಟ್ಯಾಕ್ಸಿಗಳನ್ನು ಚಲಾಯಿಸಲು ಪರವಾನಗಿಗಾಗಿ ಅರ್ಜಿ ಸಲ್ಲಿಸಿತ್ತು.


ಇ-ಬೈಕ್ ಟ್ಯಾಕ್ಸಿ ಸೇವೆಯ ಅಡಿಯಲ್ಲಿ, ಬೌನ್ಸ್‌ ಕಂಪನಿಯು ಹೊಸ ರೀತಿಯ ಸ್ಕೂಟರ್ ಅನ್ನು ಪರಿಚಯಿಸಲು ನಿರ್ಧರಿಸಿದೆ ಮತ್ತು ಮಹಿಳಾ ಸವಾರರಿಗೂ ಸೇವೆಯ ಭಾಗವಾಗಲು ಅವಕಾಶ ನೀಡುತ್ತದೆ ಎಂದು ಬೌನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.


ಆಟೋ ಮತ್ತು ಟ್ಯಾಕ್ಸಿ ಚಾಲಕರ ವಿರೋಧ


ಸರ್ಕಾರದ ಈ ಯೋಜನೆಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ಅಧ್ಯಕ್ಷ ಎಂ ಮಂಜುನಾಥ್ ಮಾತನಾಡಿ, ರಾಜ್ಯ ಸರ್ಕಾರದ ಈ ನಿರ್ಧಾರವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದಿದ್ದಾರೆ.


ಇದು ಬಡ ಆಟೋರಿಕ್ಷಾ ಚಾಲಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಈಗಾಗಲೇ ರಾಪಿಡೋದಂತಹ ಆ್ಯಪ್‌ಗಳು ಅಕ್ರಮವಾಗಿ ಕಾರ್ಯನಿರ್ವಹಿಸುವ ಮೂಲಕ ಆಟೋ ರಿಕ್ಷಾ ಚಾಲಕರ ಜೀವನೋಪಾಯವನ್ನೇ ನಾಶ ಮಾಡಿವೆ. ಕಡಿಮೆ ದರದಲ್ಲಿ ಇ-ಬೈಕ್ ಟ್ಯಾಕ್ಸಿಗಳ ಪರಿಚಯವು ಆಟೋ ಚಾಲಕರ ಜೀವನೋಪಾಯಕ್ಕೆ ಸಂಕಷ್ಟ ತರಲಿದೆ" ಎಂದಿದ್ದಾರೆ.

Published by:Mahmadrafik K
First published: