ಕಳೆದ 3 ವರ್ಷಗಳಲ್ಲಿ ದುಪ್ಪಟ್ಟಾಯ್ತು ಆಸ್ಟ್ರೇಲಿಯಾಗೆ ಭೇಟಿ ನೀಡಿದ ಕನ್ನಡಿಗರ ಸಂಖ್ಯೆ

ಕಳೆದ ಸತತ 5 ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರವಾಸಿಗರು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದಾರೆ. 2020ರ ವೇಳೆಗೆ ಆಸ್ಟ್ರೇಲಿಯಾಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ 3 ಲಕ್ಷ ತಲುಪುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ

  • Share this:
ಬೆಂಗಳೂರು(ಡಿ.16): ಆಸ್ಟ್ರೇಲಿಯಾಗೆ ಭೇಟಿ ನೀಡುವ ಕರ್ನಾಟಕದ ಪ್ರವಾಸಿಗರ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿದ ಅಂತರಾಷ್ಟ್ರೀಯ ಪ್ರವಾಸಿಗರ ಸಮೀಕ್ಷೆ ಮೂಲಕ ತಿಳಿದು ಬಂದಿದೆ.

2019ರಲ್ಲಿ 3.5 ಲಕ್ಷ ಭಾರತೀಯರು ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದಾರೆ. ಇವರಲ್ಲಿ 40 ಸಾವಿರ ಪ್ರವಾಸಿಗರು ಕರ್ನಾಟಕದವರಾಗಿದ್ದಾರೆ. 2016ರಲ್ಲಿ 20,234 ಪ್ರವಾಸಿಗರು, 2017ರಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು 29,909 ಕನ್ನಡಿಗರು, 2018ರಲ್ಲಿ 33,418 ಪ್ರವಾಸಿಗರು ಮತ್ತು 2019ರಲ್ಲಿ 40,470 ಕರ್ನಾಟಕದ ಪ್ರವಾಸಿಗರು ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದಾರೆ.

ಹಿಂಸಾಚಾರಕ್ಕೆ ತಿರುಗಿದ ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆ; ಹಾಸ್ಟೆಲ್ ಖಾಲಿ ಮಾಡಲು ವಿದ್ಯಾರ್ಥಿಗಳಿಗೆ ಸೂಚನೆ

ಕಳೆದ ಸತತ 5 ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರವಾಸಿಗರು ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದಾರೆ. 2020ರ ವೇಳೆಗೆ ಆಸ್ಟ್ರೇಲಿಯಾಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ 3 ಲಕ್ಷ ತಲುಪುವ ಸಾಧ್ಯತೆ ಇದೆ.

ಆನ್​ಲೈನ್​ ಟ್ರಾವೆಲ್​ ಏಜೆಂಟ್ಸ್​​​​ ಹೇಳುವ ಪ್ರಕಾರ, 2019ರಲ್ಲಿ ಆಸ್ಟ್ರೇಲಿಯಾ-ಕರ್ನಾಟಕಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆ ಶೇ.56 ರಷ್ಟು ಏರಿಕೆಯಾಗಿದೆ. ಸ್ಕೈ ಡೈವಿಂಗ್​, ವೇಲ್​ ವಾಚಿಂಗ್​, ಕಾಯಾಕಿಂಗ್, ರೈಡಿಂಗ್​ ಇನ್​ ಹಾಟ್​ ಏರ್ ಬಲೂನ್​ ಇನ್ನೂ ಮೊದಲಾದವುಗಳಿಗೆ ಪ್ರವಾಸಿಗರು ಬುಕ್​ ಮಾಡುತ್ತಾರೆ ಎಂದು ತಿಳಿದು ಬಂದಿದೆ.

ಪರಮೇಶ್ವರ್ ಸ್ಥಿತಿ ಈಗ ಹೇಗಾಗಿದೆ ಎಂದರೆ ನೊಣ ಹೊಡೆಯೋರು ಗತಿ ಇಲ್ಲ; ಕೆ.ಎನ್. ರಾಜಣ್ಣ ವ್ಯಂಗ್ಯ
Published by:Latha CG
First published: