ಶಬರಿಮಲೆ ತೀರ್ಥಯಾತ್ರೆ; ಡಿಸೆಂಬರ್ 1ರಿಂದ ಬೆಂಗಳೂರು-ಪಂಪಾಗೆ ಕೆಎಸ್​ಆರ್​​​ಟಿಸಿ ಬಸ್​ ಸೌಲಭ್ಯ

ಈ ಹೊಸ ಬಸ್​ ಸೇವೆಯಲ್ಲಿ ರಾಜಹಂಸ(ಎಕ್ಸಿಕ್ಯೂಟಿವ್​ ನಾನ್​ ಎಸಿ) ಮತ್ತು ವೋಲ್ವೋ(ಎಸಿ) ಬಸ್​​ಗಳು ಸಹ ಇರಲಿವೆ. ಪ್ರತಿದಿನ ಬೆಂಗಳೂರಿನ ಶಾಂತಿನಗರ ಬಸ್​ ನಿಲ್ದಾಣದಿಂದ ಬಸ್​ ಸೇವೆ ಪ್ರಾರಂಭವಾಗಲಿದೆ.

Latha CG | news18-kannada
Updated:November 21, 2019, 11:00 PM IST
ಶಬರಿಮಲೆ ತೀರ್ಥಯಾತ್ರೆ; ಡಿಸೆಂಬರ್ 1ರಿಂದ ಬೆಂಗಳೂರು-ಪಂಪಾಗೆ ಕೆಎಸ್​ಆರ್​​​ಟಿಸಿ ಬಸ್​ ಸೌಲಭ್ಯ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ನ.21): ಶಬರಿಮಲೆಗೆ ತೆರಳುವ ಭಕ್ತರಿಗೆ ಕರ್ನಾಟಕ ಸಾರಿಗೆ ಇಲಾಖೆ ಬಸ್​ ಸೌಲಭ್ಯ ನೀಡಲು ನೀಡಲು ನಿರ್ಧರಿಸಿದೆ. ಎರಡು ತಿಂಗಳ ಕಾಲ ಶಬರಿಮಲೆ ತೀರ್ಥಯಾತ್ರೆ ನಡೆಯಲಿದೆ. ಹೀಗಾಗಿ ಪ್ರಯಾಣಿಕರಿಗೆ ಸಾರಿಗೆ ಕೊರತೆಯನ್ನು ನೀಗಿಸಲು ಬೆಂಗಳೂರು-ಪಂಪಾ ಮಾರ್ಗವಾಗಿ ಕೆಎಸ್​ಆರ್​​ಟಿಸಿ ಬಸ್​​​ಗಳನ್ನು ಒದಗಿಸಲು ಇಲಾಖೆ ತೀರ್ಮಾನ ಮಾಡಿದೆ.

ಕೆಎಸ್​​ಆರ್​​ಟಿಸಿ ಡಿವಿಜನಲ್​​ ಕಂಟ್ರೋಲರ್​​​ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು-ಪಂಪಾಗೆ ಡಿಸೆಂಬರ್​ 1ರಿಂದ ಹೊಸ ಸಾರಿಗೆ ವ್ಯವಸ್ಥೆ ಪ್ರಾರಂಭವಾಗಲಿದೆ. ಈ ಹೊಸ ಬಸ್​ ಸೇವೆಯಲ್ಲಿ ರಾಜಹಂಸ(ಎಕ್ಸಿಕ್ಯೂಟಿವ್​ ನಾನ್​ ಎಸಿ) ಮತ್ತು ವೋಲ್ವೋ(ಎಸಿ) ಬಸ್​​ಗಳು ಸಹ ಇರಲಿವೆ. ಪ್ರತಿದಿನ ಬೆಂಗಳೂರಿನ ಶಾಂತಿನಗರ ಬಸ್​ ನಿಲ್ದಾಣದಿಂದ ಬಸ್​ ಸೇವೆ ಪ್ರಾರಂಭವಾಗಲಿದೆ.ವೇಳಾಪಟ್ಟಿಯ ಪ್ರಕಾರ, ರಾಜಹಂಸ ಬಸ್​ ಮಧ್ಯಾಹ್ನ 1 ಗಂಟೆಗೆ ಶಾಂತಿನಗರ ಬಸ್​ ನಿಲ್ದಾಣದಿಂದ ತೆರಳಲಿದ್ದು, ಮಾರನೇ ದಿನ ಬೆಳಗ್ಗೆ 8.15ಕ್ಕೆ ಕೇರಳದ ಪಂಪಾ ತಲುಪಲಿದೆ. ಮತ್ತೆ ಪಂಪಾದಿಂದ ಸಂಜೆ 5ಗಂಟೆಗೆ ಬಸ್​​ ತೆರಳಲಿದ್ದು, ಮಾರನೇ ದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ. ಪ್ರತಿ ಟಿಕೆಟ್​ ದರ 940 ರೂಪಾಯಿಗಳು.ಸಿದ್ದರಾಮಯ್ಯನವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ; ಸಚಿವ ಶ್ರೀರಾಮುಲು

ಇನ್ನು, ವೋಲ್ವೋ ಬಸ್​ನಲ್ಲಿ ತೆರಳುವವರಿಗೆ ಟಿಕೆಟ್​ ದರ ಹೆಚ್ಚಾಗಿರುತ್ತದೆ. ಪ್ರತಿ ಟಿಕೆಟ್​​ಗೆ 1250ರೂ.ಗಳಾಗಲಿದೆ. ವೋಲ್ವೋ ಬಸ್​ ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಶಾಂತಿನಗರ ಬಸ್​​ ನಿಲ್ದಾಣದಿಂದ ಹೊರಡಲಿದೆ. ಮಾರನೇ ದಿನ ಬೆಳಗ್ಗೆ 6.45ಕ್ಕೆ ಪಂಪಾ ತಲುಪಲಿದೆ. ಮತ್ತೆ ಸಂಜೆ 6 ಗಂಟೆಗೆ ಪಂಪಾದಿಂದ ವೋಲ್ವೋ ಬಸ್​ ವಾಪಸ್ಸಾಗಲಿದ್ದು, ಮರುದಿನ ಬೆಳಗ್ಗೆ 9.45ಕ್ಕೆ ಬೆಂಗಳೂರು ತಲುಪಲಿದೆ.

ಟಿಕೆಟ್​​​​​​ ಬುಕ್​ ಮಾಡುವುದು ಹೇಗೆ?

ಬೆಂಗಳೂರಿನಿಂದ ಪಂಪಾಗೆ ತೆರಳಲು ಕೆಎಸ್​ಆರ್​ಟಿಸಿ ಬಸ್​ ಟಿಕೆಟ್​ ಬುಕ್​ ಮಾಡುವುದು ಅತೀ ಸುಲಭ. ಪ್ರಯಾಣದ ದಿನಾಂಕಕ್ಕಿಂತ ಮುಂಚಿತವಾಗಿ ಆನ್‌ಲೈನ್‌ನಲ್ಲಿ (www.ksrtc.in) ಟಿಕೆಟ್ ಕಾಯ್ದಿರಿಸುವಂತೆ ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಸೂಚಿಸಿದೆ. ಇಲ್ಲವೇ ಗಣಕೀಕೃತ(ಕಂಪ್ಯೂಟರೈಸ್ಡ್​) ಕೆಎಸ್‌ಆರ್‌ಟಿಸಿ ಟಿಕೆಟ್ ಕೌಂಟರ್‌ಗಳಲ್ಲಿ ರಾಜ್ಯದಾದ್ಯಂತ ಮತ್ತು ಹೊರಗಿನ ಪ್ರಮುಖ ಬಸ್ ಡಿಪೋಗಳಲ್ಲಿ ಟಿಕೆಟ್​​​ ಬುಕ್​ ಮಾಡಬಹುದಾಗಿದೆ.

ಕರ್ನಾಟಕ ಮತ್ತು ನೆರೆಹೊರೆಯ ರಾಜ್ಯಗಳಲ್ಲಿ ಒಟ್ಟು 707 ಕೆಎಸ್​​ಆರ್​​ಟಿಸಿ ಟಿಕೆಟ್​​ ಬುಕ್​ ಕೌಂಟರ್ಗಳು ಕಾರ್ಯನಿರ್ವಹಿಸುತ್ತಿವೆ.

First published:November 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading