Karnataka Weather Today: ನಾಳೆಯಿಂದ 3 ದಿನ ರಾಜ್ಯದಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ: ಹೊರಬರುವ ಮುನ್ನ ಹುಷಾರ್​..!

Karnataka Weather Today: ಈಗಾಗಲೇ ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಮತ್ತೊಂದು ಶಾಕ್ ನೀಡಿದ್ದು, ನವೆಂಬರ್ 26 ರಿಂದ  ರಾಜ್ಯದಲ್ಲಿ ಮತ್ತೆ ಭಾರೀ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Weather Today: ಬಂಗಾಳ ಕೊಲ್ಲಿಯಿಂದ (Bay of Bengal) ಆರಂಭಗೊಂಡಿದ್ದ ಮೇಲ್ಮೈ ಸುಳಿಗಾಳಿ ದುರ್ಬಲಗೊಂಡ ಹಿನ್ನೆಲೆ ರಾಜ್ಯದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ (Unseasonal Rain) ಬ್ರೇಕ್ ಬಿದಿತ್ತು. ಈಗಾಗಲೇ ಮಳೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಮತ್ತೊಂದು ಶಾಕ್ ನೀಡಿದ್ದು, ನವೆಂಬರ್ 26 ರಿಂದ  ರಾಜ್ಯದಲ್ಲಿ ಮತ್ತೆ ಭಾರೀ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ಇಂದು ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾ(Rainfall)ಗಲಿದೆ. ಶಿವಮೊಗ್ಗ, ಹಾಸನ. ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಚಳಿ (Winter) ಸಹ ರಾಜ್ಯದಲ್ಲಿ (Karnataka Rains) ಆರಂಭವಾಗಲಿದೆ. ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆ ಒಣ ಹವೆ ಇರಲಿದೆ. ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ ಮತ್ತು ತುಮಕೂರಿನಲ್ಲಿ ನ.26ರಿಂದ ಮುಂದಿನ 3 ದಿನ ಭಾರಿ ಮಳೆಯಾಗಲಿದೆ ಅಂತ ತಿಳಿಸಿದೆ.

ಚಂಡಮಾರುತದ ಕೇಂದ್ರ ಬಿಂದು ನೈಋತ್ಯ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಪ್ರಭಾವದಿಂದ ಮುಂದಿನ 24 ಗಂಟೆಗಳಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪ್ರದೇಶವಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ ಸಾಧ್ಯತೆಯಿದೆ. ಇದು ಶ್ರೀಲಂಕಾ ಮತ್ತು ದಕ್ಷಿಣ ತಮಿಳುನಾಡು ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ” ಎಂದು ಹವಾಮಾನ ಇಲಾಖೆ ಹೇಳಿದೆ.

ದಕ್ಷಿಣ ಭಾರತದಲ್ಲಿ ಭಾರೀ ಮಳೆ!

ಮುಂದಿನ ಮೂರು ದಿನಗಳಲ್ಲಿ ಆಂಧ್ರಪ್ರದೇಶದ ಕರಾವಳಿ, ಯಾನಂ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ಮಾಹೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆಯಲಿದ್ದು, ಇನ್ನೂ ಮೂರು ದಿನ ಕೆಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ರಾಜ್ಯದ ಜಿಲ್ಲೆಗಳಲ್ಲಿ ಹೇಗಿರಲಿದೆ ಹವಾಮಾನ?

ಬೆಂಗಳೂರು 27-19, ಶಿವಮೊಗ್ಗ 31-21, ಹಾಸನ 27-19, ಮೈಸೂರು 29-19, ಚಿಕ್ಕಬಳ್ಳಾಪುರ 26-18, ಉಡುಪಿ 31-24, ಮಂಗಳೂರು 32-24, ಉತ್ತರ ಕನ್ನಡ 31-21, ದಾವಣಗೆರೆ 30-21, ಧಾರವಾಡ 29-21, ಗದಗ 29-21, ಹಾವೇರಿ 31-21, ಬೆಳಗಾವಿ 29-20, ರಾಯಚೂರು 31-22, ಬಳ್ಳಾರಿ 29-22, ಬಾಗಲಕೋಟೆ 31-22, ವಿಜಯಪುರ 30-21, ಕಲಬುರಗಿ 31-21 ಮತ್ತು ಯಾದಗಿರಿ 31-22 ತಾಪಮಾನ ದಾಖಲಾಗಲಿದೆ. ರಾಯಚೂರು ಮತ್ತು ಕಲಬುರಗಿಯಲ್ಲಿ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ದ್ರಾಕ್ಷಿ ಬೆಳೆಗಾರರು ಕಂಗಾಲು!

ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ  ಹವಾಮಾನ ವೈಪರಿತ್ಯದ ಕಾರಣ ದ್ರಾಕ್ಷಿ ಬೆಳೆಗೆ ರೋಗ ಬಾಧಿಸಿದ್ದು , ರೈತರನ್ನ ಹೈರಾಣಾಗಿಸಿದೆ. ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ರೈತರಿಗೆ ಜೀವನದ ಆಧಾರವಾಗಿದೆ. ಬಹುತೇಕ ಬೆಳೆಗಾರರು ಈಗ ದ್ರಾಕ್ಷಿ ಬೆಳೆ ಬೆಳಿದಿದ್ದಾರೆ. ತೋಟಗಳಲ್ಲಿ ಹೂವುಗಳು ಮೂಡಿ ಕಾಯಿ ಕಟ್ಟುವ ಹಂತದಲ್ಲಿದೆ. ಇಂತಹ ಸ್ಥಿತಿಯಲ್ಲಿ ಅಕಾಲಿಕ ಮಳೆ ಸುರಿದಿದ್ದರಿಂದ ಡವಣಿ ಹಾಗೂ ಕೊಳೆ ರೋಗದಿಂದ ದ್ರಾಕ್ಷಿ ಕಾಳುಗಳು ಉದುರುತ್ತಿವೆ.

ಇದನ್ನು ಓದಿ : ಬೆಳೆಗಾರರ ಕೈಗೆಟುಕದ ದ್ರಾಕ್ಷಿ.. ಹಣ್ಣಿನ ಜೊತೆ ರೈತರ ನೆಮ್ಮದಿಯನ್ನು ಆಪೋಷನ ಪಡೆದ ವರುಣ

ಸಂಕಷ್ಟದಲ್ಲಿ ಕಬ್ಬು ಬೆಳೆಗಾರರು

ಇನ್ನು ದ್ರಾಕ್ಷಿ ಬೆಳೆಗಾರರ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ  ಕಬ್ಬು ಬೆಳೆಗಾರರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕಾಲಿಕ ಮಳೆಯಿಂದ  ಗದ್ದೆಗಳಿಲ್ಲಿ ನೀರು ತುಂಬಿ ಜಮೀನು ಕೆಸರು ಗದ್ದೆಮತಾಗಿದೆ.  ಚಿಕ್ಕೋಡಿ, ರಾಯಬಾಗ, ಅಥಣಿ, ಹುಕ್ಕೇರಿ ತಾಲೂಕಿನಲ್ಲಿ ಸುರಿದ ಮಳೆಯಿಂದ ಕಟಾವು ಮಾಡಿದ ಕಬ್ಬು ಕಾರ್ಖಾನೆಗೆ  ಕಳಿಸಲಾಗದೆ ರೈತ ಪರದಾಡುತ್ತಿದ್ದಾನೆ. ಮಳೆಯಿಂದ ಜಮೀನುಗಳಿಗೆ ಟ್ರಾಕ್ಟರಗಳು ಬರುತ್ತಿಲ್ಲಾ. ಗದ್ದೆಗಳಲ್ಲಿ ಟ್ರಾಕ್ಟರ್ ಗಳು  ಸಿಲುಕಿ ಕೊಂಡಿದ್ದು ಟ್ರಾಕ್ಟರ್ ಗಳನ್ನ ಹೊರ ತೆಗೆಯಲು  ರೈತರು ಹರ ಸಾಹಸ ಪಡುತ್ತಿದ್ದಾರೆ. ಪರಿನಾಮ ಕಟಾವು ಮಾಡಿದ ಕಬ್ಬು ಗದ್ದೆಯಲ್ಲೆ ಬೀಳುವಂತಾಗಿದೆ.

ಇದನ್ನು ಓದಿ : ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆಗಿಂತಲೂ ದುಬಾರಿಯಾಯಿತು ಟೊಮೆಟೊ ಬೆಲೆ

ತಮಿಳುನಾಡಿನಲ್ಲಿ ಯೆಲ್ಲೋ ಅಲರ್ಟ್

ಇಂದು ಮತ್ತೆ ನಾಳೆ ತಮಿಳುನಾಡಿನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದ ಪರಿಚಲನೆಯೂ ಬಂಗಾಳಕೊಲ್ಲಿಯತ್ತ ಸಾಗಿ ವಾಯುಭಾರ ಕುಸಿತವಾಗಲಿದೆ. ಈ ಮಾರುತಗಳು ತಮಿಳುನಾಡು ಕರಾವಳಿಯತ್ತ ಚಲಿಸುವ ಸಾಧ್ಯತೆಗಳಿರುವ ಪರಿಣಾಮ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ರಣ ಮಳೆಗೆ ಸಿಲುಕಿ ತತ್ತರಿಸುವ ತಮಿಳುನಾಡಿಗೆ, ಮತ್ತೆ ವರುಣ ಶಾಕ್​ ನೀಡಲಿದ್ದಾನೆ
Published by:Vasudeva M
First published: