• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Text Book Row: ಅಂಬೇಡ್ಕರ್ ಅವರಿಗಿರುವ ಸಂವಿಧಾನ ಶಿಲ್ಪಿ ಬಿರುದನ್ನ ಕೈ ಬಿಟ್ಟ Rohit Chakratirtha ಸಮಿತಿ

Text Book Row: ಅಂಬೇಡ್ಕರ್ ಅವರಿಗಿರುವ ಸಂವಿಧಾನ ಶಿಲ್ಪಿ ಬಿರುದನ್ನ ಕೈ ಬಿಟ್ಟ Rohit Chakratirtha ಸಮಿತಿ

ಪಠ್ಯ

ಪಠ್ಯ

9ನೇ ತರಗತಿಯ ನಮ್ಮ ಸಂವಿಧಾನ ಪಠ್ಯದಲ್ಲಿ ಆಗಿರುವ ಪರಿಷ್ಕರಣೆ ಆಗಿರುವ ಪರಿಷ್ಕೃತ ಪಠ್ಯದಲ್ಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂಬ ಅಂಶವನ್ನೇ ಕೈಬಿಟ್ಟಿದೆ

  • Share this:

Karnataka Text Book Row: ಪಠ್ಯ ಪರಿಷ್ಕರಣೆ ವಿವಾದ ಇನ್ನೂ ಮುಗಿಯುವಂತೆ ಕಾಣಿಸುತ್ತಿಲ್ಲ. ಈಗಾಗಲೇ ಸರ್ಕಾರ ಪಠ್ಯ ಪುಸ್ತಕ ಸಮಿತಿಯನ್ನೇನೋ ವಿಸರ್ಜನೆಗೊಳಿಸಿದೆ. ಆದ್ರೆ ರೋಹಿತ್ ಚಕ್ರತೀರ್ಥ (Rohit Chakratirtha) ಅವರ ಸಮಿತಿಯ ಪಠ್ಯ ಪುಸ್ತಕಗಳನ್ನ ಮಕ್ಕಳಿಗೆ (Students) ನೀಡಲು ಸರ್ಕಾರ ಮುಂದಾಗಿದೆ. ಇದೀಗ ಪುಸ್ತಕದಲ್ಲಿನ (Books) ಒಂದೊಂದೇ ದೋಷಗಳು ಬೆಳಕಿಗೆ ಬರುತ್ತಿವೆ. ಇದೀಗ ಸಂವಿಧಾನ ಶಿಲ್ಪಿ ಅಂಬೇಡ್ಕರ್ (Dr B R Ambedkar) ಅವರ ವಿಷಯವನ್ನು ಮಕ್ಕಳಿಗೆ ಹೇಳುವ ರೀತಿಯಲ್ಲಿ ರೋಹಿತ್ ಚಕ್ರತೀರ್ಥ ಸಮಿತಿ ಕೆಲ ಬದಲಾವಣೆಗಳನ್ನು ಮಾಡಿದೆ. ಇದರ ಜೊತೆಗೆ ಈ ಹಿಂದೆ ಇದ್ದ ಕೆಲ ಸಾಲುಗಳನ್ನು ತೆಗೆದುಹಾಕಿದೆ. ರೋಹಿತ್ ‌ಚಕ್ರತೀರ್ಥ ನೇತೃತ್ವದ ಪರಿಷ್ಕರಣೆ ವೇಳೆ ಮಹಾಪ್ರಮಾದ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಇದ್ದ ಸಂವಿಧಾನ ಶಿಲ್ಪಿ ಎಂಬ ಬಿರುದನ್ನೇ ಚಕ್ರತೀರ್ಥ ಸಮಿತಿ ಕೈ ಬಿಟ್ಟಿದೆ.


9ನೇ ತರಗತಿಯ ನಮ್ಮ ಸಂವಿಧಾನ ಪಠ್ಯದಲ್ಲಿ ಆಗಿರುವ ಪರಿಷ್ಕರಣೆ ಆಗಿರುವ ಪರಿಷ್ಕೃತ ಪಠ್ಯದಲ್ಲಿ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂಬ ಅಂಶವನ್ನೇ ಕೈಬಿಟ್ಟಿದೆ. ನಮ್ಮ ಸಂವಿಧಾನ ಪಠ್ಯದಲ್ಲಿ ಕರಡು ರಚನಾ ಸಮಿತಿ ಬಗ್ಗೆ  ಮಾಹಿತಿ ನೀಡುವ ವೇಳೆ ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ್ದ ಕೊಡುಗೆಯನ್ನ ಆಧರಿಸಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ ಎಂಬ ಅಂಶ ಇತ್ತು. ಬರಗೂರು ರಾಮಚಂದ್ರಪ್ಪ ಸಮಿತಿಯ ಪರಿಷ್ಕರಣೆಯಲ್ಲಿ ಸಂವಿಧಾನ ಶಿಲ್ಪಿ ಪದ ಇತ್ತು.  ಆದರೆ ರೋಹಿತ್ ಚಕ್ರತೀರ್ಥ ಸಮಿತಿ ಸಂವಿಧಾನ ಶಿಲ್ಪಿ ಪದವನ್ನೇ ಕೈಬಿಟ್ಟಿದೆ.


ಇದನ್ನೂ ಓದಿ:  Text Book Controversy: 'ಬಾವಿಯಲ್ಲಿ ಚಂದ್ರ' 3ನೇ ಕ್ಲಾಸ್‌ಗೂ ಸಿಕ್ಕಿದ, 4ನೇ ಕ್ಲಾಸ್‌ಗೂ ಸಿಕ್ಕಿದ! ಒಂದೇ ಪದ್ಯ, ಎರಡೆರಡು ತರಗತಿ ಪುಸ್ತಕದಲ್ಲಿ ಮುದ್ರಣ


ಇದರ ಜೊತೆ ಸಂವಿಧಾನ ಕರಡು ಸಮಿತಿ ತನ್ನ ಕಾರ್ಯ ಮುಗಿಸಲು 2 ವರ್ಷ 11 ತಿಂಗಳು 18 ದಿನಗಳನ್ನ ತೆಗೆದುಕೊಂಡಿತ್ತು ಎಂಬ ವಿವರ ಇತ್ತು. ಇದನ್ನೂ ಕೂಡ ರೋಹಿತ್ ಸಮಿತಿ 145 ದಿನ ಸಭೆ ಸೇರಿತ್ತು ಎಂಬ ಅಂಶವನ್ನ ಮಾತ್ರ ಉಲ್ಲೇಖಿಸಿದೆ. ಅನೇಕರು ಇದು ಅಂಬೇಡ್ಕರ್ ಅವಹೇಳನ ಎಂದು ಕಿಡಿಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ ಅವರಿಗೆಗೆ ಅವಹೇಳನ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.


ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯದಲ್ಲೇನಿತ್ತು?


ಕರಡು ರಚನಾ ಸಮಿತಿ


ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು, 5 ಉಪಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದುದು ಕರಡು ಸಮಿತಿ, ಡಾ. ಬಿ.ಆರ್. ಅಂಬೇಡ್ಕರ್‌ರವರು ಇದರ ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು 'ಸಂವಿಧಾನದ ಶಿಲ್ಪಿ' ಎಂದು ಕರೆಯಲಾಗಿದೆ. ಈ ಕರಡು ಸಮಿತಿಯಲ್ಲಿ ಎನ್.ಗೋಪಾಲ ಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್. ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮಹಮ್ಮದ್‌ ಸಾದುಲ್ಲಾ, ಸಿ. ಮಾಧವರಾವ್‌ ಅವರು ಸದಸ್ಯರಾಗಿದ್ದರು.


ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯದಲ್ಲೇನಿದೆ..?


ಕರಡು ರಚನಾ ಸಮಿತಿ


ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು ಅನೇಕ ಸಮಿತಿಗಳನ್ನು ರಚಿಸಿತು. ಅವುಗಳಲ್ಲಿ ಮುಖ್ಯವಾದುದು ಕರಡು ಸಮಿತಿ, ಡಾ. ಬಿ.ಆರ್.ಅಂಬೇಡ್ಕರ್ ಅದರ ಅಧ್ಯಕ್ಷರಾಗಿದ್ದರು. ಈ ಸಮಿತಿಯಲ್ಲಿ ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ. ಮುನ್ಷಿ, ಟಿ.ಟಿ. ಕೃಷ್ಣಮಾಚಾರಿ ಮುಂತಾದ ಮುತ್ಸದ್ಧಿಗಳು ಸದಸ್ಯರುಗಳಾಗಿದ್ದರು.


6 ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿದ್ದ ಚನ್ನಣ್ಣ ವಾಲೀಕಾರ ಅವರು ಬರೆದಿದ್ದ 'ನೀ ಹೋದ ಮರುದಿನ' ಎಂಬ ಅಂಬೇಡ್ಕರರ ಬಗೆಗಿನ ಕವಿತೆಯನ್ನು ತೆಗೆದು ಹಾಕಲಾಗಿದೆ.


ಇದನ್ನೂ ಓದಿ;  Siddaramaiah Tweet: ರೋಹಿತ್ ಚಕ್ರತೀರ್ಥ ಒಬ್ಬ ನಾಡದ್ರೋಹಿ; ಪರಿಷ್ಕರಿಸಿರುವ ಪಠ್ಯವನ್ನು ರದ್ದು ಮಾಡಿ- ಸಿದ್ದರಾಮಯ್ಯ ಆಗ್ರಹ


10 ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಗಾಂಧಿ ಯುಗ ಮತ್ತು ರಾಷ್ಟ್ರೀಯ ಚಳವಳಿ ಪಾಠದಲ್ಲಿ ಈ ಹಿಂದೆ ಅಂಬೇಡ್ಕರ್‌ ಅವರು ಜಾತಿ ವ್ಯವಸ್ಥೆಯಿಂದ ಬೇಸತ್ತಿದ್ದು, ಜಾತಿ ಮತ್ತು ಸಾಮಾಜಿಕ ಶ್ರೇಣೀಕರಣವನ್ನು ವಿರೋಧಿಸಿದ್ದ ಬೌದ್ಧಧರ್ಮವನ್ನು ಸ್ವೀಕರಿಸಿದ್ದರು ಎಂಬ ವಾಕ್ಯವಿತ್ತು. ಅದನ್ನೂ ತೆಗೆಯಲಾಗಿದೆ.

Published by:Mahmadrafik K
First published: