Mallikarjun Kharge: ಧರ್ಮ, ಮೂಢನಂಬಿಕೆಯಿಂದ ದೇಶ ಒಡೆಯೋ ಕೆಲಸ ಮಾಡ್ತಿದ್ದಾರೆ; BJP ವಿರುದ್ಧ ಖರ್ಗೆ ವಾಗ್ದಾಳಿ

ಇವತ್ತಿನ ಪ್ರಧಾನಿ ಎಂಟು ವರ್ಷ ಪೂರೈಸಿದ್ದಾರೆ. ಅವರ ಸಾಧನೆ ಏನು ಅನ್ನೋದು ಗೊತ್ತಿಲ್ಲ. ಪ್ರಜಾಪ್ರಭುತ್ವದ ಬೇರನ್ನು ಕೀಳೋಕೆ ಹೊರಟಿದ್ದಾರೆ. ಇದಕ್ಕೆ ಆರ್ ಎಸ್ ಎಸ್, ಮೋದಿ‌ ಸಹಕಾರ ನೀಡುತ್ತಿದ್ದಾರೆ.

ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

  • Share this:
ಇಂದು ಕೆಪಿಸಿಸಿ ಕಚೇರಿಯಲ್ಲಿ (KPCC Office) ಮಾಜಿ ಪ್ರಧಾನಿ ದಿ. ಜವಾಹರ್ ಲಾಲ್ ನೆಹರು ಪುಣ್ಯಸ್ಮರಣೆ (Jawaharlal Nehru Death Anniversary) ಕಾರ್ಯಕ್ರಮ ಆಚರಿಸಲಾಯ್ತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಜೈರಾಂ ರಮೇಶ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ (Central And State Government) ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ನೆಹರು ಅವರ 58ನೇ ಪುಣ್ಯತಿಥಿ ಆಚರಿಸುತ್ತಿದ್ದೇವೆ. ನೆಹರು ಪಕ್ಷದ ವಿಚಾರವಾದಿ ನಾಯಕರು. ಅವರ ವಿಚಾರಧಾರೆಯ ಮೇಲೆ ಕಾಂಗ್ರೆಸ್ ನಿಂತಿದೆ. 9 ವರ್ಷ ಜೈಲು ವಾಸ ಅನುಭವಿಸಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ‌ ಹೋರಾಡಿದವರು ಎಂದರು.

ಗಾಂಧೀಜಿ‌ ಅವರ ಪ್ರೀತಿಗೆ ಪಾತ್ರರಾದವರು. ಯುವಕರ ಪಾಲಿಕೆ  ಜನಪ್ರಿಯರಾಗಿದ್ದರು. ಅವರನ್ನು ಕಳೆದುಕೊಂಡು 58 ವರ್ಷಗಳಾಗಿವೆ. ಆದರೆ ಅವರ ಜಾತ್ಯಾತೀತ ತತ್ವ ಇನ್ನೂ ಉಳಿದಿದೆ. ತಿನ್ನೋದಕ್ಕೆ ಅನ್ನವಿಲ್ಲದಾಗ ಕೃಷಿ ಕ್ಷೇತ್ರವನ್ನು ಬೆಳೆಸಿದವರು ಪಂ. ನೆಹರು ಅವರು. ಅವರ ಸಿದ್ಧಾಂತದ ಮೇಲೆ ನಡೆದರೆ ಮಾತ್ರ ನಮ್ಮ ದೇಶ ಚೆನ್ನಾಗಿರುತ್ತದೆ ಎಂದು ಹೇಳಿದರು.

ಇವತ್ತಿನ ಪ್ರಧಾನಿಗಳ ಸಾಧನೆ ಏನು?

ಇವತ್ತಿನ ಪ್ರಧಾನಿ ಎಂಟು ವರ್ಷ ಪೂರೈಸಿದ್ದಾರೆ. ಅವರ ಸಾಧನೆ ಏನು ಅನ್ನೋದು ಗೊತ್ತಿಲ್ಲ. ಪ್ರಜಾಪ್ರಭುತ್ವದ ಬೇರನ್ನು ಕೀಳೋಕೆ ಹೊರಟಿದ್ದಾರೆ. ಇದಕ್ಕೆ ಆರ್ ಎಸ್ ಎಸ್, ಮೋದಿ‌ ಸಹಕಾರ ನೀಡುತ್ತಿದ್ದಾರೆ. ಮೋದಿ ಮೆಜಾರಿಟಿಗಿಂತ ಹೆಚ್ಚು ಮೆಜಾರಿಟಿ ನೆಹರು ಅವರಿಗಿತ್ತು. ನೆಹರು ಅವರು ನೀರಾವರಿಗೆ ಪ್ರೋತ್ಸಾಹ ಕೊಟ್ಟವರು, ಐಐಟಿ, ಏಮ್ಸ್ ಎಲ್ಲವನ್ನೂ ಅಸ್ತಿತ್ವಕ್ಕೆ ತಂದರು. ಅದನ್ನ ಅಳಿಸೋಕೆ ಬಿಜೆಪಿ ಸರ್ವ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  Text Book Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧ; ಮೇ 31ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರವೇ ಸಜ್ಜು

ಮೋದಿ ತಮಿಳುನಾಡಿಗೆ ಭೇಟಿ ನೀಡುತ್ತಾರೆ. ಅಲ್ಲಿ ತೆಲಂಗಾಣ ಸಿಎಂ ಬಗ್ಗೆ ಮಾತನಾಡುತ್ತಾರೆ. ಕೈಗೆ ಪಟ್ಟಿಕಟ್ಟಿಕೊಳ್ಳೋ ಬಗ್ಗೆ ಮಾತನಾಡುತ್ತಾರೆ. ಅವರ ಪಾರ್ಟಿಯಲ್ಲೇ ಮೂಢನಂಬಿಕೆಯಿದೆ. ಮೂಡನಂಬಿಕೆ ಮೇಲೆಯೇ ಅಧಿಕಾರ ನಡೆಸ್ತಾರೆ. ವಿಜ್ಞಾನಿ ‌ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ.

ಕೈಗೆ ಪಟ್ಟಿಕಟ್ಟುಕೊಂಡು ಹೋಗ್ತಾರೆ

ಧರ್ಮ, ಮೂಡನಂಬಿಕೆಯಿಂದ ದೇಶ ಒಡೆಯೋ ಕೆಲಸ ಮಾಡ್ತಿದ್ದಾರೆ. ಶಿಕ್ಷಣ, ಧರ್ಮದ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುತ್ತಿದೆ. ಬಿಜೆಪಿ ಹುಟ್ಟಿರುವುದೇ ಮೂಡನಂಭಿಕೆಗಳ ಮೇಲೆ. ತೆಲಂಗಾಣ ಸಿಎಂ ಮೂಢನಂಬಿಕೆಗಳ ಕೆಲಸ ಮಾಡ್ತಾರೆ ಎಂದು ಹೇಳುತ್ತಾರೆ. ಇರಲಿ ಅವರಿ ಎಲ್ಲಿ ಹೋದ್ರು ಕೈಗೆ ಪಟ್ಟಿಕಟ್ಟುಕೊಂಡು ಹೋಗ್ತಾರೆ ಎಂದು ವ್ಯಂಗ್ಯ ಮಾಡಿದರು.

 ಹೆಡ್ಗೆವಾರ್ ಬಗ್ಗೆ ಏಕವಚನದಲ್ಲಿ ವಾಗ್ದಾಳಿ

ಹೆಡ್ಗೆವಾರ್ 1921 ಲ್ಲಿ ಭಾಷಣ ಮಾಡಿದ್ದಾರಂತೆ. ಆರ್ ಎಸ್ ಎಸ್ ವಿಚಾರಗಳನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿ ಮಕ್ಕಳ ಮನಸ್ಸು ಕೆಡಿಸುವ ಕೆಲಸ ಮಾಡಲು ಮುಂದಾಗಿದ್ದಾರೆ. ನಾವು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ನಮ್ಮ ರಾಜ್ಯದಲ್ಲಿ ಇವರ ಸಿದ್ಧಾಂತ ಸೇರಿಸಲು ಬಿಡಬಾರದು. ಒಗ್ಗಟ್ಟಾಗಿ ನಾವು ಕೆಲಸ ಮಾಡಬೇಕು ಎಂದು ಹೇಳಿ ಹೆಡ್ಗೆವಾರ್ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  Annamalai IPS: ಸಿನಿಮಾದತ್ತ ಮುಖ ಮಾಡಿದ ಕರ್ನಾಟಕದ ಸಿಂಗಂ, ಒಂದೇ ಒಂದು ರೂಪಾಯಿ ಸಂಭಾವನೆ ಪಡೆದ ಅಣ್ಣಾಮಲೈ

ಅವನು ಇಲ್ಲಿ ಬಂದು ಏನು ಮಾಡಿದ? ಅವನ ಪಾಠ ಇಲ್ಲಿ ಸೇರಿಸಲು ಯಾರು? ಅವನ 1921ರ ಭಾಷಣ ಹೇಳ್ತಾರೆ. ಅವನು ಇಲ್ಲಿ ಬಂದು ಏನು ಮಾಡಿದ್ದ? ನೆಹರು, ಭಗತ್ ಸಿಂಗ್ ಪಾಠ ತೆಗೆಯುತ್ತಿದ್ದಾರೆ. ದೇಶ ಒಡೆಯುವವರನ್ನ ಪಠ್ಯದಲ್ಲಿ ಸೇರಿಸ್ತಾರೆ. ಇದರ ಬಗ್ಗೆ ನಾವೆಲ್ಲರೂ ಹೋರಾಟ ಮಾಡ್ತೇವೆ ಎಂದು ಗುಡುಗಿದರು.
Published by:Mahmadrafik K
First published: