ಬೆಂಗಳೂರು: ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿರುವುದರಿಂದ ಸದರಿ ರೋಹಿತ್ ಚಕ್ರತೀರ್ಥ (Rohit Chakrathirtha) ನೇತೃತ್ವದ ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು (Karnataka Text Book Revision) ವಿಸರ್ಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಪ್ರಸ್ತುತ ಸಮಿತಿ ಪರಿಷ್ಕರಿಸುವ ಪಠ್ಯದಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳಿದ್ದಲ್ಲಿ ಮತ್ತೊಮ್ಮೆ ಪರಿಷ್ಕರಿಸುವ (Karnataka Text Book Row) ಮುಕ್ತ ಮನಸ್ಸನ್ನು ಸರ್ಕಾರ (Karnataka Government) ಹೊಂದಿದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಈಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೀಡಿದ ವಿವರ ಹೀಗಿದೆ.
1. ಪಠ್ಯಪುಸ್ತಕ ಸಮಿತಿ ಕಾರ್ಯ ಮುಗಿದಿರುವುದರಿಂದ ಸಮಿತಿ ವಿಸರ್ಜನೆ ಮಾಡಲಾಗಿದೆ.
2. ಪ್ರಸ್ತುತ ಪಠ್ಯದಲ್ಲಿ ಮತ್ತೆ ಪರಿಷ್ಕರಣೆ ಇದ್ದರೆ ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ. ಜೊತೆಗೆ ಬಸವಣ್ಣನವರ ಕುರಿತ ಪಠ್ಯ ಪರಿಷ್ಕರಣೆಗೆ ನಿರ್ಧಾರ ಕಯಗೊಳ್ಳಲಾಗಿದೆ.
3. ಕುವೆಂಪು ಅವರ ನಾಡಗೀತೆ ಆಕ್ಷೇಪಾರ್ಹ ವಿಕೃತಗೊಳಿಸಿದ ಪಠ್ಯ ಉಲ್ಲೇಖವಾಗಿಲ್ಲ. ಇದರ ಮೂಲ ಕವನ ಬರೆದ ವ್ಯಕ್ತಿಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ.
4. ಬರಗೂರು ರಾಮಚಂದ್ರಪ್ಪ ಅವರ ಸಮಿತಿಗಿಂತ ಈಗಿನ ರೋಹಿತ್ ಚಕ್ರತೀರ್ಥ ಅವರ ಸಮಿತಿ ಕುವೆಂಪು ಅವರ ಗದ್ಯ, ಪದ್ಯವನ್ನು ಇನ್ನೂ ಮೂರು ಬಾರಿ ಹೆಚ್ಚು ಬಳಕೆ ಮಾಡಲಾಗಿದೆ. ಈ ಮೊದಲು ಕುವೆಂಪು ಅವರ ಸಾಹಿತ್ಯವನ್ನು ಏಳು ಬಾರಿ ಬಳಕೆ ಮಾಡಲಾಗಿತ್ತು. ಈಗ ಅದು 10ಕ್ಕೆ ಏರಿಕೆಯಾಗಿದೆ.
5. ನಾಡಪ್ರಭು ಕೆಂಪೇಗೌಡ ಅವರ ಪಠ್ಯದ ಸೇರ್ಪಡೆ
6. ಇಸ್ಲಾಂ, ಕ್ರೈಸ್ತ ಧರ್ಮದ ಪರಿಚಯದ ಜೊತೆ ಹಿಂದೂ ಧರ್ಮ ವಿಷಯ ಸೇರ್ಪಡೆ ಮಾಡಲಾಗಿದೆ.
ಬಸವಣ್ಣನ ಪಠ್ಯವನ್ನು ಯಾರ ಭಾವನೆಗೂ ದಕ್ಕೆಯಾಗದಂತೆ ಪರಿಷ್ಕರಣೆ
ರಾಜ್ಯದಲ್ಲಿ ಅನೇಕ ಬಾರಿ ಪಠ್ಯ ಪರಿಷ್ಕರಣೆ ಆಗಿದೆ. ಆಗೆಲ್ಲ ವಿರೋಧ ವ್ಯಕ್ತವಾಗಿದೆ
ಬರಗೂರು ಸಮಿತಿ ಬಗ್ಗೆ ಆಕ್ಷೇಪ ಬಂದಾಗ ಹೊಸ ಸಮಿತಿ ರಚನೆ ಮಾಡಲಾಯಿತು. ಸರ್ಕಾರ ವರದಿಯನ್ನು ಪಡೆದು ಪುಸ್ತಕ ಪ್ರಿಂಟ್ ಮಾಡಿ ಹಲವು ಜಿಲ್ಲೆಗಳಿಗೆ ಈಗಾಗಲೇ ಕಳುಹಿಸಿದೆ. ಹಿಂದಿನ ಸರ್ಕಾರದ ಬರಗೂರು ರಾಮಚಂದ್ರ ಸಮಿತಿಯಲ್ಲಿ ಬಸವಣ್ಣ ಪಾಠ ಪರಿಷ್ಕರಣೆಯಾಗಿತ್ತು. ಇಂದಿನ ಸಮಿತಿ ಕೂಡ ಅದನ್ನು ಮುಂದುವರೆಸಿತ್ತು. ಆದರೆ ಪಂಡಿತಾರಾಧ್ಯ ಸ್ವಾಮೀಜಿ ಸೇರಿದಂತೆ ಕೆಲ ಸ್ವಾಮೀಜಿಗಳ ಬಸವಣ್ಣನ ಪಠ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಸವಣ್ಣನ ಪಠ್ಯವನ್ನು ಯಾರ ಭಾವನೆಗೂ ದಕ್ಕೆಯಾಗದಂತೆ ಪರಿಷ್ಕರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: Rohit Chakratirtha: ನಾನು ನಾಡಗೀತೆಗೆ ಅವಮಾನ ಮಾಡಿಲ್ಲ ಎಂದ ಚಕ್ರತೀರ್ಥ; ಇತ್ತ ಗಡಿಪಾರಿಗೆ ಆಗ್ರಹಿಸಿ ಕರವೇ ಪ್ರತಿಭಟನೆ
ನಾಡಗೀತೆ ಬಗ್ಗೆ ಅವಹೇಳನ ಮಾಡಿದವರ ಬಗ್ಗೆ ತನಿಖೆ
ನಾಡಗೀತೆ ಬಗ್ಗೆ ಅವಹೇಳನಕಾರಿಯಾಗಿ ಬರೆದವರ ಬಗ್ಗೆ ತನಿಖೆಗಾಗಿ ಸೈಬರ್ ಕ್ರೈಂ ತಿಳಿಸಲಾಗಿದೆ. ನಾರಾಯಣ ಗುರು ಮತ್ತು ಭಗತ್ ಸಿಂಗ್ ಅವರ ಕುರಿತ ಪಾಠವನ್ನು ಬಿಟ್ಟಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ರಾಷ್ಟ್ರಕವಿ ಕುವೆಂಪುರವರ ಪಠ್ಯದಲ್ಲಿ ಹಿಂದೆ 8 ಇದ್ದದ್ದನ್ನು 7 ಮಾಡಲಾಗಿತ್ತು. ನಾವು 7 ರಿಂದ 10 ಮಾಡಿದ್ದೇವೆ. ನಾಡಪ್ರಭು ಕೆಂಪೆಗೌಡರ ಪಠ್ಯ ಸೇರಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Explained: ಮಕ್ಕಳು ಓದುವ ಪುಸ್ತಕದಲ್ಲೂ ಯಾಕೆ ವಿವಾದ? ಪರಿಷ್ಕರಣೆಗೆ ವಿರೋಧ ವ್ಯಕ್ತವಾಗಿದ್ದೇಕೆ?
ಪ್ರಸಕ್ತ ಪಠ್ಯ ಪರಿಷ್ಕರಣೆ ಮುಗಿದಿರುವದರಿಂದ ಪ್ರಸ್ತುತ ಸಮಿತಿಯನ್ನ ವಿಸರ್ಜಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.
ಪರಿಷ್ಕೃತಗೊಂಡ ಪಠ್ಯದ ವಿವರಗಳು ಹೀಗಿವೆ
ಒಂದರಿಂದ ಹತ್ತನೇ ತರಗತಿ ಭಾಷಾ ಪಠ್ಯಪುಸ್ತಕದಲ್ಲಿ 45 ಪಠ್ಯ ಪರಿಷ್ಕರಿಸಲಾಗಿದೆ
ಪ್ರಥಮ ಭಾಷೆ 33 ಪಾಠ/ಪದ್ಯಗಳು
ದ್ವಿತೀಯ ಭಾಷೆ 8 ಪಾಠ/ ಪದ್ಯ
ತೃತೀಯ ಭಾಷೆ 4 ಪಾಠ/ ಪದ್ಯ ಬದಲಾವಣೆ ಮಾಡಲಾಗಿದೆ.
ಯಥಾವತ್ತಾಗಿ ಉಳಿಸಿಕೊಂಡಿರುವ ಪಠ್ಯಗಳು
ಪ್ರಥಮ ಭಾಷೆ 165
ದ್ವಿತೀಯ ಭಾಷೆ 162
ತೃತೀಯ ಭಾಷೆ 94
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ