School Holidays: ಮೇ 16ರಿಂದ ಶಾಲೆ ಶುರು ಇಲ್ಲ? ಶಾಲಾ ಮಕ್ಕಳ ಬೇಸಿಗೆ ರಜೆ ವಿಸ್ತರಿಸಲು ಶಿಕ್ಷಣ ಇಲಾಖೆ ಚಿಂತನೆ

ಎರಡು ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಅವಧಿ ಕಡಿಮೆಯಾಗಿದೆ. ಹೀಗಾಗಿ ರಜೆಗೂ ಕೊಂಚ ದಿನಗಳ ಕಾಲ ಕಡಿತ ಮಾಡಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಶಾಲೆಗಳಿಗೆ ಬೇಸಿಗೆ ರಜೆ ವಿಸ್ತರಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಇಡೀ ದೇಶದಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಿರುವಂತೆ ಕರ್ನಾಟಕದಲ್ಲೂ ಬಿಸಿಲಿನ ಝಳ (Heatwave) ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಬಿರು ಬೇಸಿಗೆಯ ತಾಪದಿಂದ ಶಾಲಾ ಮಕ್ಕಳು (Karnataka School Students) ತೊಂದರೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಮಕ್ಕಳ ಬೇಸಿಗೆ ರಜೆಯನ್ನು (Summer Holidays 2022) ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸದ್ಯ ಕರ್ನಾಟಕದಲ್ಲಿ ಮೇ 16ರವರೆಗೆ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯನ್ನು ಘೋಷಿಸಲಾಗಿದೆ. ಈ ರಜೆಯ ಅವಧಿ ಮುಗಿಯಲು ಇನ್ನೂ ಹೆಚ್ಚು ದಿನಗಳ ಬಾಕಿ ಇಲ್ಲ.

ಇನ್ನೇನು ಬೇಸಿಗೆ ರಜೆ ಮುಗಿಯಲು ಹೆಚ್ಚು ದಿನಗಳು ಬಾಕಿಯಿಲ್ಲ.  ಇದೇ ಸಂದರ್ಭದಲ್ಲಿ ಬೇಸಿಗೆಯ ತಾಮಪಾನವೂ ಕಡಿಮೆಯಾಗಿಲ್ಲ. ಮೇ 16ರಿಂದಲೇ ಮಕ್ಕಳು ಶಾಲೆಗೆ ತೆರಳಲು ಆರಂಭಿಸಿದರೆ ಮಕ್ಕಳಿಗೆ ತೀವ್ರ ಬಿಸಿಲಿನಿಂದ ಆರೋಗ್ಯ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಎದುರಾಗಿದೆ. ಹೀಗಾಗಿ ಬೇಸಿಗೆ ರಜೆಯನ್ನು ಇನ್ನಷ್ಟು ದಿನಗಳವರೆಗೆ ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಪ್ರತಿವರ್ಷ ಹೇಗಾಗುತ್ತಿತ್ತು?
ಪ್ರತಿವರ್ಷ ಮೇ 29 ರಂದು ಶಾಲೆ ಆರಂಭವಾಗುತ್ತಿತ್ತು. ಆದರೆ ಈವರ್ಷ ಮೇ 16ರಿಂದಲೇ ಶಾಲೆಗಳನ್ನು ತೆರೆಯಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಎರಡು ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಅವಧಿ ಕಡಿಮೆಯಾಗಿದೆ. ಹೀಗಾಗಿ ರಜೆಗೂ ಕೊಂಚ ದಿನಗಳ ಕಾಲ ಕಡಿತ ಮಾಡಲಾಗಿತ್ತು.

ಹರಿಯಾಣದಲ್ಲಿ ಹೇಗಿದೆ?
ಹರಿಯಾಣದಲ್ಲಿ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಮಯವನ್ನು ಮೇ 4 ರಿಂದ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2.30 ರವರೆಗೆ ಈ ಮುನ್ನ ಇದ್ದ ಶಾಲಾ ಸಮಯವನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಬದಲಾಯಿಸಲಾಗಿದೆ.

ಪಂಜಾಬ್ ರಾಜ್ಯದಲ್ಲಿ ಏನು ಮಾಡಲಾಗಿದೆ?
ಪಂಜಾಬ್ ರಾಜ್ಯದಲ್ಲಿ ಬಿಸಿಗಾಳಿಯ ತೀವ್ರತೆಯ ಹಿನ್ನೆಲೆಯಲ್ಲಿ ಮೇ 14 ರಿಂದ ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆ ಘೋಷಿಸಲಾಗಿದೆ.

ಆದರೆ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ರಜೆ ಮುಂದೂಡುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಯೋಚನೆ ಮಾಡುತ್ತಿದೆ ಎಂದು ವರದಿಯಾಗಿದೆ.

ವಿವಿಧ ರಾಜ್ಯಗಳಲ್ಲೂ ಸಮಯದ ಬದಲಾವಣೆ
ಭಾರತದ ಕೆಲವು ಭಾಗಗಳಲ್ಲಿ ತಾಪಮಾನದ ಏರಿಕೆ ಮತ್ತು ನಿರಂತರ ಶಾಖದ ಅಲೆಗಳು ಮುಂದುವರೆಯುತ್ತಿದೆ. ಈ ಕಾರಣದಿಂದ ಹಲವಾರು ರಾಜ್ಯಗಳು ಶಾಲಾ ಸಮಯವನ್ನು ಬದಲಾಯಿಸಿವೆ. ಕೆಲವು ರಾಜ್ಯಗಳು ಮುಂಜಾನೆ ತರಗತಿಗಳಿಗೆ ಒತ್ತು ನೀಡಿ ಶಾಲೆಗಳನ್ನು ಮುಂಜಾನೆ ಬೇಗ ತೆರೆಯಲು ಚಿಂತನೆ ನಡೆಸಿವೆ. ಇನ್ನು ಕೆಲವು ಶಾಲೆಗಳ ಸಮಯವನ್ನು 7 ರಿಂದ 4 ಗಂಟೆಗಳಿಗೆ ಇಳಿಸಿವೆ.  ಅನೇಕ ರಾಜ್ಯಗಳಲ್ಲಿ ತರಗತಿಗಳನ್ನು ಮುಂದೂಡಲಾಗಿದೆ. 

ಇದನ್ನೂ ಓದಿ: Karwar to Bengaluru: ಪ್ರಯಾಣಿಕರಿಗೆ ಖುಷಿ ಸುದ್ದಿ, ಇನ್ಮೇಲೆ 45 ನಿಮಿಷ ಬೇಗನೇ ಬೆಂಗಳೂರು ತಲುಪಿ!

ಕೇಂದ್ರ ಸರ್ಕಾರದಿಂದ ವಿಶೇಷ ಸೂಚನೆ
ಬಿಸಿಲಿನ ತಾಪದ ಮಧ್ಯೆ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕೆಲವು ಸೂಚನೆಗಳನ್ನು ಬಿಡುಗಡೆ ಮಾಡಿದೆ. ಜನರು ಬಿಸಿಲಿನಲ್ಲಿ ವಿಶೇಷವಾಗಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರ ನಡುವೆ ಹೊರಗುಳಿಯದಂತೆ ಸಲಹೆ ನೀಡಿದೆ.

ಇದನ್ನೂ ಓದಿ: Basava Jayanti: ಅಮೆರಿಕಾ, ಉತ್ತರ ಪ್ರದೇಶ ನಿವಾಸಿಗಳಿಗೆ ಲಿಂಗ ದೀಕ್ಷೆ ನೀಡಿ ಬಸವ ಜಯಂತಿ ಆಚರಣೆ!

ಆದರೂ ಭಾರತೀಯ ಹವಾಮಾನ ಇಲಾಖೆ, IMD ಕೆಲವು ರಾಜ್ಯಗಳಲ್ಲಿ ಮುಂದಿನ ಮೂರರಿಂದ ನಾಲ್ಕು ದಿನಗಳವರೆಗೆ ಶಾಖದ ಗಾಳಿ ಮುಂದುವರೆಯಬಹುದು ಮುನ್ಸೂಚನೆಯನ್ನು ಸೂಚಿಸಿದೆ.  ಕೆಲವು ರಾಜ್ಯಗಳಲ್ಲಿ ಮಂಗಳವಾರದಿಂದ ಉಷ್ಣ ಮಾರುತ ಸ್ವಲ್ಪ ಮಟ್ಟಿಗೆ ಕಡಿಮೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Published by:guruganesh bhat
First published: