ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ (Karnataka-Maharashtra Border) ಉದ್ವಿಘ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ (Bus) ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಪೊಲೀಸರ ಸೂಚನೆ ಮೇರೆಗೆ ಬೆಳಗಾವಿ (Belagavi) ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ 400ಕ್ಕೂ ಹೆಚ್ಚು ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಬೆಳಗಾವಿಯಲ್ಲಿ NWKRTC ಸಂಚಾರ ಅಧಿಕಾರಿ ಕೆ.ಕೆ.ಲಮಾಣಿ ಹೇಳಿದ್ದಾರೆ. ಬೆಳಗಾವಿ ವಿಭಾಗದಿಂದ ಈವರೆಗೆ 80 ಬಸ್ಗಳು ಮಹಾರಾಷ್ಟ್ರಕ್ಕೆ ತೆರಳಬೇಕಿತ್ತು ಸಂಜೆಯವರೆಗೂ ತೆರಳಬೇಕಿದ್ದ 212 ಬಸ್ಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಅದೇ ರೀತಿ ಮಹಾರಾಷ್ಟ್ರದಿಂದ 60 ರಿಂದ 70 ಬಸ್ಗಳು ಬರಬೇಕಿತ್ತು.
ನಿನ್ನೆ ಮಹಾರಾಷ್ಟ್ರದ ಕುಡಾಲ ಬಸ್ ನಿಲ್ದಾಣದ ಡಿಪೋದಲ್ಲಿ ಪಾರ್ಕ್ ಮಾಡಿದಾಗ KSRTC ಬಸ್ಗೆ ಮಸಿ ಬಳಿಯಲಾಗಿದೆ. ದೊಡ್ಡ ಅಕ್ಷರಗಳಿಂದ ಜೈ ಮಹಾರಾಷ್ಟ್ರ ಎಂದು ದೊಡ್ಡ ಬರೆದಿದ್ದಾರೆ. ನಮ್ಮ ಚಾಲಕ ನಿರ್ವಾಹಕರು ಅಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿಯೇ ನಮ್ಮ 40 ರಿಂದ 50 ಬಸ್ಗಳು ಇವೆ. ಮಹಾರಾಷ್ಟ್ರದ ಎರಡು ಬಸ್ಗಳು ನಮ್ಮ ಡಿಪೋದಲ್ಲಿ ಸೇಫ್ ಆಗಿವೆ.ಬಸ್ಗಳ ಸಂಚಾರ ಸ್ಥಗಿತ ಹಿನ್ನೆಲೆ ಬೆಳಗಾವಿ ವಿಭಾಗವೊಂದಕ್ಕೆ 10 ರಿಂದ 15 ಲಕ್ಷ ರೂ. ನಷ್ಟವಾಗಿದೆ ಎಂದು ಮಾಹಿತಿ ನೀಡಿದರು.
ಬಸ್ ಸ್ಥಗಿತದಿಂದ ಪ್ರಯಾಣಿಕರಿಗೆ ತೊಂದರೆ
ಸವದತ್ತಿ ಯಲ್ಲಮ್ಮ ದೇವಿ, ಗೊಡಚಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತಿದೆ. ಮದುವೆ, ಜಾತ್ರೆ ಸೀಸನ್ ಇರೋದರಿಂದ ಉಭಯ ರಾಜ್ಯಗಳ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿದೆ. ಗಡಿ ಭಾಗದಲ್ಲಿ ದ್ವೇಷಮಯ ವಾತಾವರಣದಿಂದ ಸಾರಿಗೆ ಸಿಬ್ಬಂದಿ ಸಹ ಸಹಜವಾಗಿ ಹೆದರುತ್ತಿದ್ದಾರೆ ಎಂದು ಬೆಳಗಾವಿ ವಿಭಾಗೀಯ ಸಂಚಾರಿ ಅಧಿಕಾರಿ ಕೆ.ಕೆ.ಲಮಾಣಿ ಹೇಳಿದ್ದಾರೆ.
ನಾಸಿಕ್ನಲ್ಲಿ ಮುಂದುವರಿದ ಪುಂಡಾಟ
ಮಹಾರಾಷ್ಟ್ರದ ನಾಸಿಕ್ನಲ್ಲಿ ಪುಂಡರ ಪುಂಡಾಟ ಮುಂದುವರಿದಿದೆ. ಸೌರಾಜ್ಯ ಸಂಘಟನೆ ಕಾರ್ಯಕರ್ತರು ಕರ್ನಾಟಕ ಬ್ಯಾಂಕ್ ಫಲಕಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಕರ್ನಾಟಕ ಬ್ಯಾಂಕ್ ಬೋರ್ಡ್ಗೆ ಕಪ್ಪು ಮಸಿ ಬಳಿದು ಉದ್ಧಟತನ ಮೆರೆದಿದ್ದಾರೆ. ಈ ವೇಳೆ ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಗಿದೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ನಿನ್ನೆ ರಾಜ್ಯದಲ್ಲಿ ಮಹಾರಾಷ್ಟ್ರ ಬಸ್ಗಳಿಗೆ ಮಸಿ ಬಳಿದಾಗ 24 ಗಂಟೆಯಲ್ಲಿ ಕ್ರಮ ತೆಗೆದುಕೊಳ್ಳಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಹೇಳಿದ್ದರು. ಆದ್ರೆ ಈಗ ನಾಸಿಕ್ ಘಟನೆ ಬಗ್ಗೆ ಯಾವುದೇ ಹೇಳಿಕೆ ನೀಡದೇ ಶರದ್ ಪವಾರ್ ಮೌನಕ್ಕೆ ಜಾರಿದ್ದಾರೆ.
ಇದನ್ನೂ ಓದಿ: RTI ಅರ್ಜಿ ನಿರಾಕರಿಸಿದರೆ 25,000 ರೂಪಾಯಿ ದಂಡ; ಸರ್ಕಾರದ ಖಡಕ್ ಎಚ್ಚರಿಕೆ
ಹಿರೇಬಾಗೇವಾಡಿಯಲ್ಲಿ ಕರವೇ ಪ್ರತಿಭಟನೆ
ಗಡಿ ವಿಚಾರವಾಗಿ ಮಹಾರಾಷ್ಟ್ರದ ನಿಲುವು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಹಲವು ಕಾರ್ಯಕರ್ತರಿಗೆ ಬೆಳಗಾವಿ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸರ ನಡೆ ವಿರುದ್ಧ ಕರವೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಕಾರು, ಜೀಪ್ ಸೇರಿದಂತೆ 110 ವಾಹನಗಳಲ್ಲಿ 400ಕ್ಕೂ ಹೆಚ್ಚು ಕಾರ್ಯಕರ್ತರು ಬೆಳಗಾವಿ ಕಡೆಗೆ ಬರುತ್ತಿದ್ದರು. ಈ ವೇಳೆ ಪೊಲೀಸರು ಹಿರೇಬಾಗೇವಾಡಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ತಡೆದು ಪ್ರತಿಭಟನೆ ನಡೆಸಿದರು.
ಒಕ್ಕೂಟ ವ್ಯವಸ್ಥೆ ಕಪ್ಪುಚುಕ್ಕೆ ತಂದ ದ್ರೋಹಿಗಳು
ಗಡಿ ವಿವಾದವನ್ನು ಸುಪ್ರೀಂ ಕೋರ್ಟಿಗೆ ತೆಗೆದುಕೊಂಡು ಹೋಗಿದ್ದೇ ಮಹಾರಾಷ್ಟ್ರ. ಅಲ್ಲಿ ನಿರ್ಧಾರವಾಗುವವರೆಗೆ ಬಾಯಿ ಮುಚ್ಚಿಕೊಂಡು, ಬಾಲ ಮುದುರಿಕೊಂಡು ಇರಬೇಕು. ಅದನ್ನು ಬಿಟ್ಟು ಮಹಾರಾಷ್ಟ್ರದ ಹೇಡಿ ಸಚಿವರು ಬೆಳಗಾವಿಗೆ ಬರುವ ಧಮ್ಕಿ ಹಾಕುತ್ತಾರೆ. ಒಕ್ಕೂಟ ವ್ಯವಸ್ಥೆ ಕಪ್ಪುಚುಕ್ಕೆ ತಂದ ದ್ರೋಹಿಗಳು ಎಂದು ನಾರಾಯಣಗೌಡರು ಆಗ್ರಹಿಸಿದ್ದರು.
ಇದನ್ನೂ ಓದಿ: Untouchability: ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಖಾಲಿ; ಗೋಮೂತ್ರದಿಂದ ಶುದ್ಧಿ!
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ಹೆಚ್ಚಾಗಿದೆ. ರಾಣಿ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಧ್ವಜಗಳನ್ನು ಹಾರಿಸಿ ಅವರಿಗೆ ತಕ್ಕ ಉತ್ತರ ಕೊಡಲು ಹೊರಟಿದ್ದೇವೆ ಎಂದು ಆಕ್ರೋಶ ಹೊರ ಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ