ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರಕಟ ; ಉತ್ತರ ಕನ್ನಡದ ಆರತಿ, ರಾಯಚೂರಿನ ವೆಂಕಟೇಶ್ ಆಯ್ಕೆ

ಉತ್ತರ ಕನ್ನಡ ಜಿಲ್ಲೆಯ 9 ವರ್ಷದ ಆರತಿ ಕಿರಣ್ ಶೇಟ್ ಮತ್ತು ರಾಯಚೂರಿನ 11 ವರ್ಷದ ವೆಂಕಟೇಶ್​ಗೆ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದವರು.

ಶೌರ್ಯ ಪ್ರಶಸ್ತಿ ಪಡೆದ ರಾಯಚೂರಿನ ವೆಂಕಟೇಶ್ ಹಾಗೂ ಉತ್ತರ ಕನ್ನಡದ ಆರತಿ

ಶೌರ್ಯ ಪ್ರಶಸ್ತಿ ಪಡೆದ ರಾಯಚೂರಿನ ವೆಂಕಟೇಶ್ ಹಾಗೂ ಉತ್ತರ ಕನ್ನಡದ ಆರತಿ

  • Share this:
ನವದೆಹಲಿ(ಜ.21) : ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನುಕೇಂದ್ರ ಸರ್ಕಾರ ಪ್ರಕಟ ಮಾಡಿದೆ. ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 9 ವರ್ಷದ ಆರತಿ ಕಿರಣ್ ಶೇಟ್ ಮತ್ತು ರಾಯಚೂರಿನ 11 ವರ್ಷದ ವೆಂಕಟೇಶ್​ಗೆ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದವರು.

ಉತ್ತರ ಕನ್ನಡ ಜಿಲ್ಲೆಯ ಆರತಿ ಶೇಟ್

2018 ಫೆ.13 ರಂದು ಬೆಳಗ್ಗೆ ಪುಟ್ಟ ತಮ್ಮನೊಂದಿಗೆ ಹೊನ್ನಾವರದ ನವಿಲಗೋಣದಲ್ಲಿರುವ ತನ್ನ ಮನೆಯ ಮುಂದೆ ಚಿಕ್ಕ ತಮ್ಮನನ್ನು ಸೈಕಲ್ ನಲ್ಲಿ ಕುಳ್ಳಿರಿಸಿ ಆಟವಾಡುತಿದ್ದಳು.ಈ ವೇಳೆ ಇವರ ಮನೆಯಲ್ಲೇ ಸಾಕಿದ್ದ ಹಸುವು ಏಕಾ ಏಕಿ ಮೈಮೇಲೆ ಎಗರಿ ಬಂದಿತ್ತು. ಈ ವೇಳೆ ಅಂಜದೇ ಈ ಪುಟ್ಟ ಬಾಲಕಿ ತಮ್ಮನನ್ನು ಹಸುವಿನಿಂದ ರಕ್ಷಿಸಿದ್ದಳು. ಈ ಕುರಿತು ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿ ರಾಜ್ಯದಾದ್ಯಂತ ಈಕೆ ರಕ್ಷಣೆ ಮಾಡಿದ ವಿಡಿಯೋ ವೈರಲ್ ಆಗುವ ಮೂಲಕ ರಾಜ್ಯದ ಜನರು ಮೆಚ್ವುಗೆ ವ್ಯಕ್ತಪಡಿಸಿದ್ದರು. ನಂತರ 2019 ರಲ್ಲಿ ಕೇಂದ್ರ ಮಕ್ಕಳ ಕಲ್ಯಾಣ ಇಲಾಖೆ ಕೊಡುವ ಶೌರ್ಯ ಪ್ರಶಸ್ತಿ ಸಹ ಈಕೆಗೆ ನೀಡಲಾಗಿತ್ತು.

ಈಗ ರಾಷ್ಟ್ರಮಟ್ಟದಲ್ಲಿ ಈಕೆಯ ಎದೆಗಾರಿಕೆಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ದೊರೆತಿದೆ.
ಈ ಪುಟ್ಟ ಬಾಲಕಿ ನವಿಲಗೋಣದ ಕಿರಣ್ ಪಾಂಡುರಂಗ ಶೇಟ್ ಪುತ್ರಿಯಾಗಿದ್ದು ಇಡೀ ರಾಜ್ಯಕ್ಕೆ ಹೆಸರು ತರುವ ಜೊತೆ ಜಿಲ್ಲೆಗೂ ಹೆಸರು ತಂದಿರುವುದು ಹೆಮ್ಮೆಯ ವಿಷಯವಾಗಿದೆ.

ರಾಯಚೂರು ಜಿಲ್ಲೆಯ ವೆಂಕಟೇಶ್ 

ಜೀವದ ಹಂಗು ತೊರೆದು ಪ್ರವಾಹ ಮಧ್ಯೆ ಅಂಬುಲೆನ್ಸ್ ಗೆ ದಾರಿ ತೋರಿದ ಬಾಲಕನಿಗೆ ಈಗ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರಕಟವಾಗಿದೆ, ರಾಯಚೂರು ಜಿಲ್ಲೆಯ ದೇವದುರ್ಗಾ ತಾಲೂಕಿನ ಹಿರೇರಾಯನ ಕುಂಪಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೆಯ ತರಗತಿ ಓದುತ್ತಿರುವ  ವೆಂಕಟೇಶ್​​, 2019ರ ಆಗಷ್ಟ 10 ರಂದು ಕೃಷ್ಣಾ ನದಿಯಲ್ಲಿ ಭಾರಿ ಪ್ರವಾಹ ಬಂದಿತ್ತು, ಈ ಸಂದರ್ಭದಲ್ಲಿ ಹಿರೇರಾಯನಕುಂಪಿ ಹಾಗು ಗೂಗಲ್ ಮಧ್ಯೆದಲ್ಲಿ ನದಿಯು ತುಂಬಿ ಹರಿಯುತ್ತಿತ್ತು,

ಇದೇ ಸಂದರ್ಭದಲ್ಲಿ ಅಂಬುಲೆನ್ಸ್ ಒಂದು ಬರುತ್ತಿತ್ತು, ಆಗ ನದಿಯ ಪ್ರವಾಹ ದಾಟಿಕೊಂಡು ಹೋಗುವುದು ಕಷ್ಟವಾಗಿತ್ತು, ಈ ಸಂದರ್ಭದಲ್ಲಿ ವೆಂಕಟೇಶ್ ಅಂಬುಲೆನ್ಸ್ ಮುಂದೆ ಮುಂದೆ ದಾರಿ ತೋರುತ್ತಾ ಸಾಗಿ ಅಂಬುಲೆನ್ಸ್ ಗೆ ದಾರಿ ತೋರಿಸಿದ್ದ, ಈ ಬಾಲಕನ ಸಾಹಸಕ್ಕೆ ಆಗ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು, ಇದೇ ಬಾಲಕನಿಗೆ ರಾಯಚೂರು ಜಿಲ್ಲಾಡಳಿತ, ಕೇರಳದ ಸ್ವಯಂಸೇವಾ ಸಂಸ್ಥೆ ಸೇರಿದಂತೆ ರಾಜ್ಯದ ಹಲವು ಕಡೆ ಸನ್ಮಾನಿಸಿದ್ದರು. ಈಗ ಕೇಂದ್ರ ಸರಕಾರ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಿದೆ, ಈ ಪ್ರಶಸ್ತಿ ಪಡೆದ ರಾಯಚೂರು ಜಿಲ್ಲೆಯ ಮೊದಲು ಬಾಲಕ ಎನ್ನಲಾಗುತ್ತದೆ.

ಇದನ್ನೂ ಓದಿ : ಮಹಾರಾಷ್ಟ್ರ ಮಾದರಿಯಲ್ಲೇ ಕರ್ನಾಟಕದಲ್ಲೂ ಸ್ಥಾನ ಹಂಚಿಕೆಯಾಗಲಿ - ಸಿದ್ದರಾಮಯ್ಯಗೆ ಹೆಚ್.ಕೆ. ಪಾಟೀಲ್ ಪರೋಕ್ಷ ತಿರುಗೇಟು

ಪ್ರತಿ ಪ್ರಶಸ್ತಿಯು ಪ್ರಶಸ್ತಿ ಪದಕ, 1,00,000 ರೂ. ನಗದು, 10,000 ರೂ. ಮಲ್ಯದ ಬುಕ್ ವೋಚರ್, ಪ್ರಮಾಣ ಪತ್ರ ಹೊಂದಿರಲಿದೆ.

ಒಟ್ಟು 22 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಘೋಷಿಸಿದ್ದು, ರಾಜ್ಯದ ವೆಂಕಟೇಶ್​ ಮತ್ತು ಆರತಿ ಇಬ್ಬರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಜನವರಿ 26ರಂದು ರಾಜ​ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​ನಲ್ಲಿ ಭಾಗಿಯಾಗಲಿರುವ ಈ ಇಬ್ಬರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
First published: