ಮೋಟಾರು ಕಾಯ್ದೆ ವಿಷಯದಲ್ಲಿ ನಮ್ಮದೇನು ಇಲ್ಲ, ಎಲ್ಲಾ ಕೇಂದ್ರದ್ದೆ; ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ

ಯಾವುದೇ ಸಂಸ್ಥೆಗಳು ಬಂದ್ ಮಾಡದ ರೀತಿ ಕೇಂದ್ರ ಸರ್ಕಾರ ಕ್ರಮ ‌ಕೈಗೊಳ್ಳಬೇಕು. ಅವಾಗ ಮಾತ್ರ ನಾವು ‌ಏನಾದರೂ ಮಾಡಬಹುದು, ಇಲ್ಲ ಅಂದರೆ ‌ನಾವೇನು ಮಾಡೋಕೆ‌ ಆಗುವುದಿಲ್ಲ ಎಂದ ಅವರು, ಮೋಟಾರು ಕಾಯ್ದೆ ವಿಷಯದಲ್ಲಿ ನಮ್ಮದೇನು ಇಲ್ಲ, ಎಲ್ಲಾ ಕೇಂದ್ರದ್ದೆ ಎಂದು ಕೈ ತೊಳೆದುಕೊಂಡರು.

Latha CG | news18india
Updated:January 8, 2019, 1:13 PM IST
ಮೋಟಾರು ಕಾಯ್ದೆ ವಿಷಯದಲ್ಲಿ ನಮ್ಮದೇನು ಇಲ್ಲ, ಎಲ್ಲಾ ಕೇಂದ್ರದ್ದೆ; ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
ಸಚಿವ ತಮ್ಮಣ್ಣ
Latha CG | news18india
Updated: January 8, 2019, 1:13 PM IST
ಬೆಂಗಳೂರು,(ಜ.08): ಮೋಟಾರು ಕಾಯ್ದೆ ವಿಷಯದಲ್ಲಿ ನಮ್ಮದೇನು ಇಲ್ಲ, ಎಲ್ಲಾ ಕೇಂದ್ರದ್ದೆಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ಧಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲ ಕಾರ್ಮಿಕ ಇಲಾಖೆಗಳು, ಕಟ್ಟಡ ಕಾರ್ಮಿಕರಿಗೂ ವಿರೋಧ ಇದೆ. ಇದೀಗ ಎಲ್ಲಾ ಕಾರ್ಮಿಕರು ಇಂದು ಬಂದ್ ‌ಮಾಡುತ್ತಿದ್ದಾರೆ. ಇಂತಹ ವಿಷಯದಲ್ಲಿ ಕೇಂದ್ರ ಸರ್ಕಾರ ಒಂದು ನೀತಿ ಮಾಡಬೇಕು ಎಂದರು.

ಯಾವುದೇ ಸಂಸ್ಥೆಗಳು ಬಂದ್ ಮಾಡದ ರೀತಿ ಕೇಂದ್ರ ಸರ್ಕಾರ ಕ್ರಮ ‌ಕೈಗೊಳ್ಳಬೇಕು. ಅವಾಗ ಮಾತ್ರ ನಾವು ‌ಏನಾದರೂ ಮಾಡಬಹುದು, ಇಲ್ಲ ಅಂದರೆ ‌ನಾವೇನು ಮಾಡೋಕೆ‌ ಆಗುವುದಿಲ್ಲ ಎಂದ ಅವರು, ಮೋಟಾರು ಕಾಯ್ದೆ ವಿಷಯದಲ್ಲಿ ನಮ್ಮದೇನು ಇಲ್ಲ, ಎಲ್ಲಾ ಕೇಂದ್ರದ್ದೆ ಎಂದು ಕೈ ತೊಳೆದುಕೊಂಡರು.

ಇದನ್ನೂ ಓದಿ: ಭಾರತ್​ ಬಂದ್​: ಮನೆಯಿಂದ ಹೊರಬರುವ ಮೊದಲು ಏನಿದೆ, ಏನಿಲ್ಲ ಎಂಬುದನ್ನೊಮ್ಮೆ ಓದಿಬಿಡಿ

ಬೆಂಬಲ ಸೂಚಿಸಿಲ್ಲ:

ನಾವೇನೂ ಈ ಬಂದ್​ಗೆ ಬೆಂಬಲ ಸೂಚಿಸಿಲ್ಲ. ಆದರೆ ನಮ್ಮ ಸಾರಿಗೆ ನೌಕರರ ಸಮಸ್ಯೆಯಿದು. ಹೀಗಾಗಿ ಅವರ ಇಚ್ಛೆಗೆ ವಿರುದ್ಧವಾಗಿ ಹೋಗಲ್ಲ. ಇಂದು, ನಾಳೆ ಭಾರತ್ ಬಂದ್ ಹಿನ್ನೆಲೆ ಸಾರಿಗೆ ವ್ಯವಸ್ಥೆ ತಾತ್ಕಾಲಿಕ ಬಂದ್​ ಆಗಿದೆ. ಜನಸಾಮಾನ್ಯರಿಗೆ ಬಂದ್ ಆಗಬಾರದು. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಬಸ್​ ಸಂಚಾರ ಆರಂಭ ಮಾಡುತ್ತೇವೆ. ಇಂದು ಮಧ್ಯಾಹ್ನ ಅಥವಾ ನಾಳೆ ತೀರ್ಮಾನ ಮಾಡುತ್ತೇವೆ ಎಂದರು.

ಪರಿಸ್ಥಿತಿ ನೋಡಿ ಬಸ್​ ಸಂಚಾರ ಆರಂಭ:
Loading...

ಎಲ್ಲೋ ನಿಂತು ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸುವರೆಗೂ ಅಧಿಕಾರಿಗಳು ಏನು ಮಾಡೋಕೆ ಆಗುವುದಿಲ್ಲ. ಸರ್ಕಾರ ಕೂಡ ಏನು ಮಾಡುವುದಕ್ಕೆ ಆಗುವುದಿಲ್ಲ.ಇದೆಲ್ಲಾ ಸರ್ವೇಸಾಮಾನ್ಯ. ಆದರೆ ಇಂತಹ ‌ಸಂದರ್ಭದಲ್ಲಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡ್ತಿದ್ದೇವೆ. ಜನ ಸಾಮಾನ್ಯರಿಗೆ ತೊಂದರೆ ಆಗದ ರೀತಿ ಸಾರಿಗೆ ಇಲಾಖೆ ಕ್ರಮ ವಹಿಸಿದೆ. ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರ ಆರಂಭಿಸುವ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ. ಜನರ ಸಮಸ್ಯೆಗಳನ್ನು ‌ನಮ್ಮ ನೌಕರರು ಅರಿತಿದ್ದಾರೆ. ಹೀಗಾಗಿ ಅವರು ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದರು.

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ