Text Book Row: ಸಮಿತಿ ನೇಮಕ ಮಾಡುವಾಗಲೇ ಸರ್ಕಾರ ಎಡವಿದೆ: ಕರವೇ ನಾರಾಯಣಗೌಡರು

ಸರ್ಕಾರ ಕೂಡಲೇ ಸಮಿತಿಯ ಎಲ್ಲ ಪರಿಷ್ಕರಣೆಯನ್ನೂ ತಿರಸ್ಕರಿಸಬೇಕು. ಈಗಾಗಲೇ ಮುದ್ರಿಸಿರುವ ಹಳೆಯ ಪಠ್ಯಪುಸ್ತಕಗಳನ್ನೇ ಶಾಲೆಗಳಿಗೆ ನೀಡಬೇಕು.

ನಾರಾಯಣ ಗೌಡರು

ನಾರಾಯಣ ಗೌಡರು

  • Share this:
ರಾಜ್ಯದಲ್ಲಿ ಪಠ್ಯಕ್ರಮ (State Syllabus) ಬದಲಾವಣೆ ಬಗ್ಗೆ ವಿವಾದ ಸೃಷ್ಟಿಸಿಯಾಗಿದ್ದು, ಬಿಜೆಪಿ ಸರ್ಕಾರದ (BJP Government) ವಿರುದ್ಧ ವಿಪಕ್ಷಗಳು, ಎಡಪಂಥೀಯರು ಮತ್ತು ಬುದ್ಧಿಜೀವಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಕರ್ನಾಟಕದ, ಕನ್ನಡದ ಕೀರ್ತಿ ಶಿಖರಗಳಲ್ಲಿ ಒಬ್ಬರಾದ ಮೇರುಸಾಹಿತಿ ದೇವನೂರು ಮಹಾದೇವ (Devanuru Mahadeva) ಅವರು ಹತ್ತನೇ ತರಗತಿಯ ಪಠ್ಯಕ್ಕೆ ನೀಡಿದ್ದ 'ಎದೆಗೆ ಬಿದ್ದ ಅಕ್ಷರ' ಲೇಖನ (Article) ಹಿಂದಕ್ಕೆ ಪಡೆದಿರುವುದನ್ನು ಕೇಳಿ ಆಘಾತವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು (CM Basavaraj Bommai) ಕ್ಷಣಕಾಲವೂ ತಡಮಾಡದೆ ಮಧ್ಯೆ ಪ್ರವೇಶಿಸಿ ಬಿಕ್ಕಟ್ಟನ್ನು‌ ಬಗೆಹರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರು (Karve Narayanagowda) ಆಗ್ರಹಿಸಿದ್ದಾರೆ. ತಮ್ಮ ಪಠ್ಯವನ್ನು ಹಿಂದಕ್ಕೆ ಪಡೆದ ಘಟನೆ ಕರ್ನಾಟಕದ (Karnataka) ಇತಿಹಾಸದಲ್ಲಿ ಮೊದಲ ಬಾರಿ ಘಟಿಸಿದೆ. ಕರ್ನಾಟಕ ಸರ್ಕಾರಕ್ಕೆ ಇದು ಶೋಭೆ ತರುವ ವಿಷಯವಲ್ಲ‌ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಇಂಥ ನಿರ್ಧಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ದೇವನೂರು ಅವರು ಅನುಭವಿಸಿರುವ ಮಾನಸಿಕ ಯಾತನೆಯನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ಇದು ನಾಡಿನ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದಿದ್ದಾರೆ.

ಸಮಿತಿ ನೇಮಕ ಮಾಡುವಾಗಲೇ ಸರ್ಕಾರ ಎಡವಿದೆ

ಪಠ್ಯಪುಸ್ತಕ ಪುನರ್ ಪರಿಶೀಲನೆಗಾಗಿ ಸಮಿತಿ ನೇಮಕ ಮಾಡಿದಾಗಲೇ ಸರ್ಕಾರ ಎಡವಿದೆ. ಸಮಿತಿಗೆ ನೇಮಕ ಮಾಡಲು ಬಲಪಂಥೀಯ ವಿದ್ವಾಂಸರು, ಶಿಕ್ಷಣ ತಜ್ಞರೇ ಬೇಕು ಎಂದಿದ್ದರೆ ಹಲವಾರು ಮಂದಿ ಸಜ್ಜನರು, ಎದೆಯಲ್ಲಿ ನಂಜು ಇಟ್ಟುಕೊಳ್ಳದೆ ಕಾರ್ಯ ನಿರ್ವಹಿಸುವವರು ಲಭ್ಯವಿದ್ದರು. ಆದರೆ ಸರ್ಕಾರ ಇಂಥವರನ್ನು ನೇಮಕ ಮಾಡದೆ ತಪ್ಪೆಸಗಿದೆ.

ಇದನ್ನೂ ಓದಿ:  Congress ಇಟಾಲಿಯನ್ ಶಿಕ್ಷಣ ನೀತಿ ತಂದ್ರೆ ಅದನ್ನ ನಾಗ್ಪುರ ನೀತಿಯಾಗಿ ಬದಲಿಸುತ್ತೇವೆ: BC Nagesh

ಶಿಕ್ಷಣ ತಜ್ಞನಲ್ಲದ, ಕನ್ನಡ ಸಾಹಿತಿಗಳ ಕುರಿತು ಅಗೌರವ ಹೊಂದಿರುವ, ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ ಲೇಖನ ಬರೆದ, ನಾಡಗೀತೆಯನ್ನು ಕೊಳಕಾಗಿ ಪರಿಷ್ಕರಿಸಿ ಬರೆದ, ನಮ್ಮ ಅಸ್ಮಿತೆಯ ಪ್ರತೀಕವಾದ ಕನ್ನಡ ಧ್ವಜವನ್ನು ತನ್ನ ಒಳಚೆಡ್ಡಿಗೆ ಹೋಲಿಸಿದ ವ್ಯಕ್ತಿಯನ್ನು ಸಮಿತಿಗೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದೇ ಮೊದಲ ತಪ್ಪು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಬುದ್ಧಿಜೀವಿ ವಲಯ ಧ್ವನಿ ಎತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ್ರೋಹದ ಕೆಲಸವನ್ನೇ ಮಾಡುತ್ತ ಬಂದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಶೀಲನೆಗೆ ಬಿಟ್ಟರೆ ಏನಾಗಬಹುದು ಎಂಬುದನ್ನು ಇಂದು ನಾವು ನೋಡುತ್ತಿದ್ದೇವೆ. ಕನ್ನಡದ ಸಾರಸ್ವತ ಲೋಕ ಎದ್ದು ನಿಂತು ಪ್ರತಿಭಟಿಸುತ್ತಿದೆ. ಮಕ್ಕಳ ಪಠ್ಯದಲ್ಲಿ ನಂಜು ತುಂಬುವ ಇಂಥವರ ವಿರುದ್ಧ ಶೈಕ್ಷಣಿಕ, ಬುದ್ಧಿಜೀವಿ ವಲಯ ಧ್ವನಿ ಎತ್ತಿದೆ.

ಈ ಸಮಿತಿಯನ್ನು ಈ ಕೂಡಲೇ ವಿಸರ್ಜಿಸಿ

ಸರ್ಕಾರ ಕೂಡಲೇ ಸಮಿತಿಯ ಎಲ್ಲ ಪರಿಷ್ಕರಣೆಯನ್ನೂ ತಿರಸ್ಕರಿಸಬೇಕು. ಈಗಾಗಲೇ ಮುದ್ರಿಸಿರುವ ಹಳೆಯ ಪಠ್ಯಪುಸ್ತಕಗಳನ್ನೇ ಶಾಲೆಗಳಿಗೆ ನೀಡಬೇಕು. ಶಾಲೆಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಕೂಡಲೇ ಹಳೆಯ ಪಠ್ಯ ಪುಸ್ತಕಗಳನ್ನೇ ಒದಗಿಸಬೇಕು. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾದ ಸಮಿತಿಯನ್ನು ಈ ಕೂಡಲೇ ವಿಸರ್ಜಿಸಬೇಕು.

ಸಿಎಂ ನಾಯಕತ್ವ ಗುಣ ಪ್ರದರ್ಶಿಸಲಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರರು ಸಾಮಾಜಿಕ, ಸಾಂಸ್ಕೃತಿಕ ವಿಷಯಗಳಲ್ಲಿ ಎಚ್ಚರ‌ ಮತ್ತು ಪ್ರಜ್ಞೆ ಉಳ್ಳವರು. ಅವರು ಯಾವುದೇ ರೀತಿಯ ಬಾಹ್ಯ ಒತ್ತಡಕ್ಕೆ ಒಳಗಾಗದೆ ನಾಯಕತ್ವದ ಗುಣವನ್ನು ಪ್ರದರ್ಶಿಸಬೇಕು. ಕೂಡಲೇ ಮಧ್ಯಪ್ರವೇಶಿಸಿ ವಿವಾದವನ್ನು‌ ಬಗೆಹರಿಸಬೇಕು ಎಂದು ಮನವಿ ಮಾಡುತ್ತೇನೆ.

ಇದನ್ನೂ ಓದಿ: Twitter Campaign: ಪರಿಷ್ಕೃತ ಶಾಲಾ ಪಠ್ಯ-ಪುಸ್ತಕ ವಿರೋಧಿಸಿ ಟ್ವಿಟರ್‌ನಲ್ಲಿ ಇಂದು ಸಂಜೆ ಅಭಿಯಾನ

ಕನ್ನಡತನದ ಪ್ರತೀಕ, ಕನ್ನಡಿಗರ ಹೆಮ್ಮೆ.

ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಕನ್ನಡದ ಹಿರಿಯ ಸಾಹಿತಿಗಳು ಕನ್ನಡದ ಆಸ್ತಿ, ಕನ್ನಡತನದ ಪ್ರತೀಕ, ಕನ್ನಡಿಗರ ಹೆಮ್ಮೆ. ಅವರಿಗೆ ಅಪಚಾರ, ಅಪಮಾನ ಎಸಗುವ ಯಾವ ಕೆಲಸವನ್ನೂ ಯಾರೂ ಮಾಡಬಾರದು. ಕರ್ನಾಟಕ ರಕ್ಷಣಾ‌ ವೇದಿಕೆ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
Published by:Mahmadrafik K
First published: