• Home
  • »
  • News
  • »
  • state
  • »
  • S P Balasubrahmanyam: ಎಸ್​ ಪಿ ಬಾಲಸುಬ್ರಹ್ಮಣ್ಯಂ ನಿಧನ; ರಾಜ್ಯಾದ್ಯಾಂತ ಇಂದು ಶೋಕಾಚರಣೆ

S P Balasubrahmanyam: ಎಸ್​ ಪಿ ಬಾಲಸುಬ್ರಹ್ಮಣ್ಯಂ ನಿಧನ; ರಾಜ್ಯಾದ್ಯಾಂತ ಇಂದು ಶೋಕಾಚರಣೆ

ಎಸ್​ಪಿ ಬಾಲಸುಬ್ರಹ್ಮಣ್ಯಂ

ಎಸ್​ಪಿ ಬಾಲಸುಬ್ರಹ್ಮಣ್ಯಂ

ಕನ್ನಡದಲ್ಲಿ ಅತಿ ಹೆಚ್ಚು ಹಾಡು ಹಾಡಿದ ಖ್ಯಾತಿ ಹೊಂದಿರುವ ಬಾಲಸುಬ್ರಹ್ಮಣ್ಯಂ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಈ ಹಿನ್ನಲೆ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ ಇಂದು ರಾಜ್ಯಾದ್ಯಾಂತ ಶೋಕಾಚರಣೆ ಘೋಷಿಸಿದೆ.

  • Share this:

ಬೆಂಗಳೂರು (ಸೆ.25): ಖ್ಯಾತ ಗಾಯಕ ಎಸ್​ಪಿ ಬಾಲಸುಬ್ರಹ್ಮಣ್ಯಂ ಇಂದು ನಿಧನರಾಗಿದ್ದು, ಅವರ ಸಾವಿಗೆ ಇಡೀ ದೇಶ ಕಂಬನಿ ಮಿಡಿದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಅನೇಕ ರಾಜಕೀಯ ನಾಯಕರು, ಚಿತ್ರರಂಗದ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.  ಅವರ ನಿಧನಕ್ಕೆ ಇಂದು ರಾಜ್ಯಾದ್ಯಾಂತ ಶೋಕಾಚರಣೆ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.   ಕನ್ನಡದಲ್ಲಿ ಅತಿ ಹೆಚ್ಚು ಹಾಡು ಹಾಡಿದ ಖ್ಯಾತಿ ಹೊಂದಿರುವ ಬಾಲಸುಬ್ರಹ್ಮಣ್ಯಂ ಕರ್ನಾಟಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಈ ಹಿನ್ನಲೆ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ ಇಂದು ರಾಜ್ಯಾದ್ಯಾಂತ ಶೋಕಾಚರಣೆ ಘೋಷಿಸಿದೆ. ಎಲ್ಲಾ ಸಭೆ, ಸಮಾರಂಭ, ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಸರ್ಕಾರದ ಎಲ್ಲಾ ಕಟ್ಟಡದ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಲು ಸೂಚಿಸಿದೆ. 
ಕಳೆದ ಒಂದೂವರೆ ತಿಂಗಳಿನಿಂದ ಶ್ವಾಸಕೋಶದ ಸಮಸ್ಯೆ ಅನುಭವಿಸುತ್ತಿದ್ದ ಎಸ್​ಪಿ ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ 1.04ಕ್ಕೆ ಕೊನೆಯುಸಿರೆಳೆದಿದ್ದರು. ಅವರ ಅಂತಿಮ ಕ್ರಿಯೆ ಚೆನ್ನೈನ ಅವರ ತೋಟದ ಮನೆ ರೆಡ್​ಹಿಲ್ಸ್​ನಲ್ಲಿ ನಡೆಯಲಿದೆ. ಈಗಾಗಲೇ ಅವರ ಅಂತಿಮ ವಿಧಿ ವಿಧಾನ ಕಾರ್ಯ ಜರುಗುತ್ತಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಅಂತ್ಯ ಸಂಸ್ಕಾರ ಕ್ರಿಯೆ ನಡೆಯಲಿದೆ.


ತಮ್ಮ ನೆಚ್ಚಿನ ಗಾಯನ ಅಗಲಿಕೆಗೆ ಈಗಾಗಲೇ ಹಲವರು ಕಂಬನಿ ಮಿಡಿದಿದ್ದಾರೆ.ಕಳೆದ 50 ವರ್ಷಗಳಿಂದ 16 ಭಾಷೆಗಳಲ್ಲಿ 40 ಸಾವಿರ ಹಾಡುಗಳನ್ನು ಹಾಡಿದ ಕೀರ್ತಿ ಅವರು ಹೊಂದಿದ್ದಾರೆ.


ಇದನ್ನು ಓದಿ: S P Balasubrahmanyam: 16 ಭಾಷೆಗಳಲ್ಲಿ ಹಾಡಿರುವ ಗಾನ ದಿಗ್ಗಜ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ


ಎಸ್​ಪಿಬಿ ನಾಲ್ಕು ಭಾಷೆಗಳಲ್ಲಿ 6 ರಾಷ್ಟ್ರ ಪ್ರಶಸ್ತಿ ಪಡೆದ ಕೆಲವೇ ಕೆಲವು ಗಾಯಕರಲ್ಲಿ ಒಬ್ಬರು. ತೆಲುಗಿನ ಸಾಗರ ಸಂಗಮಂ, ರುದ್ರವೀಣಾ ಹಾಗೂ ಶಂಕರಾಭರಣಂ, ತಮಿಳಿನ ಮಿನ್ಸಾರೆ ಕನವು, ಕನ್ನಡದ ಸಂಗೀತ ಸಾಗರ ಪಂಚಾಕ್ಷರಿ ಗವಾಯಿ ಸಿನಿಮಾಗಳಿಗೆ ಒಟ್ಟು 6 ರಾಷ್ಟ್ರೀಯ ಪ್ರಶಸ್ತರಿ ಪಡೆದಿದ್ದಾರೆ. ಉಳಿದಂತೆ ಬಾಲಿವುಡ್​ನ ಫಿಲ್ಮ್​ಫೇರ್ ಪ್ರಶಸ್ತಿ, 25 ನಂದಿ ಅವಾರ್ಡ್​, ಪದ್ಮಶ್ರೀ (2001), ಪದ್ಮಭೂಷಣ(2011) ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

Published by:Seema R
First published: