Mandya: Halal Cut - Jatka Cut ನಡುವೆ ಗುಡ್ಡೆ ಕಟ್, ಮಂಡ್ಯದಲ್ಲಿ ಗುಡ್ಡೆ ಕಟ್ದೆ ಹವಾ

ಮಂಡ್ಯ ಜನ ಮಾತ್ರ ಇದಕ್ಕೆ ಸ್ವಲ್ಪ ಡಿಫರೆಂಟ್ ಆಗಿ ಯೋಚನೆ ಮಾಡ್ತಿದ್ದು, ನಮಗೆ ಗುಡ್ಡಿ ಬಾಡು ಬೇಕು ಅಂತಿದ್ದಾರೆ. ಏನಿದು ಗುಡ್ಡೆ ಬಾಡು ಅಂತೀರಾ..? ಇದ್ರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಗುಡ್ಡೆ ಕಟ್ ಮಾಂಸ

ಗುಡ್ಡೆ ಕಟ್ ಮಾಂಸ

  • Share this:
ಮಂಡ್ಯ  (ಏಪ್ರಿಲ್ 2):  ಹಿಜಾಬ್ ವಿವಾದದ (Hijab Controversy) ಗದ್ದಲ ಇನ್ನೂ ಮುಗಿದಿಲ್ಲ, ಅಷ್ಟರಲ್ಲೇ ಹಲಾಲ್ ಕಟ್ (Halal Cut) ಮಾಂಸಕ್ಕೆ (Meat) ಸಂಬಂಧಿಸಿದಂತೆ ಹೊಸ ವಿವಾದ ಹುಟ್ಟಿಕೊಂಡಿದೆ. ರಾಜ್ಯದಲ್ಲಿ ದಿನೆ ದಿನೆ ಹಲಾಲ್ ಕಟ್ ಹಾಗೂ ಜಟ್ಕ ಕಟ್ ನಡುವೆ ಪೈಪೋಟಿ ಎಚ್ಚಾಗುತ್ತಿದೆ. ಒಂದು ವರ್ಗ ಹಲಾಲ್ ಕಟ್ ಬೇಕು ಅಂದರೆ ಮತ್ತೊಂದು ವರ್ಗ ಜಟ್ಕ ಕಟ್ ಬೇಕು ಅಂತಿದ್ದಾರೆ. ಆದರೆ ಇದರ ನಡುವೆ ಮಂಡ್ಯ ಜನ ಮಾತ್ರ ಇದಕ್ಕೆ ಸ್ವಲ್ಪ ಡಿಫರೆಂಟ್ ಆಗಿ ಯೋಚನೆ ಮಾಡ್ತಿದ್ದು, ನಮಗೆ ಗುಡ್ಡಿ ಬಾಡು ಬೇಕು ಅಂತಿದ್ದಾರೆ. ಏನಿದು ಗುಡ್ಡೆ ಬಾಡು ಅಂತೀರಾ..? ಇದ್ರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಹಲಾಲ್ ಮತ್ತು ಜಟ್ಕ್ ನಡುವೆ ಗುಡ್ಡೆ ಬಾಡು ಸದ್ದು:

ಹೌದು, ರಾಜ್ಯದಲ್ಲಿ ಒಂದು ವರ್ಗ ಹಲಾಲ್ ಕಟ್ ಮಾಡೋದು ಒಳ್ಳೆಯದು. ಹಲಾಲ್ ಕಟ್ ಮಾಡಿದ ಮಾಂಸವನ್ನ ತಿನ್ನೊದ್ರಿಂದ ದೇಹದ ಮೇಲೆ ಯಾವುದೇ ದುಷ್ಪರಿಣಾಮ ಬೀರಲ್ಲ. ಇದು ಸೈಂಟಿಫಿಕ್ ಆಗಿ ಪ್ರೂ ಆಗಿದೆ. ಹಿಗಾಗಿ ಹಲಾಲ್ ಕಟ್ ಮಾಡಿದ ಮಾಂಸವನ್ನೆ ತಿನ್ನಿ ಅಂತಿದ್ದಾರೆ.

ಆದರೆ ಇದಕ್ಕೆ ವಿರುದ್ದವಾಗಿ ಮತ್ತೊಂದು ವರ್ಗ ಜಟ್ಕ ಕಟ್ ಅಭಿಯಾನವನ್ನ ಆರಂಭಿಸಿವೆ. ಹಲಾಲ್ ಕಟ್ ನಿಂದ ಆರೋಗ್ಯ ಹದಗೆಡಲಿದೆ. ಹಿಗಾಗಿ ಜಟ್ಕ ಕಟ್ ಮಾಡಿದ ಮಾಂಸವನ್ನ ಖರೀದಿಸಿ ತಿನ್ನಿ ಅಂತ ಜನರಿಗೆ ಮನವಿ ಮಾಡುತ್ತಿದ್ದಾರೆ. ಆದರೆ ಇವೆರಡರ ನಡುವೆ ಮಂಡ್ಯ ಜನರು ಮಾತ್ರ ನಮಗೆ ಗುಡ್ಡೆ ಬಾಡು ಬೇಕು ಅಂತಿದ್ದಾರೆ.

ಇದನ್ನೂ ಓದಿ: "Halal Cut ಆಗಲಿ, Jatka Cut ಆಗಿರಲಿ ಮಾಂಸ ರೆಡಿ ಮಾಡುವಾಗ ಹೀಗೇ ಇರಲಿ!" ಪಶುಸಂಗೋಪನಾ ಇಲಾಖೆಗೆ ಪತ್ರ!

ಹಲಾಲ್, ಜಟ್ಕಾ ಔಟ್, ಮಂಡ್ಯದಲ್ಲಿ ಗುಡ್ಡೆ ಬಾಡು:

ಮಂಡ್ಯ ಜನರು ಹಲಾಲ್ ಕಟ್ ಹಾಗೂ ಜಟ್ಕ ಕಟ್ ಗೆ ಗೇಟ್ ಪಾಸ್ ನೀಡಿ, ಗುಡ್ಡೆ ಬಾಡು ಮೊರೆ ಹೋಗುತ್ತಿದ್ದಾರೆ. ಗುಡ್ಡೆ ಬಾಡು ಕೂಡ ಮಂಡ್ಯದಲ್ಲಿ ಫೆಮಸ್. ಯಾಕಂದ್ರೆ ಕಟ್ ಮಾಡಿದ ಮೇಕೆ ಅಥವಾ ಕುರಿಯ ಪ್ರತಿಯೊಂದು ಭಾಗ, ಅಂದರೆ ಪ್ರಾಣಿಯ ದೇಹದ ಪ್ರತಿಯೊಂದು ಭಾಗದ ಮಾಂಸವನ್ನ ಹದವಾಗಿ ಕಟ್ ಮಾಡಿ ಗುಡ್ಡೆ ಮಾಡಲಾಗತ್ತದೆ. ಹೀಗಾಗಿ ಇಂತ ಗುಡ್ಡೆ ಬಾಡು ಖರೀದಿ ಮಾಡಿ ಅದನ್ನ ಆಹಾರ ತಯಾರಿಸಿದರೆ ಅದು ಅತಿ ಹೆಚ್ಚು ರುಚಿ ನೀಡಲಿದೆ ಎಂದು ಮಂಡ್ಯ ಜನರು ಹೇಳುತ್ತಿದ್ದಾರೆ. ಹೀಗಾಗಿ ಹಲಾಲ್, ಜಟ್ಕ ನಡುವೆ ಮಂಡ್ಯ ಜನ ಗುಡ್ಡೆ ಬಾಡಿಗೆ ಜೈ ಅಂತಿದ್ದಾರೆ.

ಇದನ್ನೂ ಓದಿ: Ramanagara: ಹಿಜಾಬ್ ನಂತರ ಹಲಾಲ್ ಗದ್ದಲ, ಮಾಂಸದಲ್ಲೂ ಶುರುವಾಯ್ತು ಧರ್ಮದ ಭೇದ

ಮಂಡ್ಯದಲ್ಲಿ ಗುಡ್ಡೆ ಬಾಡು ಫೇಮಸ್:

ಇನ್ನು ಮಂಡ್ಯ ಜಿಲ್ಲೆಯಲ್ಲಿ ಹಿಂದಿನಿಂದಲೂ ಗುಡ್ಡೆ ಬಾಡು ಫೆಮಸ್ ಆಗಿದೆ. ಇಲ್ಲಿನ ಪ್ರತಿ ಹಳ್ಳಿಗಳಲ್ಲಿ ರೈತರೆ ಕುರಿ, ಮೇಕೆಗಳನ್ನ ಕಟ್ ಮಾಡುತ್ತಾರೆ. ನಂತರ ಸಂಪೂರ್ಣವಾಗಿ ಮಾಂಸವನ್ನ ಸಣ್ಣ ಸಣ್ಣ ಪೀಸ್ ಗಳನ್ನಾಗಿಸಿ ಗುಡ್ಡೆಗಳನ್ನ ಮಾಡುತ್ತಾರೆ. ಪ್ರತಿಯೊಂದು ಗುಡ್ಡೆಗು ದೇಹದ ಎಲ್ಲಾ ಭಾಗಗಳ ಪ್ರತಿಯೊಂದು ಮಾಂಸದ ಪೀಸ್ ಗಳನ್ನ ಹಾಕಲಾಗತ್ತದೆ. ಆದರೆ ಕುರಿ ಅಥವಾ ಮೇಕೆಯ ಚರ್ಮವನ್ನ ಮಾತ್ರ ಗ್ರಾಮಕ್ಕೆ ಬರುವ ಮುಸಲ್ಮಾನರೆ ಖರೀದಿಸುತ್ತಾರೆ. ಒಟ್ಟಾರೆ, ಹಲಾಲ್ ಕಟ್, ಜಟ್ಕ ಕಟ್ ನಡುವೆ ಮಂಡ್ಯ ಜನರು ಮಾತ್ರ ಗುಡ್ಡೆ ಕಟ್ ಅಂತಿರೋದು ಸದ್ಯ ಎಲ್ಲರ ಗಮನ ಸೆಳೆದಿದೆ.
Published by:shrikrishna bhat
First published: