• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Traffic Fines Discount: ಲ್ಯಾಪ್ಸ್​ ಆಗುತ್ತಾ 6 ತಿಂಗಳ ಟ್ರಾಫಿಕ್​ ದಂಡ? ಇಂದಿನ ಸಭೆಯಲ್ಲಿ ಸಿಗುತ್ತಾ ಗುಡ್​​​ನ್ಯೂಸ್​​?

Traffic Fines Discount: ಲ್ಯಾಪ್ಸ್​ ಆಗುತ್ತಾ 6 ತಿಂಗಳ ಟ್ರಾಫಿಕ್​ ದಂಡ? ಇಂದಿನ ಸಭೆಯಲ್ಲಿ ಸಿಗುತ್ತಾ ಗುಡ್​​​ನ್ಯೂಸ್​​?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟ್ರಾಫಿಕ್​ ಫೈನ್​ 6 ತಿಂಗಳ ಒಳಗೆ ಫೈನ್​ ಕಟ್ಟಿಲ್ಲ ಎಂದರೆ ಪೊಲೀಸರು ಎಫ್​ಐಆರ್ ದಾಖಲು ಮಾಡಿ ಹಾಕಿ ಕೋರ್ಟ್​ಗೆ ಚಾರ್ಜ್​ ಶೀಟ್ ಸಲ್ಲಿಸಬೇಕು. ಇಲ್ಲದಿದ್ದರೆ ದಂಡ ಆಟೋಮ್ಯಾಟಿಕ್​ ಲ್ಯಾಪ್ಸ್​ ಆಗುತ್ತೆ ಎನ್ನಲಾಗಿದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಟ್ರಾಫಿಕ್ ಫೈನ್ ಡಿಸ್ಕೌಂಟ್​ಗೆ (Traffic Fines Discount) ಭರ್ಜರಿ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಮನ್ನೊಂದಿಷ್ಟು ದಿನ ಸಮಯ ಕೊಡುವಂತೆ ಜನರು (People) ಅಹವಾಲುಗಳು ಸಲ್ಲಿಸಿದ್ದರು. ಇದೀಗ ಮತ್ತೆ 14 ದಿನ ಟೈಂ ಕೊಡಲಾಗಿದೆ. ಈ ಬಗ್ಗೆ ಇಂದು ಅಧಿಕೃತ ಆದೇಶ (Order) ಹೊರಬೀಳಲಿದೆ. ಜೊತೆಗೆ 6 ತಿಂಗಳು ಆದ ಮೇಲೆ ಫೈನ್​ ಕಟ್ಟಿಸಿಕೊಳ್ಳುವಂತಿಲ್ಲ ಎನ್ನಲಾಗುತ್ತಿದೆ. ಹೌದು, ಕೇವಲ 9 ದಿನಗಳಲ್ಲಿ ಟ್ರಾಫಿಕ್ ಪೊಲೀಸರು (Traffic Police) 50 ಲಕ್ಷ ರೂಪಾಯಿ ಹಳೆಯ ಕೇಸ್​ನಿಂದ ಬರೋಬ್ಬರಿ 150 ಕೋಟಿ ದಂಡ ಸಂಗ್ರಹ ಮಾಡಿದ್ದರು. ಖಾಕಿ ಖಜಾನೆ ಭರ್ತಿಗೆ ಪ್ರಮುಖ ಕಾರಣ ಎಂದರೆ ಕಾನೂನು ಸೇವಾ ಪ್ರಾಧಿಕಾರದ (Karnataka State Legal Service Authority) ಅಧ್ಯಕ್ಷರು. ಹೈಕೋರ್ಟ್ (High Court) ನ್ಯಾಯಮೂರ್ತಿ ಬಿ ವೀರಪ್ಪ ಅವರು, ಪೊಲೀಸ್ ಇಲಾಖೆ (Police Department) ಹಾಗೂ ಸಾರಿಗೆ ಇಲಾಖೆ ಮನವಿ ಪುರಸ್ಕರಿಸಿ ಜನರಿಗೆ ಒಳಿತಾಗುವಂತೆ 50 ಪರ್ಸೆಂಟ್​ ಡಿಸ್ಕೌಂಟ್ ನೀಡುವಂತೆ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದರು. ಸರ್ಕಾರದ ಆದೇಶ ಹೊರ ಬೀಳುತ್ತಿದ್ದಂತೆ ಜನ ಫುಲ್​ ಸಂತಸಗೊಂಡಿದ್ದಾರೆ.


ಟ್ರಾಫಿಕ್ ಡಿಸ್ಕೌಂಟ್ ಫೈನ್ ಕಟ್ಟೋಕೆ ಸಮಯ ವಿಸ್ತರಣೆ


ಫೆಬ್ರವರಿ 11ಕ್ಕೆ ಡಿಸ್ಕೌಂಟ್ ಫೈನ್ ಕಟ್ಟಲು ಕೊನೆಯ ದಿನ ಆಗಿತ್ತು. ಇದೀಗ ಮತ್ತೆ ಸ್ವಲ್ಪ ದಿನಗಳ ಕಾಲ ಅವಕಾಶ ಕೊಡುವ ಬಗ್ಗೆ ಇಂದು ಕಾನೂನು ಸೇವಾ ಪ್ರಾಧಿಕಾರದ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಹೊಸ ರೆಸಲ್ಯೂಷನ್ ಪಾಸ್ ಮಾಡಲು ಮಾನ್ಯ ನ್ಯಾಯಮೂರ್ತಿ ಬಿ.ವೀರಪ್ಪ ನಿರ್ಧರಿಸಿದ್ದಾರೆ. ಫೆಬ್ರವರಿ 14 ರಿಂದ 28ರ ವರೆಗೂ ಮತ್ತೆ ಡಿಸ್ಕೌಂಟ್ ನೀಡಲು ತೀರ್ಮಾನ ಮಾಡಿ, ಹೊಸ ಆದೇಶ ಹೊರಬೀಳಲಿದೆ.




ಕಾನೂನು ಸೇವಾ ಪ್ರಾಧಿಕಾರದಿಂದ ಮಹತ್ವದ ಸಭೆ


ಇನ್ನು, ಟ್ರಾಫಿಕ್​ ಫೈನ್​ 6 ತಿಂಗಳ ಒಳಗೆ ಫೈನ್​ ಕಟ್ಟಿಲ್ಲ ಎಂದರೆ ಪೊಲೀಸರು ಎಫ್​ಐಆರ್ ದಾಖಲು ಮಾಡಿ ಹಾಕಿ ಕೋರ್ಟ್​ಗೆ ಚಾರ್ಜ್​ ಶೀಟ್ ಸಲ್ಲಿಸಬೇಕು. ಇಲ್ಲದಿದ್ದರೆ ದಂಡ ಆಟೋಮ್ಯಾಟಿಕ್​ ಲ್ಯಾಪ್ಸ್​ ಆಗುತ್ತೆ ಎನ್ನಲಾಗಿದೆ. ಈ ಬಗ್ಗೆ ಮ್ಯಾಜಿಸ್ಟ್ರೇಟ್​ ಕೋರ್ಟ್​ ಆದೇಶ ಕೂಡ ಉಲ್ಲೇಖ ಮಾಡಲಾಗಿದೆ. ಇದರ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲು ನಿರ್ಧಾರ ಮಾಡಲಾಗಿದೆ.


2 ಕೋಟಿಗೂ ಅಧಿಕ ಟ್ರಾಫಿಕ್ ವಾಯ್ಲೇಷನ್ ಕೇಸ್​ಗಳಿದ್ದು, 1 ಸಾವಿರ ಕೋಟಿಗೂ ಅಧಿಕ ಫೈನ್ ಹಣ ಸಂಗ್ರಹವಾಗಬೇಕಿದೆ. ಡಿಸ್ಕೌಂಟ್ ಬಳಿಕ ಮತ್ತೆ ಎಷ್ಟು ಹಣ ಸರ್ಕಾರದ ಖಜಾನೆಗೆ ಬರುತ್ತೆ ಕಾದು ನೋಡಬೇಕಿದೆ.




BDA ಬ್ರೋಕರ್​ಗಳಿಗೆ ಲೋಕಾ ಶಾಕ್


ಬಿಡಿಎ (Bangalore Development Authority) ಕೇಂದ್ರ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು (Lokayukta) ಮೊನ್ನೆ ದಾಳಿ ಮಾಡಿದ್ದರು. ಇದೀಗ ಮಂಜಪ್ಪ ಹಾಗೂ ಅನಿಲ್ ಕುಮಾರ್ ಎಂಬ ಇಬ್ಬರು ಬ್ರೋಕರ್​ಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.


ಇವರಿಬ್ಬರೂ, ಅಧಿಕಾರಿಗಳಿಗೆ ಹಣ ಕೊಟ್ಟು ಕೆಲಸ ಮಾಡಿಸುತ್ತಿದ್ದರು. ಸದ್ಯ ಇಬ್ಬರು ಬ್ರೋಕರ್​ಗಳು ಅಧಿಕಾರಿಗಳ ಮಧ್ಯವರ್ತಿಗಳ ಕೆಲಸ ಮಾಡಿಸುತ್ತಿದ್ದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸದ್ಯ ಬ್ರೋಕರ್​ಗಳು ಸತ್ಯ ಒಪ್ಪಿದ್ದು, ಅಧಿಕಾರಿಗಳಿಗೆ ನೋಟಿಸ್ ಕೊಡಲು ಲೋಕಾಯುಕ್ತ ತಯಾರಿ ಮಾಡಿಕೊಳ್ಳುತ್ತಿದೆ.


ಮೃತ ಸುಧಾ


ಪೊಲೀಸ್ ಸ್ಟೇಷನ್ ಮುಂದೆಯೇ ಮಹಿಳೆ ಬೈಕ್ ಅಪಘಾತ‌‌‌


ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ಸಂಭವಿಸಿದ ಅಪಘಾತದಲ್ಲಿ ನಗರದ 37 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು 37 ವರ್ಷದ ಸುಧಾ ಎಂದು ಗುರುತಿಸಲಾಗಿದೆ. ಶಿವಾಜಿನಗರದಲ್ಲಿ ಪತಿ ಹಾಗೂ ಇಬ್ಬರು ಹೆಣ್ಮಕ್ಕಳ ಜೊತೆ ಮೃತ ಮಹಿಳೆ ವಾಸವಾಗಿದ್ದರು. ಮಗಳನ್ನು ಕಾಲೇಜಿಗೆ ಟ್ರಾಪ್​ ಮಾಡಿ ವಾಪಸ್ ಬರುವಾಗ ಕಬ್ಬನ್ ಪಾರ್ಕ್ ಸ್ಟೇಷನ್ ಬಳಿ ಯಾವುದೋ ಒಂದು ವಾಹನದಿಂದ ಆಯಿಲ್​ ಸೋರಿಕೆ ಆಗಿತ್ತು. ಅದನ್ನು ಗಮನಿಸದೆ ಬಂದಿದ್ದ ಸುಧಾ ಸ್ಕಿಡ್ ಆಗಿ ಎಡಕ್ಕೆ ಬಿದ್ದಿದ್ದರು. ಟ್ಯಾಂಕರ್​ನ ಹಿಂಬದಿ ಚಕ್ರ ತಲೆ ಮೇಲೆ ಹತ್ತಿತ್ತು. ತೀವ್ರ ರಕ್ತಸ್ರಾವವಾಗಿ ಮಹಿಳೆ ಸುಧಾ ಸ್ಥಳದಲ್ಲೇ ಸಾವನ್ನಪ್ಪಿದ್ದರು.

Published by:Sumanth SN
First published: