ಹಾಸನಕ್ಕೆ ಕೆಶಿಪ್ ಶಿಫ್ಟ್... ಉತ್ತರ ಕರ್ನಾಟಕ ಭಾಗದ ಜನರ ಮಾತಿಗೆ ಡೋಂಟ್ ಕೇರ್ ಎಂದ ಕುಮಾರಸ್ವಾಮಿ...

news18
Updated:September 5, 2018, 7:46 PM IST
ಹಾಸನಕ್ಕೆ ಕೆಶಿಪ್ ಶಿಫ್ಟ್... ಉತ್ತರ ಕರ್ನಾಟಕ ಭಾಗದ ಜನರ ಮಾತಿಗೆ ಡೋಂಟ್ ಕೇರ್ ಎಂದ ಕುಮಾರಸ್ವಾಮಿ...
  • News18
  • Last Updated: September 5, 2018, 7:46 PM IST
  • Share this:
- ಚಂದ್ರಕಾಂತ್ ಸುಗಂಧಿ, ನ್ಯೂಸ್18 ಕನ್ನಡ

ಬೆಳಗಾವಿ ( ಸೆ.05) : ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದು. ಈ ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯಿಸಿದೆ ಎಂಬ ಆರೋಪವಿದೆ. ಈ ನಡುವೆ ಸರ್ಕಾರ ಬೆಳಗಾವಿ ಕೆಶಿಪ್ ವಿಭಾಗದ ಮಟ್ಟದ ಕಚೇರಿ ಹಾಗೂ ಬಸವನಬಾಗೇವಾಡಿಯ ಉಪವಿಭಾಗದ ಮಟ್ಟದ ಕಚೇರಿಯನ್ನು ಹಾಸನಕ್ಕೆ ಶಿಫ್ಟ್ ಮಾಡಿದೆ. ಸಚಿವರು, ಶಾಸಕರು ಸೇರಿ ಹೋರಾಟಗಾರರ ವಿರೋಧದ ನಡುವೆಯು ಈ ಕಚೇರಿ ಎತ್ತಗಂಡಿಯಾಗಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿಯ ವಿಭಾಗ ಮಟ್ಟದ ಕೆಶಿಪ್ ಕಚೇರಿಯನ್ನು ಹಾಸನಕ್ಕೆ ಹಾಗೂ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಕೆಶಿಪ್ ಉಪವಿಭಾಗಮ ಮಟ್ಟದ ಕಚೇರಿಯನ್ನು ಬೇಲೂರಿಗೆ ಶಿಫ್ಟ್ ಮಾಡಲಾಗಿದೆ. ರಾಜ್ಯದಲ್ಲಿ ಸೂಪರ್ ಸಿಎಂ ಎಂದೇ ಬಿಂಬಿತವಾಗಿರುವ ಲೋಕೋಪಯೋಗಿ ಸಚಿವ ಎಚ್. ಡಿ. ರೇವಣ್ಣ ಈ ಆದೇಶವನ್ನು ಹೊರಡಿಸಿದ್ದರು.ಇದಕ್ಕೆ ಬೆಳಗಾವಿ ಸೇರಿ ಉತ್ತರ ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಿವಾಗಿತ್ತು. ಈ ಭಾಗದಲ್ಲಿ ಅನೇಕ ರಾಜ್ಯ ಹೆದ್ದಾರಿಗಳ ಕೆಲಸ ಇದ್ದು, ಹೀಗೆ ಶಿಫ್ಟ್ ಮಾಡದಂತೆ ಆಗ್ರಹಿಸಿದ್ದರು. ಆದರೇ ಇದಕ್ಕೆ ಸಿಎಂ ಎಚ್. ಡಿ ಕುಮಾರಸ್ವಾಮಿ ಯಾವುದೇ ಸೊಪ್ಪು ಹಾಕಲಿಲ್ಲ. ಈಗ ಕಚೇರಿ ಸ್ಥಳಾಂತರ ಕೆಲಸ ಆರಂಭವಾಗಿದೆ. ಈಗಾಗಲೇ ಕಚೇರಿ ದಾಖಲೆ, ಕಚೇರಿಯ ಸಾಮಾನುಗಳನ್ನು ಗಂಟು ಮೂಟೆ ಕಟ್ಟಲಾಗುತ್ತಿದೆ.

ಬೆಳಗಾವಿಯ ಸುವರ್ಣ ಸೌಧಕ್ಕೆ ಸರ್ಕಾರಿ ಕಚೇರಿ ಸ್ಥಳಾಂತರ ಮಾಡಿ ಸೌಧಕ್ಕೆ ಹೊಸ ಕಾಯಕಲ್ಪ ನೀಡಬೇಕು ಎನ್ನುವುದು ಹೋರಾಟಗಾರರ ಬೇಡಿಕೆಯಾಗಿದೆ. ಆದರೇ ಈ ಬೇಡಿಕೆ ಈಡೇರಿಸ ಸರ್ಕಾರ ಇಲ್ಲಿನ ಕಚೇರಿಯನ್ನು ಹಾಸನಕ್ಕೆ ಎತ್ತಂಗಡಿ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇನ್ನೂ ಈ ಬಗ್ಗೆ ಮಾತನಾಡಿದ ರಮೇಶ ಜಾರಕಿಹೊಳಿ, ಕೆಶಿಪ್ ಕಚೇರಿ ಉಳಿಸಿಕೊಳ್ಳಲು ಕೇವಲ ನಾನು ಸತೀಶ್ ಜಾರಕಿಹೊಳಿ ಮಾತ್ರ ಪ್ರಯತ್ನ ಮಾಡಿದ್ದೇವೆ. ಈ ವಿಚಾರದಲ್ಲಿ ನಮಗೆ ಯಾರು ಸಾಥ್ ನೀಡಲಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಬೆಳಗಾವಿಯ ಕೆಶಿಪ್ ಕಚೇರಿ ಹಾಸನಕ್ಕೆ ಶಿಫ್ಟ್ ಆಗಿದ್ದು ತಡೆಯುವಲ್ಲಿ ಸಚಿವರು, ಶಾಸಕರು ವಿಫಲರಾಗಿದ್ದಾರೆ. ಇನ್ನೂ ಸಮ್ಮಿಶ್ರ ಸರ್ಕಾರ ನಿರ್ಧಾರ ಅನ್ಯಾಯ ಕೂಗು ಹೆಚ್ಚಿಸಿದೆ. ಈ ಬಗ್ಗೆ ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಹೋರಾಟ ಆರಂಭವಾದ್ರೆ ಇದ್ರೆ ಸರ್ಕಾರವೇ ನೇರ ಹೊಣೆ ಎಂದು ಇಲ್ಲಿನ ಹೋರಾಟಗಾರರ ಎಚ್ಚರಿಕೆ ನೀಡಿದ್ದಾರೆ. 
First published:September 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading