ಮಂಗಳೂರು ಬಾಂಬ್​ ಪತ್ತೆ ಪ್ರಕರಣ; ಇಂದು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ವರದಿ ಸಲ್ಲಿಕೆ

ಬಾಂಬರ್​ ಆದಿತ್ಯರಾವ್​  ಚೆನ್ನೈನಿಂದ ಜಿಲೆಟಿನ್​ ಮತ್ತು ಡಿಟೋನೇಟರ್​​ನ್ನು ತರಿಸಿಕೊಂಡು ಬಾಂಬ್​ ತಯಾರಿಸಿದ್ದ ಎಂದು ತಿಳಿದು ಬಂದಿದೆ.

ಆದಿತ್ಯ ರಾವ್

ಆದಿತ್ಯ ರಾವ್

 • Share this:
  ಮಂಗಳೂರು(ಜ.24): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದ ಆರೋಪಿ ಆದಿತ್ಯರಾವ್​ ಸದ್ಯ ಪೊಲೀಸರ ವಶದಲ್ಲಿದ್ದಾನೆ. ಆರೋಪಿಯ ವಿಚಾರಣೆ ನಡೆಸಿರುವ ಪೊಲೀಸರು ತನಿಖೆ ವರದಿಯನ್ನು ಸಿದ್ದಪಡಿಸಿದ್ದಾರೆ. ರಾಜ್ಯ ಸರ್ಕಾರ ಇಂದು ಆ ವರದಿಯನ್ನು ಇಂದು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

  ಇನ್ನು, ಪ್ರಕರಣ ಸಂಬಂಧ ಇಂದಿನಿಂದ ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ನಡೆಸಲಿದ್ದಾರೆ. ಬಾಂಬ್​ ಪತ್ತೆಯಾಗಿದ್ದ ಮಂಗಳೂರು ಏರ್​ಪೋರ್ಟ್​​​ನಲ್ಲಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಆರೋಪಿ ಆದಿತ್ಯರಾವ್​ ಕೆಲಸ ಮಾಡುತ್ತಿದ್ದ ಹೋಟೆಲ್​ನಲ್ಲಿಯೂ ಸಹ ಪೊಲೀಸರು ಮಹಜರು ನಡೆಸಲಿದ್ದಾರೆ. ಆದಿತ್ಯರಾವ್​​ ನಗರದ ಬಲ್ಮಠದ ಕ್ವಾಲಿಟಿ ಕುಡ್ಲ ಹೋಟೆಲ್​​ನಲ್ಲಿ ಕೆಲಸ ಮಾಡುತ್ತಿದ್ದ. ಪೊಲೀಸರ ಕಸ್ಟಡಿಯಲ್ಲಿರುವ ಬಾಂಬರ್​​​ ಆದಿತ್ಯರಾವ್​ನನ್ನು ಜೊತೆಯಲ್ಲಿ ಕರೆದೊಯ್ದು ಸ್ಥಳ ಮಹಜರು ನಡೆಸಲಿದ್ದಾರೆ. ಆತನನ್ನು ಉಡುಪಿಗೂ ಕರೆದೊಯ್ಯುವ ಸಾಧ್ಯತೆ ಇದೆ ಎನ್ನಲಾಗಿದೆ.

  ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಆರೋಪಿ ಆದಿತ್ಯರಾವ್​​​​ 10 ದಿನ ಪೊಲೀಸರ ವಶಕ್ಕೆ

  ಆರೋಪಿ ಆದಿತ್ಯರಾವ್​​ ಬಾಂಬ್​ ತಯಾರಿಕೆಗೆ ಬೇಕಾದ ರಾಸಾಯನಿಕಗಳನ್ನು ಚೆನ್ನೈನಿಂದ ತರಿಸಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಪೊಲೀಸರ ತಂಡ ಇಂದು ಚೆನ್ನೈಗೆ ತೆರಳಲಿದ್ದು, ಅಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಬಾಂಬರ್​ ಆದಿತ್ಯರಾವ್​  ಚೆನ್ನೈನಿಂದ ಜಿಲೆಟಿನ್​ ಮತ್ತು ಡಿಟೋನೇಟರ್​​ನ್ನು ತರಿಸಿಕೊಂಡು ಬಾಂಬ್​ ತಯಾರಿಸಿದ್ದ ಎಂದು ತಿಳಿದು ಬಂದಿದೆ.

  ಮೊನ್ನೆ ಬೆಂಗಳೂರು ಪೊಲೀಸರಿಗೆ ಶರಣಾಗಿದ್ದ ಆರೋಪಿ ಆದಿತ್ಯರಾವ್​ನನ್ನು ವಿಚಾರಣೆ ನಡೆಸಿ, ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಒಂದನೇ ಎಸಿಎಂಎಂ ನ್ಯಾಯಾಲಯವು ಆರೋಪಿಯನ್ನು ಮಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಿ, ನಿನ್ನೆ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶ ನೀಡಿತ್ತು. ನಿನ್ನೆ ಆರೋಪಿಯ ​ವಿಚಾರಣೆ ನಡೆಸಿದ ಮಂಗಳೂರು 6ನೇ ಎಸಿಎಂಎಂ ನ್ಯಾಯಾಲಯವು ಆದಿತ್ಯರಾವ್​ನನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.

  ಜಮ್ಮು-ಕಾಶ್ಮೀರ ಪ್ರಕರಣ: ದೇವೇಂದರ್​​​ ಸಿಂಗ್​​ ಸೇರಿದಂತೆ ನಾಲ್ವರು 15 ದಿನಗಳ ಕಾಲ ಎನ್​​ಐಎ ವಶಕ್ಕೆ
  First published: