ಕನಕ, ಬಸವ, ವಾಲ್ಮೀಕಿ ಜಯಂತಿಗೆ ರಜೆ ಮುಂದುವರಿಕೆ; 4ನೇ ಶನಿವಾರ ಕೂಡ ಸರ್ಕಾರಿ ಕಚೇರಿ, ಶಾಲಾ-ಕಾಲೇಜಿಗೆ ರಜೆ

ಇನ್ನು ಈ ರಜೆ ನಿಯಮ ತಕ್ಷಣದಿಂದಲೋ  ಜಾರಿಯಾಗಲಿದೆಯಾ ಅಥವಾ ಮುಂದಿನ ವರ್ಷದಿಂದವೋ ಎಂಬ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಸಿಗಬೇಕಿದೆ.

Seema.R | news18
Updated:June 6, 2019, 3:41 PM IST
ಕನಕ, ಬಸವ, ವಾಲ್ಮೀಕಿ ಜಯಂತಿಗೆ ರಜೆ ಮುಂದುವರಿಕೆ; 4ನೇ ಶನಿವಾರ ಕೂಡ ಸರ್ಕಾರಿ ಕಚೇರಿ, ಶಾಲಾ-ಕಾಲೇಜಿಗೆ ರಜೆ
ಸಾಂದರ್ಭಿಕ ಚಿತ್ರ
Seema.R | news18
Updated: June 6, 2019, 3:41 PM IST
ಬೆಂಗಳೂರು (ಜೂ.06): ಕನಕದಾಸ,  ಬಸವ ಹಾಗೂ ವಾಲ್ಮೀಕಿ ಸೇರಿದಂತೆ ಇನ್ನಿತರ ಜಯಂತಿಗಳಿಗೆ ರಜೆ ರದ್ದು ಮಾಡುವ ಪ್ರಸ್ತಾಪವನ್ನು ರಾಜ್ಯ ಸಚಿವ ಸಂಪುಟ ಕೈಬಿಟ್ಟಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರ ಜಯಂತಿ ರಜೆಗೆ ಕಡಿತಗೊಳಿಸುವ ನಿರ್ಧಾರದಿಂದ ಕಾಂಗ್ರೆಸ್​-ಜೆಡಿಎಸ್​ ಸಚಿವರು  ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ರಜೆಗಳನ್ನು ರದ್ದು ಮಾಡದೇ, ಯಥಾವತ್​ ಆಗಿ ಮುಂದುವರೆಸಲಾಗುವುದು. ಆದರೆ, ನಾಲ್ಕನೇ ಶನಿವಾರದಂದು ಸರ್ಕಾರಿ ರಜೆಗೆ ಸಿಎಂ ಸೂಚಿಸಿದ್ದಾರೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯಗಳಲ್ಲಿ ಅನೇಕ ಜಯಂತಿಗಳಿಗೆ ಸರ್ಕಾರಿ ನೌಕರರಿಗೆ ರಜೆ ನೀಡಲಾಗುತ್ತಿದೆ. ಸಾರ್ವತ್ರಿಕ ರಜೆಗಳಿಗಿಂತ ಈ ಜಯಂತಿಗಳಿಗೆ ಅಧಿಕ ರಜೆ ಇರುವ ಹಿನ್ನೆಲೆ ಈ ರಜೆಗಳನ್ನು ಕಡಿತಗೊಳಿಸುವ ಸಂಬಂಧ ಸರ್ಕಾರದ ಮುಂದೆ ಪ್ರಸ್ತಾಪವಿರಿಸಲಾಗಿತ್ತು.

ಅದರಂತೆ, ಆರನೇ ವೇತನ ಆಯೋಗದ ಶಿಫಾರಸಿನಂತೆ ಜಯಂತಿಗಳನ್ನು ರದ್ದುಗೊಳಿಸುವ ಬಗ್ಗೆ ಪರಿಶೀಲನೆಗೆ ಉಪಸಮಿತಿ ರಚನೆ ಮಾಡಿ, ಕೃಷ್ಣಭೈರೇಗೌಡ ನೇತೃತ್ವದ ಸಂಪುಟ ಉಪಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಈ ವರದಿ ಅನ್ವಯ ಜಯಂತಿಗಳಿಗೆ ರಜೆ ಕಡಿತಗೊಳಿಸಿದರೆ, ಬಸವ, ಕನಕ ಸೇರಿದಂತೆ ಅನೇಕ ಸಮುದಾಯಗಳು ಅಸಮಾಧಾನಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಪುಟ ಸಭೆಯಲ್ಲಿ ಪರ ವಿರೋಧ ಚರ್ಚೆ ಮೂಡಿದ್ದು,  ಈ ರಜೆ ಕಡಿತ ನಿರ್ಧಾರದಿಂದ ಸದ್ಯದ ಮಟ್ಟಿಗೆ ಹಿಂದೆ ಸರಿಯಲಾಗಿದೆ.

ಇದನ್ನು ಓದಿ:  ಅನ್ನಭಾಗ್ಯ ಅಕ್ಕಿ ಪ್ರಮಾಣ ಏರಿಕೆ ಬದಲು ಕಡಿತಕ್ಕೆ ಮುಂದಾದ ಸಿಎಂ; ಸಚಿವ ಜಮೀರ್​ ಆಕ್ಷೇಪ
Loading...

ಇನ್ನು ಪ್ರತಿ ತಿಂಗಳ ನಾಲ್ಕನೇ ಶನಿವಾರ ರಜೆಗೆ ಸಂಪುಟದಲ್ಲಿ ಅಸ್ತು ಸಿಕ್ಕಿದೆ. ಕರ್ನಾಟಕ ಹೊರತುಪಡಿಸಿದಂತೆ 17 ರಾಜ್ಯಗಳಲ್ಲಿ ಪ್ರತಿ ನಾಲ್ಕನೇ ಶನಿವಾರ ರಜೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೂಡ ಈ ಇದನ್ನು ಜಾರಿತರಲಾಗುವುದು. ಇದು ಎಲ್ಲ ಸರ್ಕಾರಿ ಕಚೇರಿ ಸೇರಿದಂತೆ  ಶಾಲಾ ಕಾಲೇಜುಗಳಿಗೆ ಅನ್ವಯವಾಗಲಿದೆ ಎಂದು ಸಚಿವರು ತಿಳಿಸಿದರು.

ಇನ್ನು ಈ ರಜೆ ನಿಯಮ ತಕ್ಷಣದಿಂದಲೋ  ಜಾರಿಯಾಗಲಿದೆಯಾ ಅಥವಾ ಮುಂದಿನ ವರ್ಷದಿಂದವೋ ಎಂಬ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಸಿಗಬೇಕಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ ನಲ್ಲೂ ಹಿಂಬಾಲಿಸಿ'

First published:June 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...