ಬೆಂಗಳೂರು: ನೂತನ ಸಚಿವರಿಗೆ ನೆನ್ನೆಯಷ್ಟೇ ಖಾತೆಗಳನ್ನು ಹಂಚಿಕೆ ಮಾಡಿದ್ದ ರಾಜ್ಯ ಸರ್ಕಾರ ಇಂದು ಒಂಭತ್ತು ಸಚಿವರ ಖಾತೆಗಳನ್ನು ಮರುಹಂಚಿಕೆ ಮಾಡಿದೆ.
ಸಿಎಂ ಬಿಎಸ್ವೈ ನೇತೃತ್ವದ ಸಚಿವ ಸಂಪುಟಕ್ಕೆ ಹತ್ತು ಮಂದಿ ಹೊಸದಾಗಿ ಸೇರ್ಪಡೆಗೊಂಡಿದ್ದರು. ಅವರೆಲ್ಲರಿಗೂ ನೆನ್ನೆಯಷ್ಟೇ ಖಾತೆಗಳನ್ನು ಹಂಚಿಕೆ ಮಾಡಲಾಗಿತ್ತು.
ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ, ಡಾ.ಕೆ.ಸುಧಾಕರ್ಗೆ ವೈದ್ಯಕೀಯ ಶಿಕ್ಷಣ, ಎಸ್.ಟಿ. ಸೋಮಶೇಖರ್- ಸಹಕಾರ, ಕೆ.ಗೋಪಾಲಯ್ಯ- ಸಣ್ಣ ಕೈಗಾರಿಕೆ, ಬಿ.ಸಿ.ಪಾಟೀಲ್ - ಅರಣ್ಯ ಖಾತೆ, ಶಿವರಾಮ್ ಹೆಬ್ಬಾರ್-ಕಾರ್ಮಿಕ ಖಾತೆ, ಆನಂದ್ ಸಿಂಗ್- ಆಹಾರ, ನಾಗರಿಕ ಪೂರೈಕೆ, ಶ್ರೀಮಂತ ಪಾಟೀಲ್- ಸಕ್ಕರೆ ಖಾತೆ, ನಾರಾಯಣಗೌಡ- ಪೌರಾಡಳಿತ, ತೋಟಗಾರಿಕೆ ಇಲಾಖೆ ಹಾಗೂ ಭೈರತಿ ಬಸವರಾಜ್ ಅವರಿಗೆ ನಗರಾಭಿವೃದ್ದಿ ಇಲಾಖೆ ಜಬಾಬ್ದಾರಿ ನೀಡಲಾಗಿತ್ತು. ಆದರೆ, ಇಂದು ಇವರಲ್ಲಿ ಹಲವು ಸಚಿವರ ಖಾತೆಗಳನ್ನು ಬದಲಿಸಲಾಗಿದೆ.
ಯಾರಿಗೆ ಯಾವ ಖಾತೆ
ಸಿಸಿ ಪಾಟೀಲ್ ಅವರಿಗೆ ಗಣಿ ಹಾಗೂ ಭೂ ವಿಜ್ಞಾನ ಜೊತೆಗೆ ಕೈಗಾರಿಕೋದ್ಯಮ ಇಲಾಖೆ ನೀಡಲಾಗಿದೆ. ಇವರ ಬಳಿ ಹೆಚ್ಚುವರಿಯಾಗಿ ಇದ್ದ ಜೈವಿಕ ಪರಿಸರ ಇಲಾಖೆಯನ್ನು ಆನಂದ್ ಸಿಂಗ್ ಅವರಿಗೆ ನೀಡಲಾಗಿದೆ. ನೆನ್ನೆ ಆನಂದ್ ಸಿಂಗ್ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನೀಡಲಾಗಿತ್ತು. ಈ ಖಾತೆಯ ಬದಲಿಗೆ ಅರಣ್ಯ ಮತ್ತು ಪರಿಸರ ಇಲಾಖೆ ಜವಾಬ್ದಾರಿ ನೀಡಲಾಗಿದೆ. ಸಣ್ಣ ಕೈಗಾರಿಕೆ ಇಲಾಖೆ ಜವಾಬ್ದಾರಿ ವಹಿಸಿಕೊಂಡಿದ್ದ ಕೆ.ಗೋಪಾಲಯ್ಯ ಅವರಿಗೆ ಆಹಾರ ಮತ್ತು ನಾಗರಿಕ ಇಲಾಖೆ ನೀಡಲಾಗಿದೆ. ಶ್ರೀಮಂತ ಪಾಟೀಲ್ ಅವರಿಗೆ ಜವಳಿ ಹಾಗೂ ಅಲ್ಪ ಸಂಖ್ಯಾತ ಕಲ್ಯಾಣ ಖಾತೆ ನೀಡಲಾಗಿದೆ. ನೆನ್ನೆ ಅರಣ್ಯ ಖಾತೆ ಪಡೆದಿದ್ದ ಬಿಸಿ ಪಾಟೀಲ್ ಅವರಿಗೆ ಕೃಷಿ ಇಲಾಖೆ ಖಾತೆ ಹಂಚಿಕೆ ಮಾಡಲಾಗಿದೆ. ಶಿವರಾಮ್ ಹೆಬ್ಬಾರ್ ಅವರಿಗೆ ಕಾರ್ಮಿಕ ಖಾತೆ ಜೊತೆ ಸಕ್ಕರೆ ಖಾತೆಯನ್ನು ನೀಡಲಾಗಿದೆ.
![]()
ಖಾತೆ ಮರುಹಂಚಿಕೆ ವಿವರ.
ಇದನ್ನು ಓದಿ: ಬಿಎಸ್ ಯಡಿಯೂರಪ್ಪ ಸಂಪುಟ: ರಮೇಶ್ ಜಾರಕಿಹೊಳಿಗೆ ಜಲ ಸಂಪನ್ಮೂಲ; 10 ಸಚಿವರಿಗೆ ಖಾತೆ ಹಂಚಿಕೆ
ಮೂರನೇ ಬಾರಿಯ ಖಾತೆ ಹಂಚಿಕೆ ವೇಳೆಯೂ ಬೆಂಗಳೂರು ನಗರಾಭಿವೃದ್ಧಿ ಹಾಗೂ ಇಂಧನ ಖಾತೆಯನ್ನು ಸಿಎಂ ಬಿಎಸ್ವೈ ಯಾರಿಗೂ ಹಂಚಿಕೆ ಮಾಡದೆ, ಈ ಎರಡು ಖಾತೆಗಳನ್ನು ತಮ್ಮ ಬಳಿಯಲ್ಲೇ ಉಳಿಸಿಕೊಂಡಿದ್ದಾರೆ. ಬೆಳಿಗ್ಗೆ ಸಿಎಂ ಭೇಟಿ ಮಾಡಿದ್ದ ಆನಂದ್ ಸಿಂಗ್ ಇಂಧನ ಖಾತೆಗಾಗಿ ಬೇಡಿಕೆ ಇಟ್ಟಿದ್ದರು. ಅಲ್ಲದೇ, ಕೆ.ಸುಧಾಕರ್ ಕೂಡ ವೈದ್ಯಕೀಯ ಶಿಕ್ಷಣ ಖಾತೆ ಬದಲಿಗೆ ಇಂಧನ ಖಾತೆಗೆ ಬೇಡಿಕೆ ಇಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ