HOME » NEWS » State » KARNATAKA STATE GOVERNMENT INSTRUCTION TO STOP 6 9TH CLASSES IN BANGALORE DUE TO CORONAVIRUS LG

Coronavirus: ರಾಜ್ಯಾದ್ಯಂತ 6-9ನೇ‌ ತರಗತಿಗಳು ಬಂದ್; ಸರ್ಕಾರದಿಂದ ಅಧಿಕೃತ ಆದೇಶ

10, 11 ಮತ್ತು 12 ನೇ ತರಗತಿಗಳು ಎಂದಿನಂತೆ ಮುಂದಿದುವರೆಯಲಿವೆ.   ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

news18-kannada
Updated:April 2, 2021, 7:17 PM IST
Coronavirus: ರಾಜ್ಯಾದ್ಯಂತ 6-9ನೇ‌ ತರಗತಿಗಳು ಬಂದ್; ಸರ್ಕಾರದಿಂದ ಅಧಿಕೃತ ಆದೇಶ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಏ.02):  ರಾಜ್ಯಾದ್ಯಂತ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಪರಿಗಣಿಸಿ ಪ್ರಸ್ತುತ ನಡೆಯುತ್ತಿರುವ 6-9ನೇ‌ ತರಗತಿಗಳನ್ನು ಸ್ಥಗಿತಗೊಳಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ‌ ಆದೇಶದವರೆಗೆ 6-9ನೇ ತರಗತಿವರೆಗೆ ತರಗತಿಗಳನ್ನು ನಿಲ್ಲಿಸಲಾಗುತ್ತದೆ. ರಾಜ್ಯದ ಅನುದಾನಿತ ಹಾಗೂ ಅನುದಾನ ರಹಿತ 6-9 ರ ತರಗತಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ.  ಮುಂದಿನ‌ ಆದೇಶದವರೆಗೆ ತರಗತಿ ನಡೆಸದಂತೆ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಮಾತನಾಡಿರುವ ಶಿಕ್ಷಣ ಸಚಿವ ಸುರೇಶ್‌ಕುಮಾರ್, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಈ ವಯೋಮಾನದ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ‌ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 10 ನೇ ತರಗತಿಗಳು ಎಂದಿನಂತೆ ಮುಂದುವರೆಯಲಿದ್ದು, ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ ಎಂದಿದ್ದಾರೆ.

Debit Card: ಎಟಿಎಂನಲ್ಲಿ ಹಣ ಡ್ರಾ ಮಾಡಲು ಡೆಬಿಟ್​ ಕಾರ್ಡ್​ ಇರಲೇಬೇಕು ಅಂತೇನಿಲ್ಲ; ಯುಪಿಐ ಆ್ಯಪ್ ಇದ್ರೆ​ ಸಾಕು!

ಕಡ್ಡಾಯ ಶಿಕ್ಷಣ ಕಾಯಿದೆಯ ಅವಕಾಶಗಳಡಿಯಲ್ಲಿ 6-9ನೇ ತರಗತಿಗಳಿಗೆ ಸಂಬಂಧಿಸಿದಂತೆ ಶಾಲೆಗಳು ನಡೆಸಬೇಕಾದ ಮೌಲ್ಯಾಂಕನ ಪರೀಕ್ಷೆಗಳ ಕುರಿತಂತೆ ಮುಂದಿನ ದಿನಗಳಲ್ಲಿ‌ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದೆಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. 6 ರಿಂದ 9ರ ವರೆಗಿನ ಭೌತಿಕ ತರಗತಿ ಮಾತ್ರ ಸ್ಥಗಿತ ಮಾಡಲಾಗಿದೆ. ಆನ್​ಲೈನ್ ಕ್ಲಾಸ್ ಎಂದಿನಂತೆ ಮುಂದುವರೆಸಬಹುದು ಎಂದು ಸರ್ಕಾರ ಆದೇಶಿಸಿದೆ.
Youtube Video

10, 11 ಮತ್ತು 12 ನೇ ತರಗತಿಗಳು ಎಂದಿನಂತೆ ಮುಂದಿದುವರೆಯಲಿವೆ.   ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
Published by: Latha CG
First published: April 2, 2021, 6:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories