ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ (Kalyana Rajya Pragati Paksha), ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Former Minister Janardhan Reddy) ಅವರ ಆಸ್ತಿ ಜಪ್ತಿ ಪ್ರಕ್ರಿಯೆಗೆ ಸರ್ಕಾರ ಅಸ್ತು ಎಂದಿದೆ. ಹೊಸದಾಗಿ ಪತ್ತೆಯಾಗಿರುವ ಆಸ್ತಿಯನ್ನು ಜಪ್ತಿ ಮಾಡಲು ಸಿಬಿಐ (CBI) ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ (Karnataka State Government) ಸಲ್ಲಿಸಿದ್ದ ಮನವಿಗೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ (High Court), ಸರ್ಕಾರಕ್ಕೆ ಉತ್ತರಿಸಲು ಸೂಚನೆ ನೀಡಿ ಪ್ರಕರಣದ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗೃಹ ಇಲಾಖೆ, ಸಿಬಿಐಗೆ ಅನುಮತಿ ನೀಡಿ ಆದೇಶ ನೀಡಿದೆ.
ಆಸ್ತ ಜಪ್ತಿಗೆ ಸಿಬಿಐಗೆ ಗೃಹ ಇಲಾಖೆಯಿಂದ ಅನುಮತಿ
ಹೌದು, ಆಸ್ತಿ ಜಪ್ತಿ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಲು ಸಿಬಿಐ ಮನವಿ ಮಾಡಿತ್ತು. ಸದ್ಯ ಸಿಬಿಐಗೆ ಅನುಮತಿ ನೀಡಿ ಗೃಹ ಇಲಾಖೆ ಆದೇಶ ನೀಡಿದ್ದು, ಅನುಮತಿ ನೀಡಿ ಆದೇಶ ನೀಡಿರುವ ಕುರಿತಂತೆ ಹೈಕೋರ್ಟ್ಗೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದ್ದಾರೆ. ಹೊಸದಾಗಿ ಪತ್ತೆಯಾದ ಆಸ್ತಿ ಜಪ್ತಿಗೆ ಸರ್ಕಾರದ ಅನುಮತಿ ನೀಡಿದ ಕಾರಣ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಗೊಳಿಸಿದೆ.
ಇದನ್ನೂ ಓದಿ: Janardhana Reddy: ರಾಮುಲು ನನ್ನ ಅಣ್ಣ, ಬೇರೆ ಪಕ್ಷಕ್ಕೆ ಹೋಗಲ್ಲ; ಜನಾರ್ದನ ರೆಡ್ಡಿಗೆ ಶಾಕ್ ಕೊಟ್ಟ ಸ್ವಂತ ಸಹೋದರ
ನಿನ್ನೆಯಷ್ಟೇ 56 ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಜನಾರ್ದನ ರೆಡ್ಡಿ
ಇನ್ನು, ನಿನ್ನೆಯಷ್ಟೇ ಗಂಗಾವತಿಯಲ್ಲಿ 56 ವರ್ಷದ ಜನ್ಮದಿನಾಚರಣೆ ಆಚರಿಸಿಕೊಂಡಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು, ನಾನು ಕಣ್ಣೀರು ಹಾಕುವ ಪ್ರಯತ್ನ ಮಾಡಲ್ಲ. ನನ್ನ ಕಣ್ಣೀರು ಹಾಕೋದೆಲ್ಲ 12 ವರ್ಷದ ಹಿಂದೆ ಮುಗಿದು ಹೋಯ್ತು. ಬೆಂಗಳೂರಿನಲ್ಲಿದ್ದು ಇದ್ದು ಬೇಜಾರಾಗಿತ್ತು.
ಇಲ್ಲಿಗೆ ಬಂದ ಮೇಲೆ ಹೆಚ್ಚು ಶಕ್ತಿ ಬಂದಿದೆ. ನಾನು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು. ನಾನೀಗ ಹನುಮ ಹುಟ್ಟಿದ ನಾಡಿನಲ್ಲಿದ್ದೇನೆ. ಲಕ್ಷ್ಮಿ ದೇವಿಯ ಕೃಪೆ ನನ್ನ ಮೇಲಿದೆ. ಅಯೋಧ್ಯೆ ಮತ್ತು ತಿರುಪತಿ ಮಾದರಿಯಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿ ಮಾಡೋದು ನನ್ನ ಗುರಿಯಾಗಿದೆ. ಅದೇ ರೀತಿ ಗಂಗಾವತಿ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದರು.
1,200 ಕೋಟಿ ಆಸ್ತಿ ಜಪ್ತಿ ಮಾಡಿದ್ರು
ಅಲ್ಲದೇ, 12 ವರ್ಷದ ಹಿಂದೆ ನಾನು ರಾಜಕೀಯದಲ್ಲಿ ಹೊರಟ್ಟಿದ್ದ ಸ್ಪೀಡ್ ಕೆಲವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ನನ್ನನ್ನು ಜೈಲಿಗೆ ಕಳುಹಿಸಿದರು. ನಾನು ಬಂಧನದಲ್ಲಿದ್ದಾಗ 1,200 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ: Janardhana Reddy: ಕಲ್ಯಾಣ ರಾಜ್ಯ ಪಕ್ಷ ಎಂದರೇನು ಅಂತ ತೋರಿಸ್ತೀನಿ ಅಂತ ಜನಾರ್ದನ ರೆಡ್ಡಿ ಸವಾಲು
ಕೊನೆಗೆ ಹೈಕೋರ್ಟ್ ಮೊರೆ ಹೋಗಿ ನನ್ನ ಆಸ್ತಿ ವಾಪಸ್ ಪಡೆದುಕೊಂಡಿದ್ದೇನೆ. ನಾನು ಎಲ್ಲಾ ಪ್ರಕರಣಗಳಿಂದ ಮುಕ್ತನಾದ ಮೇಲೆಯೇ ನನ್ನ ಜೀವ ಹೋಗೋದು. ಈಗ ನನ್ನ ಆಸ್ತಿ ನಾಲ್ಕು ಸಾವಿರ ಕೋಟಿ ರೂಪಾಯಿ ಇದೆ. ನನ್ನ ಇಡೀ ಆಸ್ತಿ ಹೋದರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.
ಜೈಲಿನಿಂದ ಹೊರ ಬಂದ ಬಳಿಕ ಮತ್ತೊಮ್ಮೆ ರಾಜಕೀಯ ಆರಂಭಿಸಿದ್ದೇನೆ. ಈಗ ಮೊದಲಿಗಿಂತಲೂ ನನ್ನ ರಾಜಕೀಯದ ವೇಗ ಹೆಚ್ಚಾಗಿದೆ. ಈ ವೇಗವನ್ನು ಯಾರಿಂದಲೂ ಸಹ ತಡೆಯಲು ಸಾಧ್ಯವಿಲ್ಲ ಎಂದು ಜನಾರ್ದನ್ ರೆಡ್ಡಿ ಗುಡುಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ