Mekedatu Projectಗೆ 1000 ಕೋಟಿ ಮೀಸಲು; ನಮ್ಮ ಹೋರಾಟಕ್ಕೆ ಸಂದ ಜಯ; BK Hariprasad

ಚುನಾವಣೆ ಪ್ರಣಾಳಿಕೆಯನ್ನು ಓದಿದ್ದಾರೆ. ಎಲ್ಲರನ್ನೂ‌ಸಂತುಷ್ಠಿ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಇದರಿಂದ ಯಾರಿಗೂ ಸಮಾಧಾನವಿಲ್ಲ.

 ಬಿ.ಕೆ.ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್

 • Share this:
  ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಇಂದು ತಮ್ಮ ಚೊಚ್ಚಲ ಬಜೆಟ್ (Karnataka Budget)​ ಮಂಡಿಸಿದ್ದು, ಇದೊಂದು ಸರ್ವತೋಮುಖ ಅಭಿವೃದ್ಧಿಯ ಬಜೆಟ್​ ಆಗಿದೆ ಎಂದು ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ (BS Yediyurappa)  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ನಂತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮುಂದಾಗಿದೆ. ಬಹಳ ಒಳ್ಳೆಯ ಬಜೆಟ್. ಮೋದಿಯವರ ಸಂಕಲ್ಪದಂತೆ ಕೃಷಿಗೆ ಪೂರಕವಾಗಿದೆ. ಹೈನುಗಾರಿಕೆ, ಆರೋಗ್ಯಕ್ಕೆ ಒತ್ತು ಕೊಡಲಾಗಿದೆ. ಮೇಕೇದಾಟು, ಎತ್ತಿನ ಹೊಳೆ ಸೇರಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ, ನೀರಾವರಿ, ಕೈಗಾರಿಕೆ ಸೇರಿದಂತೆ ನೇಕಾರ ಸಮುದಾಯಕ್ಕೆ ಹಲವು ಘೋಷಣೆ ಮತ್ತು ಅನುದಾನ ನೀಡಲಾಗಿದೆ ಎಂದರು

  ತೆರಿಗೆ ಹಾಕದ ಉತ್ತಮ ಬಜೆಟ್​​
  ಬಜಟ್​ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಜನರಿಗೆ ತೆರಿಗೆ ಹಾಕದೆ ಉತ್ತಮವಾದ ಬಜೆಟ್ ನೀಡಲಾಗಿದೆ. ಸಿಎಂ ಅವರು ವಿಶೇಷವಾಗಿ ಗೃಹ ಇಲಾಖೆಗೆ ಒತ್ತು ನೀಡಿದ್ದಾರೆ. ಎಫ್ ಎಸ್ ಎಲ್ ಗೂ ಅನುಕೂಲಕರವಿದೆ. ಅಗ್ಬಿಶಾಮಕ ದಳಕ್ಕೆ ಒಂದು ಲಕ್ಷಕ್ಕೆ ಇದ್ದ ಇನ್ಸುರೆನ್ಸ್ 20 ಲಕ್ಷಕ್ಕೆ ನೀಡಲಾಗಿದೆ. ಜೈಲಲ್ಲಿ ಜಾಮರ್ ಗಳನ್ನ ಹಾಕಲು ವಿಶೇಷವಾಗಿ ಒತ್ತು ನೀಡಲಾಗಿದೆ ಎಂದು ತಿಳಿಸಿದರು

  ಸರ್ವವ್ಯಾಪಿ ಸರ್ವಸ್ಪರ್ಶಿ ಬಜೆಟ್

  ಸಚಿವ ಸಿಸಿ ಪಾಟೀಲ್​ ಮಾತನಾಡಿ, ಸರ್ವವ್ಯಾಪಿ ಸರ್ವಸ್ಪರ್ಶಿ ಬಜೆಟ್ ಸಿಎಂ ಕೊಟ್ಟಿದ್ದಾರೆ. ಕಳಸಾ ಬಂಡೂರಿಗೂ ಒತ್ತು ನೀಡಿ ಅನುದಾನ ಕೊಟ್ಟು ಅಭಿವೃದ್ಧಿಗೆ ಮುಂದಾಗಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನುಕೂಲವಾಗಿದೆ. ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ‌‌ ಎಂದರು

  ಇದನ್ನು ಓದಿ: ಯಶಸ್ವಿನಿ ಯೋಜನೆ ಮರು ಜಾರಿ; 'ಸಿಎಂ ಆರೋಗ್ಯ ವಾಹಿನಿ' ಘೋಷಣೆ

  ಚುನಾವಣೆ ಪ್ರಣಾಳಿಕೆ ಬಜೆಟ್​ 

  ಇನ್ನು ಬಜೆಟ್​ ಕುರಿತು ಪ್ರತಿಕ್ರಿಯಿಸಿದ ವಿಧಾನ ಪರಿಷತ್​ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್​, ಚುನಾವಣೆ ಪ್ರಣಾಳಿಕೆಯನ್ನು ಓದಿದ್ದಾರೆ. ಎಲ್ಲರನ್ನೂ‌ಸಂತುಷ್ಠಿ ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಇದರಿಂದ ಯಾರಿಗೂ ಸಮಾಧಾನವಿಲ್ಲ. 67 ಸಾವಿರ ಕೋಟಿ ಸಾಲ ಮಾಡಬಹುದು ಎಂದಿದ್ದರು. ಈಗ 73 ಸಾವಿರ ಕೋಟಿ ಸಾಲಕ್ಕೆ ಹೊರಟಿದ್ದಾರೆ. ಇದೊಂದು ಬಿಜೆಪಿ‌ಚುನಾವಣೆ ಪ್ರಣಾಳಿಕೆಯಾಗಿದೆ. ಕೇಂದ್ರದಿಂದ ಜಿಎಸ್ ಟಿ ಹಣ ಬಂದಿಲ್ಲ. ರಾಜ್ಯದ ಜನರಿಗೆ ಸಾಲದ ಹೊರೆ ಹೊರಿಸಿದ್ದಾರೆ. ಇವರ ಬಜೆಟ್ ಹಿಂದುಳಿದವರ್ಗಕ್ಕೆ ಅನ್ಯಾಯವಾಗಿದೆ. ಸರ್ವರಿಗೆ ಸಮಪಾಲು, ಸಮಬಾಳು ಕಾಣುತ್ತಿಲ್ಲ. ಖಾಸಗೀಕರಣದಂತ ದುಸ್ಸಾಹಸಕ್ಕೆ ಕೈಹಾಕಿದ್ದಾರೆ. ಈ ಬಜೆಟ್ ಬಡವರ ವಿರುದ್ಧದ ಬಜೆಟ್. ಮೂಗಿಗೆ ತುಪ್ಪ‌ಸವರಿ ಜನರನ್ನ ಯಾಮಾರಿಸುತ್ತಿದ್ದಾರೆ.

  ಇದನ್ನು ಓದಿ: ನಿರ್ಮಲಾ ಸೀತಾರಾಮನ್​ ಅನುಸರಿಸಿದ ಬೊಮ್ಮಾಯಿ; ಗಮನ ಸೆಳೆದ ಬಜೆಟ್​ ಬ್ಯಾಗ್

  ಮೇಕೆದಾಟು ಯೋಜನೆಗೆ 1000 ಕೋಟಿ ಇಟ್ಟಿದ್ದಾರೆ. ಇದು ಕಾಂಗ್ರೆಸ್ ಹೋರಾಟಕ್ಕೆ ಸಂದ ಜಯ. ಸಾವಿರ ಕೋಟಿ ಇಟ್ಟಿರೋದು ಸಮಾಧಾನವಿಲ್ಲ. ಆದರೆ ನಮ್ಮ‌ಹೋರಾಟ ಒಪ್ಪಿಕೊಂಡಿದ್ದಾರೆ ಎಂದರು

  ಜನ ಪರವಲ್ಲದ ಬಜೆಟ್

  ಕಾಂಗ್ರೆಸ್​ ನಾಯಕ ಪ್ರಿಯಾಂಕ್ ಖರ್ಗೆ, ಆರ್ಥಿಕತೆ ಸುಧಾರಣೆ ಮಾಡಬೇಕು ಅಂತಾರೆ. ಅಂಗೈನಲ್ಲಿ ಆಕಾಶವನ್ನು ತೋರಿಸುತ್ತಾರೆ. ಎಲೆಕ್ಷನ್ ಗೆ ಏನು ಬೇಕು ಅದನ್ನ ಮಾಡುತ್ತಿದ್ದಾರೆ. ನವಕರ್ನಾಟಕ ನಿರ್ಮಾಣ ಮಾಡುತ್ತೇವೆ ಎನ್ನುತ್ತಾರೆ. ಹಳೆಯ ಕರ್ನಾಟಕವನ್ನ ಉಳಿಸಿದರೆ ಸಾಕು. ಇದರಲ್ಲಿ ಯಾವುದೇ ಬೆಳವಣಿಗೆ ಕಾರ್ಯಕ್ರಮಗಳಿಲ್ಲ. ಕೋವಿಡ್ ನಿಂದ ಜನ ಸಂಕಷ್ಟದಲ್ಲಿದ್ದಾರೆ. ಅವರನ್ನ ಮೇಲೆತರುವ ಕಾರ್ಯಕ್ರಮಗಳನ್ನ ಮಾಡಿಲ್ಲ. ಈ ಬಜೆಟ್ ಯಾವುದಕ್ಕೂ ಸಮಾಧಾನವಿಲ್ಲ. ಜನಪರವಲ್ಲದ ಬಜೆಟ್ ಇದಾಗಿದೆ ಎಂದು ಟೀಕಿಸಿದರು

  ಕುಡುಚಿ ಬಿಜೆಪಿ ಶಾಸಕ ಪಿ. ರಾಜೀವ್ ಮಾತನಾಡಿ, ಇದು ಸಿಎಂ ಅವರ ಮೊದಲ ಬಜೆಟ್ ಅತ್ಯಂತ ಜನ ಪರವಾದ ಬಜೆಟ್ ಇದಾಗಿದೆ. ಸಾಲ ಮಾಡಿ ತಪ್ಪು ತಿನ್ನುವಂತಹ ಗಾದೆ ಮಾತು ಇದೆ. 67ಸಾವಿರ ಕೋಟಿಯಷ್ಟಿದೆ. 63 ಸಾವಿರ ಕೋಟಿಯಷ್ಟು ಸಾಲ ಕಡಿಮೆ ಮಾಡಿದ್ದಾರೆ. ಎಲ್ಲಾ ಉದ್ಯಮ ಕ್ಷೇತ್ರಗಳಿಗೆ ಉತ್ತಮ ಬಜೆಟ್ ಆಗಿದೆ. ಆಡಳಿತ, ಸಾರ್ವಜನಿಕ ಕ್ಷೇತ್ರದ ಜನ ಪರ ಬಜೆಟ್ ಆಗಿದೆ ಎಂದರು
  Published by:Seema R
  First published: