Karnataka Budget 2022: ನಿರ್ಮಲಾ ಸೀತಾರಾಮನ್​ ಅನುಸರಿಸಿದ ಬೊಮ್ಮಾಯಿ; ಗಮನ ಸೆಳೆದ ಬಜೆಟ್​ ಬ್ಯಾಗ್

ಬಸವರಾಜ ಬೊಮ್ಮಾಯಿ ಅವರು ಮೊದಲ ಬಜೆಟ್​ ಹಿನ್ನಲೆ ಅವರ ಕುಟುಂಬ ಸದಸ್ಯರು ಕೂಡ ವಿಧಾನಸಭೆ ಮೊಗಸಾಲೆಯಲ್ಲಿ ಬಜೆಟ್​ ವೀಕ್ಷಣೆ ನಡೆಸಿದರು.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
     ಬೆಂಗಳೂರು (ಮಾ. 4):  ಬಜೆಟ್ (Budget)​ ಮಂಡನೆ ಮಾಡುವಾಗ ಆಯವ್ಯಯ ಪತ್ರಗಳನ್ನು ಸೂಟ್​ಕೇಸ್​ನಲ್ಲಿಟ್ಟುಕೊಂಡು (Suitcase) ಬರುವುದು ರೂಢಿ. ಆ ಸೂಟ್​ಕೇಸ್​​ ಸಂಪ್ರದಾಯಕ್ಕೆ ಇತಿಶ್ರೀ ಹಾಡಿದವರು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitharaman)​. ಕೆಂಪು ಬಣ್ಣದ ಸೂಟ್ ಕೇಸ್​ ಹಿಡಿಯುವ ಮೊದಲ ಮೊದಲ ಬಾರಿಗೆ 2019ರಲ್ಲಿ ನಿರ್ಮಲಾ ಸೀತಾರಾಮನ್​, ರಿಬ್ಬನ್​ನಲ್ಲಿ ಕಟ್ಟಿದ ಕೆಂಪು ಬಟ್ಟೆಯ ಫೈಲ್​ನೊಂದಿಗೆ ಗಮನ ಸೆಳೆದಿದ್ದರು. ಈಗ ಕೇಂದ್ರ ಸಚಿವರನ್ನೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಅನುಸರಿಸಿ ಗಮನ ಸೆಳೆದಿದ್ದಾರೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಅವರು ಸೂಟ್​ಕೇಸ್​ ಸಂಪ್ರದಾಯವನ್ನು ಮುರಿದಿದ್ದಾರೆ. 

    ಗಮನ ಸೆಳೆದ ಸಿಎಂ ಬಜೆಟ್​ ಬ್ಯಾಗ್​​
    ಕೇಂದ್ರ ಸಚಿವರು ಸೂಟ್​ಕೇಸ್​ ಸಂಪ್ರದಾಯಕ್ಕೆ ಇತಿಶ್ರೀ ಹಾಡಿ ಮೂರು ವರ್ಷದ ಬಳಿಕ ರಾಜ್ಯದಲ್ಲೂ ಈ ಸಂಪ್ರದಾಯವನ್ನು ಬದಲಾಯಿಸಿದ್ದಾರೆ. ಕೆಂಪು ಬಣ್ಣದ ಲೇದರ್​ ಬ್ಯಾಗ್​ನಲ್ಲಿ ಅವರು ಆಯವ್ಯಯ ಪತ್ರ ತಂದು ಗಮನ ಸೆಳೆದರು. ಕೆಂಪು ಬಣ್ಣದ ಈ ಬ್ಯಾಗ್​ ಮುಂಭಾಗ ಕನ್ನಡದಲ್ಲಿ ಆಯವ್ಯಯ 2022-23 ಎಂಬ ಅಕ್ಷರ ಗಮನ ಸೆಳೆಯಿತು.
    ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಬಾರಿ 2,65,720 ಕೋಟಿ ರೂ ವೆಚ್ಚದ ಬಜೆಟ್​ ಮಂಡಿಸಿದ್ದು, ಉದ್ಯೋಗ, ಸಬಲೀಕರಣ ಮತ್ತು ಶಿಕ್ಷಣಕ್ಕೆ ಒತ್ತು ನೀಡಿದರು.

    ಇನ್ನು ಬಸವರಾಜ ಬೊಮ್ಮಾಯಿ ಅವರು ಮೊದಲ ಬಜೆಟ್​ ಹಿನ್ನಲೆ ಅವರ ಕುಟುಂಬ ಸದಸ್ಯರು ಕೂಡ ವಿಧಾನಸಭೆ ಮೊಗಸಾಲೆಯಲ್ಲಿ ಬಜೆಟ್​ ವೀಕ್ಷಣೆ ನಡೆಸಿದರು.

    ಕರ್ನಾಟಕದ ಅಭಿವೃದ್ಧಿಗೆ ಪಂಚಸೂತ್ರಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದು ಕೃಷಿಗೆ 33,700 ಕೋಟಿ ಅನುದಾನ ನೀಡಲಾಗಿದೆ. ಬೆಂಗಳೂರು ಅಭಿವೃದ್ಧಿಗೆ 8,409 ಕೋಟಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆಗೆ 3,102 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ.

    ಇದನ್ನು ಓದಿ: Karnataka Budget 2022: ಸರ್ಕಾರದಿಂದ ದೇಗುಲ ಸ್ವತಂತ್ರಕ್ಕೆ ಕ್ರಮ, ಕಾಶಿಯಾತ್ರೆಗೆ ಸಹಾಯಧನ, ಪಿಎಂ ಮೋದಿ ಕನಸಿಗೆ ನೀರೆರೆದ ಸಿಎಂ

    ಸಿಎಂ ಬಜೆಟ್​ ಪ್ರಮುಖಾಂಶಗಳು

    ಶಿಕ್ಷಣ - 31980 ಕೋಟಿ ರೂ

    ಜಲಸಂಪನ್ಮೂಲ - 20601ಕೋಟಿ ರೂ.

    ಗ್ರಾಮೀಣಾಭಿವೃದ್ಧಿ - 17325ಕೋಟಿ ರೂ.

    ನಗರಾಭಿವೃದ್ಧಿ - 16076ಕೋಟಿ ರೂ

    ಕಂದಾಯ - 14388 ಕೋಟಿ ರೂ.

    ಆರೋಗ್ಯ - 13982ಕೋಟಿ ರೂ

    ಇಂಧನ - 12655 ಕೋಟಿ ರೂ

    ಒಳಾಡಳಿತ ಮತ್ತು ಸಾರಿಗೆ - 11272ಕೋಟಿ ರೂ.

    ಲೋಕೋಪಯೋಗಿ - 10447ಕೋಟಿ ರೂ.

    ಸಮಾಜಕಲ್ಯಾಣ 9389ಕೋಟಿ ರೂ.

    ಕೃಷಿ ಮತ್ತು ತೋಟಗಾರಿಕೆ - 8457 ಕೋಟಿ ರೂ

    ಮಹಿಳಾ ಮತ್ತು ಮಕ್ಕಳ ಕಲ್ಯಾಣ - 4713ಕೋಟಿ ರೂ

    ವಸತಿ - 3594 ಕೋಟಿ ರೂ

    ಆಹಾರ ಮತ್ತು ನಾಗರಿಕ ಪೂರೈಕೆ - 2988 ಕೋಟಿ ರೂ.

    ಇತರೆ - 93676 ಕೋಟಿ ರೂ.

    ಇದನ್ನು ಓದಿ: Karnataka Budget 2022: ಯಶಸ್ವಿನಿ ಯೋಜನೆ ಮರು ಜಾರಿ; 'ಸಿಎಂ ಆರೋಗ್ಯ ವಾಹಿನಿ' ಘೋಷಣೆ

    ಪ್ರಮುಖ ಘೋಷಣೆಗಳು

    ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ
    ಬಿಸಿಯೂಟ ತಯಾರಕರ ಗೌರವಧನ 1000 ರೂ.ಗೆ ಏರಿಕೆ
    ಅತಿಥಿ ಉಪನ್ಯಾಸಕರ ಗೌರವ ಧನ 32 ಸಾವಿರಕ್ಕೆ ಹೆಚ್ಚಳ
    ಯಂತ್ರೋಪಕರಣ ಖರೀದಿಗೆ ರೈತ ಶಕ್ತಿ ಯೋಜನೆ
    ಹಾವೇರಿಯಲ್ಲಿ ಮೆಗಾ ಡೈರಿ ಸ್ಥಾಪನೆ
    ಮೇಕೆದಾಟು ಯೋಜನೆಗೆ 1000 ಕೋಟಿ ರೂ.
    ಆಡಳಿತ ಸುಧಾರಣೆಗೆ 56,700 ಕೋ. ರೂ.
    ಮಕ್ಕಳ ಅಭ್ಯುದಯಕ್ಕೆ 40,944 ಕೋ. ರೂ.
    ಸಂಸ್ಕೃತಿ, ಪರಂಪರೆ ರಕ್ಷಣೆಗೆ 3102 ಕೋ. ರೂ.
    ಮಹಿಳೆಯರ ಅಭ್ಯುದಯಕ್ಕೆ 43,188 ಕೋ. ರೂ.
    ಕೆಎಂಎಫ್​ನಿಂದ ರೈತರಿಗೆ 2 ಸಾವಿರ ಹಸುಗಳ ವಿತರಣೆ
    ಕ್ಷೀರ ಸಮೃದ್ಧಿ ಬ್ಯಾಂಕ್​ ಸ್ಥಾಪನೆ
    ದೇಶದಲ್ಲೇ ಮೊದಲ ಸೆಕೆಂಡರಿ ಕೃಷಿ ನಿರ್ದೇಶನಾಲಯ
    ಎಲ್ಲಾ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್​ ಸ್ಥಾಪನೆ
    ಬಳ್ಳಾರಿ ಜಿಲ್ಲೆ ಹಗರಿಯಲ್ಲಿ ಹೊಸ ಕೃಷಿ ಕಾಲೇಜು
    ಬೆಂಗಳೂರು ಮೂಲಸೌಕರ್ಯಕ್ಕೆ 6 ಸಾವಿರ ಕೋ.
    ಅಮೃತ್ ನಗರೋತ್ಥಾನ್ ಯೋಜನೆಗೆ 6 ಸಾವಿರ ಕೋ.
    Published by:Seema R
    First published: