Karnataka Budget 2022: ಯಶಸ್ವಿನಿ ಯೋಜನೆ ಮರು ಜಾರಿ; 'ಸಿಎಂ ಆರೋಗ್ಯ ವಾಹಿನಿ' ಘೋಷಣೆ

ನಿಮ್ಹಾನ್ಸ್​ನಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ, ಪುನೀತ್ ನೆನಪಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ.

ಬಜೆಟ್​ ಓದುತ್ತಿರುವ ಸಿಎಂ

ಬಜೆಟ್​ ಓದುತ್ತಿರುವ ಸಿಎಂ

  • Share this:
    ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರು ಇಂದು ತಮ್ಮ ಮೊದಲ ಬಜೆಟ್ (Karnataka State Budget 2022-23)​ ಮಂಡಿಸಿದ್ದಾರೆ. ಮಹಿಳೆಯರ ಅಭಿವೃದ್ಧಿಗೆ (Women Development) ಒತ್ತು ನೀಡಿರುವ ಅವರು, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಲಾಗಿದ್ದು, ಮಹಿಳೆಯರು, ಕಾರ್ಮಿಕರಿಗೆ ವಿಶೇಷ ಭತ್ಯೆ ನೀಡಿ ಸಿಹಿ ಸುದ್ದಿ ನೀಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ 43,188 ಕೋಟಿ ಹಾಗೂ ಮಕ್ಕಳ ಅಭ್ಯುದಯಕ್ಕೆ 40,944 ಕೋಟಿ ಮೀಸಲಿರಿದ್ದಾರೆ.

    ಮಹಿಳೆಯರಿಗೆ 22-23 ನೇ ಸಾಲಿನ ಹೊಸ ಘೋಷಣೆಗಳು

    ಅಂಗನವಾಡಿ ಕಾರ್ಯಕರ್ತರ ಬಹುದಿನಗಳ ಬೇಡಿಕೆ ಈಡೇರಿಸಿ, ಸಿಹಿ ಸುದ್ದಿ ನೀಡಿದ್ದಾರೆ.  ಅಂಗನವಾಡಿ ಕಾರ್ಯಕರ್ತೆಯರ ಸಹಾಧನವನ್ನು ಸೇವೆ ಆಧಾರದಲ್ಲಿ ಹಚ್ಚಳ ಮಾಡಲಾಗಿದೆ. 20 ವರ್ಷಕ್ಕಿಂತ ಹೆಚ್ಚು ಸೇವೆ 1500 ರೂ, 10 ರಿಂದ 20 ವರ್ಷ 1250, 10 ವರ್ಷಕ್ಕಿಂತ ಕಡಿಮೆ 1000 ರೂ ಮಾಸಿಕ ವೇತನ ಹೆಚ್ಚಳ ಮಾಡಲಾಗಿದೆ. ಇದರ ಜೊತೆಗೆ, ಆಶಾ ಕಾರ್ಯಕರ್ತೆಯರು ಸೇರಿ ಹಲವಾರು ಗೌರವ ಧನ ಹೆಚ್ಚಳ ಮಾಡಲಾಗಿದೆ. ಆಶಾ ಕಾರ್ಯಕರ್ತರು, ಗ್ರಾಮ ಸಹಾಯಕರಿಗೆ 1000 ರೂ, ಬಿಸಿಯೂಟ ತಯಾರಕರಿಗೆ 1000 ರೂ.ಗೌರವ ಧನ ಏರಿಕೆ ಮಾಡಲಾಗಿದೆ.

    ಇದರ ಜೊತೆಗೆ ಪೌರಕಾರ್ಮಿಕರಿಗೆ ಮಾಸಿಕ 2,000 ರೂ. ಸಂಕಷ್ಟ ಭತ್ಯೆ ಹಾಗೂ ಪ್ರವಾಸಿ ಗೈಡ್‌ಗಳಿಗೆ ಮಾಸಿಕ 2000 ರೂ. ಪ್ರೋತ್ಸಾಹ ಧನ ನೀಡಾಗಿದೆ.

    ಇದನ್ನು ಓದಿ: ಯಡಿಯೂರಪ್ಪರನ್ನು ಹಿಂದಿಕ್ಕಿದ ಬೊಮ್ಮಾಯಿ! ಈವರ್ಷದ ಬಜೆಟ್ ಗಾತ್ರ 2,65,720 ಕೋಟಿ

    ಯಶಸ್ವಿ ಯೋಜನೆ ಮರು ಜಾರಿ
    ಯಶಸ್ವಿ ಯೋಜನೆ ಮರು ಜಾರಿಗೆ ನಿರ್ಧರಿಸಲಾಗಿದ್ದು, ಈ ಯೋಜನೆ ಮರುಜಾರಿಗೆ 300 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಇನ್ನು ರಾಜ್ಯದಲ್ಲಿ 3 ಲಕ್ಷ ಹೆಣ್ಣು ಮಕ್ಕಳಿಗೆ ಸ್ವಯಂ-ರಕ್ಷಣೆ ತರಬೇತಿ ನೀಡಲು ಕ್ರಮಕ್ಕೆ ಮುಂದಾಗಲಾಗಿದೆ.

    ಮಕ್ಕಳ ಬಜೆಟ್
    ಇನ್ನು ಮಕ್ಕಳ ಪುಟಾಣಿ ಬಜೆಟ್​ ಮಂಡಿಸಿದ ಅವರು ನೇಕಾರರ ಮಕ್ಕಳಿಗೆ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಯೋಜನೆ ಘೋಷಿಸಿದ್ದಾರೆ.
    ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ನೀಟ್ ಪರೀಕ್ಷೆಗೆ ತರಬೇತಿಗೆ ಕ್ರಮ ಕೈಗೊಳ್ಳಲಾಗೊದೆ.
    ಸರ್ಕಾರಿ ಕೋಟಾದಡಿ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲ ಒದಗಿಸಲು ನೆರವು.
    ಖಾಸಗಿ ವೈದ್ಯಕೀಯ ಕಾಲೇಜುಗಳ ವರ್ಗಿಕರಣ ಹಾಗೂ ಶುಲ್ಕ ನಿಯಂತ್ರಣ ಸಮಿತಿಯ ಮೂಲಕ ಶುಲ್ಕ ನಿಗದಿಪಡಿಸಲು ಯೆಲ್ಲೋ ಬೋರ್ಡ್ ಚಾಲಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾನಿಧಿ ಯೋಜನೆ; ಆರೋಗ್ಯ ಸೌಲಭ್ಯಕ್ಕೆ ವಿಶೇಷ ಯೋಜನೆ.

    ಇದನ್ನು ಓದಿ: Karnataka Budget 2022: ಪ್ರೋತ್ಸಾಹ ಧನ, ರೈತರ ಆದಾಯ ಹೆಚ್ಚಳಕ್ಕೆ ಆದ್ಯತೆ: ಕೃಷಿ ವಲಯಕ್ಕೆ ಬಂಪರ್ ಕೊಡುಗೆ

    ಆರೋಗ್ಯ ಯೋಜನೆಗಳು
    -ಮುಖ್ಯಮಂತ್ರಿ ಆರೋಗ್ಯ ವಾಹಿನಿ” ಯೋಜನೆಯಡಿ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸಲು ಕ್ರಮ.
    -ಚಾಮರಾಜನಗರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಖ್ಯಮಂತ್ರಿ -ಆರೋಗ್ಯ ವಾಹಿನಿ ಅಡಿ ಸಂಚಾರಿ ಕ್ಲಿನಿಕ್​ ಪ್ರಾರಂಭ.
    -ಸವಣೂರಿನಲ್ಲಿ ಹೊಸ ಆಯುರ್ವೇದ ಕಾಲೇಜು ಸ್ಥಾಪನೆ.
    -ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜ್​
    -ಬೆಂಗಳೂರಲ್ಲಿ 4 ಕಡೆ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
    -ತುರ್ತು ವೈದ್ಯಕೀಯ ಸೇವೆಗೆ ಏರ್​ ಆ್ಯಂಬುಲೆನಸ್ ಸೇವೆ.
    -ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್‌ ಸಂಚಾರಿ ಕ್ಲಿನಿಕ್ ಪ್ರಾರಂಭ.
    -ಕೇಂದ್ರ ಸರ್ಕಾರದ ನೆರವಿನೊಂದಿಗೆ ಹುಬ್ಬಳ್ಳಿ ಮತ್ತು ದಾವಣಗೆರೆ ಕಾರ್ಮಿಕ ರಾಜ್ಯ -ವಿಮಾ ಆಸ್ಪತ್ರೆಗಳ ಹಾಸಿಗೆಗಳ ಸಾಮರ್ಥ್ಯ 100ಕ್ಕೆ ಹೆಚ್ಚಳ; 19 ಹೊಸ ಚಿಕಿತ್ಸಾಲಯಗಳ ಪ್ರಾರಂಭ.
    -75 ತಾಲೂಕು ಆಸ್ಪತ್ರೆಗಳಲ್ಲಿ ಹೃದಯ ಚಿಕಿತ್ಸೆಗೆ ವ್ಯವಸ್ಥೆ. ಸವಣೂರು ತಾಲೂಕಲ್ಲಿ ಹೊಸ ಆಯುರ್ವೇದ ಕಾಲೇಜು, ಬೆಳಗಾವಿಯಲ್ಲಿ ಕಿದ್ವಾಯಿ ಪ್ರಾದೇಶಿಕ ಕೇಂದ್ರ, -ನಿಮ್ಹಾನ್ಸ್​ನಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ, ಪುನೀತ್ ನೆನಪಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಸ್ಥಾಪನೆ ಮಾಡಲಾಗುವುದು.
    -ರಾಜ್ಯದ ಪ್ರಮುಖ ನಗರಗ ಹಾಗೂ ಬೆಂಗಳೂರಿನ ಎಲ್ಲ ವಾರ್ಡ್​​ಗಳಲ್ಲಿ ನಮ್ಮ ಕ್ಲಿನಿಕ್​ ಸ್ಥಾಪನೆ.
    -100 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ 1000 ಕೋ. ರೂ. ವೆಚ್ಚದಲ್ಲಿ ಉನ್ನತೀಕರಣ 25 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆಗೆ ಒತ್ತು.
    Published by:Seema R
    First published: