ಕರ್ನಾಟಕ ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ವೇಳಾ ಪಟ್ಟಿ ಪ್ರಕಟ; ಚೆಕ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

Karnataka SSLC Supplementary 2020 Time Table | kseeb.kar.nic.in: ಪರೀಕ್ಷೆಗಳು ಬೆಳಿಗ್ಗೆ 10 ರಿಂದ ಆರಂಭವಾಗಲಿದ್ದು ಮಧ್ಯಾಹ್ನ 1.45ಕ್ಕೆ ಮುಕ್ತಾಯವಾಗಲಿವೆ. ಪ್ರತಿ ಪರೀಕ್ಷೆ ಪ್ರಾರಂಭದಲ್ಲಿ 15 ನಿಮಿಷ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ಓದಿಕೊಳ್ಳಲು ಸಮಯವನ್ನು ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಆಗಸ್ಟ್​. 24): ಕೊರೋನಾ ಆತಂಕದ ನಡುವೆಯೂ ಎಸ್ಎಸ್​ಎಲ್​​ಸಿ ಪರೀಕ್ಷೆಯನ್ನುಯಶಸ್ವಿಯಾಗಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದೆ. ಇದೀಗ ಅನುತ್ತೀರ್ಣಗೊಂಡ ಹಾಗೂ ಕೊರೋನಾ ಕಾರಣದಿಂದ ಪರೀಕ್ಷೆಯನ್ನು ಬರೆಯದಿರುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯ ವೇಳಾ ಪಟ್ಟಿಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ಪರೀಕ್ಷೆಗಳು ಬೆಳಿಗ್ಗೆ 10 ರಿಂದ ಆರಂಭವಾಗಲಿದ್ದು ಮಧ್ಯಾಹ್ನ 1.45ಕ್ಕೆ ಮುಕ್ತಾಯವಾಗಲಿವೆ. ಪ್ರತಿ ಪರೀಕ್ಷೆ ಪ್ರಾರಂಭದಲ್ಲಿ 15 ನಿಮಿಷ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ಓದಿಕೊಳ್ಳಲು ಸಮಯವನ್ನು ನೀಡಲಾಗಿದೆ.

   ವೇಳಾಪಟ್ಟಿ ಈ ಕೆಳಗಿನಂತಿದೆ

  ಸೆಪ್ಟೆಂಬರ್​ 21 – ಗಣಿತ, ಸಮಾಜಶಾಸ್ತ್ರ,

  ಸೆಪ್ಟೆಂಬರ್​ 22 – ಪ್ರಥಮ ಭಾಷೆ ( ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕ್ರತ)

  ಸೆಂಪ್ಟೆಂಬರ್ 23 – ಸಮಾಜ ವಿಜ್ಞಾನ

   ಸೆಪ್ಟೆಂಬರ್  24 - ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)

  ಸೆಪ್ಟೆಂಬರ್ 25 - ತೃತಿಯ ಭಾಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್ ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು) ಎನ್‌ಎಫ್ ಕ್ಯೂ ಆಫ್ ಪರೀಕ್ಷೆಗಳು

  ಸೆಪ್ಟೆಂಬರ್  26 - ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್, ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ಗ್ರಾಫಿಕ್ಸ್, ಅರ್ಥಶಾಸ್ತ್ರ,

  ಸೆಪ್ಟೆಂಬರ್  28-  ಬೆಳಿಗ್ಗೆ ವಿಜ್ಞಾನ, ರಾಜ್ಯಶಾಸ್ತ್ರ, ಮಧ್ಯಾಹ್ನ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ,

  ಸೆಪ್ಟೆಂಬರ್ 29 - ಜೆಟಿಎಸ್ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.
  Published by:G Hareeshkumar
  First published: