ಬೆಂಗಳೂರು,(ಏ.29): ಇಂದು ಎಸ್ಎಸ್ಎಲ್ಸಿ ಫಲಿತಾಂಶ ಇಂದು ಹೊರ ಬಿದ್ದಿದೆ. ಎಸ್ಎಸ್ಎಲ್ಸಿ ಬೋರ್ಡ್ ನಿರ್ದೇಶಕಿ ವಿ. ಸುಮಂಗಲಾ ಇಂದು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಿದ್ದಾರೆ. ಪರೀಕ್ಷೆ ಬರೆದಿರುವ 8,41,666 ವಿದ್ಯಾರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಿದೆ. ವಿದ್ಯಾರ್ಥಿಗಳು ಫಲಿತಾಂಶ ನೋಡಲು ಅಧಿಕೃತ ಎಸ್ಎಸ್ಎಲ್ಸಿ ಬೋರ್ಡ್ ವೆಬ್ಸೈಟ್
karresults.nic.in ಗೆ ಭೇಟಿ ನೀಡಬೇಕು. ಎಸ್ಎಸ್ಎಲ್ಸಿ ಫಲಿತಾಂಶದ ಮಾಹಿತಿ ಮತ್ತು ಅಪ್ಡೇಟ್ಗಾಗಿ ವಿದ್ಯಾರ್ಥಿಗಳು ನ್ಯೂಸ್ 18 ಕನ್ನಡ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ.
ಎಸ್ಎಸ್ಎಲ್ಸಿ ರಿಸಲ್ಟ್ ನೋಡುವುದು ಹೇಗೆ?
ಹಂತ 1: ಅಧಿಕೃತ ವೆಬ್ಸೈಟ್
karresults.nic.in ಮತ್ತು
kseeb.kar.nic.in ಲಾಗ್ ಆನ್ ಮಾಡಿ.
ಹಂತ 2: ಹೋಮ್ ಪೇಜ್ನಲ್ಲಿ 'SSLC Result' ಕ್ಲಿಕ್ ಮಾಡಿ.
ಹಂತ 3: ನಿಮ್ಮ ರಿಜಿಸ್ಟರ್ ನಂಬರ್ ಟೈಪ್ ಮಾಡಿ ಎಂಟರ್ ಕೊಡಿ.
ಹಂತ 4: ನಿಮ್ಮ ಎಸ್ಎಸ್ಎಲ್ಸಿ ಫಲಿತಾಂಶ ಸ್ಕ್ರೀನ್ ಮೇಲೆ ಬರುತ್ತದೆ.
ಹಂತ 5: ಫಲಿತಾಂಶದ ಪ್ರತಿಯನ್ನು ಡೌನ್ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಿ.
ಎಸ್ಎಂಎಸ್ ಮೂಲಕ
ಎಸ್ಎಸ್ಎಲ್ಸಿ ರಿಸಲ್ಟ್ ಪಡೆಯಲು ಹೀಗೆ ಮಾಡಿ:
KSEEB10ROLLNUMBER ಟೈಪ್ ಮಾಡಿ
56263 ನಂಬರ್ಗೆ ಕಳುಹಿಸಿ.