Karnataka KSEEB SSLC Results 2020 : ವಿದ್ಯಾರ್ಥಿಗಳ ಗಮನಕ್ಕೆ ಮರು ಎಣಿಕೆಗೆ ಆಗಸ್ಟ್ 24 ಕೊನೆಯ ದಿನ

KSEEB CLass 10 Result 2020 Live Update: ಎಸ್ಎಸ್ಎಲ್ಸಿ ಫಲಿತಾಂಶವನ್ನು ನೀವು kseeb.kar.nic.in ಅಥವಾ karresults.nic.in. ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ, examresults.net ಮತ್ತು indiaresults.com ವೆಬ್​ಸೈಟ್​ನಲ್ಲೂ ಕೂಡ ರಿಸಲ್ಟ್ ನೋಡಬಹುದು.

ಎಸ್​ಎಸ್​ಎಲ್​ಸಿ ಫಲಿತಾಂಶ

ಎಸ್​ಎಸ್​ಎಲ್​ಸಿ ಫಲಿತಾಂಶ

  • Share this:
    ಬೆಂಗಳೂರು(ಆಗಸ್ಟ್. 10) : ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು ರಾಜ್ಯದಲ್ಲಿ ಈ ಬಾರಿ ಶೇ.71.80 ರಷ್ಟು ಫಲಿತಾಂಶ ಕಂಡುಬಂದಿದೆ. ಕಳೆದ ವರ್ಷದ ಫಲಿತಾಂಶ ಹೊಲಿಸಿದರೇ ಈ ಬಾರಿಯೇ ಫಲಿತಾಂಶದಲ್ಲಿ ಇಳಿಕೆ ಕಂಡು ಬಂದಿದೆ.  ಈ ಬಾರಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅವಕಾಶ ಕಲ್ಪಿಸಿದ್ದು, ಆಸಕ್ತ ವಿದ್ಯಾರ್ಥಿಗಳು  ಆಗಸ್ಟ್ 14 ರಿಂದ ಆಗಸ್ಟ್ 24 ರ ಒಳಗೆ ಅರ್ಜಿ ಸಲ್ಲಿಸಬಹುದು. ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿ ನಾಳೆಯಿಂದಲೇ ಪಡೆಯಬಹುದು. ಪೂರಕ ಪರೀಕ್ಷೆಯ ದಿನಾಂಕವನ್ನು ಇನ್ನೆರಡು ದಿನಗಳ ಒಳಗಾಗಿ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಲಿದೆ.

    ಛಾಯಾಪ್ರತಿಗಾಗಿ/ ಮರುಎಣಿಕೆಗಾಗಿ

    ಛಾಯಾಪ್ರತಿಗಾಗಿ/ ಮರುಎಣಿಕೆಗಾಗಿ ಉತ್ತರ ಪತ್ರಿಕೆಯ ಛಾಯಾಪ್ರತಿಗಾಗಿ ಅಥವಾ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 24 ಕೊನೆಯ ದಿನ.

    ಮರು ಎಣಿಕೆಗೆ ನೇರ ಅರ್ಜಿ ಇಲ್ಲ:

    ಅಂಕಗಳ ಮರು ಎಣಿಕೆಗೆ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮರು ಏನಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಛಾಯಾಪ್ರತಿಯನ್ನು ಪಡೆಯಬೇಕಾಗುತ್ತದೆ. ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದರೆ, ಮಂಡಳಿಗೆ ಪತ್ರ ಬರೆದು ಸರಿಪಡಿಸಿಕೊಳ್ಳಬಹುದು. ಪರಿಷ್ಕೃತ ಫಲಿತಾಂಶವನ್ನು ಸಂಬಂಧಿಸಿದ ಶಾಲೆ ಕಳುಹಿಸಲಾಗುವುದು.

    ಇದನ್ನೂ ಓದಿ : Karnataka KSEEB SSLC Result 2020: ಅತಿಹೆಚ್ಚು ಅಂಕ ಗಳಿಸಿದ, ವಿಷಯವಾರು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ

    ಆನ್‌ಲೈನ್‌ ಮೂಲಕವೇ ಅರ್ಜಿ: ಸ್ಕ್ಯಾನ್‌ ಪ್ರತಿ ಅಥವಾ ಮರುಮೌಲ್ಯಮಾಪನಕ್ಕೆ ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಸಲ್ಲಿಕೆಗೆ ಅವಕಾಶ. ಅಂಚೆ ಅಥವಾ ಇನ್ನಾವುದೇ ಭೌತಿಕ ವಿಧಾನದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಮಂಡಳಿಯ ಅಧಿಕೃತ ವೆಬ್‌ಸೈಟ್‌  ಮೂಲಕ ಅರ್ಜಿ ಸಲ್ಲಿಸಬಹುದು.



    ಅರ್ಜಿ ಶುಲ್ಕ ಎಷ್ಟು:

    • ಸ್ಕ್ಯಾನ್‌ ಪ್ರತಿ ಪಡೆಯಲು ಪ್ರತಿ ಒಂದು ವಿಷಯಕ್ಕೆ: 405 ರೂಪಾಯಿ ( ಆಫ್‌ಲೈನ್‌ ಚಲನ್‌ ಮೂಲಕ ಪಾವತಿಸಿದಲ್ಲಿ 410 ರೂಪಾಯಿ)

    • ಮರುಮೌಲ್ಯಮಾಪನಕ್ಕೆ ಪ್ರತಿ ಒಂದು ವಿಷಯಕ್ಕೆ: 805 ರೂಪಾಯಿ ( ಆಫ್‌ಲೈನ್‌ ಚಲನ್‌ ಮೂಲಕ ಪಾವತಿಸಿದಲ್ಲಿ 810 ರೂಪಾಯಿ)

    Published by:G Hareeshkumar
    First published: