HOME » NEWS » State » KARNATAKA SSLC EXAM KARNATAKA EDUCATION MINISTER SURESH KUMAR POSTPONED THE MEETING ON SSLC EXAM CANCELATION SCT

ಕರ್ನಾಟಕದಲ್ಲಿ 10ನೇ ತರಗತಿ ಪರೀಕ್ಷೆ ಕುರಿತ ಶಿಕ್ಷಣ ಸಚಿವರ ಸಭೆ ಮುಂದೂಡಿಕೆ

Karnataka SSLC Exam | 10ನೇ ತರಗತಿ ಶಾಲಾ ಪರೀಕ್ಷೆ ಕುರಿತು ಇಂದು ಬೆಳಗ್ಗೆ ನಡೆಯಬೇಕಿದ್ದ ಮಹತ್ವದ ಸಭೆ ಮುಂದೂಡಿಕೆಯಾಗಿದೆ. ಇಂದು ಜರುಗಬೇಕಾಗಿದ್ದ ಅಧಿಕೃತ ಸಭೆ ಮುಂದೂಡಿಕೆಯಾಗಿದೆ.

news18-kannada
Updated:April 15, 2021, 2:14 PM IST
ಕರ್ನಾಟಕದಲ್ಲಿ 10ನೇ ತರಗತಿ ಪರೀಕ್ಷೆ ಕುರಿತ ಶಿಕ್ಷಣ ಸಚಿವರ ಸಭೆ ಮುಂದೂಡಿಕೆ
ಸಚಿವ ಸುರೇಶ್ ಕುಮಾರ್
  • Share this:
ಬೆಂಗಳೂರು (ಏ. 15): ದೇಶಾದ್ಯಂತ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸಿಬಿಎಸ್​ಇ 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. CBSE 10ನೇ ತರಗತಿ ಪರೀಕ್ಷೆಗಳನ್ನು ಕೇಂದ್ರೀಯ ಶಿಕ್ಷಣ ಇಲಾಖೆ ರದ್ದುಗೊಳಿಸಿದ ಬೆನ್ನಲ್ಲೇ ಕರ್ನಾಟಕದಲ್ಲೂ ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದುಗೊಳ್ಳುತ್ತಾ? ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಈ ಕುರಿತು ಇಂದು ಶಿಕ್ಷಣ ಇಲಾಖೆ ಇಂದು ಮಹತ್ವದ ಸಭೆ ನಡೆಸಲು ಮುಂದಾಗಿತ್ತು. ಆದರೆ, ಆ ಸಭೆಯನ್ನು 2 ದಿನಗಳ ಕಾಲ ಮುಂದೂಡಲಾಗಿದೆ. 2 ದಿನಗಳ ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಧಿಕಾರಿಗಳ ಜೊತೆ ಚರ್ಚೆ ನಡೆಯಲಿದೆ.

10ನೇ ತರಗತಿ ಶಾಲಾ ಪರೀಕ್ಷೆ ಕುರಿತು ಇಂದು ಬೆಳಗ್ಗೆ ನಡೆಯಬೇಕಿದ್ದ ಮಹತ್ವದ ಸಭೆ ಮುಂದೂಡಿಕೆಯಾಗಿದೆ. ಇಂದು ಜರುಗಬೇಕಾಗಿದ್ದ ಅಧಿಕೃತ ಸಭೆ ಮುಂದೂಡಿಕೆಯಾಗಿದೆ. ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ರದ್ದು ಹಿನ್ನೆಲೆ ಇಂದು ಅಧಿಕಾರಿಗಳ ಜೊತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅನೌಪಚಾರಿಕ ಚರ್ಚೆ ನಡೆಸಿದ್ದು, ಸಚಿವರ ಸಲಹೆ ಮೇರೆಗೆ ಎರಡು ದಿನದಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ. 1-9ನೇ ತರಗತಿ ಪರೀಕ್ಷೆ ಕುರಿತು ಇನ್ನೆರಡು ದಿನದ ಬಳಿಕ ಸಭೆ ನಡೆಯಲಿದೆ. ಕೊರೊನಾ ತಾಂತ್ರಿಕಾ ಸಲಹಾ ಸಮಿತಿ ಸಭೆ ಬಳಿಕ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

6 ರಿಂದ 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವ ವಿಚಾರವಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆಯ ಸ್ಥಳ, ಸಮಯವನ್ನ ಬದಲಿಸಿದ್ದಾರೆ. ಗೌಪ್ಯ ಸ್ಥಳದಲ್ಲಿ ಸಭೆ ಕರೆದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಮಗ್ರ ಶಿಕ್ಷಣ ಅಭಿಯಾನದಲ್ಲಿ ನಿಗದಿಯಾಗಿದ್ದ ಸಭೆಯ ಸ್ಥಳವನ್ನು ಬದಲಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ನಿಗದಿಯಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಜ ಸಭೆ ನಡೆಯಬೇಕಿತ್ತು. ಈಗ ಪಠ್ಯ ಪುಸ್ತಕ ಸೊಸೈಟಿಯಲ್ಲಿ ಸಚಿವ ಸುರೇಶ್ ಕುಮಾರ್ ಸಭೆ ಕರೆದಿದ್ದಾರೆ. ಸಭೆಯಲ್ಲಿ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್, ಎಸ್ ಎಸ್ ಎಲ್ ಸಿ ಬೋರ್ಡ್ ನಿರ್ದೆಶಕಿ ವಿ. ಸುಂಮಗಲಾ, ಡಿಡಿಪಿಐ ಗಳು ಭಾಗಿ ಸಾಧ್ಯತೆಯಿದೆ.

6ರಿಂದ 9ನೇ ತರಗತಿಯ ಮೌಲ್ಯಂಕನ ಪರೀಕ್ಷೆ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಬೆಳಿಗ್ಗೆ 10.30ಕ್ಕೆ ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಸಭೆ ನಡೆಯಲಿದೆ. ಈಗಾಗಲೇ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಸ್ಫೋಟಗೊಳ್ಳಲಿದ್ದು, ದಿನನಿತ್ಯ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ಮಧ್ಯೆ 1ರಿಂದ 9ನೇ ತರಗತಿ ಮೌಲ್ಯಂಕನ ಪರೀಕ್ಷೆ ನಿರ್ಧಾರವಾಗಿಲ್ಲ. ಕರ್ನಾಟಕದಲ್ಲೂ 10ನೇ ತರಗತಿ ಪರೀಕ್ಷೆಗಳು ಬಹುತೇಕ ರದ್ದಾಗುವ ಸಾಧ್ಯತೆಯಿದೆ. ಈಗಾಗಲೇ CBSE 10ನೇ ತರಗತಿ ಪರೀಕ್ಷೆಗಳನ್ನು ಕೇಂದ್ರೀಯ ಶಿಕ್ಷಣ ಇಲಾಖೆ ರದ್ದುಗೊಳಿಸಿದೆ. ಕೊರೋನಾ ಎರಡನೇ ಅಲೆ ಆತಂಕದಿಂದ 1ರಿಂದ 9ನೇ ತರಗತಿ ಮಕ್ಕಳಿಗೆ ಈ ವರ್ಷವೂ ಪರೀಕ್ಷೆ ನಡೆಯೋದು ಅನುಮಾನ ಎನ್ನಲಾಗಿದೆ. ಪ್ರತಿದಿನ 7ರಿಂದ 8 ಸಾವಿರ ಕೊರೋನಾ ಕೇಸ್ ಪತ್ತೆಯಾಗುತ್ತಿವೆ. ಹೀಗಾಗಿ ಪರೀಕ್ಷೆ ನಡೆಸಬೇಕೋ ಬೇಡವೋ ಎಂಬ ಚರ್ಚೆ ಶುರುವಾಗಿದೆ. ಮುಂದಿನ ತಿಂಗಳು ದ್ವಿತೀಯ ಪಿಯುಸಿ ಪರೀಕ್ಷೆ ಶುರುವಾಗಲಿದೆ. ಪಿಯು ಪರೀಕ್ಷೆ ಮುಗಿದ ನಂತರ SSLC ಪರೀಕ್ಷೆ ಶುರುವಾಗಲಿದೆ.

ಇದರ ಮಧ್ಯೆ 6 ರಿಂದ 9ನೇ ತರಗತಿ ಮಕ್ಕಳಿಗೆ ಮೌಲ್ಯಂಕನ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಆದರೆ, ಕೊರೋನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೆ. ಹೀಗಾಗಿ 1ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಹಿಂದೇಟು ಹಾಕುತ್ತಿದೆ. 1ರಿಂದ 9ನೇ ತರಗತಿ ಮಕ್ಕಳನ್ನ ನೇರವಾಗಿ ಮುಂದಿನ ತರಗತಿಗೆ ಪಾಸ್ ಮಾಡಲು ಚಿಂತನೆ ನಡೆಸಲಾಗುತ್ತಿದೆ.

(ವರದಿ: ಶರಣು ಹಂಪಿ)
Published by: Sushma Chakre
First published: April 15, 2021, 2:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories