Karnataka SSLC Exam: ಅಣುಕು ಪರೀಕ್ಷೆ ಪರಿಶೀಲನೆ ನಡೆಸಿದ ಸಚಿವ ಸುರೇಶ್​ ಕುಮಾರ್; ಆಗಸ್ಟ್​ನಲ್ಲಿ ಪೂರಕ ಪರೀಕ್ಷೆ

ಹಾಲ್ ಟಿಕೆಟ್ ಸಮಸ್ಯೆಯಾದರೆ BEO ಅಧಿಕಾರಿಯನ್ನು ಭೇಟಿ ಮಾಡಬೇಕು. 50 ಸಾವಿರ‌ ಮಕ್ಕಳಿಗೆ ಹಾಲ್ ಟಿಕೆಟ್ ಸಿಕ್ಕಿಲ್ಲ ಎನ್ನುವುದೆಲ್ಲ ತಪ್ಪು ಲೆಕ್ಕ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಸಚಿವ ಸುರೇಶ್ ಕುಮಾರ್.

ಸಚಿವ ಸುರೇಶ್ ಕುಮಾರ್.

  • Share this:
    ಬೆಂಗಳೂರು(ಜು.17): ಇದೇ ಸೋಮವಾರ ಮತ್ತು ಬುಧವಾರ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ. ಹೀಗಾಗಿ ಇಂದು ಮತ್ತು ನಾಳೆ ಅಣುಕು ಪರೀಕ್ಷೆ ನಡೆಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಇಂದು ಅಣುಕು ಪರೀಕ್ಷೆಯ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಹೋದ ವರ್ಷ 6 ದಿನಗಳ ಕಾಲ ಪರೀಕ್ಷೆ ಮಾಡಲಾಗಿತ್ತು. ಸಿಬ್ಬಂದಿಗಳು ಲಸಿಕೆ ಹಾಕಿಸಿಕೊಂಡೇ ಬರ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಪರೀಕ್ಷೆ ಸುರಕ್ಷಿತವಾಗಿ ನಡೆಯಲಿದೆ. ಅಷ್ಟೇ ಸುರಕ್ಷಿತವಾಗಿ ನಾವು ಅವರನ್ನು ನೋಡಿಕೊಳ್ತೇವೆ. ರಾಜ್ಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಕೈ ಜೋಡಿಸಿದೆ ಎಂದು ಹೇಳಿದರು.

    ಮಧ್ಯಾಹ್ನದ ಒಳಗಡೆ ಎಷ್ಟು ಮಕ್ಕಳಿಗೆ ಹಾಲ್ ಟಿಕೆಟ್ ತಲುಪಿದೆ ಅಂತ ಲೆಕ್ಕ ಕೊಡ್ತೇನೆ. ಹಾಲ್ ಟಿಕೆಟ್ ಸಮಸ್ಯೆ ಆಗಿಲ್ಲ. ಅದರ ಸಂಪೂರ್ಣ ವಿವರ ಕೊಡುತ್ತೇನೆ. ಹಾಲ್ ಟಿಕೆಟ್ ಸಮಸ್ಯೆಯಾದರೆ BEO ಅಧಿಕಾರಿಯನ್ನು ಭೇಟಿ ಮಾಡಬೇಕು. 50 ಸಾವಿರ‌ ಮಕ್ಕಳಿಗೆ ಹಾಲ್ ಟಿಕೆಟ್ ಸಿಕ್ಕಿಲ್ಲ ಎನ್ನುವುದೆಲ್ಲ ತಪ್ಪು ಲೆಕ್ಕ. ಗ್ರೀಷ್ಮ ಮನೆಗೆ ಭೇಟಿ ಕೊಟ್ಟು ಮಾತನಾಡಿ ಬಂದಿದ್ದೇನೆ. ಆಕೆ ಪರೀಕ್ಷೆ ಅರ್ಜಿ ತುಂಬುವ ಕೆಲಸವೂ ಆಗಿಲ್ಲ.

    ಇನ್ನು, ಬನಹಟ್ಟಿಯ ಇಬ್ಬರು ಮಕ್ಕಳಿಗೂ ಹಾಲ್ ಟಿಕೆಟ್ ಸಮಸ್ಯೆ ಆಗಿದೆ. ಅಂಥವರಗೆ ಪೂರಕ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು. ಹಾವೇರಿಯಲ್ಲಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಸಿಗದ ವಿಷಯ ನನ್ನ ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳ ದಾಖಲಾತಿ ಮಾಡಿಸಿಲ್ಲ. ಇದು ಶಾಲೆಯ ಶಿಕ್ಷಕನ ಜವಾಬ್ದಾರಿ. ಗ್ರೀಷ್ಮ ಪ್ರಕರಣದಂತೆ ಇದನ್ನ ಪರಿಗಣಿಸಿದ್ದೇವೆ ಎಂದರು.

     ಇದನ್ನೂ ಓದಿ:Karnataka Weather Today: ಕರ್ನಾಟಕದಲ್ಲಿ ಇಂದು, ನಾಳೆ ಮಳೆಯ ಆರ್ಭಟ; ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಆರೆಂಜ್ ಅಲರ್ಟ್​ ಘೋಷಣೆ

    ಮುಂದುವರೆದ ಅವರು, ಈ ಬಾರಿ OMR ಶೀಟ್ ಮೂಲಕ ಪರೀಕ್ಷೆ ಮಾಡುತ್ತಿದ್ದೇವೆ. OMR ಶೀಟ್ ನಲ್ಲಿ ಪರೀಕ್ಷಾರ್ತಿಗಳ ನಂಬರ್ ಹಾಗೂ ಫೋಟೊ ಇರಲಿದೆ. ಯಾವ ಕಾರಣದಿಂದಲೂ ಮಕ್ಕಳು ಪರೀಕ್ಷೆಯಿಂದ ‌ವಂಚಿತರಾಗಬಾರದು. ಡಿಸಿ, ಡಿಡಿಪಿಓ ಗಳಿಗೆ ಈ ಬಗ್ಗೆ ಖಡಕ್ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.

    ಆಗಸ್ಟ್ ನಲ್ಲಿ ಪೂರಕ ಪರೀಕ್ಷೆ ನಡೆಸಲಾಗುತ್ತೆ. ಯಾರೂ ಕೂಡ ಆತಂಕ ಪಡುವ ಅಗತ್ಯ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

    ಜುಲೈ 19 - 22 ರಂದು SSLC ಪರೀಕ್ಷೆ ಹಿನ್ನೆಲೆ,  4885 ಪರೀಕ್ಷಾ ಕೇಂದ್ರಗಳು ಈ ಸಲ ಮಾಡಿಕೊಳ್ಳಲಾಗಿದೆ. 3310 ಕೇಂದ್ರಗಳು ಕಳೆದ ಬಾರಿ ಮಾಡಲಾಗಿತ್ತು, 48 ಸಾವಿರ ಪರೀಕ್ಷಾ ಕೊಠಡಿ ಹೋದ ಸಲ ಇತ್ತು. ಆದರೆ 73066 ಈ ಸಲ ಪರೀಕ್ಷಾ ಕೊಠಡಿ ಇರಲಿದೆ. ಇವತ್ತು ನಾಳೆ ಮಾಕ್ ಪ್ರೆಸಂಟೇಷನ್ ನಡೆಯಲಿದೆ.  ಒಂದು ಕೊಠಡಿಯಲ್ಲಿ ಗರಿಷ್ಠ 12 ಮಂದಿಗಿಂತ ಜಾಸ್ತಿ ಇರಬಾರದು. ಎಲ್ಲಾ ಕೇಂದ್ರಗಳಲ್ಲೂ CAB ಪಾಲನೆ ಮಾಡಬೇಕು ಎಂದು ಹೇಳಿದರು.

    ಇದನ್ನೂ ಓದಿ:ಯುವತಿ ಎತ್ತರಕ್ಕೆ ಸಮನಾಗಿದೆ ಆಕೆಯ ಕೂದಲು; ಬರೋಬ್ಬರಿ 6.5 ಅಡಿ ಉದ್ದದ ಕೂದಲು ನೋಡಿ..!

    ಓಎಂಆರ್​ ಶೀಟ್ ನಲ್ಲಿ ಮಕ್ಕಳ ಫೋಟೋ ಇರುತ್ತದೆ. ಸಿಬ್ಬಂದಿಗಳು ಕೂಡ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿದ್ದೇವೆ. 75 ಸಾವಿರ ಸಿಬ್ಬಂದಿಗಳು ಕಳೆದ ಬಾರಿ ಕೆಲಸ ಮಾಡಿದ್ದರು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ 1,19,469 ಸಿಬ್ಬಂದಿಗಳು ಈ ಬಾರಿ ಕೆಲಸ ಮಾಡ್ತಾರೆ.  ಪ್ರತಿ ಜಿಲ್ಲೆಗಳಲ್ಲಿ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಅವರು ಶಿಸ್ತಿನ ಬಗ್ಗೆ ಮೇಲ್ವಿಚಾರಣೆ ತೆಗೆದುಕೊಳ್ಳಲಿದ್ದಾರೆ ಎಂದರು.

    ಇದು ಮಕ್ಕಳ ಪರೀಕ್ಷಾ ಕೇಂದ್ರಲ್ಲ, ಸುರಕ್ಷತಾ ಕೇಂದ್ರಗಳು ಆಗಿರುತ್ತವೆ.  ಎಲ್ಲಾ ಶಾಲೆಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಇರಲಿದೆ. ಎಲ್ಲಾ ಕಡೆ ಸ್ಥಳೀಯ ಸಂಘ ಸಂಸ್ಥೆಗಳು ಕೈ ಜೋಡಿಸಲಿದೆ ಎಂದು ಹೇಳಿದರು.
    Published by:Latha CG
    First published: