ನನ್ನ ಚಾರಿತ್ರ್ಯವಧೆ ಮಾಡುವ ಮುನ್ನ ನಿಮ್ಮ ಹಿಂದೆ ನೂರು ಬಾರಿ ತಿರುಗಿ ನೋಡಿಕೊಳ್ಳಿ; ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ!

ನನ್ನಂತವರ ಚಾರಿತ್ರ್ಯವಧೆ ಮಾಡುವ ಮೂರ್ಖತನಕ್ಕೆ ಕೈಹಾಕಬೇಡಿ. ಗಾಜಿನ ಮನೆಗೆ ಕಲ್ಲು ಹೊಡೆಯುವ ಕೆಲಸಕ್ಕೆ ಮುಂದಾಗಬೇಡಿ. ಇಂತಹ ಸಾವಿರ ಸಾವಿರ ಆರೋಪ ಬಂದರೂ ಅದನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ನನಗೆ ಜನ್ಮತಃ ಸಿದ್ದಿಸಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಮ್ಮ ಟೀಕಾಕಾರರ ವಿರುದ್ಧ ಕಿಡಿಕಾರಿದ್ದಾರೆ.

MAshok Kumar | news18
Updated:July 19, 2019, 2:14 PM IST
ನನ್ನ ಚಾರಿತ್ರ್ಯವಧೆ ಮಾಡುವ ಮುನ್ನ ನಿಮ್ಮ ಹಿಂದೆ ನೂರು ಬಾರಿ ತಿರುಗಿ ನೋಡಿಕೊಳ್ಳಿ;  ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ!
ರಮೇಶ್​ ಕುಮಾರ್
  • News18
  • Last Updated: July 19, 2019, 2:14 PM IST
  • Share this:
ಬೆಂಗಳೂರು (ಜುಲೈ.19); ಒಬ್ಬ ಮನುಷ್ಯನ ಚಾರಿತ್ರ್ಯವಧೆ ಮಾಡುವುದು ತುಂಬಾ ಸುಲಭ. ಆದರೆ, ನನ್ನ ಬಗ್ಗೆ ಮಾತನಾಡುವ ಮುನ್ನ ನೂರು ಬಾರಿ ನಿಮ್ಮ ಹಿಂದೆ ತಿರುಗಿ ನೋಡಿಕೊಳ್ಳಿ, ನನ್ನ ಚಾರಿತ್ರ್ಯವಧೆ ಮಾಡುವ ಮೂರ್ಖತನಕ್ಕೆ ಇಳಿಯಬೇಡಿ ಎಂದು ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ತಮ್ಮ ಟೀಕಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ, ಬೇಕೆಂದೆ ಬಹುಮತ ಸಾಬೀತನ್ನು ವಿಳಂಬ ಮಾಡುತ್ತಿದ್ದಾರೆ ಎಂದು ನಿನ್ನೆಯಿಂದ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಬಿಜೆಪಿ ನಾಯಕರು ನೇರಾ ನೇರ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳಿಗೆ ಶುಕ್ರವಾರದ ಅಧಿವೇಶನದಲ್ಲಿ ಕಟುವಾಗಿ ಪ್ರತಿಕ್ರಿಯಿಸಿದ ರಮೇಶ್ ಕುಮಾರ್,

“ಸಾರ್ವಜನಿಕ ಜೀವನದಲ್ಲಿ ಶುದ್ಧಹಸ್ತ ಎಂದು ಹೆಸರುಗಳಿಸಿದವನು ನಾನು. ಜಾತಿ ಹಣ ಇಲ್ಲದಿದ್ದರೂ ನನ್ನ ಜನ ನನ್ನನ್ನು ಗೆಲ್ಲಿಸ್ತಾರೆ. ಒಮ್ಮೆ ನನ್ನ ಸಾರ್ವಜನಿಕ ಜೀವನವನ್ನು ಬಂದು ನೋಡಿ, ನಾನು ಎಷ್ಟು ಕೋಟಿ ಇಟ್ಟಿದ್ದೇನೆ ಎಂದು ಗೊತ್ತಾಗುತ್ತದೆ. ಲಜ್ಜೆ ಬಿಟ್ಟು ಕೋಟಿ ಕೋಟಿ ಹಣ ಮಾಡಿದ ಭ್ರಷ್ಟರ ವಿರುದ್ಧ ಮಾತನಾಡದವರು ಇದೀಗ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ : ಸ್ಪೀಕರ್ ಕಾಂಗ್ರೆಸ್ ಏಜೆಂಟ್ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿರುದ್ಧ ಕಿಡಿಕಾರಿದ ಕೆ.ಆರ್. ರಮೇಶ್ ಕುಮಾರ್

ನನ್ನಂತವರ ಚಾರಿತ್ರ್ಯವಧೆ ಮಾಡುವ ಮೂರ್ಖತನಕ್ಕೆ ಕೈಹಾಕಬೇಡಿ. ಗಾಜಿನ ಮನೆಗೆ ಕಲ್ಲು ಹೊಡೆಯುವ ಕೆಲಸಕ್ಕೆ ಮುಂದಾಗಬೇಡಿ. ಇಂತಹ ಸಾವಿರ ಸಾವಿರ ಆರೋಪ ಬಂದರೂ ಅದನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ನನಗೆ ಜನ್ಮತಃ ಸಿದ್ದಿಸಿದೆ” ಎಂದು ಅವರು ಕುಟುಕಿದ್ದಾರೆ.

“ಮತದಾನಕ್ಕೆ ನಾನು ವಿಳಂಬ ಮಾಡ್ತಾ ಇದೀನಿ, ಅಡ್ಡಿಪಡಿಸ್ತಾ ಇದೀನಿ ಅಂತ ಯಾರಾದ್ರು ಅಂದುಕೊಂಡರೆ ಅಂತವರ ವಿರುದ್ಧ ನಾನು ಅನುಕಂಪ ವ್ಯಕ್ತಪಡಿಸಬಹುದು ಅಷ್ಟೆ. ಅಂತಹ ಅಗತ್ಯ, ಅಂತಹ ಕಷ್ಟ ನನಗೆ ಇನ್ನೂ ಬಂದಿಲ್ಲ. ನಾನು ತುಂಬಾ ಸ್ಪಷ್ಟವಾಗಿದ್ದೇನೆ. ಚರ್ಚೆ, ಉತ್ತರ ನಂತರ ಮತದಾನ ನನ್ನ ಕರ್ತವ್ಯ. ಅದನ್ನು ನಾನು ಪಾಲಿಸುತ್ತಿದ್ದೇನೆ.

ನನ್ನೊಂದಿಗೆ ಸಹಕರಿಸದೆ ನಿಯಮಗಳನ್ನು ಗಾಳಿಗೆ ತೂರಿ ನಿಮ್ಮ ಅನುಕೂಲಕ್ಕೆ ನಾನಿಲ್ಲಿ ನಡೆದುಕೊಳ್ಳಬೇಕು ಅಂದ್ರೆ ಅದಕ್ಕೆ ನಾನು ಸಿದ್ದನಿಲ್ಲ. ಪಕ್ಷಪಾತ ಮಾಡೋಕೆ ನಾನು ಬಂದಿಲ್ಲ. ನಾನು ಕೊಡುವ ತೀರ್ಪು, ನಾನು ಆಡುವ ಮಾತು ಇತಿಹಾಸದಲ್ಲಿ ಉಳಿಯಬೇಕು ಎಂಬ ಕಾರಣಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ : ಸ್ಪೀಕರ್ ವಿರುದ್ಧವೇ ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡನೆ?

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading