ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ ಪಾಕಿಸ್ತಾನ; ಬೆಳಗಾವಿಯ ಯೋಧ ಹುತಾತ್ಮ

ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನೆ ಮೇಲೆ ಅಪ್ರಚೋದಿತ ದಾಳಿ ನಡೆಸಿತ್ತು.

Latha CG | news18-kannada
Updated:November 8, 2019, 3:58 PM IST
ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ ಪಾಕಿಸ್ತಾನ; ಬೆಳಗಾವಿಯ ಯೋಧ ಹುತಾತ್ಮ
ಹುತಾತ್ಮ ಯೋಧ
  • Share this:
ಜಮ್ಮು(ನ.08): ಜಮ್ಮು ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯ ಕೃಷ್ಣ ಘಾಟಿಯಲ್ಲಿ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆದು ಕರ್ನಾಟಕ ಮೂಲದ ಯೋಧನೋರ್ವ ಹುತಾತ್ಮನಾಗಿದ್ದಾನೆ.

ಹುತಾತ್ಮ ಯೋಧನನ್ನು ಬೆಳಗಾವಿಯ ಉಚಗಾಂವ ಗ್ರಾಮದ ರಾಹುಲ್​​ ಸುಳಗೇಕರ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನೆ ಮೇಲೆ ಅಪ್ರಚೋದಿತ ದಾಳಿ ನಡೆಸಿತ್ತು.

ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪ್ರತಿದಾಳಿ ನಡೆಸಿತು. ಎರಡೂ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಭಾರತೀಯ ಯೋಧನಿಗೆ ಗುಂಡು ತಾಕಿ ಹುತಾತ್ಮನಾಗಿದ್ದಾನೆ.

ಗಾಂಧಿ ಕುಟುಂಬ ಸೇರಿ ಮಾಜಿ ಪ್ರಧಾನಿಗಳಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆ ವಾಪಸ್ ಪಡೆಯಲು ನಿರ್ಧಾರ?

ಹುತಾತ್ಮ ಯೋಧ ರಾಹುಲ್​ ಅವರ ಪಾರ್ಥಿವ ಶರೀರ ಇಂದು ಸಂಜೆ ಸ್ವಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಹುತಾತ್ಮ ಯೋಧ ರಾಹುಲ್​ ಅವರ ತಮ್ಮ ಕೂಡ ಸೇನೆಯಲ್ಲಿದ್ದಾರೆ. ಅವರ ತಂದೆ ಕೂಡ ನಿವೃತ್ತ ಯೋಧರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕತುವಾ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಬುಧವಾರ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಮನೆಗಳಿಗೆ ಹಾನಿಯಾಗಿತ್ತು. ಹಸುಗಳು ಗಾಯಗೊಂಡಿದ್ದವು.

ಪಾಕಿಸ್ತಾನ ಸೇನೆಯು 2019 ರಲ್ಲಿ 2 ಸಾವಿರ ಬಾರಿ ಕದನ ವಿರಾಮ ಉಲ್ಲಂಘಿಸಿ, 21 ಭಾರತೀಯ ಸೈನಿಕರನ್ನು ಕೊಂದಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಸೆಪ್ಟೆಂಬರ್‌ನಲ್ಲಿ ತಿಳಿಸಿದೆ.ಕರವೇ ಕಾರ್ಯಕರ್ತರ ಬಂಧನ: ಮುಷ್ಕರ ಕೈಬಿಟ್ಟ ವೈದ್ಯರು: ಮತ್ತೆ ಒಪಿಡಿ ಸೇವೆ ಆರಂಭ

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ