HOME » NEWS » State » KARNATAKA SEX SCANDAL UNION MINISTER DV SADANANDA GOWDA UNHAPPY ON RAMESH JARKIHOLI SEX CD TAPE ISSUE SCT

6 ಸಚಿವರು ಕೋರ್ಟ್​ ಮೆಟ್ಟಿಲೇರಿದ್ದು ಸರಿಯಲ್ಲ; ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅಸಮಾಧಾನ!

DV Sadananda Gowda: ಸಿಡಿ ಪ್ರಕರಣದಿಂದ ಬಿಜೆಪಿ ಪಕ್ಷಕ್ಕೆ ಮುಜುಗರವಾಗಿದೆ. 6 ಸಚಿವರು ಕೋರ್ಟ್​ಗೆ ಹೋಗಿರೋದು ಅವರ ವೈಯಕ್ತಿಕ ವಿಚಾರ. ಆದರೆ, ಅನವಶ್ಯಕವಾಗಿ ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

news18-kannada
Updated:March 6, 2021, 11:35 AM IST
6 ಸಚಿವರು ಕೋರ್ಟ್​ ಮೆಟ್ಟಿಲೇರಿದ್ದು ಸರಿಯಲ್ಲ; ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅಸಮಾಧಾನ!
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ
  • Share this:
ಬೆಂಗಳೂರು (ಮಾ. 6): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯುವತಿಯೊಂದಿಗೆ ಇರುವ ಅಶ್ಲೀಲ ವಿಡಿಯೋ ರಿಲೀಸ್ ಆಗಿ ರಾಜ್ಯದ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಇದಾದ ಬಳಿಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಘಟನೆಯ ಬಳಿಕ ಇನ್ನೂ 6 ಸಚಿವರು ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಯಾವುದೇ ಅವಹೇಳನಕಾರಿ ಸುದ್ದಿಗಳನ್ನು ಪ್ರಸಾರ ಮಾಡದಂತೆ ಕೋರಿ ಕೋರ್ಟ್​ಗೆ ಅರ್ಜಿ ಹಾಕಿದ್ದಾರೆ. ಈ ಘಟನೆಯ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, 6 ಸಚಿವರು ಕೋರ್ಟ್​ಗೆ ಹೋಗಿರೋದು ಅವರವರ ವೈಯಕ್ತಿಕ ವಿಚಾರ. ಆದರೆ, ಅನವಶ್ಯಕವಾಗಿ ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ ಎಂದಿದ್ದಾರೆ.

ಆರು ಜನ ಹಾಗೂ ಒಟ್ಟು 26 ಜನ ಕೋರ್ಟ್ ಗೆ ಹೋಗುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಡಿ.ವಿ ಸದಾನಂದ ಗೌಡ, ಮುಂದಿನ ಸಾಧಕ ಬಾಧಕಗಳನ್ನು ಅರಿತು ಕೋರ್ಟ್ ಮೊರೆ ಹೋಗಿರೋದು ಅವರವರ ವೈಯಕ್ತಿಕ. 6 ಸಚಿವರು ಕೋರ್ಟ್​ಗೆ ಹೋಗಿರೋದು ಅವರವರ ವೈಯಕ್ತಿಕ ವಿಚಾರ. ಆದರೆ, ಅನವಶ್ಯಕವಾಗಿ ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ. ಕೋರ್ಟ್ ಗೆ ಹೋಗಿ ವಿಚಾರವನ್ನು ಗೋಜಲು ಮಾಡಿಕೊಳ್ಳೋದು ನನ್ನ ಪ್ರಕಾರ ಸರಿಯಲ್ಲ ಎನ್ನುವ ಮೂಲಕ ಸಚಿವರು ಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ಪರೋಕ್ಷವಾಗಿ ಸಚಿವ ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಡಿ ಪ್ರಕರಣದಿಂದ ಬಿಜೆಪಿ ಪಕ್ಷಕ್ಕೆ ಮುಜುಗರವಾಗಿದೆ. ರಾಜಕೀಯದಲ್ಲಿ ಈ ರೀತಿಯ ಸಿಡಿಗಳು ತನ್ನದೇ ಆದ ಪ್ರಭಾವ ಬೀರುತ್ತವೆ. ಟೆಕ್ನಾಲಜಿ ಬಹಳ ಮುಂದುವರೆದಿದ್ದು, ಯಾರು ಏನು ಬೇಕಾದರೂ ಮಾಡಬಹುದು. ಆದರೆ, ಇದು ಸತ್ಯವೋ ಸುಳ್ಳೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇಂತಹ ವಿಚಾರ ಬಂದಾಗ ಸೂಕ್ಷ್ಮವಾಗಿರಬೇಕು. ಆಡಳಿತಕ್ಕೂ ಇದರಿಂದ ತೊಂದರೆಯಾಗಲಿದೆ. ಕೇಂದ್ರದಿಂದ ಅದೇ ದಿನ ವರದಿ ಕೂಡ ಕೇಳಿದ್ದರು. ಬಹಳ ವಿಚಾರಗಳು ನಮಗೂ ಗೊತ್ತಿರಲಿಲ್ಲ. ನಾವು‌ ಮಾಧ್ಯಮದ ವರದಿಯನ್ನು ಆಧರಿಸಿ ಒಂದಿಷ್ಟು ಮಾಹಿತಿ ನೀಡಿದ್ದೇವೆ. ಸ್ವಾಭಾವಿಕವಾಗಿ ಇಂತಹ ಆರೋಪ ಬಂದಾಗ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಸತ್ಯ ತಿಳಿಯದೆ ನಮ್ಮ ತೇಜೋವಧೆ ಮಾಡಬಾರದೆಂದು ಕಾನೂನಿನ ಮೊರೆ ಹೋಗಿದ್ದೇವೆ; ಸಚಿವ ಬಿ.ಸಿ. ಪಾಟೀಲ್

ಸಿಡಿ ಪ್ರಕರಣದಿಂದ ಪಕ್ಷಕ್ಕೆ ಮುಜುಗರ ಆಗಿರುವುದು ಹೌದು. ಟೆಕ್ನಾಲಜಿ ಇಷ್ಟೊಂದು ಮುಂದುವರೆದಿದೆ. ಎಲ್ಲರೂ ನೈತಿಕತೆಯಿಂದ ಇರಬೇಕು. ಆರೋಪ ಎದುರಿಸುತ್ತಿರುವವರು ಅಧಿಕಾರದಿಂದ ದೂರ ಉಳಿದು ತನಿಖೆಗೆ ಸಹಕರಿಸಬೇಕು. ಪಕ್ಷ ಇದೆಲ್ಲವನ್ನೂ ಗಮನಿಸಿದ ಕಾರಣದಿಂದಲೇ ನಾವು ರಾಜೀನಾಮೆ ಕೊಡಿಸಿದ್ದು. ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿಗೆ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

ಸಿಟಿ ಸಿವಿಲ್ ಕೋರ್ಟ್​ನಲ್ಲಿ 6 ಸಚಿವರು ಅರ್ಜಿ ಹಾಕಿದ್ದಾರೆ. ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಹೋದ ಸಚಿವರಾದ ಶಿವರಾಮ್ ಹೆಬ್ಬಾರ್, ಎಸ್​.ಟಿ ಸೋಮಶೇಖರ್​, ನಾರಾಯಣ ಗೌಡ, ಭೈರತಿ ಬಸವರಾಜ್​, ಬಿ.ಸಿ ಪಾಟೀಲ್​, ಡಾ. ಕೆ. ಸುಧಾಕರ್​​ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ ಮೊರೆ ಹೋಗಿದ್ದಾರೆ. 67 ಸುದ್ದಿ ಸಂಸ್ಥೆಗಳನ್ನು ಪ್ರತಿವಾದಿಯಾಗಿ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಯನ್ನು 68ನೇ ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ಇನ್ನೂ ಕೆಲವು ರಾಜಕಾರಣಿಗಳ ಸಿಡಿ ಬಿಡುಗಡೆಯ ಸಾಧ್ಯತೆ ಬಗ್ಗೆ ಹೇಳಿಕೆ ನೀಡಿದ್ದ ರಾಜಶೇಖರ್ ಮುಲಾಲಿ ಅವರನ್ನು ಕೂಡ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಜೊತೆಗೆ, ಫೇಸ್ ಬುಕ್, ಟ್ವಿಟರ್, ವಾಟ್ಸಾಪ್, ಯೂಟ್ಯೂಬ್ ಅನ್ನು ಸಹ ಸಚಿವರ ಪರ ವಕೀಲರು ಪ್ರತಿವಾದಿಯನ್ನಾಗಿ ಮಾಡಿದ್ದಾರೆ.
Published by: Sushma Chakre
First published: March 6, 2021, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories