HOME » NEWS » State » KARNATAKA SEES BELLARY BANDH ATTIBELE BORDER BANDH WORKERS STRIKE CAB DRIVERS PROTEST SNVS

ಬಳ್ಳಾರಿ ಬಂದ್, ಅತ್ತಿಬೆಲೆ ಗಡಿ ಬಂದ್, ಕಾರ್ಮಿಕರ ಮುಷ್ಕರ, ಕ್ಯಾಬ್ ಚಾಲಕರ ಪ್ರತಿಭಟನೆ

ರಾಜ್ಯದಲ್ಲಿಂದು ಮಳೆಯ ಮಧ್ಯೆ ಪ್ರತಿಭಟನೆ, ಬಂದ್​ಗಳ ಸದ್ದಾಗಿದೆ. ಬಳ್ಳಾರಿ ವಿಭಜನೆ, ಮರಾಠಾ ಪ್ರಾಧಿಕಾರ, ಕಾರ್ಮಿಕ ನೀತಿ, ಮೋಟಾರು ಕಾಯ್ದೆ ನೀತಿಗಳನ್ನ ವಿರೋಧಿಸಿ ಬಂದ್, ಮುಷ್ಕರ ಮತ್ತು ಪ್ರತಿಭಟನೆಗಳು ರಾಜ್ಯದ ವಿವಿಧೆಡೆ ನಡೆದಿವೆ.

Vijayasarthy SN | news18-kannada
Updated:November 26, 2020, 12:11 PM IST
ಬಳ್ಳಾರಿ ಬಂದ್, ಅತ್ತಿಬೆಲೆ ಗಡಿ ಬಂದ್, ಕಾರ್ಮಿಕರ ಮುಷ್ಕರ, ಕ್ಯಾಬ್ ಚಾಲಕರ ಪ್ರತಿಭಟನೆ
ಬಳ್ಳಾರಿ ಬಂದ್
  • Share this:
ಬೆಂಗಳೂರು(ನ. 26): ರಾಜ್ಯದ ಕೆಲವೆಡೆ ಸೈಕ್ಲೋನ್ ಮಳೆಯ ಜೊತೆಗೆ ಪ್ರತಿಭಟನೆಯ ಬಿಸಿ ತಾಕಿದೆ. ಅನೇಕ ಕಡೆ ಬಂದ್, ಪ್ರತಿಭಟನೆ, ಮುಷ್ಕರಗಳು ನಡೆಯುತ್ತಿವೆ. ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ನಿರ್ಧಾರ ವಿರೋಧಿಸಿ ಬಳ್ಳಾರಿ ಬಂದ್ ನಡೆಸಲಾಗಿದೆ. ಕೇಂದ್ರದ ಕಾರ್ಮಿಕ ನೀತಿ ವಿರೋಧಿಸಿ ದೇಶಾದ್ಯಂತ ಕರೆ ನೀಡಲಾಗಿರುವ ಕಾರ್ಮಿಕರ ಮುಷ್ಕರಕ್ಕೆ ರಾಯಚೂರು ಮೊದಲಾದೆಡೆ ಕಾರ್ಮಿಕರು ಬೆಂಬಲಿಸಿ ಪ್ರತಿಭಟನೆ ನಡೆಸಿದ್ದಾರೆ. ಮರಾಠಾ ಪ್ರಾಧಿಕಾರ ರಚನೆ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಅತ್ತಿಬೆಲೆಯಲ್ಲಿ ರಾಜ್ಯದ ಗಡಿ ಬಂದ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಿವಿಧ ಬೇಡಿಕೆಗಳನ್ನಟ್ಟು ಓಲಾ ಊಬಾರ್ ಕ್ಯಾಬ್ ಚಾಲಕರು ಮತ್ತು ಆಟೋ ಚಾಲಕರು ಮುಷ್ಕರ ನಡೆಸಿದ್ದಾರೆ.

ಬಳ್ಳಾರಿ ಬಂದ್: ವಿಜಯನಗರ ಪ್ರತ್ಯೇಕ ಜಿಲ್ಲೆ ನಿರ್ಮಿಸಿ ಬಳ್ಳಾರಿ ವಿಭಜನೆ ಮಾಡುವ ನಿರ್ಧಾರವನ್ನು ಖಂಡಿಸಿ ಬಳ್ಳಾರಿ ಬಂದ್ ಮಾಡಲಾಗಿದೆ. ಅಖಂಡ ಬಳ್ಳಾರಿ ಜಿಲ್ಲೆ ಹೋರಾಟ ಸಮಿತಿ ಕರೆ ನೀಡಿರುವ ಈ ಬಂದ್​ಗೆ 15ಕ್ಕೂ ಹೆಚ್ಚು ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ನಡೆದಿದೆ. ನಗರದ ರಾಯಲ್ ಸರ್ಕಲ್​ನಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎರಡು ಕತ್ತೆಗಳಿಗೆ ಯಡಿಯೂರಪ್ಪ ಮತ್ತು ಆನಂದ್ ಸಿಂಗ್ ಎಂದು ಹೆಸರಿಸಿ ಕತ್ತೆ ಮೇಲೆ ಕುಳಿತು ಮೆರವಣಿಗೆ ಮಾಡಿ ಕೋಪ ವ್ಯಕ್ತಪಡಿಸಲಾಯಿತು. ಕರ್ನಾಟಕ ಜನಸೇನೆ ಸಂಘಟನೆಯ ಕಾರ್ಯಕರ್ತರು ಕನಕದುರ್ಗಮ್ಮ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿ 101 ತೆಂಗಿನಕಾಯಿ ಸಮರ್ಪಣೆ ಮಾಡಿದರು. ಸಂಘಟನೆಯ ರಾಜ್ಯಾಧ್ಯಕ್ಷ ಯರ್ರಿಸ್ವಾಮಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಕತ್ತೆ ಸವಾರಿ ಬಳಿಕ ಕೆಲ ಹೋರಾಟಗಾರರು ಕುದುರೆ ಸವಾರಿ ಕೂಡ ಮಾಡಿದರು. ರಾಯಲ್ ಸರ್ಕಲ್ ಬಳಿ ಟೆಂಟ್ ಹಾಕಿ ಕುಳಿತು ಧರಣಿ ಕೂಡ ನಡೆಸಿದರು.

ಇದನ್ನೂ ಓದಿ: Constitution Day of India: ಸಂವಿಧಾನ ದಿನ – ನ. 26ರಂದು ಇದರ ಆಚರಣೆ ಯಾಕೆ?

ಬೆಂಗಳೂರಿನಲ್ಲಿ ಆಟೋ, ಟ್ಯಾಕ್ಸಿ ಚಾಲಕರ ಪ್ರತಿಭಟನೆ:

ರಾಜಧಾನಿ ನಗರದಲ್ಲಿ ಸೈಕ್ಲೋನ್ ಮಳೆಯ ನಡುವೆಯೂ ಆಟೋ ಮತ್ತು ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದರು. ಆರ್ಥಿಕ ಸಂಕಷ್ಟ ಇರುವುದರಿಂದ ಕಾರಿನ ಲೋನ್​ಗಳಲ್ಲಿ ಆರು ತಿಂಗಳ ಇಎಂಐ ಹಣವನ್ನು ಮನ್ನಾ ಮಾಡುವಂತೆ ಆಗ್ರಹಿಸಿ ಓಲಾ ಮತ್ತು ಊಬರ್ ಚಾಲಕರು ಪ್ರತಿಭಟನೆ ನಡೆಸಿದರು. ಹಾಗೆಯೇ, ಸಂಚಾರಿ ನಿಯಮ ಉಲ್ಲಂಘನೆಗ ಹೆಚ್ಚು ಮೊತ್ತದ ದಂಡ ವಿಧಿಸುತ್ತಿರುವುದು ಹಾಗೂ ಹಣಕಾಸು ಸಂಸ್ಥೆಗಳು ಎಲ್ಲೆಂದರಲ್ಲಿ ಆಟೋ ಮತ್ತು ಕ್ಯಾಬ್​ಗಳನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವುದನ್ನು ವಿರೋಧಿಸಿ ಆಟೋ ಚಾಲಕರೂ ಕೂಡ ಈ ಪ್ರತಿಭಟನೆಗೆ ಕೈಜೋಡಿಸಿದ್ಧಾರೆ. ಇವುಗಳ ಜೊತೆಗೆ ಇನ್ನಷ್ಟು ಬೇಡಿಕೆ ಮುಂದಿಟ್ಟು ಪೀಸ್ ಆಟೋ ಮತ್ತು ಕ್ಯಾಬ್ ಚಾಲಕರ ಸಂಘಟನೆಯಿಂದ ಈ ಪ್ರತಿಭಟನೆ ನಡೆದಿದೆ.

ಅತ್ತಿಬೆಲೆ ಗಡಿ ಬಂದ್: ಮರಾಠಾ ಅಭಿವೃದ್ಧಿ ನಿಗಮ ರಚಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ವಾಟಾಳ್ ನಾಗರಾಜ್ ಅವರ ಕನ್ನಡ ಒಕ್ಕೂಟ ನೇತೃತ್ವದಲ್ಲಿ ಅತ್ತಿಬೆಲೆಯಲ್ಲಿರುವ ರಾಜ್ಯದ ಗಡಿಯನ್ನು ಬಂದ್ ಮಾಡಲಾಗಿದೆ. ವಿವಿಧ ಕನ್ನಡಪರ ಸಂಘಟನೆಗಳು ಈ ಬಂದ್​ಗೆ ಕೈಜೋಡಿಸಿವೆ. ಡಿಸೆಂಬರ್ 5ರ ಕರ್ನಾಟಕ ಬಂದ್​ಗೆ ಪೂರ್ವಭಾವಿಯಾಗಿ ಈ ಪ್ರತಿಭಟನೆ ನಡೆದಿದೆ. ಪ್ರಾಧಿಕಾರ ರಚನೆಯ ಕ್ರಮವನ್ನು ಸರ್ಕಾರ ಹಿಂಪಡೆಯಲು ನ. 30ರವರೆಗೂ ಸಂಘಟನೆಗಳು ಗಡುವು ನೀಡಿವೆ. ಒಂದು ವೇಳೆ ಹಿಂಪಡೆಯದಿದ್ದರೆ ಡಿ. 5ರಂದು ಕರ್ನಾಟಕ ಬಂದ್ ನಡೆಸಲು ನಿರ್ಧರಿಸಲಾಗಿದೆ.
Workers protest in Raichur
ರಾಯಚೂರಿನಲ್ಲಿ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ


ಕಾರ್ಮಿಕ ಸಂಘಟನೆಗಳ ಮುಷ್ಕರ:

ಕೇಂದ್ರದ ಕಾರ್ಮಿಕ ನೀತಿಗಳನ್ನ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ದೇಶವ್ಯಾಪಿ ಮುಷ್ಕರಕ್ಕೆ ರಾಜ್ಯದಲ್ಲೂ ಕೆಲವೆಡೆ ಸ್ಪಂದನೆ ಸಿಕ್ಕಿದೆ. ಎಐಟಿಯುಸಿ ಮೊದಲಾದ ಕಾರ್ಮಿಕ ಸಂಘಟನೆಗಳ ನೂರಾರು ಕಾರ್ಮಿಕರು ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.
Published by: Vijayasarthy SN
First published: November 26, 2020, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading