2nd PUC Result: ಇಂದು 11 ಗಂಟೆಗೆ ಪ್ರಕಟವಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ; ರಿಸಲ್ಟ್​ ನೋಡುವುದು ಹೇಗೆ?

Karnataka 2nd PUC Result: ಇಂದು ಬೆಳಗ್ಗೆ 11ಗಂಟೆಗೆ ಪಿಯು ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನ 12 ಗಂಟೆಗೆ ವೆಬ್​ಸೈಟಿನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್​ 16ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಸಿ.ಶಿಖಾ ಮಾಹಿತಿ ನೀಡಿದ್ದಾರೆ.

HR Ramesh | news18
Updated:April 15, 2019, 9:32 AM IST
2nd PUC Result: ಇಂದು 11 ಗಂಟೆಗೆ ಪ್ರಕಟವಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ; ರಿಸಲ್ಟ್​ ನೋಡುವುದು ಹೇಗೆ?
ಚಿತ್ರ; ನ್ಯೂಸ್​ 18
HR Ramesh | news18
Updated: April 15, 2019, 9:32 AM IST
ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಫಲಿತಾಂಶ ಇಂದು (ಏ.15)  ಪ್ರಕಟವಾಗಲಿದ್ದು ಸುಮಾರು 6.73 ಲಕ್ಷ ವಿದ್ಯಾರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

ಇಂದು ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು  ವಿದ್ಯಾರ್ಥಿಗಳು http://pue.kar.nic.in ಮತ್ತು http://www.karresults.nic.in  ವೆಬ್​ಸೈಟಿನ ಮೂಲಕ ಫಲಿತಾಂಶ ನೋಡಬಹುದು.  ಎಲ್ಲಾ ಕಾಲೇಜುಗಳಲ್ಲಿ ಮಂಗಳವಾರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಭಾನುವಾರದ ಪತ್ರಿಕಾಗೋಷ್ಠೀಯಲ್ಲಿ ಪದವಿಪೂರ್ವ ಕಾಲೇಜು ಇಲಾಖೆ ನಿರ್ದೇಶಕಿ ಸಿ.ಶಿಖಾ ಮಾಹಿತಿ ನೀಡಿದ್ದಾರೆ.

2019ನೇ ಸಾಲಿನಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ಮಾರ್ಚ್​ನಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದರು. ಇವರಲ್ಲಿ 1.94 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪಿಯು ಫಲಿತಾಂಶ ಸಿಇಟಿ ಪರೀಕ್ಷೆಗೂ ಮುನ್ನ ಪ್ರಕಟವಾಗುತ್ತಿದೆ. ಸಿಟಿಟಿ ಪರೀಕ್ಷೆಯೂ ಏಪ್ರಿಲ್​ 29, 30 ಮತ್ತು ಮೇ 1ರಂದು ನಡೆಯಲಿದೆ.

ಇದನ್ನು ಓದಿ: Second PUC Result: ಏ. 15ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ನಾಳೆ ಬೆಳಗ್ಗೆ 11ಗಂಟೆಗೆ ಪಿಯು ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನ 12 ಗಂಟೆಗೆ ವೆಬ್​ಸೈಟಿನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಏಪ್ರಿಲ್​ 16ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಸಿ.ಶಿಖಾ ಮಾಹಿತಿ ನೀಡಿದ್ದಾರೆ.

ಫಲಿತಾಂಶ ನೋಡಲು ಹೀಗೆ ಮಾಡಿ

  • ಅಧಿಕೃತ ವೆಬ್​ಸೈಟ್​  http://pue.kar.nic.in ಮತ್ತು http://www.karresults.nic.in ಲಾಗ್​ ಆನ್​ ಮಾಡಿ

  • ಹೋಮ್​ ಪೇಜ್​ನಲ್ಲಿ 'Karnataka PUC Result 2019' ಕ್ಲಿಕ್​ ಮಾಡಿ

  • ನಿಗದಿತ ಸ್ಥಳದಲ್ಲಿ ನಿಮ್ಮ ನೋಂದಾಯಿತ ಸಂಖ್ಯೆ ಮತ್ತು ಪಾಸ್​ವರ್ಡ್​ ನಮೂದಿಸಿ

  • ಸಬ್​ಮಿಟ್​ ಬಟನ್​ ಕ್ಲಿಕ್​ ಮಾಡಿ


 

First published:April 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ