• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Schools Reopen: ರಾಜ್ಯದಲ್ಲಿ ನಾಳೆಯಿಂದ ಶಾಲೆಗಳು ಶುರು; ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ

Karnataka Schools Reopen: ರಾಜ್ಯದಲ್ಲಿ ನಾಳೆಯಿಂದ ಶಾಲೆಗಳು ಶುರು; ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರಾಜ್ಯಾದ್ಯಂತ  9 ಹಾಗೂ 10ನೇ ತರಗತಿ ಪ್ರಾರಂಭಕ್ಕೆ 16,850 ಪ್ರೌಢಶಾಲೆಗಳು ಸಜ್ಜಾಗಿವೆ. ಜೊತೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಾರಂಭಿಸಲು 5,492 ಪಿಯು ಕಾಲೇಜುಗಳು ಸಿದ್ಧತೆ ಮಾಡಿಕೊಂಡಿವೆ.

  • Share this:

    ಬೆಂಗಳೂರು(ಆ.22): ಕೊರೋನಾ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ನಾಳೆಯಿಂದ ತೆರೆಯುತ್ತಿವೆ. ಹೌದು, ಆಗಸ್ಟ್​ 23ರಿಂದ 9,10,11 ಮತ್ತು 12ನೇ ತರಗತಿಗಳು ಶುರುವಾಗಲಿದ್ದು, ಶಿಕ್ಷಣ ಇಲಾಖೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಬರೋಬ್ಬರಿ 18 ತಿಂಗಳ ಬಳಿಕ ಶಾಲೆಗಳು ತೆರೆಯುತ್ತಿದ್ದು, ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲು ಉತ್ಸುಕರಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲೇ ಆನ್​ಲೈನ್​ ಕ್ಲಾಸ್​ ಕೇಳಿ ಕೇಳಿ ಬೇಸರಗೊಂಡಿದ್ದ ಮಕ್ಕಳು ಈಗ ಶಾಲೆಯ ವಾತಾವರಣದಲ್ಲಿ ನೇರವಾಗಿ ಪಾಠ ಕೇಳುವ ಅವಕಾಶ ಸಿಕ್ಕಿದೆ.


    ನಾಳೆಯಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶಾಲೆಗಳು ತೆರೆಯುತ್ತಿವೆ. ಈಗಾಗಲೇ ಶಿಕ್ಷಣ ಇಲಾಖೆ ಕೊರೋನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಸಂಪೂರ್ಣವಾಗಿ ಬಂದ್ ಆಗಿದ್ದ ಭೌತಿಕ ತರಗತಿಗಳು ನಾಳೆಯಿಂದ ಶುರುವಾಗಲಿವೆ. ವಿದ್ಯಾರ್ಥಿಗಳು ಖುಷಿಯಿಂದ ಶಾಲೆಗೆ ತೆರಳುತ್ತಾರೆ ಎನ್ನಲಾಗುತ್ತಿದೆ.


    ಕೊರೋನಾ ಮಾರ್ಗಸೂಚಿಯೊಂದಿಗೆ ಭೌತಿಕ ತರಗತಿ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಅದರಂತೆ ರಾಜ್ಯಾದ್ಯಂತ  9 ಹಾಗೂ 10ನೇ ತರಗತಿ ಪ್ರಾರಂಭಕ್ಕೆ 16,850 ಪ್ರೌಢಶಾಲೆಗಳು ಸಜ್ಜಾಗಿವೆ. ಜೊತೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪ್ರಾರಂಭಿಸಲು 5,492 ಪಿಯು ಕಾಲೇಜುಗಳು ಸಿದ್ಧತೆ ಮಾಡಿಕೊಂಡಿವೆ.


    ಇದನ್ನೂ ಓದಿ:Bengaluru: ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ ಬರೋಬ್ಬರಿ 11 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ..!


    ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ


    ಇನ್ನು, ಶಾಲೆಗೆ ಬರುವ ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕು. ನನ್ನ ಮಗ/ಮಗಳು ಶಾಲೆಗೆ ಹೋಗಲು ನನಗೆ ಅನುಮತಿ ಇದೆ ಎಂಬ ಒಪ್ಪಿಗೆ ಪತ್ರ ಅದಾಗಿದೆ. ಅನುಮತಿ ಪತ್ರ ಇಲ್ಲದೆ ಇದ್ದರೆ, ಭೌತಿಕ ತರಗತಿಗೆ ಹಾಜರಾಗಲು ಅವಕಾಶ ಇಲ್ಲ.


    ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಕೈಗೊಂಡಿರುವ ಕುರಿತು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಪೋಷಕರ ಮನಸಲ್ಲಿರುವ ಆತಂಕವನ್ನು ದೂರ ಮಾಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ನೂತನ ಪ್ರಯತ್ನ ಮಾಡಿದೆ. ಪೋಷಕರು ಹಾಗೂ ಮಕ್ಕಳಲ್ಲಿ ಧೈರ್ಯ ತುಂಬಲು ನಾಳೆ ಈ ವಿಡಿಯೋ ಬಿಡುಗಡೆ ಮಾಡಲಾಗುತ್ತದೆ.


    ಕೇವಲ ಭೌತಿಕ ತರಗತಿಗಳು ಮಾತ್ರವಲ್ಲದೇ, ನಾಳೆಯಿಂದ ಯಥಾಪ್ರಕಾರ ಆನ್​ಲೈನ್​ ತರಗತಿಗಳೂ ಸಹ ನಡೆಯುತ್ತವೆ.  ಆನ್ ಲೈನ್ , ಆಫ್ ಲೈನ್ ಎರಡರಲ್ಲೂ ತರಗತಿ ನಡೆಸಲಾಗುತ್ತದೆ. 50:50 ಅನುಪಾತದಲ್ಲಿ ಭೌತಿಕ ತರಗತಿ ಮಾಡಲಾಗುತ್ತದೆ.
    ಬ್ಯಾಚ್ ಆಧಾರದಲ್ಲಿ ಮೊದಲ ಮೂರು ದಿನ‌ ಭೌತಿಕ ತರಗತಿ, ನಂತರ ಮೂರು ದಿನ ಭೌತಿಕ ತರಗತಿ ನಡೆಯಲಿದೆ.  ವಾರದ ಮೊದಲ ಮೂರು ದಿನ ಭೌತಿಕ ತರಗತಿಗೆ ಗೈರಾದ ವಿದ್ಯಾರ್ಥಿಗಳಿಗೆ, ನಂತರ ಮೂರು ದಿನ ಭೌತಿಕ ತರಗತಿ ನಡೆಸಲಾಗುತ್ತದೆ.


    ಇದನ್ನೂ ಓದಿ:Weekly Horoscope: ಮಿಥುನ ರಾಶಿಯವರಿಗೆ ಕಂಕಣ ಭಾಗ್ಯ; ಈ ವಾರ ಉಳಿದ ರಾಶಿಗಳಿಗೆ ಯಾವ ಫಲ ಸಿಗಲಿದೆ?


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

    Published by:Latha CG
    First published: