Karnataka Schools Reopening: ಇಂದಿನಿಂದ ರಾಜ್ಯದಲ್ಲಿ 6-8ನೇ ತರಗತಿಗಳು ಆರಂಭ; ಮಕ್ಕಳನ್ನು ಸ್ವಾಗತಿಸಲು ಸಜ್ಜಾಗಿವೆ ಶಾಲೆಗಳು

ವಾರದಲ್ಲಿ ಐದು ದಿನ ತರಗತಿಗಳು ನಡೆಯಲಿವೆ. ದಿನ ಬಿಟ್ಟು ದಿನ ಆನ್​ಲೈನ್ ಹಾಗೂ ಆಫ್​ಲೈನ್ ತರಗತಿಗಳು ಜರುಗಲಿದ್ದು, ಮಕ್ಕಳು  ಎರಡರಲ್ಲಿ ಒಂದು ತರಗತಿಯನ್ನು ಕಡ್ಡಾಯವಾಗಿ ಕೇಳಬೇಕು. ಹಾಜರಾತಿಯೂ ಕಡ್ಡಾಯವಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು(ಸೆ.06): ಕೊರೋನಾ 3ನೇ ಅಲೆ(Corona 3rd Wave) ಆತಂಕದ ನಡುವೆಯೇ ಕರ್ನಾಟಕದಲ್ಲಿ(Karnataka Schools Reopening) ಇಂದಿನಿಂದ ಎರಡನೇ ಹಂತದಲ್ಲಿ 6-8ನೇ(6-8th classes) ತರಗತಿಗಳು ಆರಂಭವಾಗುತ್ತಿವೆ. ಕೊರೋನಾ ಕಾರಣದಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ಬರೋಬ್ಬರಿ 18 ತಿಂಗಳ ಬಳಿಕ ಮತ್ತೆ ತೆರೆಯುತ್ತಿವೆ. ಈ ಮೊದಲು 9-12ನೇ ತರಗತಿಗಳನ್ನು(9-12th classes) ಆರಂಭಿಸಲಾಗಿತ್ತು. ಅಲ್ಲಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆ, ಇಂದಿನಿಂದ 6,7 ಮತ್ತು 8ನೇ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ.  ಇನ್ನೂ ಸಹ 1-5 ತರಗತಿಗಳನ್ನು(Primary Schools) ಆರಂಭಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಹೀಗಾಗಿ  ಪ್ರೈಮರಿ ಶಾಲೆ ಆರಂಭಿಸುವಂತೆ ಪೋಷಕರು ಒತ್ತಡ ಹಾಕುತ್ತಿದ್ದಾರೆ.

    ಇಂದಿನಿಂದ ಮೂರು ತರಗತಿಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಪಾಸಿಟಿವಿಟಿ ದರ(Positivity Rate) ಶೇ.2ಕ್ಕಿಂತ ಕಡಿಮೆ ಇರುವ ಕಡೆ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಕೇರಳ ಗಡಿ(Kerala Border districts) ಭಾಗದ ತಾಲೂಕುಗಳನ್ನು ಹೊರತುಪಡಿಸಿ ಉಳಿದೆಡೆ 6-8ನೇ ತರಗತಿಗಳನ್ನು ಶುರು ಮಾಡಲಾಗುತ್ತಿದೆ.

    ಇಷ್ಟು ದಿನ ಆನ್​ಲೈನ್​ ತರಗತಿಗಳನ್ನು ಕೇಳಿ ಶಾಲೆಯ ಮುಖ ನೋಡದೆ ಬೇಸರಗೊಂಡಿದ್ದ ಮಕ್ಕಳಿಗೀಗ ಮತ್ತೆ ಶಾಲೆ ಆರಂಭವಾಗಿರುವುದು ರೆಕ್ಕೆ ಬಂದಷ್ಟೇ ಖುಷಿಯಾಗಿದೆ. ಶಾಲಾ ಸಿಬ್ಬಂದಿಗಳು ಸಹ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕೊರೋನಾ ಮಾರ್ಗಸೂಚಿ ಅನುಸಾರ ಶಾಲೆಗಳನ್ನು ಈಗಾಗಲೇ ಸ್ವಚ್ಛ ಮಾಡಲಾಗಿದೆ. ಶಾಲಾ ಆವರಣ, ಕೊಠಡಿ ಮತ್ತು ಪ್ರಯೋಗಾಲಯಗಳನ್ನು ಸ್ಯಾನಿಟೈಸ್ ಮಾಡಲಾಗಿದೆ.

    ಇದನ್ನೂ ಓದಿ:Gold Price Today: ಹೆಚ್ಚೇನೂ ಜಾಸ್ತಿಯಾಗಿಲ್ಲ ಚಿನ್ನದ ಬೆಲೆ; ಇಂದಿನ ದರ ಹೀಗಿದೆ ನೋಡಿ

    ಇನ್ನು, ಮಕ್ಕಳ ಭೌತಿಕ ತರಗತಿ ಹಾಜರಾತಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ ಎಂದು ಶಿಕ್ಷಣ ಇಲಾಖೆ ಹೇಳಿದೆ. ಹೀಗಾಗಿ ಮಕ್ಕಳು ಶಾಲೆಗೆ ಬರುವ ಮುನ್ನ ಶಾಲೆಗೆ ಕಳುಹಿಸಲು ತಮ್ಮ ತಂದೆ-ತಾಯಿ ಒಪ್ಪಿಗೆ ನೀಡಿರುವ ಪತ್ರವನ್ನು ಕಡ್ಡಾಯವಾಗಿ ತರಬೇಕು. ಪ್ರತಿ ತರಗತಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಂಡ ರಚನೆ ಮಾಡಲಾಗುತ್ತದೆ. ಒಂದು ತಂಡದಲ್ಲಿ ಗರಿಷ್ಠ 20 ಮಕ್ಕಳು ಇರುವಂತೆ ಸೂಚನೆ ನೀಡಲಾಗಿದೆ.

    ವಾರದಲ್ಲಿ ಐದು ದಿನ ತರಗತಿಗಳು ನಡೆಯಲಿವೆ. ದಿನ ಬಿಟ್ಟು ದಿನ ಆನ್​ಲೈನ್ ಹಾಗೂ ಆಫ್​ಲೈನ್ ತರಗತಿಗಳು ಜರುಗಲಿದ್ದು, ಮಕ್ಕಳು  ಎರಡರಲ್ಲಿ ಒಂದು ತರಗತಿಯನ್ನು ಕಡ್ಡಾಯವಾಗಿ ಕೇಳಬೇಕು. ಹಾಜರಾತಿಯೂ ಕಡ್ಡಾಯವಾಗಿರುತ್ತದೆ.

    ಈಗಾಗಲೇ ಮೊದಲ ಹಂತದಲ್ಲಿ 9-12ನೇ ತರಗತಿಗಳನ್ನು ಆರಂಭಿಸಲಾಗಿದ್ದು, ಆಗಸ್ಟ್​ 23ರಿಂದ ಶಾಲೆಗಳು ಶುರುವಾಗಿವೆ. ಇನ್ನೂ 1-5ನೇ ತರಗತಿ ಆರಂಭವಾಗಿಲ್ಲ.  ಎರಡನೇ ಹಂತದ ಶಾಲೆ ಓಪನ್ ಬೆನ್ನಲ್ಲೇ,  1 ರಿಂದ 5 ನೇ ತರಗತಿ ಪ್ರಾರಂಭಕ್ಕೆ ಪೋಷಕರು ಒತ್ತಾಯ ಮಾಡುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಶಾಲೆ ಆರಂಭಿಸುವಂತೆ ಪೋಷಕರು ಮನವಿ ಮಾಡುತ್ತಿದ್ದಾರೆ.

    ಇದನ್ನೂ ಓದಿ:Karnataka Weather Today: ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ; ಹೈ ಅಲರ್ಟ್​ ಘೋಷಣೆ

    ಇದರ ಜೊತೆಗೆ ಖಾಸಗಿ ಶಾಲಾ ಒಕ್ಕೂಟಗಳು ಸಹ 1-5ನೇ ತರಗತಿ ಆರಂಭಿಸಿ ಎಂದು ಒತ್ತಾಯಿಸುತ್ತಿವೆ. ಪ್ರಾಥಮಿಕ ಶಾಲೆ ಪ್ರಾರಂಭಕ್ಕೆ ಒತ್ತಾಯಿಸಿ ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್​ ತಾಳಿಕಟ್ಟೆ  ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಗ್ರಾಮೀಣ ಹಾಗೂ ‌ನಗರ ಪ್ರದೇಶಗಳಲ್ಲಿ ಶಾಲೆ ಪ್ರಾರಂಭಿಸುವಂತೆ ‌ಪೋಷಕರೇ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇಂದಿನಿಂದ 6-8ನೇ ತರಗತಿ ಶಾಲೆ ಪ್ರಾರಂಭವಾದ್ರೆ, 1 ರಿಂದ 5 ನೇ ತರಗತಿ ಮಕ್ಕಳನ್ನ ಶಾಲೆಗೆ ತಂದು ಬಿಟ್ಟು ಹೋಗುತ್ತೇವೆ ಅಂತ ಪೋಷಕರು ಹೇಳ್ತಾ ಇದ್ದಾರೆ.  ಹೀಗಾಗಿ 1 ರಿಂದ 5 ನೇ ತರಗತಿ ಶಾಲೆ ಪ್ರಾರಂಭಿಸಿ ಅಂತ ಲೋಕೇಶ್ ತಾಳಿಕಟ್ಟೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
    Published by:Latha CG
    First published: