School Text Book: 2 ಸಾಲಿನಲ್ಲಿ ಮುಗಿದು ಹೋಗುತ್ತೆ ಟಿಪ್ಪು ಪಾಠ; ಅವ್ರ ಹೆಸರಿರೋ ಕಡೆ ಏಕವಚನ ಬಳಕೆ

ಪರಿಷ್ಕೃತ ಪಠ್ಯದಲ್ಲಿ ಟಿಪ್ಪು ಸುಲ್ತಾನ್​ ಸಾಧನೆ, ಟಿಪ್ಪು ಹೋರಾಟ ಮೈಸೂರಿನ ಆಳ್ವಿಕ ಬಗೆಗಿನ ಮಾಹಿತಿಯನ್ನು ತೆಗೆದು ಹಾಕಲಾಗಿದೆ. 10ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯದಲ್ಲೂ ಟಿಪ್ಪು ಕುರಿತ ಪಾಠವನ್ನು ತೆಗೆದುಹಾಕಲಾಗಿದೆ.

2 ಸಾಲಿನಲ್ಲಿ ಮುಗಿಯುತ್ತೆ ಟಿಪ್ಪು ಪಾಠ

2 ಸಾಲಿನಲ್ಲಿ ಮುಗಿಯುತ್ತೆ ಟಿಪ್ಪು ಪಾಠ

  • Share this:
ಬೆಂಗಳೂರು (ಮೇ 17): ರಾಜ್ಯ ರಾಜಕೀಯದಲ್ಲಿ (State Politics) ಕೆಸರೆರೆಚಾಟಕ್ಕೆ ಹಾಗೂ ಭಾರೀ ವಿವಾದಕ್ಕೆ (Controversy) ಕಾರಣವಾಗಿದ್ದ ಟಿಪ್ಪು ಪಠ್ಯ ಪುಸ್ತಕದಲ್ಲಿನ (Textbook) ಗೊಂದಲಕ್ಕೆ ಸರ್ಕಾರ ಇದೀಗ ತೆರೆ ಎಳೆದಿದೆ. ಶಾಲಾ ಪುಸ್ತಕದಲ್ಲಿ ಟಿಪ್ಪು ವೈಭವೀಕರಣಕ್ಕೆ ಸಂಪೂರ್ಣ ಬ್ರೇಕ್​ ಬಿದ್ದಿದ್ದು, 2ನೇ ಎರಡೇ ಎರಡು ಸಾಲಿನಲ್ಲಿ ಟಿಪ್ಪು ಕುರಿತ ಪಾಠ ಮುಕ್ತಾಯವಾಗುತ್ತದೆ.  ಮೈಸೂರು ಹುಲಿ ಟಿಪ್ಪು ಸುಲ್ತಾನ್ (Tipu sultan)​ ಎಂಬ ಬಿರುದನ್ನು ಕೂಡ ಕಡಿತ ಮಾಡಲಾಗುತ್ತದೆ. ಪಠ್ಯದಲ್ಲಿ ಎಲ್ಲಿಯೂ ಮೈಸೂರು ಹುಲಿ ಟಿಪ್ಪು ಬಳಸಿಲ್ಲ, ಈ ಹಿಂದೆ 6ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಮೈಸೂರು ಹುಲಿ ಟಿಪ್ಪು ಬಳಸಲಾಗಿತ್ತು. ಆದ್ರೆ ಈ ಬಾರಿ ಮೈಸೂರು ವಿಭಾಗದಲ್ಲಿ ಪಠ್ಯದಲ್ಲಿದ್ದ ಟಿಪ್ಪು ವೈಭವೀಕರಣಕ್ಕೆ ಕತ್ತರಿ ಬಿದ್ದಿದೆ.

ಟಿಪ್ಪು ಸಾಧನೆ, ಹೋರಾಟದ ಮಾಹಿತಿ ಕತ್ತರಿ

ಪರಿಷ್ಕೃತ ಪಠ್ಯದಲ್ಲಿ ಟಿಪ್ಪು ಸುಲ್ತಾನ್​ ಸಾಧನೆ, ಟಿಪ್ಪು ಹೋರಾಟ ಮೈಸೂರಿನ ಆಳ್ವಿಕ ಬಗೆಗಿನ ಮಾಹಿತಿಯನ್ನು ತೆಗೆದು ಹಾಕಲಾಗಿದೆ. 10ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯದಲ್ಲೂ ಟಿಪ್ಪು ಕುರಿತ ಪಾಠವನ್ನು ತೆಗೆದುಹಾಕಲಾಗಿದೆ. ಕರ್ನಾಟಕದಲ್ಲಿ ಬ್ರಿಟಿಷ್​ ಆಳ್ವಿಕೆಗೆ ಪ್ರತಿರೋಧಗಳ ವಿಚಾರವನ್ನು ತೆಗೆದು ಹಾಕಲಾಗಿದೆ. ಜೊತೆಗೆ ಮೈಸೂರು ಒಡೆಯರು ಎಂಬ  ಪಾಠದಲ್ಲಿಯೂ ಟಿಪ್ಪು ಬಗ್ಗೆ ಮಾಹಿತಿ ಸಿಗಲ್ಲ

ಇದನ್ನೂ ಓದಿ: Viral Audio: 200 ಕೋಟಿ ಮಾತು, 5 ನಿಮಿಷದ ಸಂಭಾಷಣೆ! ಏನಿದು ರಹಸ್ಯ? ವೈರಲ್ ಆಗಿರೋ ಆಡಿಯೋ ಯಾರದ್ದು?

ಟಿಪ್ಪು ಹೆಸರಿನ ಕಡೆ ಅವನು ಎಂದು ಏಕವಚನ ಬಳಕೆ

ಟಿಪ್ಪು ಪಠ್ಯವನ್ನು ಕಡಿತಗೊಳಿಸಿದ ಬಳಿಕ, ಹೊಸ ಪಠ್ಯದಲ್ಲಿ ಟಿಪ್ಪು ಹೆಸರಿರೋ ಕಡೆಯಲ್ಲಿ ಏಕವಚನ ಬಳಕೆ ಮಾಡಲಾಗಿದೆ. ಹೋರಾಡಿದವನು, ವಶಪಡಿಕೊಂಡ ಎಂಬ ಪದವನ್ನು ಬಳಸಲಾಗುತ್ತಿದೆ. ಆದರೆ ಪಠ್ಯ ಪುಸ್ತಕ ಸಮಿತಿ ಮೈಸೂರಿನ ರಾಜರಿಗೆ ಗೌರವಯುತವಾದ ಪದ ಬಳಸಿದೆ.

ಪಠ್ಯಪುಸ್ತಕದಿಂದ ಭಗತ್‌ ಸಿಂಗ್‌ ಗದ್ಯ ಕೈಬಿಟ್ಟಿಲ್ಲ

ರಾಜ್ಯದಲ್ಲಿ 10ನೇ ತರಗತಿ ಪಠ್ಯದಲ್ಲಿದ್ದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪಾಠ ಕೈಬಿಡಲಾಗಿದೆ ಎಂಬ ವದಂತಿಗೆ ಹಬ್ಬಿತ್ತು. ಈ ವದಂತಿಗೆ  ಸಾರ್ವಜನಿಕ ಶಿಕ್ಷಣ ಇಲಾಖೆಗೆ ತೆರೆ ಎಳೆದಿದೆ. ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ಗದ್ಯ ಪಾಠವನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ. ಭಗತ್ ಸಿಂಗ್ ಪಾಠವನ್ನು ಕೈ ಬಿಟ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ.ಹೆಡಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಸಲಾಗಿದೆ. ಈ ಮೂಲಕ ಮಹಾನ್ ದೇಶಪ್ರೇಮಿ ಭಗತ್ ಸಿಂಗ್​ ಅವರಿಗೆ ರಾಜ್ಯ ಸರ್ಕಾರ ಅವಮಾನ ಮಾಡಿದೆ ಎಂದು ಆರೋಪಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದೆ

ಸಮಾಜ ವಿಜ್ಞಾನ ಹಾಗೂ ಭಾಷಾ ಪಠ್ಯ ಪುಸ್ತಕಗಳಲ್ಲಿದ್ದ ಸೂಕ್ಷ್ಮ ವಿಚಾರಗಳನ್ನು ಪರಿಶೀಲಿಸಿ, ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಲಾಗಿತ್ತು. ಈ ಸಮಿತಿಯು 6ರಿಂದ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳು ಹಾಗೂ 1ರಿಂದ 10ನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದೆ.

ಇದನ್ನೂ ಓದಿ: Pratap Reddy: ‘ಪ್ರತಾಪ' ತೋರಿಸಿದ್ರೆ ಹುಷಾರ್! ರೌಡಿಗಳಿಗೆ ನೂತನ ಪೊಲೀಸ್ ಕಮಿಷ್‌ನರ್ ವಾರ್ನಿಂಗ್

10ನೇ ತರಗತಿ ಪಠ್ಯದಲ್ಲಿ ಭಗತ್ ಸಿಂಗ್ ಗದ್ಯವಿದೆ

ಪ್ರಸ್ತುತ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿದ್ದ ಭಗತ್‌' ಸಿಂಗ್ ಗದ್ಯವನ್ನು ಕೈಬಿಟ್ಟು ಹೆಡಗೆವಾರ್ ಕುರಿತ ಗದ್ಯ ಸೇರಿಸಲಾಗಿದೆ ಎಂದು ಸುದ್ದಿ ಹರಡಿದಾಡುತ್ತಿದೆ. ಆದರೆ, ವಾಸ್ತವವಾಗಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ಗದ್ಯ ಪಾಠ ಕೈಬಿಟ್ಟಿಲ್ಲ. ಸದ್ಯ ಪರಿಷ್ಕರಿಸಿರುವ 10ನೇ ತರಗತಿ ಪ್ರಥಮ ಭಾಷಾ ಕನ್ನಡ ಪಠ್ಯ ಪುಸ್ತಕವು ಪ್ರಸ್ತುತ ಮುದ್ರಣ ಹಂತದಲ್ಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
Published by:Pavana HS
First published: