ಉಪ್ಪಿನಂಗಡಿಯ ಈ ಶಾಲೆಯಲ್ಲಿ ವಾಟರ್​ ಬೆಲ್​​ ವ್ಯವಸ್ಥೆ; ಇದರ ವಿಶೇಷತೆ ಕೇಳಿದರೆ ವಾವ್​ ಅಂತೀರಾ..!

Latha CG | news18-kannada
Updated:November 23, 2019, 7:40 AM IST
ಉಪ್ಪಿನಂಗಡಿಯ ಈ ಶಾಲೆಯಲ್ಲಿ ವಾಟರ್​ ಬೆಲ್​​ ವ್ಯವಸ್ಥೆ; ಇದರ ವಿಶೇಷತೆ ಕೇಳಿದರೆ ವಾವ್​ ಅಂತೀರಾ..!
ವಾಟರ್​ ಬೆಲ್​
  • Share this:
ತರಗತಿಯಲ್ಲಿ ಕುಳಿತು ಪಾಠ ಕೇಳುವ ಆ ಶಾಲೆಯ ಮಕ್ಕಳು ತಲೆನೋವು, ಹೊಟ್ಟೆ ನೋವು ಎನ್ನುವ ನೋವನ್ನು ತೋಡಿಕೊಳ್ಳುತ್ತಲೇ ಇದ್ದ ದಿನವಿತ್ತು. ಆದರೆ ಇದೀಗ ಆ ಶಾಲೆಯಲ್ಲಿ ವಿಸ್ಮಯಕಾರಿ ರೀತಿಯಲ್ಲಿ ನೋವುಗಳ ಕಾರಣಗಳು ಮರೆಯಾಗಲಾರಂಭಿಸಿದೆ. ಹೌದು ಮನೆಯಿಂದ ಶಾಲೆಗೆ ಬಂದ ಮಕ್ಕಳು ಶಾಲೆಯಲ್ಲಿ ನೀರು ಕುಡಿಯುವುದನ್ನೇ ಮರೆತಿರುವ ಕಾರಣವೇ ಈ ಎಲ್ಲಾ ನೋವುಗಳಿಗೆ ಪ್ರಮುಖ ಕಾರಣ ಎನ್ನುವುದನ್ನು ಮನಗಂಡ ಆ ಶಾಲೆಯ ಆಡಳಿತ ಮಂಡಳಿ ಆರಂಭಿಸಿದ 'ವಾಟರ್ ಬೆಲ್' ಎನ್ನುವುದು ಮಾಂತ್ರಿಕ ರೂಪದ ಬದಲಾವಣೆಯನ್ನು ತಂದಿದೆ.

ಪ್ರತಿ ದಿನವೂ ಒಂದಲ್ಲ ಒಂದು ರೀತಿಯ ನೋವುಗಳಿಂದ ಬಳಲುತ್ತಿದ್ದ ಈ ಶಾಲೆಯ ಮಕ್ಕಳಲ್ಲಿ ಇದೀಗ ನವೋಲ್ಲಾಸವಿದೆ. ತಲೆನೋವು, ಹೊಟ್ಟೆ ನೋವು ಎನ್ನುವ ನೋವುಗಳು ಈ ಶಾಲೆಯಲ್ಲಿ ಇದೀಗ ಬಲು ಅಪರೂಪವಾಗಿದೆ. ಹೌದು ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿರುವ ಇಂದಪ್ರಸ್ಥ ಶಾಲೆಯ ವಿಶೇಷ. ವಾರದ ಹಿಂದೆ ಪ್ರತಿ ದಿನ ಒಂದಲ್ಲ ಒಂದು ಮಗು ತಲೆ ನೋವು, ಹೊಟ್ಟೆ ನೋವು ಎಂದು ಮನೆಯಲ್ಲಿ ಹೇಳಿಕೊಳ್ಳದ ಮಕ್ಕಳಿರಲಿಲ್ಲ. ಆದರೆ ಶಾಲೆಯ ಆಡಳಿತ ಮಂಡಳಿ ಮಕ್ಕಳ ಆರೋಗ್ಯದ ಕಾಳಜಿಯಲ್ಲಿ ತೆಗೆದುಕೊಂಡ ಒಂದು ನಿರ್ಧಾರ ಮಕ್ಕಳ ಆರೋಗ್ಯದ ಮೇಲೆ ವಿಶೇಷ ರೀತಿಯಲ್ಲಿ ಪರಿಣಾಮ ಬೀರಲಾರಂಭಿಸಿದೆ.

ಸೋಮಶೇಖರ್​ ಫೈರ್​ ಬ್ರಾಂಡ್​ ವ್ಯಕ್ತಿ; ಅವರು ಬಿಜೆಪಿಗೆ ಫಿಟ್​; ಕೇಂದ್ರ ಸಚಿವ ಸದಾನಂದಗೌಡ

ಮಕ್ಕಳ ಈ ರೀತಿಯ ವ್ಯಾಧಿಗಳಿಗೆ ಪ್ರಮುಖ ಕಾರಣ ಮಕ್ಕಳಲ್ಲಿ ಕಡಿಮೆಯಾಗುತ್ತಿರುವ ನೀರು ಕುಡಿಯುವ ಅಭ್ಯಾಸ ಎನ್ನುವುದನ್ನು ಮನಗಂಡ ಶಾಲೆಯ ಆಡಳಿತ ಮಂಡಳಿ 'ವಾಟರ್ ಬೆಲ್' ಎನ್ನುವ ವಿಶೇಷ ವ್ಯವಸ್ಥೆಯನ್ನು ಶಾಲೆಯಲ್ಲಿ ಜಾರಿಗೆ ತಂದಿದ್ದಾರೆ. ಪ್ರತಿದಿನ ಬೆಳಿಗ್ಗೆ 10.35 , 12 ಮತ್ತು 2 ಗಂಟೆಗೆ ಈ ಬೆಲ್ ಬಾರಿಸಲಾಗುತ್ತದೆ. ಈ ಬೆಲ್ ಬಾರಿಸಿದ ತಕ್ಷಣ ತರಗತಿಯಲ್ಲಿರುವ ಎಲ್ಲಾ ಮಕ್ಕಳು ತಾವು ಮನೆಯಿಂದ ತಂದ ನೀರಿನ ಬಾಟಲಿಯಿಂದ ನೀರು ಕುಡಿಯಬೇಕಿದೆ. ಬೆಲ್ ಬಾರಿಸುವ ಸಂದರ್ಭ ತರಗತಿಯಲ್ಲಿ ಅಧ್ಯಾಪಕರೂ ಇರುವ ಕಾರಣ ಎಲ್ಲಾ ವಿದ್ಯಾರ್ಥಿಗಳೂ ನೀರು ಕುಡಿಯುತ್ತಿದ್ದಾರೆಯೇ ಎನ್ನುವುದನ್ನು ಗಮನಿಸುವ ವ್ಯವಸ್ಥೆಯೂ ಇಲ್ಲಿದೆ. ವಾಟರ್ ಬೆಲ್ ವ್ಯವಸ್ಥೆಯ ಬಳಿಕ ಮಕ್ಕಳ ಚಟುವಟಿಕೆಗಳಲ್ಲಿ ಹೆಚ್ಚಿನ ಬದಲಾವಣೆಯಾಗಿರುವುದನ್ನು ಪೋಷಕರು ಹಾಗೂ ಅಧ್ಯಾಪಕರೂ ಗಮನಿಸಿದ್ದಾರೆ.

ಮನೆಯಿಂದ ಪೋಷಕರು ಮಕ್ಕಳಿಗೆ ಶಾಲೆಯಲ್ಲಿ ನೀರು ಕುಡಿಯಲೆಂದು ವಾಟರ್ ಬಾಟಲ್ ನಲ್ಲಿ ತುಂಬಿಸಿಕೊಡುವ ನೀರು ಈ ಹಿಂದೆ ಬೆಳಿಗ್ಗೆ ಇದ್ದ ರೀತಿಯಲ್ಲೇ ಸಂಜೆ ಮನೆ ತಲುಪುತ್ತಿತ್ತು. ಶಾಲೆಯ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ಬ್ಯುಸಿಯಾಗಿರುವ ವಿದ್ಯಾರ್ಥಿಗಳಿಗೆ ನೀರು ಕುಡಿಯಬೇಕು ಎನ್ನುವುದೇ ಮರೆತು ಹೋಗುತ್ತದೆ. ಆದರೆ ಇದೀಗ ವಾಟರ್ ಬೆಲ್ ಬಾರಿಸಿದ ತಕ್ಷಣ ನೀರು ಕುಡಿಯಬೇಕು ಎನ್ನುವುದನ್ನು ಮನಗಂಡ ವಿದ್ಯಾರ್ಥಿಗಳು ಈ ವ್ಯವಸ್ಥೆಗೀಗ ಸಂಪೂರ್ಣ ಒಗ್ಗಿಕೊಂಡಿದ್ದಾರೆ.

‘ಮಹಾ’ ಸರ್ಕಸ್ ಅಂತ್ಯ; ಉದ್ಧವ್ ಠಾಕ್ರೆ ಮುಂದಿನ ಸಿಎಂ; ಒಂದಾದ ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್; ನಾಳೆ ಅಧಿಕೃತ ಘೋಷಣೆ

ಆಹಾರವಿಲ್ಲದೆ ಬದುಕಬಹುದು , ಆದರೆ ನೀರಿಲ್ಲದೆ ಬದುಕುವುದು ಸಾಧ್ಯವಿಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯವಾಗಿದೆ. ಮನುಷ್ಯ ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ನೀರಿನ ಅಂಶ ಇಲ್ಲದೇ ಹೋದಲ್ಲಿ ವ್ಯಾಧಿಗಳು ದೇಹದಲ್ಲಿ ಬರೋದು ಸರ್ವೇ ಸಾಮಾನ್ಯ ಎನ್ನುವುದನ್ನು ಅರಿತ ಇಂದ್ರಪ್ರಸ್ಥ ಶಾಲೆ ತೆಗೆದುಕೊಂಡ ವಾಟರ್ ಬೆಲ್ ಎನ್ನುವ ಕಾನ್ಸೆಪ್ಟ್ ದೇಶದ ಎಲ್ಲಾ ಶಾಲೆಗಳಲ್ಲೂ ಜರೂರಾಗಿ ಜಾರಿಯಾಗಬೇಕಿದೆ.
First published: November 23, 2019, 7:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading