ಬೆಂಗಳೂರು: ರಾಜ್ಯದಲ್ಲಿ ಎಲೆಕ್ಷನ್ (Karnataka Election) ಕೌಂಟ್‌ಡೌನ್ ಶುರುವಾಗಿದೆ. ಇನ್ನೆರಡು ಮೂರು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು ಎಲ್ಲಾ ಪಕ್ಷಗಳು ವೋಟಿಗಾಗಿ (Vote) ಅಗತ್ಯವಿರೋ ಎಲ್ಲಾ ರಣತಂತ್ರಗಳನ್ನ ರೂಪಿಸುತ್ತಿದೆ. ಈ ಮಧ್ಯೆ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ (ST/SC Reservation) ಮೀಸಲಾತಿ ಹೆಚ್ಚಳ ಮಾಡಿದ್ದ ಸರ್ಕಾರ, ಈ ವಿಚಾರದಲ್ಲಿ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಆ ಮೂಲಕ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ (Congress) ಜೆಡಿಎಸ್‌ಗೆ (JDS) ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿದೆ. ಎಸ್‌ಸಿ/ಎಸ್‌ಟಿ ಸಮುದಾಯದ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಟೀಕಿಸುತ್ತಿದ್ದವರಿಗೆ ಮೀಸಲಾತಿ ಮಾಂಜಾ ಕೊಟ್ಟಿದ್ದಾರೆ.
ಷೆಡ್ಯೂಲ್ 9ಗೆ ತಿದ್ದುಪಡಿ ತರಲು ಶಿಫಾರಸ್ಸಿಗೆ ನಿರ್ಧಾರ
ಕಳೆದ ಕೆಲ ತಿಂಗಳ ಹಿಂದೆ ಎಸ್‌ಸಿ ಎಸ್‌ಟಿ ಮೀಸಲಾತಿಯನ್ನ ಹೆಚ್ಚಿಸಿ ಸರ್ಕಾರ ನಿರ್ಧಾರ ಪ್ರಕಟಿಸಿತ್ತು. ಆದರೆ ವಿಪಕ್ಷಗಳು ಮಾತ್ರ ಇದು ಎಲ್ಲಾ ಕೇವಲ ಎಲೆಕ್ಷನ್ ಗಿಮಿಕ್, ಇದು ಜಾರಿಯಾಗಲು ಸಾಧ್ಯವೇ ಇಲ್ಲ ಅಂತೆಲ್ಲ ಟೀಕಿಸುತ್ತಿದ್ದವು. ಹೀಗಾಗಿ ಇವತ್ತು ನಡೆದ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸಂವಿಧಾನದ ಶೆಡ್ಯೂಲ್ 9ಕ್ಕೆ ತಿದ್ದುಪಡಿಯನ್ನ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ.
ನನ್ನೊಂದಿಗೆ ನೀವು ಇರಿ, ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ, ಏಕೆಂದರೇ ಇದು ನನ್ನ ಸಮಾಜ. pic.twitter.com/MJ59Rp0LbQ
— Basavaraj S Bommai (@BSBommai) February 9, 2023
ಇದನ್ನೂ ಓದಿ: G Parameshwar: 'ಸಿಎಂ ಆಗೋ ಲಕ್ಷಣ ಕಾಣಿಸುತ್ತಿಲ್ಲ ಗಡ್ಡ ಬೋಳಿಸು' -ಕಾಯಕರ್ತರ ಪ್ರೀತಿ ಕಂಡು ಕಣ್ಣೀರಿಟ್ಟ ಜಿ ಪರಮೇಶ್ವರ್
ಮೀಸಲಾತಿ ಕೊಟ್ಟಿರುವ ವಿಚಾರದಲ್ಲಿ ತಪ್ಪು ಹುಡುಕುವ ಕೆಲಸ ಮಾಡ್ತಿದ್ದಾರೆ
ಈ ಕುರಿತಂತೆ ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿರುವ ಶಾಸಕ ರಾಜುಗೌಡ, ನನಗೆ ತುಂಬಾ ಜನ ಕೇಳುತ್ತಿದ್ದರು, ಏನು ರಾಜುಗೌಡ ನಿಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿಸಿದ್ದೀರಾ ಅಂತ? ವಾಲ್ಮೀಕಿ ಸಮುದಾಯದವರು ಬೇರೆ ಎಲ್ಲರಿಗೂ ಎಲ್ಲವನ್ನ ಕೊಟ್ಟಿದ್ದೇವೆ. ನಮ್ಮ ಸಮುದಾಯಕ್ಕೆ ಯಾರು ಏನು ಕೊಟ್ಟಿರಲಿಲ್ಲ.
ಆದರೆ ವಾಲ್ಮೀಕಿ ಸಮುದಾಯಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ 7.5 ಮೀಸಲಾತಿ ಕೊಟ್ಟಿದ್ದಾರೆ. ತುಂಬಾ ಜನ ಮೀಸಲಾತಿ ಕೊಟ್ಟಿರುವ ವಿಚಾರದಲ್ಲಿ ತಪ್ಪು ಹುಡುಕುವ ಕೆಲಸ ಮಾಡುತಿದ್ದಾರೆ. ಮೀಸಲಾತಿ ಹೆಚ್ಚಿಸಿದ್ದಾರೆ ಆದರೆ ಷೆಡ್ಯೂಲ್ 9 ಸೇರಿಸಿಲ್ಲ ಅಂತ ಹೇಳುತ್ತಾರೆ. ಅಯ್ಯೋ ಇಷ್ಟೆಲ್ಲಾ ಆಗಿದೆ, ಊರಿಗೆ ಬಂದವಳು ನೀರಿಗೆ ಬಾರದೆ ಇರ್ತಾಳ ಎಂದು ಸಿಎಂರನ್ನು ಹಾಡಿಹೊಗಳಿದ್ದಾರೆ.
1951ರಲ್ಲಿ ಸಾಂವಿಧಾನಿಕ್ಕೆ ಶೆಡ್ಯೂಲ್9 ಸೇರ್ಪಡೆ ಮಾಡಲಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದು ವರದಾನವಾಗಿದ್ದು, ಕೋರ್ಟ್ಗಳಲ್ಲೂ ಶೆಡ್ಯೂಲ್ 9 ಪ್ರಶ್ನಿಸಲು ಆಗುವುದಿಲ್ಲ.
ಮೀಸಲಾತಿ ಹೆಚ್ಚಳದಿಂದ ಕಾನೂನು ಸಮರ ಆಗಲ್ಲ, ಸಂಘ ಸಂಸ್ಥೆಗಳು- ಪಕ್ಷಗಳು ಪ್ರಶ್ನೆ ಮಾಡಲು ಆಗಲ್ಲ, ಭೂ ಹಂಚಿಕೆ, ಶಿಕ್ಷಣ, ಉದ್ಯೋಗದಲ್ಲೂ ಮೀಸಲಾತಿ, ರಾಜಕೀಯ ಉದ್ದೇಶದಿಂದ ಬಳಸಿದ್ರೆ ಅದು ದುರುದ್ದೇಶ, ಸಂವಿಧಾನದ ಮೂಲ ರಚನೆ ಉಲ್ಲಂಘಿಸಿದ್ರೆ ಕೋರ್ಟ್ ಎಂಟ್ರಿಯಾಗಬಹುದು.
ಮೀಸಲಾತಿ ಹೆಚ್ಚಾಗಿದ್ದೆಷ್ಟು? ಯಾರಿಗೆಲ್ಲಾ ಅನುಕೂಲವಾಗುತ್ತೆ?
SC ಮೀಸಲಾತಿ ಶೇ. 15 ರಿಂದ 17ಕ್ಕೆ ಹೆಚ್ಚಿಸಲಾಗಿದ್ದು, ST ಮೀಸಲಾತಿಯನ್ನ ಶೇ. 3 ರಿಂದ 7 ಹೆಚ್ಚಳ ಮಾಡಲಾಗಿದೆ. ಈ ಪ್ರಕಾರ ಇತರೆ ಹಿಂದುಳಿದ ವರ್ಗದ ಮೀಸಲಾತಿ ಶೇ. 27 ಇರಲಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗದ ಪಾಲಿಗೆ ಶೇ. 10ರಷ್ಟೇ ಇರಲಿದೆ.
ಕುಟುಂಬದ ಆದಾಯ 8 ಲಕ್ಷಕ್ಕಿಂತಲೂ ಕಡಿಮೆ ಇದ್ದು, 5 ಎಕರೆಗಿಂತಲೂ ಕಡಿಮೆ ಕೃಷಿ ಭೂಮಿ ಉಳ್ಳವರಿಗೆ ಇದರ ಉಪಯೋಗ ಸಿಗಲಿದೆ. ಸಿಎಂ ಬೊಮ್ಮಾಯಿ ನೇತೃತ್ವದ ಈ ಐತಿಹಾಸಿಕ ನಿರ್ಧಾರ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಆದರೆ ಅಂತಿಮವಾಗಿ ಚೆಂಡು ಕೇಂದ್ರದ ಅಂಗಳ ತಲುಪಿದ್ದು ದೆಲ್ಲಿ ನಿರ್ಧಾರದ ಮೇಲೆ ಕುತೂಹಲ ಹೆಚ್ಚಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ